ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈನ ಪರಂಪರೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆ, ಶ್ರೀ ಡಿ ಸುರೇಂದ್ರ ಕುಮಾರ್ ರವರ ಮಾರ್ಗ ದರ್ಶನದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಜಿನ ಭಜನಾ ಸ್ಪರ್ಧೆ ಸತತ 8 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು. ಪೂಜ್ಯ ವೀರೇಂದ್ರ ಹೆಗ್ಗಡೆ ದಂಪತಿಗಳು ಇದರ ಪರಮ ಸಂರಕ್ಷಕರಾಗಿದ್ದಾರೆ. ಈ ಕಾರ್ಯಕ್ರಮ ಸಮುದಾಯದ ಪ್ರತಿ ಮನೆ ಮನದಲ್ಲಿ ತುಂಬಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಪ್ರಸ್ತುತ ವರ್ಷದ ಫಿನಾಲೇ ಕಾರ್ಯಕ್ರಮ ಜನವರಿ 3,4 – 2024ರಂದು ನಡೆಯಲಿದ್ದು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯ ಕೆಲವು ವಿಭಾಗದ ಕಾರ್ಯಕ್ರಮಗಳು ಇಲ್ಲಿ ಪ್ರಸ್ತುತಗೊಳುತ್ತಿದೆ. ಮೊದಲಿಗೆ ಮೈಸೂರು ವಿಭಾಗದ ಜಿನ ಭಜನಾ ಸ್ಪರ್ಧೆ ಜಗತ್ ವಿಖ್ಯಾತ ಗೊಮ್ಮಟನ ನೆಲೆ ಬೀಡು ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿಗಳವರ ಭಾವ ಪೂರ್ಣ ವಿನಯಾಂಜಲಿಯೊಂದಿಗೆ ಈ ಬಾರಿ ಪ್ರತಿಯೊಂದು ವಿಭಾಗದಲು ಚಾರು ಶ್ರೀಗಳಿಗೆ ವಿನಯಾಂಜಲಿ ಅರ್ಪಿಸಲಾಗಿದೆ.
ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಮಾರ್ಗ ದರ್ಶನ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಶ್ರೀ ಮಠದ ಆತಿಥ್ಯ ಮತ್ತು ಶ್ರೀ ಕೂಷ್ಮಾಂಡಿನಿ ಮಹಿಳಾ ಸಮಾಜ ದಿಗಂಬರ ಜೈನ ಸಮಾಜ ಶ್ರವಣ ಬೆಳಗೊಳ ಇವರುಗಳ ಸೈಯೋಗದೊಂದಿಗೆ ದಿನಾಂಕ 19-11-2023 ರಂದು ಚಾವುಂಡರಾಯ ಸಭಾ ಭವನದಲ್ಲಿ ನಡೆಯಿತು. ಕ್ಷೇತ್ರದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಮುನಿಮಹಾರಾಜರುಗಳು ಮಾತಾಜಿಯವರು ಶುಲ್ಲಿಕಾ ಮಾತಾಜಿಯವರುಗಳ ದಿವ್ಯಸಾನಿಧ್ಯದಲ್ಲಿ ನಡೆದ ಉದ್ಘಾಟನ ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಿರಿಯರ ಮತ್ತು ಹಿರಿಯರ ಭಜನಾ ಸ್ಪರ್ಧೆನಡೆದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುನಿ ಶ್ರೀಗಳ ಮಾತಾಜಿ ಅವರುಗಳ ಹಾಗೂ ಸ್ವಸ್ತಿಶ್ರೀ ಅಭಿನವ ಚಾರು ಕೀರ್ತಿ ಭಟ್ಟಾರಕರ ಸಾನಿಧ್ಯದಲ್ಲಿ ಶ್ರೀಮತಿ ಶ್ರದ್ಧಾ ಅಮಿತ್ ರವರು ಮುಖ್ಯ ಅತಿಥಿಗಳಾಗಿ ವಿಜೇತರಿಗೆ ಬಹುಮಾನ ವಿತರಿಸಿದರು.
ದಿನಾಂಕ 03-12-2023 ರಂದು ಶ್ರೀ ಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರು ಇವರ ನೇತೃತ್ವ ಆಶೀರ್ವಾದ ಹಾಗೂ ಆತಿಥ್ಯದಲ್ಲಿ ಜೈನ್ ಮಿಲನ್ ಹಾವೇರಿ ಇವರ ಸೈಯೋಗದಲ್ಲಿ ಮಧ್ಯಕರ್ನಾಟಕ ದಾವಣಗೆರೆ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ ಕುಮಾರ್ ಜೈನ್ ಸಾಗರ ಇವರು ನಡೆಸಿಕೊಟ್ಟರು.
ಇಲ್ಲಿನ ಈ ಭಾರಿಯ ಕಿರಿಯರ ಈ ಸ್ಪರ್ಧೆಯಲ್ಲಿ ಶ್ರೀಮಠದ ಬ್ರಹ್ಮಚಾರಿ ಶಿಷ್ಯರು ಭಾಗವಹಿಸಿದುದ್ದು ಪ್ರಶಂಸನೀಯವಾಗಿತ್ತು ಹಾಗೂ ಹಿರಿಯರ ಜಿನ ಭಜನಾ ಸ್ಪರ್ಧೆಯು ನಡೆದು ಸಮರೋಪ ಸಮಾರಂಭದಲ್ಲಿ ಶ್ರೀಗಳವರ ಸಾನಿಧ್ಯದೊಂದಿಗೆ ಶ್ರೀ ಡಿ ಸುರೇಂದ್ರ ಕುಮಾರ್ ಅವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಉಪಸ್ಥಿತರಿದ್ದು ಆನಂತರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶ್ರೀಗಳವರ ಸಾನಿಧ್ಯದಲ್ಲಿ ನಡೆಯಿತು.
ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಬೆಳಗಾವಿಯ ಧರ್ಮನಾಥ ಭವನದಲ್ಲಿ ದಿನಾಂಕ 3-12-2023 ರಂದು ನಡೆಯಿತು. ಅಂದಿನ ಕಾರ್ಯಕ್ರಮದ ಉದ್ಘಾಟಕರಾಗಿ ಭಾರತೀಯ ಜೈನ್ ಮಿಲನ್ ವಲಯ 8ರ ಅಧ್ಯಕ್ಷರಾದ ಮೈಸೂರಿನ ಯುವರಾಜ್ ಭಂಡಾರಿ ಯವರು ಬೆಳಗಾವಿಯ ಮಾಣಿಕ್ ಭಾಗ್ ದಿಗಂಬರ್ ಜೈನ್ ಬೋರ್ಡಿಂಗ್ ಚೇರ್ಮೆನ್ ರವರಾದ ಶ್ರೀ ಪುಷ್ಪಕ್ ಹನುಮಣ್ಣನವರ್ ಬೆಳಗಾವಿ ಸೆಂಟ್ರಲ್ ಮಿಲನ್ ಗೌರವಾಧ್ಯಕ್ಷರಾದ ಗುಣಪಾಲ್ ಹೆಗ್ಗಡೆ, ಶ್ರೀಮತಿ ರಚನಾ ಮಹಾವೀರ್ ಜೈನ್ ರವರು ಪಾಲ್ಗೊಂಡಿದ್ದರು.
ಕಿರಿಯರ ಮತ್ತು ಹಿರಿಯರ ವಿಭಾಗದ ಸ್ಪರ್ಧೆ ಕ್ರಮವಾಗಿ ನಡೆದು ಬೆಳಗಾವಿಯ ಶ್ರೀ ಗೋಪಾಲ್ ಜಿನ ಗೌಡರು ವಲಯ 8 ಜಂಟಿ ಕಾರ್ಯದರ್ಶಿಗಳಾದ ಪ್ರಶಾಂತ್ ಎಸ್ ವಿ, ಮುಖ್ಯ ಅತಿಥಿಗಳಾಗಿ ಸಮಾರೋಪ ಸಮಾರಂಭದಲ್ಲಿ ನಡೆದ ವಿಜೇತರಿಗೆ ಪ್ರಶಸ್ತಿ ಪ್ರಧಾನವನ್ನು ನಡೆಸಿಕೊಟ್ಟರು. ಡಾ|| ನಿರಂಜನ್ ಕುಮಾರ್ ದಂಪತಿಗಳ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಶ್ರೀ ಜೀವಂದರ್ ರವರು ಗೌರವ ಉಪಸ್ಥಿತಿಯಲ್ಲಿ ಜಿನ ಭಜನಾ ಸಾಂಗವಾಗಿ ನೆರೆವೇರಿತು.
ಜಮಖಂಡಿ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ದಿನಾಂಕ 30-12-2023 ರಂದು ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರದ ಸಭಾ ಭವನದಲ್ಲಿ ಸ್ವಸ್ತಿಶ್ರೀ ಜಿನ ಸೇನ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಆಶೀರ್ವಾದದಲ್ಲಿ ಮಹಾವೀರ್ ಜೈನ್ ಮಿಲನ್ ಹಾಗೂ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಸಮಾಜ ಜಮಖಂಡಿ ಇವರ ಸೈಯೋಗದೊಂದಿಗೆ ನಡೆಯಿತು. ಕೆ ಯುವರಾಜ್ ಭಂಡಾರಿಯವರ ಪರವಾಗಿ ಜೀವಂದರ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಿರಿಯರ ಮತ್ತು ಹಿರಿಯರ ಸ್ಪರ್ಧೆ ಅಮೋಘವಾಗಿ ನಡೆದು ವಲಯ ಅಧ್ಯಕ್ಷರಾರ ಕೆ ಯುವರಾಜ್ ಭಂಡಾರಿ ಪ್ರಧಾನ ಕಾರ್ಯದರ್ಶಿ ರತ್ನರಾಜ್ ಜೈನ್ ಬೆಂಗಳೂರು ವಿಭಾಗದ ಕಾರ್ಯದರ್ಶಿಗಳಾದ ವಿಲಾಸ್ ಪಾಸಣ್ಣನವರ್ ವಲಯ ಜಂಟಿ ಕಾರ್ಯದರ್ಶಿಗಳಾದ ವೈಶಾಲಿ ಚಂದ್ರಪ್ರಭು ರವರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ಜಿನ ಭಜನಾ ಸ್ಪರ್ಧಿಗಳು ಅಮೋಘವಾಗಿ ತಯಾರಾಗಿದ್ದರು.
ಬೆಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ ಪರಮ ಪೂಜ್ಯ ಮುನಿಶ್ರೀ 108 ವಿರಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಕರ್ನಾಟಕ ಜೈನ ಭವನದಲ್ಲಿ ದಿನಾಂಕ 24-12-2023 ರಂದು ನಡೆಯಿತು. ಇಲ್ಲಿನ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಮೈಕ್ರೋ ಲ್ಯಾಬ್ ನ ಚೇರ್ಮನ್ ರಾದ ಶ್ರೀ ದೀಲಿಪ್ ಸುರಾನ ರವರು ನಡೆಸಿಕೊಟ್ಟರು. ಜಿನ ಸಂಸ್ಕಾರ ಶ್ರಾವಕರಿಂದ ಸಮೂಹ ನೃತ್ಯ, ಜಿನ ಭಜನಾ ಸ್ಪರ್ಧಿಗಳು ಅಮೋಘವಾಗಿ ತಯಾರಾಗಿದ್ದರು. ಜಿನ ಸಂಸ್ಕಾರ ಶ್ರಾವಕರಿಂದ ಸಮೂಹ ಸ್ತೋತ್ರ ಪಠಣೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುನಿಶ್ರೀಗಳವರ ಸಾನಿಧ್ಯದಲ್ಲಿ ಶ್ರೀ ಡಿ ಸುರೇಂದ್ರ ಕುಮಾರ್ ರವರು ಅನಿತಾ ಸುರೇಂದ್ರ ಕುಮಾರ್ ರವರು ಹಾಗೂ ಭರತೇಶ್ ಜಗ್ಗಶೆಟ್ಟಿ ಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಹೀಗೆ ರಾಜ್ಯದ ಅಷ್ಟು ವಿಭಾಗಗಳಲು ಕೂಡ ಜಿನ ಭಜನಾ ಸ್ಪರ್ಧೆ ಯಶಸ್ವಿಯಾಗಿ ನಡೆದು ಈ ಯಶಸ್ಸಿಗೆ ಕಾರಣಕರ್ತರಾದ ಎಲ್ಲರನ್ನು ಜಿನ ಭಜನಾ ಸ್ಪರ್ಧೆ ಕಮಿಟಿಯು ವಂದನೆಗಳನ್ನು ಸಲ್ಲಿಸುತ್ತದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













