-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ 8, ಬೆಂಗಳೂರು ವಿಭಾಗದ ಪದಾಧಿಕಾರಿಗಳ ಕಾರ್ಯಗಾರದ ಕಾರ್ಯಕ್ರಮ ದಿನಾಂಕ 3-9-2023 ರಂದು ಬೆಂಗಳೂರಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಕಾರ್ಯಗಾರದ ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ಅಧ್ಯಕ್ಷರಾದ ವೀರ್ ಕೆ ಯುವರಾಜ್ ಭಂಡಾರಿ, ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು ರವರು, ಪ್ರಧಾನ ಕಾರ್ಯದರ್ಶಿಗಳಾದ ರತ್ನರಾಜ್ ಜೈನ್, ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳಾದ ನಿರಂಜನ್ ಎನ್, ಅಜಿತ್ ಕುಮಾರ್ ಇಸ್ರೋ, ಡಾ|| ಭರತೇಶ್ ಜಗಶೆಟ್ಟಿ ಬೆಂಗಳೂರು ವಿಭಾಗದ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾದ ವಿಲಾಸ್ ಪಾಸಣ್ಣ ನವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಗೆ ಸನ್ಮಾನಿಸಲಾಯಿತು.
ಹಾಗೂ ಕಾರ್ಯಕ್ರಮದಲ್ಲಿ ಆಸಕ್ತಿ ಇಟ್ಟು ಆಗಮಿಸಿದ ಭಾರತೀಯ ಜೈನ್ ಮಿಲನ್ ವಲಯ 8ರ ಪದಾಧಿಕಾರಿಗಳಾದ ನಂದಿನಿ ಅನಂತರಾಜು, ವೈಶಾಲಿ ಚಂದ್ರಪ್ರಭು, ಮಹಾವೀರ್ ಗೊಗಿ, ಚಂದ್ರಶೇಖರ್ ಅರಿಗ, ಪ್ರಶಾಂತ್ ಎಸ್ ವಿ ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಗಾರದಲ್ಲಿ ನಡೆದ ಕಾರ್ಯಕ್ರಮಗಳ ವಿವರ ಈ ರೀತಿ ಇದ್ದು ವಿಲಾಸ್ ಪಾಸಣ್ಣ ನವರಿಂದ ಪ್ರಸ್ತಾವಿಕ ನುಡಿಗಳನ್ನಾಡಿದರು.
ನಂತರ ಪದಾಧಿಕಾರಿಗಳ ಸ್ವಪರಿಚಯವಾಯಿತು.
ದೀಪಾಂಜಲಿ ಗೌರಾಜ್ ರವರು ಮಿಲನ್ ಮಾತು ಕಾರ್ಯಕ್ರಮವನ್ನ ಪಿ ಪಿ ಟಿ ಮೂಲಕ ನಡೆಸಿಕೊಟ್ಟರು.
ಬೆಂಗಳೂರು ವಿಭಾಗದ ವರದಿಯನ್ನು ಡಾ|| ಭರತೇಶ್ ಜಗಶೆಟ್ಟಿಯವರು ಪಿ ಪಿ ಟಿ ಮೂಲಕ ನಡೆಸಿಕೊಟ್ಟರು.
ಜಿನ ಭಜನಾ ಹೆಜ್ಜೆ ಗುರುತು ಕಾರ್ಯಕ್ರಮವನ್ನು ಹಾಗೂ ವಿವಿಧ ಪದಾಧಿಕಾರಿಗಳ ತರಬೇತಿ ಮಾಹಿತಿಯನ್ನು ವಿಲಾಸ್ ಪಾಸಣ್ಣ ನವರು ಪಿ ಪಿ ಟಿ ಮೂಲಕ ನಡೆಸಿಕೊಟ್ಟರು.
(ಭಾರತೀಯ ಜೈನ್ ಮಿಲನ್ ಅನೇಕ ಅಂಗ ಸಂಸ್ಥೆಗಳನ್ನು ಒಳಗೊಂಡಿರುವಂತಹ ಒಂದು ಬೃಹತ್ ಸಂಘಟನೆ. ಮಿಲನ್ ಸಂಘಟನೆಯನ್ನು ಕಟ್ಟಿಬೆಳೆಸುವುದು ನಾಜುಕಿನ ಕೆಲಸ, ಮಿಲನ್ ಸಂಘಟನೆಯು ಜೈನ ಧರ್ಮ ಜೈನ ಸಂಸ್ಕೃತಿಯ ಬಗ್ಗೆ ಗೌರವ ಹೆಚ್ಚಿಸುವಂತಿರಬೇಕು.
ಸಮಾನ್ಯ ನಿಯಮಗಳು :-
- ಎಲ್ಲ ಕಾರ್ಯ ವಿಧಾನಗಳು ಪ್ರಜಾಪ್ರಭುತ್ವದ ಮಾದರಿಯಲ್ಲಿ ಸರ್ವಸಮ್ಮತವಾಗಿರ ಬೇಕು
- ಮಿಲನ್ ಚಟುವಟಿಕೆಗಳು ನಮ್ಮ ಆಚಾರ ವಿಚಾರಗಳ ಮಿತಿಯಲ್ಲಿರಬೇಕು.
- ಜೈನ ಧರ್ಮವನ್ನು ಏಕಿಕೃತವಾಗಿ ಅರಿತುಕೊಂಡು ಚಟುವಟಿಕೆ ನಡೆಸಬೇಕು.
- ಒಳಜಾತಿ ಪಂಗಡಗಳಿಗೆ ನೋವು ಉಂಟಾಗದಂತೆ ಜಾಗೃತಿ ವಹಿಸಬೇಕು.
- ಶ್ರೀಮಂತ ಸಮಾನ್ಯರಲ್ಲಿ ಬೇದ ಭಾವ ಬಾರದಂತೆ ಜಾಗೃತಿ ವಹಿಸಬೇಕು.
- ಸಾರ್ವಜನಿಕ ಹೇಳಿಕೆಯನ್ನು ನೀಡುವಾಗ ಸೈಯಮ ವಹಿಸಬೇಕು.
- ವಲಯ ಅಥವಾ ವಿಭಾಗದ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಕಾರ್ಯೋನ್ಮುಖರಾಗಬೇಕು.
- ಮೊದಲು ನಮ್ಮ ಸಮಾಜದ ಏಳಿಗೆಗೆ ಆದ್ಯತೆ ನೀಡ ಬೇಕು.
- ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಅತ್ಯಗತ್ಯ.
- ಭಿನ್ನಾಭಿಪ್ರಾಯ ಸಂದೇಹಗಳು ಉಂಟಾಗ ಬಾರದು.
- ಹೊಸ ಮಿಲನ್ ಆರಂಭಿಸುವಾಗ ವಿಭಾಗ ವಲಯಕ್ಕೆ ಮಾಹಿತಿ ನೀಡಬೇಕು.
- ನೂತನ ಮಿಲನ್ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
- ಮಿಲನ್ ಗಳಲ್ಲಿ ಪೈಪೋಟಿಗಳಾಗ ಬಾರದು.
ವಿಭಾಗ ನಿರ್ದೇಶಕರ ಕರ್ತವ್ಯ ಮತ್ತು ಜವಾಬ್ದಾರಿಗಳು :-
- ನಿರ್ದೇಶಕರುಗಳು ತಮ್ಮ ತಮ್ಮ ಮಿಲನ್ ಶಾಖೆಗಳು ಮತ್ತು ವಿಭಾಗಿಯ ಪದಾಧಿಕಾರಿಗಳ ಮಧ್ಯದ ಸೇತುವೆಯಾಗಿದ್ದಾರೆ.
- ಪ್ರತಿ ಮಿಲನ್ ಚೈತನ್ಯ ಪೂರ್ವಕವಾಗಿ ಕಾರ್ಯ ನಿರ್ವಹಿಸಲು ನಿರ್ದೇಶಕರ ಪಾತ್ರ ಅತಿ ಮುಖ್ಯ.
- ಪ್ರತಿ ಮಿಲನ್ ಶಾಖೆಗಳು ತನ್ನ ವಾರ್ಷಿಕ ಚಟುವಟಿಕೆಗಳನ್ನು ಯೋಜಿಸಿಕೊಳ್ಳುವಲ್ಲಿ ಮಾರ್ಗ ದರ್ಶನ ನೀಡುವುದು ಅಲ್ಲದೆ ಚಟುವಟಿಕೆಗಳ ಆರು ವಿಭಾಗಗಳಾದ ವಿಧ್ಯಾಭ್ಯಾಸ, ಆರೋಗ್ಯ, ಧಾರ್ಮಿಕ, ಸಮಾಜಿಕ, ಪ್ರಸಾರ ಮತ್ತು ವಿಸ್ತರಣೆ. ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಕನಿಷ್ಟ ಒಂದು ಅಥವಾ 2 ಕಾರ್ಯಕ್ರಮಮಗಳನ್ನು ರೂಪಿಸಿ ಸಮತೋಲನಗೊಳಿಸಲು ಸಹಕರಿಸುವುದು ಹಾಗೂ ಅನುಷ್ಟಾನಗೊಳುವಂತೆ ನೋಡಿಕೊಳ್ಳುವುದು.
- ಮಿಲನ್ ಗಳು ಸದಸ್ಯರ ವಾರ್ಷಿಕ ಶುಲ್ಕವನ್ನು ನಿಯಮಿತ ಸಮಯದೊಳಗೆ ಪಾವತಿಸಲು ತಿಳಿಸುವುದು.
- ಪ್ರತಿ 2 ವರ್ಷಕೊಮ್ಮೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಕಾರ್ಯಕ್ರಮವನ್ನು ನಿಯಮಿತ ಸಮಯದೊಳಗೆ ನೆರವೇರಿಸಲು ತಿಳಿಸುವುದು.
- ನೂತನ ಪದಾಧಿಕಾರಿಗಳ ಹಾಗೂ ಸದಸ್ಯರ ಹೆಸರು ವಿಳಾಸ ಮೊಬೈಲ್ ಸಂಖ್ಯೆಗಳನ್ನು ಪಟ್ಟಿಮಾಡಿ ವಲಯಕ್ಕೂ ವಿಭಾಗಕ್ಕೂ ಹಾಗೂ ನಿರ್ದೇಶಕರಿಗೂ ತಲುಪಿಸುಲು ಸೂಚಿಸುವುದು.)
ಮಿಲನ್ ಕಾರ್ಯಕ್ರಮಗಳ ಮಾಹಿತಿ ಜಿನೇಂದ್ರ ಹೊಸಮನಿಯವರು ಪಿ ಪಿ ಟಿ ಮೂಲಕ ನೀಡಿದರು.
- ಮಿಲನ್ ಘಟಕಗಳಲ್ಲಿ ಚುನಾವಣೆ ನಡೆಸಿ ಪ್ರತಿ ವರ್ಷ ಮಾರ್ಚ್ 31ರ ಒಳಗೆ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರ ವಿಳಾಸಗಳನ್ನು ದೂರವಾಣಿ ಸಂಖ್ಯೆಯೊಂದಿಗೆ ವಲಯಕ್ಕೆ ಕಳುಹಿಸಿಕೊಟ್ಟವರಿಗೆ 5 ಅಂಕಗಳು.
- ಪ್ರತಿ ವರ್ಷದ ಏಪ್ರಿಲ್ ತಿಂಗಳ ಒಳಗೆ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಸಿದವರಿಗೆ 5 ಅಂಕಗಳು.
- ಪ್ರತಿ ವರ್ಷದ ಜೂನ್ 30ರೊಳಗೆ ವಲಯ ಮತ್ತು ಕೇಂದ್ರ ಶುಲ್ಕಗಳನ್ನು ಪಾವತಿಸಿದವರಿಗೆ 10 ಅಂಕಗಳು.
- ಪ್ರತಿ ತಿಂಗಳ ಮಾಸಿಕ ಸಭೆಯ ವರದಿಯನ್ನು ಸಭೆ ನಡೆಸಿದ 7 ದಿನಗಳ ಒಳಗಾಗಿ ಸಂಭಂದ ಪಟ್ಟ ವಲಯ ಪದಾಧಿಕಾರಿಗಳಿಗೆ ಕಳಿಸಿ ಕೊಟ್ಟವರಿಗೆ ಪ್ರತಿ ತಿಂಗಳ 5 ರಂತೆ 60 ಅಂಕಗಳು.
- ವರ್ಷದ ಹೊರಾಂಗಣ ಸಭೆ ಪ್ರವಾಸ ಕೈಗೊಂಡವರಿಗೆ 10 ಅಂಕಗಳು.
- ಹೊಸ ಮಿಲನ್ ಸ್ಥಾಪನೆ ಮಾಡುವವರಿಗೆ ಪ್ರತಿ ಮಿಲನ್ ಗೆ 20 ಅಂಕಗಳು.
- ನಿಷ್ಕ್ರಿಯ ಮಿಲನ್ ಶಾಖೆಗಳ ಪುನಶ್ಚೇತನ ಮಾಡಿದವರಿಗೆ 10 ಅಂಕಗಳು.
- ಬಸದಿಗಳ ಜೀರ್ಣೋದ್ಧಾರ ಅನುದಾನಕ್ಕೆ ಸಹಾಯ ನೀಡಿದವರಿಗೆ(25,000/- ಮೇಲ್ಪಟ್ಟು) 10 ಅಂಕಗಳು.
- ಜಂಟಿ ಸಭೆ ಏರ್ಪಡಿಸಿದವರಿಗೆ(2 ಕಿಂತ ಹೆಚ್ಚು ಮಿಲನ್ ಗಳ ಸರ್ವ ಸದಸ್ಯರ ಸಭೆ) 5 ಅಂಕಗಳು.
- ಕಾರ್ಯಗಾರದಲ್ಲಿ ಘಟಕದ ವತಿಯಿಂದ ಭಾಗವಹಿಸಿದವರಿಗೆ (ಕನಿಷ್ಟ 5 ಜನರ ಹಾಜರಾತಿ) 5 ಅಂಕಗಳು.
- ವಲಯ ಸಮ್ಮೇಳನದಲ್ಲಿ ಭಾಗವಹಿಸುವಿಕೆಗೆ ವಲಯ ಪ್ರತಿ ಸದಸ್ಯರಿಗೆ 1 ಅಂಕಗಳು.
- ವಿಭಾಗ ಮಟ್ಟದ / ವಲಯ ಮಟ್ಟದ ವಿಶೇಷ ಕಾರ್ಯಕ್ರಮಗಳಿಗೆ 30 ಅಂಕಗಳು.
ಭೌತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರು ಮೊಬೈಲ್ ಸಂದೇಶದ ಮೂಲಕ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ವಿಲನ್ ಗೆ ಸಂದೇಶವನ್ನು ನೀಡಿ ಜಿನ ಮಿಲನ್ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದರು.
ಹಾಗೂ ಶ್ರೀ ಡಿ ಸುರೇಂದ್ರ ಕುಮಾರ್ ರವರು ಕರೆಯ ಮೂಲಕ ಮಾತನಾಡಿ ಸೂಚನೆ ನೀಡಿದರು.
ವೇದಿಕೆ ಗಣ್ಯರಿಂದ ಮಾತಿನಲ್ಲಿ ಮಿಲನ್ ನ ಮೆಲುಕನ್ನು ನಿರಂಜನ್ ಎನ್ ಹಾಗೂ ಅಜಿತ್ ಕುಮಾರ್ ಇಸ್ರೋರವರು ಮಾಡಿಕೊಟ್ಟರು.
ಮಿಲನ್ ನ ಆಡಳಿತಾತ್ಮಕ ಮಾಹಿತಿಯನ್ನು ರತ್ನರಾಜ್ ಜೈನ್ ರವರು ತಿಳಿಸಿದರು.
ಸಂಘಟನೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಶಿಲಾ ಅನಂತರಾಜ್ ರವರು ಮಾತನಾಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಕೆ ಯುವರಾಜ್ ಭಂಡಾರಿಯವರು ಅನುಭವ ಅನಿಸಿಕೆಗಳನ್ನು ಹಂಚಿಕೊಂಡರು.
ನಂತರ ಪದಾಧಿಕಾರಿಗಳೊಂದಿಗೆ ಸಂವಾದ ನಡೆಯಿತು.
ನಿರೂಪಣೆ ಹಾಗೂ ವಂದನಾರ್ಪಣೆ ಕಾರ್ಯಕ್ರಮವನ್ನು ಬ್ರಾಹ್ಮಿಲಾ ಮಧನ್ ರವರು ನಡೆಸಿಕೊಟ್ಟರು. ಒಟ್ಟಿನಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













