-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಡಾ|| ವೀರೇಂದ್ರ ಹೆಗ್ಗಡೆಯವರು ಜಿನಭಜನಾ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ವೇದಿಕೆ ಗಣ್ಯರಿಗೆ ವಂದಿಸಿ, ಚಂದ್ರನಾಥ ಸ್ವಾಮಿ ಮತ್ತು ಶ್ರೀ ಮಂಜುನಾಥಯನ್ನು ಸ್ಮರಿಸಿ ಪೂಜ್ಯ ಯುಗಳ ಮುನಿಗಳಿಗೆ ನಮಸ್ತೆಯನ್ನು ಹೇಳಿದರು, ಕರ್ಯಕ್ರಮಕ್ಕೆ ಬಂದಿರುವಂತಹ ಬೆಂಬಲ ಮತ್ತು ಪ್ರೋತ್ಸಾಹದಿಂದ ನಮ್ಮ ಧರ್ಮ ಸಂಘಟನೆ ಮತ್ತು ಧರ್ಮದ ಬೆಳವಣಿಗೆ ಆಗುತ್ತಿದೆ ಎಂದು ನಂಬಿದ್ದೇನೆ. ಪೂಜ್ಯ ವರ್ಧಮಾನ ಸಾಗರಜೀ ಯವರು ಸಮಾಜದ ಸಂಘಟನೆ ಮತ್ತು ಅಲ್ಪ ಸಂಖ್ಯಾತರಾದ ನಮಗೆ ಕೌಟುಂಬಿಕವಾಗಿ ಜನಸಂಖ್ಯೆ ಕಡಿಮೆಯಾಗುತ್ತಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಜೈನ ಧರ್ಮ ಉಳಿಯ ಬೇಕು ಎನ್ನುವಂತಹ ಭಾವನೆಯನ್ನು ಹೇಳಿದರು ಎಂದು ತಿಳಿಸಿದರು. ಸಮ್ಮೇದ ಶಿಖರ್ಜಿಯಲ್ಲಿ ಆದಂತಹ ಸಮಸ್ಯೆಯಿಂದಾಗಿ ಸಮಾಜ ಸಂಘಟನೆಯಾಗುವುದಕ್ಕೆ ಆಹಾರವಾಗಿದೆ, ಸಮಸ್ಯೆಯಿಂದ ಸಂತೋಷ ಹುಟ್ಟುತ್ತದೆ ಎಂದರು. ತಮ್ಮ ಸಮಾಜಕ್ಕೆ ಭೂಮಸೂದೆ ಕಾಯ್ದೆಯಿಂದ ಆದಂತಹ ತೊಂದರೆ ಮತ್ತು ಇದರಿಂದ ಆದಂತಹ ಉಪಯೋಗವನ್ನು ತಿಳಿಸಿದರು.
ಪವಿತ್ರ ಕ್ಷೇತ್ರವಾದ ಸಮ್ಮೇದ ಶಿಖರ್ಜಿ, ಮುನಿಗಳ, ಪೂಜ್ಯರ, ಮಹಾರಾಜರ ಆದೇಶ ಮಾರ್ಗದರ್ಶನ ಪ್ರಮುಖ್ಯತೆ ಮತ್ತು ಸಂಘಟನೆ ಹಾಗೂ ಸಂಘಟಿತವಾಗಿರುವುದರಿಂದ ಆಗುವ ಲಾಭವನ್ನು ವಿವರಿಸಿದರು. ಸಮಾಜದವರೆಲ್ಲರು ಸಮಸ್ಯೆಗಳಿಗೆ ಒಟ್ಟಾಗಬೇಕು ಒಗ್ಗಟ್ಟು ಬೇಕು, ವೇದಿಕೆಗಳನ್ನು ಉಪಯೋಗಿಸಿಕೊಳ್ಳ ಬೇಕು ಎಂದರು.
ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಭಜನೆಯ ವಿಶೇಷತೆಯನ್ನು ತಿಳಿಸುವುದರ ಮೂಲಕ ತಮ್ಮ ಮಾತನ್ನು ಮುಗಿಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್













