ಗೊಮ್ಮಟಗಿರಿ

ಹುಣಸೂರು ತಾಲ್ಲೂಕಿನ ದಿಗಂಬರ ಜೈನ ಅತೀಶಯಕ್ಷೇತ್ರ ಶ್ರೀ ಗೊಮ್ಮಟಗಿರಿಯಲ್ಲಿ ಶ್ರೀಗೊಮ್ಮಟೆಶ್ವರ ಸ್ವಾಮಿ ಗೆ 67ನೇ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವ ದಿನಾಂಕ 27/11/2016ನೇ ಭಾನುವಾರ ನಡೆಯಿತು.  ಶ್ರೀ ಶ್ರೀ ಡಾಕ್ಟರ್ ದೇವೇಂದ್ರ ಕೀರ್ತಿ ಭಟಾರಕ ಪಟಾಚಾರ್ಯವರೆಯ ಮಹಾಸ್ವಾಮೀಜಿ ಮಾರ್ಗ ದರ್ಶನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಗೊಮ್ಮಟಗಿರಿ ಕ್ಷೇತ್ರ ಸೇವಾಸಮಿತಿಯ ಸರ್ವಪದಾಧಿಕಾರಿಗಳು ಉಪಸ್ಥಿತರಿದ್ದರು. ಭಕ್ತಿ ಪೂರ್ವಕವಾಗಿ ಪೂಜಾಕಾರ್ಯವನ್ನು ನೆರೆವೇರಿಸಿದರು.

ಭಟಾರಕ ಮಹಾಸ್ವಾಮಿಗಳು ಪೂಜಾಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮೈಸೂರಿನ ಸುತ್ತಮುತ್ತಲಿನ ಹಾಗೂ ವಿವಿಧೆಡೆಯಿಂದ ಶ್ರಾವಕ ಶ್ರಾವಕಿಯರು ಸ್ವಾಮಿ ಗೆ ಅಭಿಷೇಕಮಾಡಿ ಪೂನಿತರಾದರು. ಬಾಹುಬಲಿ ಮೂರ್ತಿಗೆ ಏಳನೀರು, ಕ್ಷೀರಾಭಿಷೇಕ, ಗಂಧ, ಚಂದನ, ಅಷ್ಟಗಂಧ, ಪುಷ್ಪವೃಷ್ಟಿ, ಅಭಿಷೇಕಗಳು ನೋಡುಗರ ಕಣ್ಮನ ತುಂಬಿತು.

ಶ್ರೀ ದೇವೇಂದ್ರ ಕೀರ್ತಿ ಭಟಾರಕರು ಜ್ವಾಲಮಾಲ ಡಾಟ್ ನ್ಯೂಸ್ ಗೆ ಮಾತನಾಡಿ, ಶ್ರೀ ಗೊಮ್ಮಟಗಿರಿಯಲ್ಲಿ ಶ್ರೀಗೊಮ್ಮಟೆಶ್ವರ ಸ್ವಾಮಿ ಗೆ 67ನೇ ಮಹಾಮಸ್ತಕಾಭಿಷೇಕ ಪೂಜಾ ಮಹೋತ್ಸವ ಕುರಿತು ಮಾತನಾಡಿದರು.