ಕ್ಷೇತ್ರ ಪರಿಚಯ- 09 / ಲೆಪ್ಪದ ಬಸದಿ / ಮೂಡುಬಿದರೆ 18 ಬಸದಿ

ತಂಗಾಳಿ ತಂಪು  ಸುಮರಾಶಿಗಳ ಕಂಪು ಬೆಳ್ಮುಗಿಲ  ಹೊಳಪು ಹಸಿರ  ಸಿರಿಯ ಹೊಳಪು ಹೊದ್ದು  ಕಂಗೊಳಿಸುತ್ತಿರುವ  ವಯ್ಯಾರದ ಹೊಳಪು  ನೋಡಿದೊಡನೆಯೆ ನನ್ನ ಮನ ಮಿಡಿಯಿತು.  ಮೂಡುಬಿದ್ರೆಯ  ಸೌಂದರ್ಯ  ಸೆಳೆಯುತ್ತಲೆ  ನುಡಿದಿದೆ ನನ್ನ ಆಂತರ್ಯ.

 

 ಲೆಪ್ಪದ ಬಸದಿಯ ವಿಶಾಲವಾದ ಆವರಣವನ್ನು ಸುಂದರ ಕಲ್ಲಿನ ಮಂಟಪದಿಂದ ಹಾದು ಮುಂದೆ ಸಾಗಿದಾಗ ನಮಗೆ ಕಾಣುವುದು 45 ಅಡಿ ಎತ್ತರವಾದ  ಮನಸ್ಥಂಭ.  ಈ ಬಸದಿಯು ಸಂಪೂರ್ಣ ಶಿಲಾಮಯವಾಗಿದ್ದು ಉನ್ನತ ಅಸ್ಥಿಭಾರದ ಮೇಲೆ ನಿರ್ಮಾಣಗೊಂಡಿದೆ. ಲೆಪ್ಪ ಎಂದರೆ  ಕೆಲವು ವಿಶೇಷ ದ್ರವ್ಯಗಳನ್ನು ಬೆರೆಸಿರುವ ಮಣ್ಣು . ಈ ಮಿಶ್ರಣದಿಂದ ಮಾಡಿದ ನಾಲ್ಕು ಅಡಿ ಎತ್ತರದ ಬಿಳಿಕರ್ಣದ ಪರ್ಯಾಂಕಾಸುರದಲ್ಲಿ ಮಂಡಿತನಾದ ಶ್ರೀ ಚಂದ್ರನಾಥ ಸ್ವಾಮಿ ಇಲ್ಲಿನ ಮೂಲ ಸ್ವಾಮಿ . ಸ್ವಾಮಿಯ  ಎಡಬಲದಲ್ಲಿ ಚಾಮರದಾರಿಗಳು ನಾಟ್ಯಭಂಗಿಯಲ್ಲಿದ್ದಾರೆ.

 

ಅದೇ ರೀತಿ ಲೆಪ್ಪದಿಂದ ಮಾಡಿದ ಶ್ರೀ ಸಾಮ್ಯೇಕ್ಷ ಜ್ವಾಲಮಾಲಿನಿಯ ವಿಗ್ರಹವಿದ್ದು ಮಾತೆ ಜ್ವಾಲ ಮಾಲಿನಿ ತಾಯಿ ಅತ್ಯಂತ ಲಕ್ಷಣದ ರೂಪ ಹೊದ್ದು ಕಂಗೊಳಿಸುತ್ತಿದ್ದಾಳೆ. ಮಾತೆಉ ದರ್ಶನವನ್ನು ಇಲ್ಲಿ ಭಯ ಭಕ್ತಿಯ ಕಾರಣ  ನೇರವಾಗಿ ಮಾಡುವಂತಿಲ್ಲ . ದೇವಿಯನ್ನು ಪ್ರದಕ್ಷಿಣ ಪಥದ ಬಲಬದಿಯ ಕಿಟುಕಿಯಿಂದ  ಓರೆಯಾಗಿ ಮಾತ್ರ ದರ್ಶಿಸಲು ಸಾಧ್ಯ.

 

ಇಲ್ಲಿ ಪ್ರತಿವರ್ಷ ಚೈತ್ರ ಬಹುಳ ಬಿದಿಗೆಯಂದು ಚೌಟರ ಅರಮನೆಯ ಬಂಧುಗಳು  ಜಾತ್ರ ಮಹೋತ್ಸವ ನಡೆಸುತ್ತ ಬಂದಿದ್ದು ಇಲ್ಲಿ ನಡೆಯುವ ಪೂಜೆಯನ್ನೊಮ್ಮೆ ಮುಂಚೆ ಪ್ರಸಾರವಾಗಿದ್ದರೂ ಕೂಡ  ಈ ಸಂದರ್ಭದಲ್ಲಿ ನೆನಪಿಸುತ್ತಿದ್ದೇವೆ.

 

ಇಂತಹ ಅದ್ಭುತ ಕಾರ್ಯಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.