ಕ್ರಿಯಾ, ಕಲಾ, ಮತ್ತು ಕ್ರೀಡಾ ವೈಭವವಿದು . ಸ್ನೇಹ, ಸಂಬಂಧ, ಸಂಗಮಕ್ಕೆ ಕ್ಷಣ ಗಣನೆ ಇದು. ಧರ್ಮ ಧಾರ್ಮಿಕತೆಯಾಚೆಯ ಧರ್ಮ ಸಂಘಟನೆಯಿದು. ಜೈನ್ ಮಿಲನ್ ನ ಯುವಕರ ಕಲರವವಿದು. ಹೌದು ಇದು ಜಿನಸಮ್ಮಿಲನ ರೀ.
ಪ್ರತಿವರ್ಷದಂತೆ ಈ ವರ್ಷವೂ ಸುಹಾಸ್ತಿ ಜೈನ್ ಮಿಲನ್ ರವರ ಬಹು ನಿರೀಕ್ಷಿತ ಜಿನಸಮ್ಮಿಲನ 5 ಆಯೋಜಿತವಾಗಿದೆ. ಹಲವು ಸ್ಪರ್ಧಿಗಳನ್ನು ಒಳಗೊಂಡ ಜಿನ ಸಮ್ಮಿಲನ 5ರ ಮಾಹಿತಿಯೊಂದಿಗಿನ ಟೀಮ್ ವೀಡಿಯೋ ಲಾಂಚ್ ಬಿಡುಗಡೆ ಇದು. ಸ್ವರ್ಧಿಗಳ ವಿವರಗಳನ್ನೊಮ್ಮೆ ತಿಳಿಯೋನ ಬನ್ನಿ.
ಮೊದಲಿಗೆ ಜೈನ ಕಿರುಚಿತ್ರ ಸ್ಪರ್ಧೆ. : ಜೈನ ಧಾರ್ಮಿಕ ಹಿನ್ನೆಲೆಯ ಆಂಶಗಳನ್ನು ಒಳಗೊಂಡಂತೆ 10 ನಿಮಿಷಕ್ಕೆ ಮೀರದಂತೆ ಕಿರುಚಿತ್ರಗಳ ನಿರ್ಮಾಣ ಮಾಡಬೇಕು. ಅದು ಕೇವಲ ಕನ್ನಡ ಭಾಷೆಯಲ್ಲಿರಬೇಕು.
ರಸಪ್ರಶ್ನೆ ಸ್ಪರ್ಧೆ :- ಜೈನ್ ನ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವು ವಿಭಿನ್ನ ದೃಷ್ಠಿಗಳುಳ್ಳ ವಿಚಾರಗಳುಳ್ಳ ಪ್ರಶ್ನೆಗಳನ್ನು ಆಸಕ್ತರ ಮುಂದಿಟ್ಟು ಜನರಿಗೆ ಧಾರ್ಮಿಕ ಅರಿವನ್ನು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ: – ಮಹಿಳೆಯರ ಸೃಜನಶೀಲ ಕಲೆಯನ್ನು ಸಾದರಪಡಿಸಲು ಉತ್ತಮ ಅವಕಾಶ ನೀಡುವ ದೃಷ್ಟಿಯಿಂದ ಮಹಿಳೆಯರಿಗಾಗಿ ಜೈನ ಧರ್ಮದ ವಿಚಾರಕ್ಕೆ ಸಂಬಂಧಪಟ್ಟಂತೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಚಿತ್ರಕಲಾ ಸ್ಪರ್ಧೆ :- ಚಿತ್ತದ ಕಲ್ಪನೆಯನ್ನು ಚಿತ್ರದ ಮೂಲಕ ಅಭಿವ್ಯಕ್ತಗೊಳಿಸಿ ತನ್ಮೂಲಕ ತನ್ನ ಕಲೆಯ ಪ್ರದರ್ಶನದ ವೇದಿಕೆಗಾಗಿ ಅವಕಾಶವನ್ನು ಕಲ್ಪಸಿಕೊಡುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆಯನ್ನು ನಾಲ್ಕು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಕಂದಮೂಲರಹಿತ ಅಡುಗೆ ಸ್ಪರ್ಧೆ ಜೈನರಲ್ಲಿ ಸಾಂಪ್ರದಾಯಿಕ ಅಡುಗೆ ಕಲೆಯ ಮರ್ಮ ಅಡಗಿದೆ. ಆರೋಗ್ಯ ಪೂರ್ಣ ಹಾಗೂ ಸಾತ್ವಿಕ ಆಹಾರ ಪದ್ಧತಿ ಜೈನರಲ್ಲಿ ಬೆಳೆದುಬಂದಿದೆ. ಕಂದಮೂಲರಹಿತ ಪಾಕದ ಅಡುಗೆಯ ಸ್ಪರ್ಧಯನ್ನು ನಾವಿಲ್ಲಿ ಆಯೋಜಿಸಿದ್ದೇವೆ.
ಛದ್ಮವೇಶ ಸ್ಪರ್ಧೆ :- ಜೈನ ಪರಂಪರೆಯ ರಾಜಮಹಾರಾಜರನ್ನು ಮಹಾಮಾತೆಯರನ್ನು ಈಗಿನ ತಲೆಮಾರಿಗೆ ನೆನಪಿಸುವ ಉದ್ದೇಶದಿಂದ ಮಕ್ಕಳಿಗಾಗಿ ಈ ಸ್ಪರ್ಧಯನ್ನು ಆಯೋಜಿಸಿದ್ದೇವೆ.
ಸ್ವರಚಿತ ಕವನ ವಾಚನ ಸ್ಪರ್ಧ :- ಜೈನ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಕವನ ಸ್ಪರ್ಧೆಯನ್ನು ಏರ್ಪಡಿಲಾಗಿದೆ. ಇದರಲ್ಲಿ ಎಲ್ಲರಿಗೂ ಭಾಗವಹಿಸುವ ಮುಕ್ತ ಅವಕಾಶವಿದೆ. ಕವನ ರಚನಕಾರರೇ ಕವನವನ್ನು ವಾಚನ ಮಾಡಬೇಕು.
ಈ ಎಲ್ಲಾ ಸ್ಪರ್ಧೆಗಳು ಮುಕ್ತವಾಗಿರುತ್ತದೆ. ವಿಜೇತರಿಗೆ ಸೂಕ್ತ ರೀತಿಯ ಪುರಸ್ಕಾರವನ್ನು ಕೂಡ ನೀಡಲಾಗುವುದು. ಇನ್ನೂ ಅನೇಕ ವಿಶೇಷ ಕಾರ್ಯಕ್ರಮಗಳನ್ನೊಳಗೊಂಡ ಜಿನ ಸಮ್ಮಿಲನ 5 ನಿಮ್ಮ ನಿರೀಕ್ಷೆಗೆ, ಕಾತುರದಿಂದ ನಿರೀಕ್ಷಿಸಿ.














