ಜೈ ಜಿನೇಂದ್ರ ವೀಕ್ಷಕರೆ, ವಾರದ ಜೈನ ಸುದ್ದಿಗಳೊಂದ್ದಿಗೆ ನಾನು ನಿಮ್ಮೊಂದಿಗಿದ್ದೇನೆ.
ಮುಖ್ಯಾಂಶಗಳು:-
ನಾಗಮಂಗಲ ತಾಲ್ಲೂಕಿನ ಬೋಗಾದಿ ಬಸದಿ ಜೀರ್ಣೋದ್ದಾರ ಸಮಿತಿ ರಚನೆ.
ವಿಶ್ವವಾಣಿ ಪತ್ರಿಕೆ ಶೀರ್ಷಿಕೆಯಲ್ಲಿ ಶ್ರೀ ಗೊಮ್ಮಟೇಶ್ವರ ಮೂರ್ತಿಗೆ ಅಪಹಾಸ್ಯ.
ಜೈನ ಸಾಧುಗಳಿಗೆ ಕರೋನಾದಿಂದ ಸುರಕ್ಷತೆಗಾಗಿ ಕ್ರಮ ಕೈಗೊಂಡಿರುವ ವರೂರಿನ ಎ.ಜಿ.ಎಮ್ ಮೆಡಿಕಲ್ ಕಾಲೇಜು.
ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಅತ್ಯುನ್ನತ ಫಲಿತಾಂಶ.
ಚಕ್ರೇಶ್ವರಿ ಮಹಿಳಾ ಸಮಾಜದ ಕಾರ್ಯಧ್ಯಕ್ಷೆಯಾಗಿ ಶ್ರೀಮತಿ ನಾಗಶ್ರೀ ಮುಪ್ಪಾನೆ ಆಯ್ಕೆ.
ರಾಜಾಜಿನಗರ ಜೈನ್ ಮಿಲನ್ ವತಿಯಿಂದ ಅಭಿನಂದನಾ ಕಾರ್ಯಕ್ರಮ.
ಸುದ್ದಿಗಳ ವಿವರ:-
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಪುರಾತನ ಬೋಗಾದಿ ಬಸದಿಯ ಜೀರ್ಣೋದ್ದಾರ ಸಮಿತಿ ರಚನೆಯಾಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಂಬದ ಹಳ್ಳಿ ಕ್ಷೇತ್ರಕ್ಕೆ ಹತ್ತಿರವಿರುವ ಬೋಗಾದಿ ಗ್ರಾಮದಲ್ಲಿ ಗಂಗರ ಹಾಗೂ ರಾಷ್ಟ್ರಕೂಟ ಕಾಲದ ಮತ್ತು ಹೊಯ್ಸಳರ ಕಾಲದಲ್ಲಿ ಜೀರ್ಣೋದ್ದಾರಗೊಂಡ ಸಾವಿರ ವರ್ಷಗಳಿಗಿಂತ ಹಳೆಯ ಪಾಳು ಬಿದ್ದ ಬಸದಿಯ ಜೀರ್ಣೋದ್ದಾರ ಕಾರ್ಯಕ್ಕಾಗಿ ಮೊದಲ ಮಿಟಿಂಗ್ ಜೂಮ್ ನಲ್ಲಿ ಮಾಡಲಾಯಿತು.
ಶ್ರೀ ಕರ್ಣ ಪಾರ್ಶ್ವನಾಥ ಸ್ವಾಮಿ ಬಸದಿ ಬೋಗಾದಿ ಬಸದಿಯ ಜೀರ್ಣೋದ್ದಾರ ಕಮಿಟಿ ಮಿಟಿಂಗ್ ಜೂಮ್ ನಲ್ಲಿ ಭಾನುವಾರ 4-10-2020ರಂದು ನಡೆಯಿತು. ಇದರಲ್ಲಿ ಕಂಬದ ಹಳ್ಳಿಯ ಸ್ವಸ್ತಿಶ್ರೀ ಭಾನು ಕೀರ್ತಿ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಸ್ಪೂರ್ತಿ ಜೈನ್ ಬೆಂಗಳೂರು, ಪ್ರಾರ್ಥನೆ ಬೆಳ್ಳೂರಿನ ಜಯಂತಿ ಮಾಲ, ಸ್ವಾಗತವನ್ನು ಮೈಸೂರಿನ ಶೀಲಾ ಅನಂತರಾಜ್ ರವರು ನಡೆಸಿಕೊಟ್ಟರು.
ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾತನಾಡಿ ಈ ಬಸದಿಯ ಜೀರ್ಣೋದ್ದಾರಕ್ಕೆ ನೀವೆಲ್ಲರು ನಮ್ಮ ಜೊತೆ ಕೈಜೋಡಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಈ ಬಸದಿಯ ಮಾಹಿತಿಯನ್ನು ಡಾ|| ರೂಪೇಶ್ ಜೈನ್ ರವರು ನೀಡಿದರು.
ಬೆಳ್ಳೂರಿನ ಶಾಂತಿ ಪ್ರಸದ್ , ಪದ್ಮನಾಭ್, ನಾಗಮಂಗಲದ ನಿತಾ ಅಜಿತ್, ಮಂಡ್ಯದ ವಿನಯ್ ಕುಮಾರ್, ಚಂದನ್ ಕುಮಾರ್, ಪವನ್, ಕೆ,ಆರ್ ಪೇಟೆಯ ವಜ್ರಪ್ರಸದ್, ಕಂಬದ ಹಳ್ಳಿಯ ಅಜಿತ್, ಮೈಸೂರಿನ ಮಾಲಿನಿ ಅವರುಗಳು ಉಪಸ್ಥಿತರಿದರು.
ಮೈಸೂರಿನ ಪ್ರಸನ್ನ ಕುಮಾರ್ ನೇತೃತ್ವ ವಹಿಸಿದ ಈ ಕಾರ್ಯಕ್ರಮದಲ್ಲಿ ದಡಗದ ಮಧನ್ ಕುಮಾರ್ ಜೈನ್ ರವರು ವಂದನಾರ್ಪಣೆ ಮಾಡಿದರು.
ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಬಾಹುಬಲಿ ಮೂರ್ತಿಗೆ ಅವಹೇಳನ ಕಾರಿ ಲೇಖನ ಒಂದನ್ನು ಕಂಡಿಸಿ ಜೈನ ಮಠದ ಮಠಾಧೀಶರುಗಳು ಹಾಗೂ ಜೈನ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜೈನ ಸಮುದಾಯದ ಹಾಗೂ ಇಲ್ಲಿ ಪೂಜಿಸಲಾಗುವ ಭಗವಂತರ ಮೇಲೆ ಇಂತಹ ಮಾತಿನ ಪ್ರಹಾರಗಳು ಅನೇಕ ನಡೆಯುತ್ತಿದ್ದು ಜೈನರ ಅಹಿಂಸ ತತ್ವಕ್ಕೆ ಸಿಕ್ಕ ಪ್ರತಿಫಲವೆ ಅಥವಾ ವಿಶ್ವದಲ್ಲೇ ಅಹಿಂಸೆಯನ್ನು ಪ್ರತಿಪಾದಿಸುವ ತ್ಯಾಗ ಸಹನೆ ಹೆಸರುವಾಸಿಯಾಗಿರುವ ನಮ್ಮ ತತ್ವಗಳನ್ನು ತಪ್ಪಾಗಿ ಅರ್ಥ್ಯಸಿಕೊಂಡು ಇಂತಹ ಪ್ರಕರಣಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆ ಉದ್ಬವವಾಗುತ್ತಿದೆ. ಇದಕ್ಕೆ ಪೂರಕವಾಗಿ ಶ್ರವಣ ಬೆಳಗೊಳದ ಶ್ರೀಗಳ ಲೇಖನ,
ತರುಣ ಸಾಗರರ ಲೇಖನ, ಹೀಗೆ ಪುಟಗಟ್ಟಲೆ ನೀಡಿ ಜೈನ ಸಮುದಾಯಕ್ಕೆ ತಮ್ಮದೇ ಪತ್ರಿಕೆಯ ಮೂಲಕ ಅನೇಕ ಕೊಡುಗೆಗಳನ್ನು ನೀಡಿದಂತಹ ಶ್ರವಣ ಬೆಳಗೊಳದ ಶ್ರೀಗಳ ಬಗ್ಗೆ ಹಾಗೂ ಡಾ|| ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಾರ ಗೌರವವನ್ನು ಹೊಂದ್ದಿದೆನೆ ಎಂದು ಹೇಳುವ ಸಂಪಾದಕರಾದ ವಿಶ್ವೇಶ್ವರ ಭಟ್ಟರವರು ತಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಶೀಷಿಸಕೆ ಅಕ್ಷಮ್ಯವಾಗಿದರು ತಪ್ಪಾಗಿದೆ ಎಂದು ತಿಳಿದು ಕೂಡ ಭಟ್ಟಾರಕರುಗಳ ಪತ್ರಗಳನ್ನು ಲೆಕ್ಕಿಸದೆ ಜೈನ ಸಮಾಜದ ಹಿತ ರಕ್ಷಣೆಗಾಗಿ ಶ್ರಮಿಸುತಿರುವ ಶ್ರೀ ಮಾಳ ಹರ್ಷೇಂದ್ರ ಜೈನ್ ಮತ್ತು ನಿರಂಜನ್ ಕುದ್ಯಾಡಿಯವರ ಮಾತಿಗೂ ಒಪ್ಪದೇ ಮರುದಿನ ಪ್ರಕಟವಾದ ಪುಟ್ಟ ಲೇಖನದಲ್ಲಿ ಜೈನ ಸಮುದಾಯದವರ ಕೆಲವರಿಗೆ ಬೇಸರವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದಷ್ಟೇ ಹೇಳಿ ಸರಿಯಾದ ರೀತಿಯಲ್ಲಿ ಕ್ಷಮೆಯಾಚಿಸದಿರುವುದು ಸಮುದಾಯದವರ ಹೆಚ್ಚಿನ ಆಕ್ರೋಶಕ್ಕೆ ಗುರಿಯಾಗಿದ್ದು ವಿಶ್ವವಾಣಿ ಪತ್ರಿಕೆಯನ್ನು ಬಹಿಷ್ಕರಿಸಲು ಜೈನ ಬಾಂಧವರು ಪತ್ರಿಕೆಯನ್ನು ಕೊಳ್ಳದಿರಲು ಹಲವರಿಂದ ಕರೆ ನೀಡಲಾಗುತ್ತಿದೆ. ಹಾಗೂ ಮುಂದಿನ ದಿನಗಳಲ್ಲಿ ಸಮಸ್ತ ಭಟ್ಟಾರಕರುಗಳ ಹಾಗೂ ಸಮಾಜ ಸಂಘ ಸಂಸ್ಥೆಯ ಮುಖಂಡರುಗಳ ಆದೇಶದ ಮೇರೆಗೆ ಕ್ರಮ ಕೈಗೊಳಲಾಗಲು ತೀರ್ಮಾನಿಸಲಾಗುತ್ತಿದೆ ಎಂದು ಮಾಳ ಹರ್ಷೇಂದ್ರ ಜೈನ್ ರವರು ತಿಳಿಸಿದ್ದಾರೆ.
ದೇಶದಲ್ಲಿ ಪ್ರಪ್ರಥಮವಾಗಿ ವರೂರಿನ ಎ.ಜಿ.ಎಮ್ ಮೆಡಿಕಲ್ ಕಾಲೇಜುವತಿಯಿಂದ ಜೈನ ಸಾಧುಗಳನ್ನು ಕಾಡುತ್ತಿರುವ ಕರೋನ ಸಂಕಷ್ಟದಿಂದ ಸಂರಕ್ಷಿಸುವ ಸಲುವಾಗಿ ಕ್ರಮ ಕೈ ಗೊಂಡಿದೆ.
ಇಲ್ಲಿನ 110 ವೈದ್ಯಕೀಯ ಸಿಬ್ಬಂದಿಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದು ಅಲೋಪತಿ ಔಷದಿಗಳನ್ನು ಸೇವನೆ ಮಾಡದಿರುವ ಜೈನ ಸಾಧುಗಳಿಗಾಗಿ ಆಯುರ್ವೇದಸ ಔಷದೊಪಚಾರವನ್ನು ಕೈಗೊಂಡಿದ್ದು ತಕ್ಷಣ ಸೇವೆಯನ್ನು ಒದಗಿಸುತಿರುವುದಲ್ಲದೆ ಆನ್ ಲೈನ್ ನಲ್ಲಿ ಕೂಡ ಅವರಿಗೆ ಸಲಹೆಗಳನ್ನು ಒದಗಿಸಲಾಗುತ್ತಿದೆ. ಅಷ್ಟೇ ಅಲ್ಲದೇ 24ಗಂಟೆಗಳ ಸೇವೆಯನ್ನು ಕೂಡ ಒದಗಿಸಲಾಗುತ್ತಿದೆ. ವರೂರಿನಲ್ಲಿ ಚಾತುರ್ಮಾಸ ಮಾಡುತ್ತಿರುವ ಆಚಾರ್ಯ ಶ್ರೀ ಗುಣದರ ನಂದಿ ಮುನಿ ಮಹಾರಾಜರ ನಿರ್ದೇಶನದಂತೆ ಈ ಕಾರ್ಯವು ನಡೆಯುತ್ತಿದ್ದು ಅತ್ಯುತ್ತಮ ಹಾಗೂ ಪ್ರಶಂಸನೀಯ ಕೆಲಸವಾಗಿದೆ.
ಅಂತರ್ಜಾಲದಲ್ಲಿ ವಿದ್ಯಾವಾಚಸ್ಪತಿ ಶ್ರೀಯುತ ಮೋಹನ್ ಕುಮಾರ್ ರವರು ನಡೆಸಿಕೊಡುತ್ತಿದ್ದ ರತ್ನಾಕರ ಶತಕ ಕಾವ್ಯ ವಾಚನವನ್ನು ಮುಗಿಸಿ ಅಪರಾಜಿತ ಶತಕವನ್ನು ಪ್ರಾರಂಭಿಸಿದ್ದಾರೆ. ಶೋತ್ರು ಬಾಂಧವರು ಆಲಿಸಿ ಪುಣ್ಯಲಾಭವನ್ನು ಪಡೆದುಕೊಳ್ಳಲು ಅವರು ವಿನಂತಿಸಿದ್ದಾರೆ.
ಜಾಹೀರಾತು
ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಇತ್ತೀಚೆಗಷ್ಟೇ ನಡೆದ ಅಂತಿಮ ವರ್ಷದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಫಲಿತಾಂಶ ಪ್ರಕಟಣೆಗೊಂಡಿದ್ದು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಬಂದಿರುತ್ತದೆ.
ಪರಮ ಪೂಜ್ಯ ಜಗದ್ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸವಾಮೀಜಿಯವರ ಶುಭ ಆಶೀರ್ವಾದದಿಂದ 1997ರಲ್ಲಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಆರಂಭಗೊಂಡ ಮತ್ತು ರಜತ ಮಹೋತ್ಸವದ ಹಂಚಿನಲ್ಲಿ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದಿಂದ ಇತ್ತೀಚೆಗಷ್ಟೇ ನಡೆದ ಅಂತಿಮ ವರ್ಷದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಫಲಿತಾಂಶವು ಪ್ರಕಟಣೆಗೊಂಡಿದೆ. ಈ ಫಲಿತಾಂಶದ ಪ್ರಕಾರ ಕಾಲೇಜಿಗೆ ಅತ್ಯುತ್ತಮವಾದ ಫಲಿತಾಂಶ ಬಂದಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಇನ್ಫರ್ ಮೆಷನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 96.5%ರಷ್ಟು, ಹಾಗೂ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿಭಾಗಕ್ಕೆ 92% ರಷ್ಟು ಫಲಿತಾಂಶ ಬಂದಿರುತ್ತದೆ, ಎಲ್ಲಾ ವಿಭಾಗದಿಂದ ಕಾಲೇಜಿಗೆ 97.8% ಫಲಿತಾಂಶ ಬಂದಿರುತ್ತದೆ. ಒಟ್ಟು 181 ಅಂತಿಮ ವರ್ಷದ ವಿದ್ಯಾರ್ಥಿಗಳಲ್ಲಿ 173 ಡಿಸ್ಟಿಂಕ್ಷನ್, ಹಾಗೂ ನಾಲ್ಕು ಪ್ರಥಮ ಶ್ರೇಣಿಗಳಲ್ಲಿ ಪಾಸ್ ಆಗಿರುತ್ತಾರೆ. ಇಂತಹ ಅತ್ಯುತ್ತಮ ಫಲಿತಾಂಶಕ್ಕಾಗಿ ಪೂಜ್ಯ ಶ್ರೀಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ, ಎಲ್ಲಾ ಸಿಬ್ಬಂದಿ ವರ್ಗದವರಿಗೆ ಶುಭಾಶೀರ್ವಾದವನ್ನು ತಿಳಿಸಿರುತ್ತಾರೆ. ಮತ್ತು ಪ್ರಾಂಶುಪಾಲರಾದ ಶ್ರೀ ಗೋಮಟೇಶ ಮ. ರಾವನವರು ಈ ಬಗ್ಗೆ ಏನು ಹೇಳುತ್ತಾರೆ ಕೇಳೊಣ ಬನ್ನಿ.
ಇಂತಹ ಒಂದು ಸಂದರ್ಭದಲ್ಲಿ ಈ ಒಂದು ಕೊವಿಡ್ 19 ಪೆಂಡಮಿಕ್ ನಡೆಯುತ್ತಿರುವ ಸಂದರ್ಭದಲ್ಲಿ ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶವು ಇತ್ತೀಚೆಗಷ್ಟೇ ಬಂದಿದ್ದು ನಮ್ಮ ಕಾಲೇಜಿಗೆ 97.8% ಫಲಿತಾಂಶ ದೊರೆತಿದೆ. 181 ವಿದ್ಯಾರ್ಥಿಗಳು ಈ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ಕೇವಲ ನಾಲ್ಕು ವಿದ್ಯಾರ್ಥಿಗಳು ಮಾತ್ರ ಫೇಲ್ ಆಗಿದ್ದಾರೆ. ಉಳಿದ ವಿದ್ಯಾರ್ಥಿಗಳಲ್ಲಿ 173 ಡಿಸ್ಟಿಂಕ್ಷನ್, ಹಾಗೂ ನಾಲ್ಕು ಪ್ರಥಮ ಶ್ರೇಣಿಗಳಲ್ಲಿ ಪಾಸ್ ಆಗಿರುತ್ತಾರೆ. ಈ ಫಲಿತಾಂಶವು ಇದೆ ರೀತಿ ಸುಮಾರು ಪ್ರಾರಂಭಗೊಂಡಾಗಿನಿಂದಲು ನಮ್ಮ ಕಾಲೇಜಿನ ಫಲಿತಾಂಶ 90% ಮೇಲೆ ಇದೆ. ಆದರೆ ಈ ವರ್ಷದ ಫಲಿತಾಂಶ 97.8%. ಇದರ ಜೊತೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೊವಿಡ್ 19 ಸಂದರ್ಭದಲ್ಲಿ ಅನ್ ಲೈನ್ ಮುಖಾಂತರವಾಗಿ ನಡೆಸಿಕೊಟ್ಟಿದ್ದೆವು. ನಮ್ಮ ಕಾಲೇಜು ಎಲ್ಲಾ ವಿದ್ಯಾರ್ಥಿಗಳ ಸರ್ವಾಂಗನೆಯ ಅಭಿವೃದ್ದಿಗೆ ಸಮ್ಮಿಶ್ರ ಇದೆ. ಅದು ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅವರನ್ನು ಪ್ರೋತ್ಸಹಿಸುತೇವೆ. ಮತ್ತು ಎಲ್ಲಾ ವಿದ್ಯಾರ್ಥಿ ಮತ್ತು ಪಾಲಕರು ಒಂದು ಬಾರಿ ನಮ್ಮ ಕಾಲೇಜಿಗೆ ಬಂದು ಕಾಲೇಜಿನ ಬಗ್ಗೆ ಪರಿಶೀಲಿಸಿ ಎಂದು ಹೇಳುತ್ತ ಎಲ್ಲರಿಗೂ ಒಳ್ಳೆಯದಾಗಲ್ಲಿ ಎಂದು ಹೇಳುತ್ತ ತಮ್ಮ ಮಾತು ಮುಗಿಸಿದರು.
ಪರಮ ಪೂಜ್ಯ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳ ಆದೇಶದಂತೆ ತೆರವುಗೊಂಡಿದ್ದ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ಕಾರ್ಯಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ನಾಗಶ್ರೀ ಮುಪ್ಪಾನೆಯವರು ಆಯ್ಕೆಯಾಗಿದ್ದು ಅವರಿಗೆ ಜ್ವಾಲಮಾಲ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತದೆ.
ಈಗ ಪ್ರಕಟಣೆಯ ಸಮಯ
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ . ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಕಾಲೇಜಿನಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿಧ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆರ್ಜಿತನ್ನು ಆಹ್ವಾನಿಸಲಾಗಿದೆ. ಪಿ ಯು ಸಿ, ಪದವಿ, ಸ್ನಾತಕೋತ್ತರ ಹಾಗೂ ಪಿ ಹೆಚ್ ಡಿ ಯವರೆಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಹಾಗೂ ತಾಂತ್ರಿಕ ಹಾಗೂ ವಿವಿಧ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿ ವೇತನದ ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್ ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಹೊಸ ನವೀಕೃತ ಅರ್ಜಿ ಸಲ್ಲಿಸಲು 31-10-2020ರಂದು ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕೆಳಗೆ ನೀಡಿರುವ ವೆಬ್ ಸೈಟ್ ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಬಹುದು.
ಬೆಂಗಳೂರು ರಾಜಾಜಿನಗರ ಜೈನ್ ಮಿಲನ್ ವತಿಯಿಂದ ಚಿಣ್ಣರಾ ಜಿನ ಕಥಾ ಸ್ಪರ್ಧೆಯ ಸ್ಪರ್ಧ ವಿಜೇತ ಮಕ್ಕಳಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯ ಕ್ರಮದಲ್ಲಿ ಅತಿಥಿಗಳಾಗಿ ವಿ ಭರತೇಶ್ ಜಗಶೆಟ್ಟಿಯವರು, ಪ್ರಸನ್ನ ಕುಮಾರ್ ಉಡುಪಿ, ವೀರ್ ಎಂ ಎನ್ ಮೃತ್ಯುಂಜಯ, ವೀರ್ ಎನ್ ನಿರಂಜನ್, ವೀರ್ ರಾಜೇಶ್ ಎಂ, ವೀರ್ ವಿಲಾಸ್ ಪಾಸಣ್ಣ ನವರ್ ವೀರ್ ಜಿ ಅಜಿತ್ ಕುಮಾರ್, ವೀರ್ ಎನ್ ಪ್ರಸನ್ನ ಕುಮಾರ್ ಮೈಸೂರು, ವೀರ್ ಎ ಪಿ ಕುಮಾರ್, ರಾಜಾಜಿ ನಗರ ಮಿಲನ್ ಸಂಸ್ಥಾಪಕರಾದ ಗೌರವಧ್ಯಕ್ಷರಾದ ವೀರ್ ಪಿ ಎನ್ ಚಂದ್ರ ಕೀರ್ತಿ, ಮುಂತಾದ ಗಣ್ಯರು ಕರ್ನಾಟಕದಾದ್ಯಂತ ಭಾಗವಹಿಸಿದರು. ವಿಜೇತ ಮಕ್ಕಳು ಲೈವ್ ನಲ್ಲಿ ಬಂದು ತಮ್ಮ ಪರಿಚಯವನ್ನು ಮಾಡಿಕೊಟ್ಟಿದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ತೀರ್ಪೂಗಾರರಾಗಿ ಶ್ರೀಮತಿ ಎಸ್ ವಿ ಸುಜಾತ, ಡಾ|| ನಿರಜಾ ನಾಗೇಂದ್ರ ಕುಮಾರ್, ಸುಶ್ಮಗಣಿಯವರು ಸ್ಪರ್ಧೆಯಲ್ಲಿನ ಎಲ್ಲ ಕಥೆಗಳನ್ನು ಮೊದಲೆ ಆಲಿಸಿ ತೀರ್ಪು ನೀಡಿರುವುದರಲ್ಲದೆ ಲೈವ್ ನಲ್ಲಿ ತಮ್ಮಸಲಹೆ ಸೂಚನೆ
ನೀಡಿರುವುದು ಎಲ್ಲರನ್ನು ಹುರಿದುಂಬಿಸಿತ್ತು.
ವಿರಾಂಗನ ಅನಿತ ಸುರೇಂದ್ರ ಕುಮಾರ್ ರವರು ವಿವಿಧ ಕಥೆಗಳ ಮೂಲಕ ಹುರಿದುಂಬಿಸುತ್ತ ಧರ್ಮಕಾಗಿ ನಡೆದ ಈ ಕಾರ್ಯಕ್ರಮವನ್ನು ತುಂಬು ಹೃದಯದಿಂದ ಶ್ಲಾಘೀಸಿದರು.
ವೀರ್ ಭೂಪಾಲ್ ಅಸ್ಕಿ, ವಿರಾಂಗನ ಸೌದಾಮಿನಿ ಅಜಿತ್, ವಿರಾಂಗನ ವತ್ಸಲ ಕುಮಾರಿ, ವಿರಾಂಗನ ಸುಧಾ ಬಾಹುಬಲಿ, ವಿರಾಂಗನ ಭಾರತೀ ಹೇಮ ಚಂದ್ರ ಇವರುಗಳು ಉಪಸ್ಥಿತರಿದ್ದರು. ಇವರುಗಳ ಟಿಮ್ ವರ್ಕ್ ಅತ್ಯಂತ ಶ್ಲಾಘನೀಯವಾದ್ದು.
ಇಲ್ಲಿಯ ವರೆಗೆ ವಾರದ ಜೈನ ಸುದ್ದಿಗಳು ವೀಕ್ಕಿಸಿದ ನಿಮ್ಮಗೆಲ್ಲರಿಗು ಧನ್ಯವಾದಗಳನ್ನು ತಿಳಿಸುತ್ತಾ.
ಹೀಗೆ ಪ್ರತಿವಾರವು ವೀಕ್ಷಿಸುತಿರಿ, ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ. ವಾರದ ಜೈನ ಸುದ್ದಿಗಳು
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














