ಜೈ ಜಿನೇಂದ್ರ ವೀಕ್ಷಕರೆ, ಹಸಿರು ಸೆರಗ ಹೊದ್ದು ನಿಂತಿರುವ ಪ್ರಕೃತಿ ಮಾತೆಯ ವರ್ಣನಾತಿತ ಸೌಂದರ್ಯದ ನಡುವೆ 18 ಕೆರೆ 18 ಚಾರಿತ್ರಾರ್ಹ ಬಸದಿಗಳ್ಳುಳ ಜೈನ ಕಾಶಿ ಮೂಡುಬಿದ್ರೆಯಲ್ಲಿನ ಮತ್ತೊಂದು ಪ್ರಮುಖವಾದ ಬಸದಿ ಇಲ್ಲಿನ ಕ್ರಿ.ಪೂ 7ನೇ ಶತಮಾನದಲ್ಲಿ ನಿರ್ಮಿತವಾದ ಬಸದಿ ಗುರುಗಳ ಬಸದಿ ಈ ಬಸದಿಯಲ್ಲಿ ನ್ಯಾಯ ತೀರ್ಮಾನ ಆಭಯ ಔಷಧ ಶಾಸ್ತ್ರದಾನ ಜಪ ತಪ ಜಿನ ಧರ್ಮ ಅನಿಷ್ಟಾನ ಇವುಗಳ ಪಾರಂಪರಿಕ ತಾಣ. ಮೂಡುಬಿದ್ರೆಯ ದಾನ ಶಾಲೆ ಜೈನ ಮಠವು ಹೊಯ್ಸಳ ರಾಜಾಧಿರಾಜ ಗುರು ಆದ್ಯ ಶ್ರೀ ಚಾರು ಕೀರ್ತಿ ಭಟ್ಟಾರಕರಿಂದ 1221ರಲ್ಲಿ ಸ್ಥಾಪಿತ ಹೀಗಿನ ಶ್ರೀ ಮಠಗಳ ಗುರು ಪರಂಪರೆಯ ಪಟ್ಟಾಭಿಷೇಕ ಇಲ್ಲಿನ ಚಂದನದ ಗದ್ದುಗೆಯಲ್ಲಿ ಹಾಗುತ್ತದೆ. ನಿರಂತರ ಧಾರ್ಮಿಕ ಕ್ರಿಯಾ ಕಲಾಪಗಳಿಗೆ ಇಲ್ಲಿಂದ ಹಾಗೂ ಜೈನ ಮಠದಿಂದ ಶ್ರೀಗಳಿಂದ ಮಾರ್ಗ ದರ್ಶನ ದೀಕ್ಷೆ ಪೂಜೆ ಆರಾಧನೆಗಳಿಗೆ ಇಲ್ಲಿಂದಲೆ ಚಾಲನೆ ಸಿಗುತ್ತದೆ.
ಒಂದೆ ಮರಿಕೆಯಲ್ಲಿ ಹುಲಿ ಹಸು ವೈರತ್ವ ಮರೆತು ಪರಸ್ಪರ ಬಾಯಾರಿದ ಪ್ರಾಣಿಗಳು ನೀರು ಕುಡಿದು ಹಸುವಿನ ಮರಿಗೆ ಹುಲಿ ಹಾಲು ಉಣಿಸಿದ ಈ ಭೂಮಿಯ ತಳ ಭಾಗದಲ್ಲಿ. 12ಅಡಿ ಎತ್ತರವಾದ ಸುಂದರ ಕೃಷ್ಣ ವರ್ಣದ ಚಂಡೋಗ್ರ ಪಾರ್ಶ್ವನಾಥ ಸ್ವಾಮಿ ಮೂರ್ತಿ ಭೂಗರ್ಭದಿಂದ ಪ್ರಕಟವಾದುದ್ದು
ಭೂಗರ್ಭ ದಿಂದ ದೊರತಂತಹ ವಿಗ್ರಹವು ಬಹಳ ಲಕ್ಷಣವಾಗಿದೆ ಹಾಗೂ ಇಲ್ಲಿನ ಮೂಲ ಮೂರ್ತಿಯಾಗಿದೆ. ಇಲ್ಲಿನ ಗರ್ಭ ಗುಡಿ ಹಾಗೂ ಸುಕನಾಸಿ ನವರಂಗ ಮೇಲ್ಚಾವಣಿ ಕೆತ್ತನೆಗಳು ಸಾವಿರ ಕಂಬದ ಬಸದಿಯಂತೆ ಅಕರ್ಷಕವಾಗಿದ್ದು ಇಲ್ಲಿನ ಕಂಬದ ಕೆತ್ತನೆಯು ಸೂಕ್ಷ್ಮ ಹಾಗೂ ಕಾಲ ಕುಸರಿ ಇಂದ ಕೂಡಿದೆ.
ಈ ಬಸದಿಯ ಪೂರ್ವದ ಬಲ ಪಾರ್ಶ್ವಕ್ಕೆ 24 ತೀರ್ಥಂಕರರ ಸರಸ್ವತಿಯ ಹಾಗೂ ಪದ್ಮಾವತಿ ಅಮ್ಮನವರ ವಿಗ್ರಹಗಳು ಪೂಜಿಸಲ್ಪಡುತ್ತಿದ್ದು, ಇಲ್ಲಿ ಶ್ರಾವಣ ಶುಕ್ರವಾರದಂದ್ದು ವಿಶೇಷ ಪೂಜೆ ಹಾಗೂ ಪಾರ್ಶ್ವನಾಥರ ಜನ್ಮ ಕಲ್ಯಾಣ ಮುಕುಟ ಸಪ್ತಮಿಯ ಆಚರಣೆ ಬಹಳ ವಿಜೃಂಭಣೆ ಇಂದ ನಡೆಯುತ್ತದೆ. ಈ ಬಸದಿಗೆ ಭಕ್ತಾದಿಗಳು ಉಪಸ್ವರ್ಗ ನಿವಾರಣೆ ಹಾಗೂ ವಿಳಂಬ ವಿವಾಹಕ್ಕೆ ಇಲ್ಲಿ ಪರಿಹಾರಕೋಸ್ಕರ ಆಗಮಿಸುತ್ತಾರೆ. ಇಂತಹ ಅಪೂರ್ವ ಅತಿಶಯುಕ್ತ ಮೂಡುಬಿದ್ರೆಯ ಜೈನ ಬಸದಿಗಳನ್ನು ನಿಮ್ಮ ಜ್ವಾಲಮಾಲ ಕ್ಷೇತ್ರ ಪರಿಚಯದಲ್ಲಿ ಮುಂದಿನ ದಿನಗಳಲ್ಲಿ ವೀಕ್ಷಿಸಬಹುದಾಗಿದೆ.
ಇಂತಹ ಐತಿಹಾಸಿಕ ಕ್ಷೇತ್ರಗಳನ್ನು ವೀಕ್ಷಿಸಿ ಪುಣ್ಯ ಬಾಗಿಗಳಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನ ಕ್ಷೇತ್ರ ಪರಿಚಯದಲ್ಲಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














