ಸಂಸ್ಕಾರವೆಂದರೇನು ?
ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..!
ಎಷ್ಟೇ ಆಧುನಿಕತೆ ಬಂದರೂ ಹೆಣ್ಣಿಗೆ ಹಣೆಯ ಮೇಲಿನ ಬೊಟ್ಟು ಸಂಸ್ಕಾರ..!
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ, ಭಕ್ತಿ ಸಂಸ್ಕಾರ..!
ಯಜಮಾನಿಕೆ, ದೊಡ್ಡಸ್ತಿಕೆ ಇದ್ದರೂ ಚಿಕ್ಕವರಿಗೆ ತೋರಿಸೋ ಪ್ರೀತಿ, ವಿಶ್ವಾಸ, ಕಳಕಳಿ ಸಂಸ್ಕಾರ..!
ನಮ್ಮ ನಡವಳಿಕೆಯಲ್ಲಿರೋ ನಯ, ವಿನಯ, ನಾಜೂಕತನ ಸಂಸ್ಕಾರ..!
ಓದು, ಬರಹ, ಉದ್ಯೋಗದ ಹೊರತಾಗಿಯೂ ಹೊರುವ ಜವಾಬ್ದಾರಿ ಸಂಸ್ಕಾರ..!
ಖಾಯಿಲೆಯ ತಂದೆಯನ್ನು ಮಗುವಿನಂತೆ ಜೋಪಾನ ಮಾಡೋದು ಸಂಸ್ಕಾರ..!
ಸದಾ ಕುಟುಂಬದ ಕಣ್ಣಾದ ತಾಯಿಯ ಬೇಕು-ಬೇಡ ಕೇಳಿ ಈಡೇರಿಸುವುದೇ ಸಂಸ್ಕಾರ..!
ಮುದ್ದಿನ ಮಗ ತಪ್ಪು ಮಾಡಿದ್ದಾಗ ಮೃದು ಮಾತಿನಿಂದ ದಾರಿಗೆ ತರೋದೇ ಸಂಸ್ಕಾರ..!
ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದೇ ಸಂಸ್ಕಾರ..!
ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೆ ಸಹಾಯ ಮಾಡೊ ಗೆಳೆಯನ ಗುಣ ಸಂಸ್ಕಾರ..!
ಸಣ್ಣ ಸಂಪಾದನೆಯಲ್ಲಿ ಇಷ್ಟ ಕಷ್ಟ ಮರೆತು ನಿಮ್ಮೊಪ್ಪಿ ಬಂದ ಹೆಂಡತಿಯ ಉದಾರ ಗುಣ ಸಂಸ್ಕಾರ..!
ಸಂಸ್ಕಾರ ಎಲ್ಲೆಲ್ಲೂ ಇದೆ.. ಅಂಗಳದ ರಂಗೋಲಿಯಲ್ಲಿ..
ದೇವರ ಮುಂದೆ ದೀಪದಲ್ಲಿ..
ಅಡುಗೆಯಾದೊಡನೆ ಬರುವ ಘಮದಲ್ಲಿ..
ತಟ್ಟೆಯ ಮುಂದೆ ಕೂತಾಗ ಬಡಿಸುವವನ ಕೈಯಲ್ಲಿ..
ಹುಶಾರಿಲ್ಲದೆ ಮಲಗಿದಾಗ ಏನಾಯಿತು ?? ಎಂದು ಮರುಗುವವರ ಮನದಲ್ಲಿ..
ಹೀಗೆ ! ನಮ್ಮ ನಡವಳಿಕೆ, ಮಾತು, ನಡತೆಗಳಲ್ಲಿಯೇ ಸಂಸ್ಕಾರ ಅಡಗಿದೆ..!
ಸಂಸ್ಕಾರವಂತರಾಗೋಣ!! ಸುಭದ್ರ ಭಾರತ ಕಟ್ಟೋಣ..!!
ಧನ್ಯವಾದ.
‘ಅ’ಜ್ಞಾನಾಮೃತ ಮಹೇಶ್ ಹೊನ್ನಾವರ್
ಜೈ ಜಿನೇಂದ್ರ ವೀಕ್ಷಕರೆ, ಸಂಸ್ಕಾರವೇನ್ನುವುದು ಗುಣಗಳ ಗುಣಾಕಾರ ಹಾಗೂ ದೋಷಗಳ ಭಾಗಕಾರ, ಸಂಸ್ಕಾರದಲ್ಲಿ ಬೆಳೆಯುವುದು ಎಂದರೆ ಉತ್ತಮ ಅಭ್ಯಸಗಳನ್ನ ರೂಡಿಸಿಕೊಳುವುದ್ದು ಉತ್ತಮ ಮಾರ್ಗದಲ್ಲಿ ಸಾಗುವುದು. ಬನ್ನಿ ವೀಕ್ಷಕರೆ ನಮ್ಮ ಇಂದಿನ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ಯಾರೆಲ್ಲಾ ಇದ್ದಾರೆ ನೋಡಿ ಬರೋಣ.
ಪ್ರಮೈ ಜೈನ್, ಮೂಡುಬಿದ್ರೆ ಜೈನ್ ಮಿಲನ್ ಶ್ವೇತ ಜೈನ್ ಇವರ ಮುದ್ದಿನ ಮಗಳು. ಈಗಷ್ಟೇ ನೈತ್ ಪಾಸ್ ಆದಾ ಈಕೆ ಶಾಲೆಯಲ್ಲಿ ಶಿಕ್ಷಕರ ಮೇಚ್ಚುಗೆಗೆ ಪಾತ್ರಳಾದ ವಿದೇಯ ವಿದ್ಯಾರ್ಥಿ ಚಿಕ್ಕಂದಿನಿಂದಲೂ ಶಾಲಾ ಕಾಲೇಜು ವಿವಿಧ ಸಂಸ್ಥೆಗಳಿಂದ ಆಯೋಜಿತವಾದ ಛದ್ಮವೇಷ, ಕರಾವಳಿ ಹುಲಿಕುಣಿತಾ, ದೇಶ ಭಕ್ತಿ ಕರಾವಳಿ ಸಂಸ್ಕೃತಿ ಬಿಂಬಿಸುವ ಹಾಗೂ ಜೈನ ಧರ್ಮದ ಸಂದೇಶ ಸಾರುವ ವೇಷಗಳ ಮೂಲಕ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾಳೆ.
ಸಾವಿರ ಕಂಬಗಳ ಬಸದಿ ಹೀರೆ ಅಮ್ಮನವರ ಬಸದಿ ಶ್ರೀ ಮಠದ ರಥೋತ್ಸವಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಶಾಲಾ ಭಾಷಣ ಸ್ಪರ್ಧೆಗಳಲ್ಲಿ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ್ದಿದಾಳೆ. ಜಿನ ಭಜನೆಯಲ್ಲಿ ಸತತವಾಗಿ ಎರಡು ಬಾರಿ ಬಹುಮಾನ ಗಳಿಸಿಕೊಂಡಿದ್ದಾಳೆ. ಜೈನ್ ಮಿಲನ್ ಆಯೋಜಿಸಿದಂತಹ ಯಾವುದೇ ಸ್ಪೋಟ್ಸ್ ನಲ್ಲೂ ಬಹುಮಾನ ವಿಲ್ಲದೇ ಹಿಂತಿರುಗಿದ್ದೇ ಇಲ್ಲಾ. ಎರಡು ಬಾರಿ ಜಿಲ್ಲಾಮಟ್ಟದ ಶೆಟಲ್ ಶಾಲೆಯನ್ನು ಪ್ರತಿನಿಧಿಸಿ ಕಾರ್ಕಳ ಜೈನ್ ಮಿಲನ್ ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಒಂದೇ ವೇದಿಕೆಯಲ್ಲಿ ಆರು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಸ್ಕೌಟ್ ಅಂಡ್ ಗೈಡ್ಸ್ ಎನ್.ಸಿ.ಸಿ.ಯಲ್ಲು ಇದ್ದಾಳೆ. ಅಚ್ಚರಿ ಪಡುವ ಸಂಗತಿ ಎಂದರೆ ಟಿ.ವಿ ಮೊಬೈಲ್ ನಿಂದ ಬಹಳ ದೂರವಂತೆ ಈಕೆ. ಪ್ರಾಣಿಗಳಂದರೆ ತುಂಬ ಇಷ್ಟ, ರುಚಿಯಾದ ಅಡುಗೆ ಕೂಡ ಮಾಡಬಲ್ಲ ಈಕೆ ಸೈಕಲ್ ಸ್ಕೂಟರ್ ಬುಲೆಟ್ ಸಲಾರಿಯೋನ್ ನಿಂದ ಹಿಡಿದು ಇನೋವದಂತಹ ವೈಕಲ್ ಕೂಡ ಸಲೀಸಾಗಿ ಓಡಿಸಬಲ್ಲಳು. ಎಲ್ಲದಕ್ಕಿಂತ ಬಹು ಮುಖ್ಯ ಎಂದರೆ ಅವಳ ತಾಯಿ ಅವಳ ಹುಟ್ಟು ಹಬ್ಬವನ್ನು ಆಚರಿಸುವ ರೀತಿ, ಬನ್ನಿ ಅವಳಿಂದಲೆ ಅದನ್ನು ತಿಳಿಯೋಣ.
ಈಕೆ ಅಪೂರ್ವ ಪ್ರತಿಭೆ, ವೀಕ್ಷಕರೆ ದಯವಿಟ್ಟು ಈಕೆಗೆ ಲೈಕ್ ಮತ್ತು ಕಮೆಂಟ್ ಮೂಲಕ ಪ್ರೋತ್ಸಹಿಸಿ.
ನಿರೂಪಕರು :- ಜೈ ಜಿನೇಂದ್ರ ಪ್ರಮೈಯಿ, ನೀವು ಮಂಗಳಾಚರಣೆಯನ್ನು ತುಂಬ ಚೆನ್ನಾಗಿ ಹಾಡುತ್ತಿರಂತೆ ಕಾರ್ಯಕ್ರಮವನ್ನ ಮಂಗಳಾಚರಣೆಯಿಂದ ಶುರುಮಾಡೋಣ.
(ಪ್ರಮೈ ಜೈನ್ ರವರು ಒಂದು ಸುಂದರವಾದ ಮಂಗಳಾಚರಣೆ ಹಾಡನ್ನು ಹಾಡಿದರು).
ನಿರೂಪಕರು :- ಶಾಲೆಯಲ್ಲಿ ಬಹು ಅಚ್ಚು ಮೆಚ್ಚಿನ ವಿದ್ಯಾರ್ಥಿ ನೀವು ಏಕೆಂದರೆ ಓದುವುದರಲ್ಲಿ ಅಷ್ಟೇ ಅಲ್ಲದೇ ಪಠ್ಯೆತರ ವಿಷಯಗಳಲ್ಲು ಬಹಳ ಮುಂಚೂಣಿಯಲ್ಲಿ ಇದ್ದೀರಿ. ಹೇಳಿ ಹೇಗೆಲ್ಲಾ ಪ್ರೋತ್ಸಾಹ ಸಿಕ್ಕುತ್ತದೆ ನಿಮಗೆ.
ಪ್ರಮೈ ಜೈನ್ :- ಮನೆಯಲ್ಲಿ ಅಮ್ಮ, ಅಜ್ಜಿ, ಮಾವ, ದೊಡ್ಡಪ್ಪ, ದೊಡ್ಡಮ್ಮ ಇವರಿಗೆ ನಾನು ಎಂದರೆ ಬಹಳ ಪ್ರೀತಿ ಮತ್ತು ತುಂಬ ಮುದ್ದು ಮಾಡುತ್ತಾರೆ ನಾನು ಏನು ಕೇಳಿದರು ಇಲ್ಲ ಅಂತ ಹೇಳಲ್ಲ, ನನ್ನ ಹಾಬೀಸ್ ಆಸೆ ಅಕಾಂಕ್ಷೇಗಳಿಗೆ ತುಂಬ ಪ್ರೋತ್ಸಾಹ ನೀಡುತ್ತಾರೆ. ನನ್ನ ಅಮ್ಮ ಯಾವಗಲು ನನಗೆ ಸ್ಪೂರ್ತಿ, ಅವರು ಒಂದು ಮಾತನ್ನು ಹೇಳುತ್ತಾರೆ, ನಮ್ಮ ಮಾತು ಸಾಧನೆಯಾಗಬಾರದು ಸಾಧನೆಯೇ ನಮ್ಮ ಮಾತಾಗಬೇಕು. ಅವರ ಪ್ರೋಫೆಶ್ ಆಗಿರಬಹುವು ವರ್ಕ್ ಆಗಿರಬಹುದು ಮನೆಯಾಗಿರಬಹುದು ಸೋಶಿಯಲ್ ಆಕ್ಟಿವಿಟಿಸ್ ಆಗಿರಬಹುದು ಇದರೇಲ್ಲದರಲ್ಲಿ ತೋರಿಸುವಂತಹ ಡೇಡಿಕೆಶನ್ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಸ್ಕೂಲ್ ನಲ್ಲಿ ಸ್ಪೋಟ್ಸ್ ನಲ್ಲಿ ಬೆಂಬಲ ನೀಡುತ್ತಾರೆ. ಮನೆಯಲ್ಲಿ ಸ್ಕೂಟಿ ಕಲಿಯುವುದರಲ್ಲಿ ಹಾಗಿರಬಹುದು ಕಾರ್ ಕಲಿಯುವುದರಲ್ಲಿ ಹಾಗಿರಬಹುದು ಎಲ್ಲದರಲ್ಲಿ ಟೀಚರ್ ಮತ್ತು ಪೆರೆಂಟ್ಸ್ ನನಗೆ ಬೆಂಬಲ ನೀಡುತ್ತಾರೆ. ನನ್ನ ಸ್ನೇಹಿತರು ಮತ್ತು ನಮ್ಮ ಕುಟುಂಬ ವರ್ಗದವರು ಸಹ ಪ್ರೋತ್ಸಹಿಸುತ್ತಾರೆ. ಹಾಗಾಗಿ ನನಗೆ ಇದು ತುಂಬ ಕಷ್ಟ ಅಂತ ಅನಿಸುವುದ್ದಿಲ್ಲಾ.
ನಿರೂಪಕರು :- ಮಾನವೀಯ ಸಂಬಂಧಗಳು ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಬಳಸಬೇಕು ಎಂದು ನಿಮ್ಮ ತಾಯಿ ನಿಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ನಿಮ್ಮ ಹುಟ್ಟು ಹಬ್ಬದ ಆಚರಣೆ ಹೇಗೆ ಇರುತ್ತದೆ ಎಂದು ನಮಗೂ ಸ್ವಲ್ಪ ತಿಳಿಸುತ್ತೀರ
ಪ್ರಮೈ ಜೈನ್ :- ನನ್ನಲ್ಲಿ ಧಾರ್ಮಿಕ ಚಿಂತನೆ ಮಾನವೀಯ ಸಂಬಂಧಗಳ ಮೌಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ನನ್ನ ಅಮ್ಮ ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಾ ಇದ್ದಾರೆ. 2017ರಲ್ಲಿ ಪಾಣಿ ಮಂಗಳೂರಿನಲ್ಲಿ ಚಾತುರ್ಮಾಸ ಕೈಗೊಂಡಿದ್ದ 108 ಶ್ರೀ ವೀರ ಸಾಗರ ಮುನಿ ಮಹಾರಾಜರಿಗೆ ಆಹಾರ ದಾನ ನೀಡಿ 2018ರಲ್ಲಿ ಕಾರ್ಕಳದಲ್ಲಿ ಚಾತುರ್ಮಾಸ ಕೈಗೊಂಡಿದ್ದ 108 ಶ್ರೀ ವೀರ್ ಸಾಗರ್ ಮಹಾರಾಜರಿಗೆ ಆಹಾರ ದಾನ ನೀಡಿ 2019ರಲ್ಲಿ ಮೂಡುಬಿದರೆಯ ಸ್ಪೂರ್ತಿ ಸ್ಪೆಷಲ್ ಸ್ಕೂಲ್ ನಲ್ಲಿ ಆಚರಿಸಲಾಯಿತು. ಸ್ಪೂರ್ತಿ ಸ್ಪೆಷಲ್ ಸ್ಕೂಲ್ ನಲ್ಲಿ ಮಕ್ಕಳ ಜೊತೆ ನನಗೆ ಬಹಳ ಖುಷಿ ಯಾಯಿತು. ಈ ವರ್ಷ ವೇಣುರಿನಲ್ಲಿ
ಚಾತುರ್ಮಾಸ ಕೈಗೊಂಡಿದ್ದ ದಿವ್ಯ ಸಾಗರ ಮುನಿಮಹಾರಾಜರ ಆಶೀರ್ವಾದವನ್ನು ಪಡೆದು ದರ್ಶನಮಾಡಿ ಅವರಿಗೆ ಆಹಾರ ನೀಡಲಾಯಿತು. ಅಲ್ಲಿಂದ ಗುಂಡೂರಿನ ಗೋಶಾಲೆಗೆ ಹೋದೆವು ಅಲ್ಲಿ ಸುಮಾರು 40ರಷ್ಟು ದನಕರುಗಳಿದ್ದವು ಅವುಗಳಿಗೆ ಆಹಾರ ನೀಡಿದೆವು ಅಲ್ಲಿಂದ ಸಂಜೆ ನಮ್ಮ ನೆಬರ್ಸ್ ಜೊತೆಗೆ ಸಿಹಿ ಹಂಚಿ ಬರ್ತ್ ಡೇ ಸೆಲೆಬ್ರೇಶನ್ ಮಾಡಿದೆವು. ನನ್ನ ಅಮ್ಮ ಹೇಳುತ್ತಿದರು ನಮಗೆ ಅಕ್ಕ ಪಕ್ಕದವರು ಸಹ ಇಂಪಾರ್ಟೆಂಟ್ ಅಂತ. ಹಾಗಾಗಿ ಅವರಿಗೆ ಸಿಹಿ ಹಂಚಿ ಆಚರಿಸಿದೆವು
ನಿರೂಪಕರು :- ಹೇಗೆ ಅನಿಸುತ್ತದೆ ಈ ವಿಷಯಗಳಲೆಲ್ಲಾ ಭಾಗವಹಿಸಿ ನಿಮ್ಮ ಬರ್ತ್ ಡೇ ಸೆಲೆಬ್ರೇಶನ್ ಗ್ರಾಂಡ್ ಹಾದಾಗ ನಿಮಗೆ ತೃಪ್ತಿಕೊಡುತ್ತ.
ಪ್ರಮೈ ಜೈನ್ :- ಖಂಡಿತ ಹೌದು ಬಹಳ ಖುಷಿ ಇದೆ. ಶ್ರವಣ ಬೆಳಗೊಳದ ಭಟ್ಟಾರಕ ಮಹಾಸ್ವಾಮಿಗಳು ಒಂದು ಮಾತನ್ನ ಹೇಳುತ್ತಾರೆ. ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದರು ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಮರೆಯಬಾರದು. ಧರ್ಮ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ. ಆದ್ದರಿಂದ ನಾವು ಯುವ ಜನತೆ ಧರ್ಮದ ಹಾದಿಯಲ್ಲಿ ನಡೆಯ ಬೇಕು.
ನಿರೂಪಕರು :- ತುಂಬ ಪ್ರೌಡ್ ಫಿಲ್ ಹಾಗುತ್ತೆ ನಿನು ಸಾಗುತ್ತಿರುವ ಹಾದಿಯ ಬಗ್ಗೆ. ಭಕ್ತಾಂಬರ ಬರುತ್ತದ ಪ್ರಮೈಯಿ.
(ಪ್ರಮೈ ಜೈನ್ ರವರು ಒಂದು ಸುಂದರವಾದ ಭಕ್ತಾಂಬರವನ್ನು ಹಾಡಿದರು).
ನಿರೂಪಕರು :- ಯಾವುದನ್ನು ಹೇಳುತ್ತೀರ ಎಂದು ಕೇಳುವುದಕ್ಕಿಂತ ಮುಂಚೆಯೇ ಹೇಳಿದ್ದಿರಿ, ಇರಲಿ ಮೂರು ಕಾಲದ ತೀರ್ಥಂಕರರ ಹೆಸರು ಹೇಳುತ್ತೀರಿ ಭವಿಷ್ಯತ್ ಕಾಲದ ತೀರ್ಥಂಕರರಲ್ಲಿ ಯಾರ್ ಯಾರು ಬರುತ್ತಾರೆ ಎಂದು ತಿಳಿದುಕೊಳ್ಳ ಬಹುದ.
(ಪ್ರಮೈ ಜೈನ್ ರವರು ಭವಿಷ್ಯತ್ ಕಾಲದ ತೀರ್ಥಂಕರರ ಹೆಸರನ್ನು ಹೆಸರಿಸಿದರು).
ನಿರೂಪಕರು :- ಸೂಪರ್. ಜಿನ ಭಜನ ಸ್ಪರ್ಧೆ ಬಹುಮಾನಿತರು ನೀವು ಒಂದು ಜಿನ ಭಕ್ತಿ ಗೀತೆಯನ್ನು ಹೇಗೆ ಹಾಡುತ್ತೀರ ಅಂತ ಕೇಳಬೇಕು ಎನಿಸುತ್ತಿದೆ.
ಪ್ರಮೈ ಜೈನ್ :- ಹೌದು ಜಿನ ಭಜನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ನಮ್ಮ ಮೂಡುಬಿದ್ರೆ ತಂಡಕ್ಕೆ ಎರಡು ಬಾರಿ ಪ್ರಶಸ್ತಿ ಬಂದಿರುತ್ತದೆ.
(ಪ್ರಮೈ ಜೈನ್ ರವರು ಒಂದು ಸುಂದರವಾದ ಜಿನ ಭಕ್ತಿ ಗೀತೆಯನ್ನು ಹಾಡಿದರು)
ನಿರೂಪಕರು :- ಸೊಗಸಾಗಿ ಹಾಡಿದಿರಿ. ಪ್ರಬಂಧ, ಭಾಷಣ ಇದೇಲ್ಲಾ ಕಲೆ ಇದೆ ಅನ್ನುವುದಾದರೆ ಜೈನ ಧರ್ಮದ ವಿಚಾರದ ಬಗ್ಗೆ ಒಂದೆರಡು ಮಾತುಗಳನ್ನ ನಿಮ್ಮಿಂದ ಬಯಸುತ್ತಿದೇನೆ ಪ್ರಮೈಯಿ.
ಪ್ರಮೈ ಜೈನ್ :- ಎಲ್ಲಾ ತತ್ವ ಸಿದ್ದಾಂತ ಆಚಾರ ವಿಚಾರಗಳನ್ನು ವೈಜ್ಞಾನಿಕವಾಗಿ ವೈಚಾರಿಕವಾಗಿ ಸಮರ್ಥಿಸಿಕೊಳ್ಳಬಲ್ಲ ವಿಶ್ವ ಧರ್ಮ ನನ್ನ ಜೈನ ಧರ್ಮ, ಜೈನ ಧರ್ಮದಲ್ಲಿ ಹುಟ್ಟಿರುವುದೆ ನಮ್ಮ ಪೂರ್ವ ಭವದ ಪುಣ್ಯದ ಬಂಧದಿಂದ. ಆಚಾರಕ್ಕೆ ಅಹಿಂಸೆ ವಿಚಾರಕ್ಕೆ ಅನೇಕ ಅಂದವಾದ ಜೈನ ಧರ್ಮದ ಎರಡು ಕಣ್ಣುಗಳು ಕ್ರಾಂತಿಕಾರಿ ರಾಷ್ಟ್ರ ಸಂತ ತರುಣ್ ಸಾಗರ್ ಮುನಿ ಮಹಾರಾಜರು ಒಂದು ಮಾತನ್ನ ಹೇಳುತ್ತಾಇದ್ದರು. ನಾಯಿಗಳಲ್ಲಿ ಎರಡು ವಿಧ ಒಂದು ಬೀದಿನಾಯಿ ಒಂದು ಸಾಕು ನಾಯಿ ನೋಡಿದಾಗಲೆ ಗೊತ್ತಾಗುತ್ತೆ ಸಾಕು ನಾಯಿಗಳಿಗೆ ಕೊರಳಲ್ಲಿ ಪಟ್ಟಿ ಬೆಲ್ಟ್ ಇರುತ್ತೆ, ಹಾಗ ಅದರ ವಿಷಯಕ್ಕೆ ಯಾರು ಹೊಗುವುದಿಲ್ಲಾ, ಆದರೆ ಬೀದಿ ನಾಯಿಯ ಕೊರಳಲ್ಲಿ ಪಟ್ಟಿ ಇರುವುದಿಲ್ಲ ಹಾಗಾಗಿ ಜನಗಳು ಸಿಕ್ಕಸಿಕ್ಕದರಲ್ಲಿ ಕಲ್ಲು ಎಸೆಯುತ್ತಾರೆ, ಆದ್ದರಿಂದ ನಾವು ಯಾವಗಲು ಧರ್ಮದ ಹಾದಿಯಲ್ಲಿ ನಡೆಯ ಬೇಕು. ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥರು ಹಸಿ ಮಸಿ ಕೃಷಿ ವಾಣಿಜ್ಯ ವಿದ್ಯ ಶಿಲ್ಪ ಎಂಬ ಆರು ಜೀವನದ ಮಾರ್ಗವನ್ನು ಹೇಳಿ ಕೊಟ್ಟರು. ಈ ಮಾರ್ಗದಲ್ಲಿ ಆರೋಗ್ಯ ಹಿಂಸೆ ಉದ್ಯೋಗ ಹಿಂಸೆ ವಿರೋಧಿಗಳ ಹಿಂಸೆ ಹಾಗುವುದು ಸಾಮಾನ್ಯ, ದೇವ ಪೂಜ, ಗುರು ಪಾಸ್ತಿ ಸ್ವಧ್ಯಾಯ ಸೈಯಮ ಎನುವುದರಂತೆ ಗೃಹಸ್ತರಾದವರು ದೇವರ ಪೂಜೆ ಮುನಿಗಳ ತ್ಯಾಗಿಗಳ ಗುರುಗಳ ಸೇವೆ ಸ್ವಧ್ಯಾಯ ಜಪ ದಾನಗಳ ಮೂಲಕ ಹಿಂಸೆಗಳ ಪರಿಹಾರ ಸಾಧ್ಯ. ಆದರೆ ಯಾವುದೆ ಕಾರಣಕ್ಕೂ ನಾವು ಸಂಕಲ್ಪ ಹಿಂಸೆ ಮಾಡಬಾರದು. ನನ್ನ ಆತ್ಮ ಯಾವಗಲು ಪ್ರಾಣಿಗಳಲ್ಲಿ ಮಿತ್ರ ಭಾವವನ್ನು ಗುಣವಂತರಲ್ಲಿ ಪ್ರೀತಿಯನ್ನು ದುಃಖ ಪಡುವ ಜೀವಿಗಳ ಮೇಲೆ ಧಯಾ ಭಾವವನ್ನು ವಿಪರೀತ ವ್ಯಾಪಾರಿ ಉಳ್ಳ ದುಷ್ಟರಲ್ಲಿ ಮಾದ್ಯಸ್ತ ಭಾವವನ್ನು ಇರಲಿ ಎಂದು ಹೇಳಿ ಕೊಳ್ಳುತ್ತ ಎಲ್ಲರಿಗೂ ಶುಭವಾಗಲ್ಲಿ.
ನಿರೂಪಕರು :- ಮೆಚ್ಚಿದೆ ನಿಮ್ಮ ನುಡಿಗಳಿಗೆ ನಿಮ್ಮಂತ ಮಕ್ಕಳು ಇತರರಿಗೆ ಆದರ್ಶ ಆಗುವ ರೀತಿಯಲ್ಲಿ ಬೆಳೆಯ ಬೇಕು. ನೀವು ನಿಮ್ಮ ಪೋಷಕರ ಹೆಸರನ್ನು ಬೆಳಗುತ್ತಿರ ಅನ್ನುವ ನಂಬಿಕೆಯಲ್ಲಿ ಧನ್ಯವಾದ ಪ್ರಮೈ.
ವೀಕ್ಷಕರೆ ಪ್ರೇರಣ ಮಂಗಳೂರು ಆಕೆಗೆ ಯಾವುದೇಲ್ಲಾ ವಿಷಯದಲ್ಲಿ ಆಸಕ್ತಿ ಇದೆ ತಿಳಿಯೋಣ ಬನ್ನಿ.
ಈಕೆ ಪ್ರೇರಣ ಈಕೆ ಇರೋದು ಮಂಗಳೂರಿನ ಹಳೆ ಅಂಗಡಿಯಲ್ಲಿ ಗುಣಾಂಜಲಿ ಜಯರಂಗನಾಥ್ ಇವರ ಪುತ್ರಿ, ಇವಳು ಸಂಸ್ಕೃತ ಶ್ಲೋಕಗಳನ್ನ ಹೇಳುತ್ತಾಳೆ, ಹಿಂದಿ ಆ್ಯಂಡ್ ರೈಟಿಂಗ್ ನಲ್ಲಿ ಬಹುಮಾನ ಗೆದ್ದಿದಾಳೆ, ಹಿಂದಿಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಕೂಡ ಬಹುಮಾನ ಬಂದಿದೆ, ಕರಾಟೆ ಡ್ಯಾನ್ಸ್ ನಲ್ಲಿ ಕೂಡ ಈಕೆ ಪ್ರವೀಣೆ.
ಚಿತ್ರ ಕಲೆ, ಹಾಡು ಹೇಳುವುದು, ನೃತ್ಯ, ಬರವಣಿಗೆ, ಕ್ರಾಫ್ಟ್, ನೆಟ್ಟಿಂಗ್ ಇವೆಲ್ಲಾ ಇವಳ ಹವ್ಯಾಸಗಳು ಅಷ್ಟೆ ಅಲ್ಲಾ ರಂಗೋಲಿ ಕೂಡ ಸುಂದವಾಗಿ ಬಿಡಿಸುತ್ತಾಳೆ. ಅವಳು ನೆಟ್ಟಿಂಗ್ ನಲ್ಲಿ ರಾಕಿ ಲೇಡಿಸ್ ಹ್ಯಾಡ್ ಬ್ಯಾಗ್ ಮೊಬೈಲ್ ಪೌಚಸ್ ಎಲ್ಲಾ ಮಾಡುತ್ತಾಳೆ. ವಿಶೇಷವಾಗಿ ನೀವು ಗಮನಿಸಿ ಮಾಸ್ಕ್ ಕೂಡ ಮಾಡಿದ್ದಾಳೆ. ಈಕೆ ಕನ್ನಡದಲ್ಲಿ ತನ್ನ ಪ್ರತಿಭೆಯನ್ನು ಮುಂದುವರೆಸುತ್ತಾ ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳುವುದನ್ನ ನೋಡಿದರೆ ಹೆಮ್ಮೆ ಅನಿಸುತ್ತಿದೆ. ದಯವಿಟ್ಟು ಈಕೆಯನ್ನ ಎಲ್ಲರೂ ಹುರಿದುಂಬಿಸಿ ಪ್ರೋತ್ಸಾಹಿಸಿ.
ನಿರೂಪಕರು :- ಜೈ ಜಿನೇಂದ್ರ ಪ್ರೇರಣ
ಪ್ರೇರಣ :- ಜೈ ಜಿನೇಂದ್ರ
ನಿರೂಪಕರು :- ಕಾರ್ಯಕ್ರಮಕ್ಕೆ ಸ್ವಾಗತ ನಿಮಗೆ, ನಿಮ್ಮ ಊರು ಯಾವುದು?
ಪ್ರೇರಣ :- ಉತ್ತರ ಪ್ರದೇಶ
ನಿರೂಪಕರು :- ಪರವಾಗಿಲ್ಲ ಪ್ರೇರಣ, ನೀವು ಎಲ್ಲಿಂದಲೋ ಬಂದು ಕನ್ನಡ ಕಲಿತು ಕನ್ನಡದಲ್ಲಿ ನಿಮ್ಮ ಕಲೆಯನ್ನ ಬೆಳೆಸಿಕೊಂಡಿದ್ದೀರಿ.
ಪ್ರೇರಣ :- ತ್ಯಾಂಕ್ ಯೂ ಮೇಡಂ
ನಿರೂಪಕರು :- ನೀವು ಹಿಂದಿ ಹಾಡನ್ನು ಹೇಳುವುದನ್ನು ಕೇಳಿದ್ದೀನಿ. ಒಂದು ಸಾರಿ ಜಿನ ಭಕ್ತಿಗೀತೆಯನ್ನ ಕನ್ನಡದಲ್ಲಿ ಹಾಡಿ ತೋರಿಸಿ.
(ಪ್ರೇರಣರವರು ಜಿನ ಭಕ್ತಿಗೀತೆಯನ್ನ ಮಧುರವಾಗಿ ಹಾಡಿದರು)
ನಿರೂಪಕರು :- ನಿಮ್ಮ ಕಸೂತಿ ಕೆಲಸವನ್ನು ನೋಡಿದೆ, ಯಾರು ನಿಮ್ಮ ಅಮ್ಮ
ಹೇಳಿ ಕೊಟ್ಟರ
ಪ್ರೇರಣ :- ಹೌದು ಮೇಡಂ
ನಿರೂಪಕರು :- ಓಕೆ ನಿಮಗೆ ಹೆಚ್ಚಿನ ಪ್ರಶ‍್ನೆ ಕೇಳುವುದಿಲ್ಲ, ಒಂಭತ್ತನೆಯ ಶ್ಲೋಕ ಭಕ್ತಾಂಬರ ಶ್ಲೋಕ ಹೇಳಿ.
(ಪ್ರೇರಣರವರು ಒಂಭತ್ತನೇಯ ಭಕ್ತಾಂಬರ ಶ್ಲೋಕ ಹೇಳಿದರು)
ನಿರೂಪಕರು :- ನೀವು ಹಾಡು ಹೇಳಿದ ರೀತಿ ಚೆನ್ನಾಗಿತ್ತು ಹಾಗೂ ಶ್ಲೋಕ ಹೇಳಿದ ಧಾಟಿನ್ನು ಚೆನ್ನಾಗಿತ್ತು ಇನ್ನೂ ಹೆಚ್ಚಿನ ಕನ್ನಡ ಜಿನ ಭಕ್ತಿಗೀತೆಯನ್ನು ಕಲಿಯಿರಿ, ಶ್ಲೋಕವನ್ನು ಕಲಿಯಿರಿ, ಧರ್ಮದ ವಿಚಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ ಹಾಯಿತ್ತ.
ಪ್ರೇರಣ :- ತ್ಯಾಂಕ್ ಯೂ ಮೇಡಂ
ನಿರೂಪಕರು :- ಧನ್ಯವಾದಗಳು ಪ್ರೇರಣ.
ನೋಡಿದಿರಲ್ಲಾ ವೀಕ್ಷಕರೆ, ಎಲ್ಲಿಂದಲೋ ಬಂದು ಕನ್ನಡ ಕಲಿತು ಕನ್ನಡದಲ್ಲಿ ಜಿನ ಭಕ್ತಿಗೀತೆಗಳನ್ನು ಹಾಡುತ್ತಿದ್ದಾರೆ. ನೀವು ನಿಮ್ಮ ಮಕ್ಕಳನ್ನ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಕರೆತನ್ನಿ.
ಹೀಗೆ ವೀಕ್ಷಿಸುತ್ತಿರಿ. ಪ್ರತಿ ಭಾನುವಾರ 10:30ಕ್ಕೆ ಸರಿಯಾಗಿ ಧರ್ಮದ ಕುಡಿ ಕಾರ್ಯಕ್ರಮ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














