ವಾರದ ಜೈನ ಸುದ್ದಿಗಳು-09 / 27-09-2020

ಜೈ ಜಿನೇಂದ್ರ ವೀಕ್ಷಕರೆ, ಈ ವಾರದ ಜೈನ ಸುದ್ದಿಗಳೊಂದ್ದಿಗೆ ನಾನು ನಿಮ್ಮೊಂದಿಗಿದ್ದೇನೆ.

ಮುಖ್ಯಾಂಶಗಳು:-

ಶ್ರೀ ಕ್ಷೇತ್ರ ಹೊಂಬುಜದಲ್ಲಿ ತ್ಯಾಗಿಗಳ ಯೊಗಕ್ಷೇಮಕ್ಕಾಗಿ ವಿಶೇಷ ಪೂಜೆ.

ಶೇಡಬಾಲದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಮುನಿಗಳ ಬೃಹತ್ ಪ್ರತಿಮೆ.

ಶ್ರೀ ಕ್ಷೇತ್ರ ಆರತಿ ಪುರದಲ್ಲಿ ನವಗ್ರಹ ಆರಾಧನೆ.

ರತ್ನಾಕರ ಶತಕ ವಾಚನ ನೂರರ ಸಂಭ್ರಮ ಮೂಡುಬಿದ್ರೆ ಶ್ರೀಗಳ ಸಾನಿಧ್ಯದಲ್ಲಿ.

ಪ್ರಥಮ ಬಾರಿಗೆ ಆನ್ ಲೈನ್‍ನಲ್ಲಿ ಜೈನ್ ಮಧ್ಯಮ ಸಮ್ಮಿಲನ.

ನಾಗರಿಕ ಸೇವೆಗಳ ತರಬೇತಿ ಸಂಯೋಜಿತ ಪದವಿ 2019-20ನೇ ಸಾಲಿನ ಕುಮಾರಿ ಪಂಚಮಿ ಮಾರೂರು ಆಯ್ಕೆ.

ಬೆಂಗಳೂರಿನ ಕುಬೇರ ಜೈನ್ ಮಿಲನ್ ವಾರ್ಷಿಕ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿ ವೇತನ.

ಸುದ್ದಿಗಳ ವಿವರ:-

ಭಾರತೀಯ ಸಂಸ್ಕೃತಿಯಲ್ಲಿ ಶ್ರಮನ ಪರಂಪರೆ ಯೋಗದಾನ ಅತ್ಯಧಿಕ ಮತ್ತು ವಿಶೇಷವಾಗಿದೆ, ಸನ್ಯಾಸ ಪರಂಪರೆಯು ಮೂಲತಃ ಜೈನ ಧರ್ಮದ ಕೊಡುಗೆ, ಇಂತಹ ತ್ಯಾಗಿಗಳ ಸೇವೆ ಹಾಗೂ ಸಂರಕ್ಷಣೆ ನಮ್ಮೇಲ್ಲಾರ ಆದ್ಯ ಕರ್ತವ್ಯವಾಗಿದೆ. ಶ್ರೀ ಕ್ಷೇತ್ರ ಹೊಂಬುಜದಲ್ಲಿ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಕಾಳಜಿಯಲ್ಲಿ ತ್ಯಾಗಿಗಳ ಯೋಗ ಕ್ಷೇಮಕ್ಕಾಗಿ ವಿಶೇಷ ಪೂಜಾರಾಧನೆಗಳು ನಡೆದವು.

ಶ್ರೀ ಕ್ಷೇತ್ರ ಹೊಂಬುಜದಲ್ಲಿ ಶ್ರೀಗಳು ತ್ಯಾಗಿಗಳ ಹಾಗೂ ಮಾತಾಜೀಯವರ ಯೋಗಕ್ಷೇಮದ ಸಲುವಾಗಿ 25-09-2020ರಂದು ಅಭಿಷೇಕ ಹಾಗೂ ಮಹಾ ಶಾಂತಿದಾರ ಪೂಜೆ ನೆರವೇರಿಸಿದ್ದಷ್ಟೇ ಅಲ್ಲದೇ ಅವರ ಆದೇಶದ ಮೇರೆಗೆ ಹಲವೇಡೆಗಳಲ್ಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು, ಅವುಗಳಲ್ಲಿ ನಮಗೆ ತಲುಪಿದ ಬಸದಿಗಳ ಪೂಜೆ.

ಶ್ವೇತ ಪಿಂಜಾಚಾರ್ಯ ಶ್ರೀ ವಿದ್ಯಾನಂದ ಮುನಿಗಳ ಮೊದಲ ಸಮಾಧಿ ದಿನದ ಅಂಗವಾಗಿ ಅವರ ಪ್ರತಿಮೆ ಶೇಡಬಾಲದಲ್ಲಿಅನಾವರಣ ಗೊಂಡಿತ್ತು.

2020ರ ಸೆಪ್ಟೆಂಬರ್ 22ರಂದು ಶ್ವೇತ ಪಿಂಜಾಚಾರ್ಯ ಶ್ರೀ ವಿದ್ಯಾನಂದ ಮುನಿಗಳ ಮೊದಲ ಸಮಾಧಿ ದಿನದಂದು ಆಚಾರ್ಯ ಶ್ರೀಯವರ ಜನ್ಮ ಸ್ಥಳವಾದ ಕರ್ನಾಟಕದ ಬೆಳಗಾಂನ ಶೇಡಬಾಲದಲ್ಲಿ ಶ್ರೀ ಆಚಾರ್ಯ ಶ್ರೀ ವಿದ್ಯಾನಂದ ಮುನಿಗಳ 5ಅಡಿ 6ಇಂಚಿನ ಬೃಹತ್ ಪ್ರತಿಮೆಯನ್ನು ಆನಾವರಣಗೊಳ್ಳಿಸಿ ಪೂಜೆಯನ್ನು ಕೈಗೊಳಲಾಯಿತ್ತು.

ಶ್ರೀಕ್ಷೇತ್ರ ಆರತಿ ಪುರದಲ್ಲಿ ಶ್ರೀಗಳವರ ಸಾನಿಧ್ಯದಲ್ಲಿ ನಡೆದ ನವಗ್ರಹ ಪೂಜರಾಧನೆಯ ಕೆಲವು ಕ್ಷಣಗಳು.

ಆರತಿ ಪುರ ದಿಗಂಬರ ಜೈನ ಮಠದಲ್ಲಿ ದಿನಾಂಕ  22-09-2020ರಂದು ರಾಹು ಕೇತು ರಾಶಿ ಪರಿವರ್ತನೆ ನಿಮ್ಮಿತ್ತ ಅಭಿಷೇಕ ನವಗ್ರಹ ಆರಾಧನೆಗಳು ಹಾಗೂ ಪೂಜೆ ಹವನವನ್ನು ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಶ್ರೀಗಳವರ ನೇತೃತ್ವದಲ್ಲಿ ವಿಧಿವತ್ತಾಗಿ  ನಡೆಸಲಾಯಿತ್ತು.

ಪ್ರಪ್ರಥಮವಾಗಿ ಆನ್ ಲೈನ್ ನಲ್ಲಿ ಮಾಧ್ಯಮ ಸಮ್ಮಿಲನ ನಡೆದ್ದಿದ್ದು. ಇದರ ಉದ್ಘಾಟನೆ ಮಾಜಿ ಶಾಸಕರಾದ ಶ್ರೀಯುತ ಅಭಯ್ ಚಂದ್ರ ಜೈನ್ ರವರಿಂದ ನಡೆಯಿತು.

(ದೀಪಪ್ರಜ್ವಲನೆಯ ಮೂಲಕ ನಮ್ಮ ಇಂದಿನ ಕಾರ್ಯಕ್ರಮವನ್ನು ಶ್ರೀಯುತ ಅಭಯ್ ಚಂದ್ರ ಜೈನ್ ರವರು ಉದ್ಘಾಟಿಸ ಬೇಕೆಂದು ವಿನಂತಿಸುತ್ತೇನೆ).

ದಿನಾಂಕ 19-09-2020ರಂದು ಕರ್ನಾಟಕ ಜೈನ ಧರ್ಮ ಪೇಜಿನ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಮಾಜಿ ಶಾಸಕರಾದ ಶ್ರೀ ಅಭಯ್ ಚಂದ್ರ ಜೈನ್ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರಲ್ಲದೆ ಉದ್ಘಾಟನ ನುಡಿಗಳನ್ನಾಡಿದರು.

(ಶ್ರೀ ಅಭಯ್ ಚಂದ್ರ ಜೈನ್ ರವರು ಮಾತನಾಡಿ ಜೈನಧರ್ಮದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು).

ಕರ್ನಾಟಕ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾಅಧ್ಯಕ್ಷರಾದ ಶ್ರೀ ಸುದೇಶ್ ಕುಮಾರ್ ರವರ ಅಧ್ಯಕ್ಷತೆವಹಿಸಿದ್ದ ಕಾರ್ಯಕ್ರಮದಲ್ಲಿ ಫೆಸ್ ಬುಕ್ ಫೇಜಿನ ಬಳಗದವರು ತಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರಲ್ಲದೆ ಜೈನ ಮಾಧ್ಯಮದ ಹಲವಾರು ಗಣ್ಯರು ಇಲ್ಲಿ ಪಾಲ್ಗೊಂಡಿದ್ದರು. ಅದೆ ರೀತಿ ಜಿನ ಗಾನ ಸುಧಾ ಪೇಸ್ ಬುಕ್ ಫೇಜಿನ ಲೋಕಾರ್ಪಣೆ ಕೂಡ, ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಶ್ರೀಗಳವರ ಸಾನಿಧ್ಯದಲ್ಲಿ ದಿನಾಂಕ 20-09-2020ರಂದು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಉದ್ಘಾಟನೆಯೊಂದಿಗೆ ನೆರವೇರಿತ್ತು.

(ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಮಾತನಾಡಿ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮವು ಬೆಳೆದು ಬಂದ ಪರಿಯನ್ನು ತಿಳಿಸಿದರು).

ವಿದ್ಯಾವಾಚಸ್ವತಿ ವ್ಯಕ್ಯಾನ ಕೇಸರಿ ಶ್ರೀಯುತ ಮೋಹನ್ ಕುಮಾರ್ ಶಾಸ್ತ್ರಿ ರವರು ನಡೆಸಿಕೊಡುತ್ತಿರುವ ರತ್ನಾಕರ ಶತಕ ನೂರರ ಸಂಭ್ರಮ ಮೂಡುಬಿದ್ರೆ ಶ್ರೀ ಗಳವರ ಸಾನಿಧ್ಯದಲ್ಲಿ ಮೂಡುಬಿದ್ರೆಯಲ್ಲಿ ದಿನಾಂಕ 07-09-2020ರಂದು ನಡೆಯಲಿದೆ.

ರತ್ನಾಕರ ಶತಕ ಕಾವ್ಯ ವಾಚನ ಮತ್ತು ವ್ಯಾಖ್ಯಾನವನ್ನು ಶ್ರೀಯುತರಾದ ಶಾಸ್ತ್ರಿಯವರ ಸುಮಧುರ ಕಂಠದಲ್ಲಿ ಬಹಳ ಅರ್ಥವತ್ತಾಗಿ  ಮೂಡಿಬರುತ್ತಿದ್ದು ನೂರನೇ ಶತಕ ವಾಚನ ಸಂಭ್ರಮ ಶ್ರೀ ಅಭಯ ಚಂದ್ರ ಜೈನ್ ರವರ ಅಧ್ಯಕ್ಷತೆಯಲ್ಲಿ ನಡೆಯಲ್ಲಿದೆ ಎಂದು ಸೈಯೋಜಕರಾದ ಪಂಡಿತ ರತ್ನ ಮಧನ್ ಕುಮಾರ್ ಜೈನ್ ರವರು ಜ್ವಾಲಮಾಲಗೆ ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ  ಹಲವಾರು ಗಣ್ಯರು ಹಾರೈಸಿದ್ದು ಶ್ರೀ ವೀರೇಂದ್ರ ಹೆಗ್ಗಡೆಯವರು ಕೂಡ ಮೋಹನ್ ಕುಮಾರ್ ಶಾಸ್ತ್ರಿಗಳನ್ನು ಅಭಿನಂದಿಸಿದ್ದಾರೆ.

ಕುಮಾರಿ ಪಂಚಮಿ ಮಾರೂರು ನಾಗರೀಕ ಸೇವೆಗಳ ತರಬೇತಿ ಸಂಯೋಜನೆಯ ಪದವಿಗೆ ಆಯ್ಕೆಯಾಗಿದ್ದಾರೆ. ಹಾಗೂ ನಮ್ಮ ಸಮುದಾಯದವರಿಗೆ ಸಂದ ಗೌರವದ ವರದಿ ಇಲ್ಲಿದೆ.

ಶ್ರೀ ಪಾರ್ಶ್ವನಾಥ ದೀಪಶ್ರೀ ದಂಪತಿಗಳ ಪುತ್ರಿಯಾದ ಈಕೆ ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸಿಟ್ರಿಟ್ಯೂಟ್ ಗೆ ದಾಖಲಾತಿ ಪಡೆದಿದ್ದು ಪ್ರತಿಭೆಯ ಆಧಾರದ ಮೇಲೆ  ಆಯ್ಕೆಗೊಂಡ 50 ವಿದ್ಯಾರ್ಥಿಗಳಲ್ಲಿ ಈಕೆ ಆಯ್ಕೆಯಾಗಿರುವುದು ಅಭಿನಂದನಾರ್ಹವೇ ಸರಿ. ಅವಳಿಗೆ ಜ್ವಾಲಮಾಲ ಅಭಿನಂದಿಸಿ ಮುಂದಿನ ಉನ್ನತ ಭವಿಷ್ಯಕ್ಕೆ ಹಾರೈಸುತ್ತಿದೆ.

ಬೆಂಗಳೂರು ಸಾಹಿತ್ಯ ಪರಿಷತ್  ಕೊಡಮಾಡುವ ಪ್ರತಿಷ್ಠಿತ ದತ್ತಿ ಪ್ರಶಸ್ತಿ ಡಾ|| ಜಯ ಪದ್ಮರವರ ಅಂತರ್ಯಾತ್ರಿ ಮಹಾಪುರುಷ ಕೃತಿಗೆ ಲಭಿಸಿದೆ. ಇವರಿಗೆ ಜ್ವಾಲಮಾಲ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತದೆ.

ಡಾ||ಸರ್ವಪಲ್ಲಿ ರಾಧಕೃಷ್ಣರವರ ಹುಟ್ಟು ಹಬ್ಬದ ನೆನಪಿಗಾಗಿ ಜಯಲಕ್ಷ್ಮಿ ಅಭಯ್ ಕುಮಾರ್ ರವರಿಗೆ ಜ್ಞಾನಯೋಗ ಲಯನ್ಸ್ ಕ್ಲಬ್ ಬೆಂಗಳೂರುವತಿಯಿಂ ಅತ್ಯುತ್ತಮ ಶಿಕ್ಷಕಿ ಅವಾರ್ಡ್ ನೀಡಿ ಸನ್ಮಾನಿಸಲಾಗಿದೆ. ಅವರಿಗೂ ಸಹ ಜ್ವಾಲಮಾಲದಿಂದ  ಹೃತ್ಪೂರ್ವಕ ಅಭಿನಂದನೆಗಳು.

ಭಾರತೀಯ ಜೈನ್ ಮಿಲನ್ ವಲಯ ಎಂಟರ ಮಹಿಳಾ ವಿಭಾಗದ ಅಧ್ಯಕ್ಷರಾದ  ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಶಷ್ಟಾರ್ತಿಯನ್ನು 22-09-2020ರಂದು ಕರೋನ ಮಹಾಮಾರಿ ಕಾರಣದಿಂದ ಪ್ರತ್ಯಕ್ಷವಾಗಿ ವಿಜೃಂಭಣೆಯಿಂದ ಾಚರಿಸಲಾಗದ್ದಿದರು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದ್ದಿದು ಸುಮಾರು 10,000 ಕ್ಕೂ ಹೆಚ್ಚು ಅಭಿನಂದನ ಸಂದೇಶ ವೀಡಿಯೋ ಸಂದೇಶಗಳು ಗಣ್ಯಾತಿ ಗಣ್ಯರಿಂದ ಹಿಡಿದು ಜನ ಸಮಾನ್ಯರ ವರೆಗೆ ನಾಡಿನಾಧ್ಯಂತ ಸ್ಪಂದಿಸಿ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದ್ದು ದಾಖಲೆ ನಿರ್ಮಿಸಿದೆ. ತಮ್ಮ ಅಭಿಮಾನಿ

ಬಳಗದವರೇಲ್ಲರಿಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಅವರ  ಅಭಿಮಾನಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ.

ಇದು ಪ್ರಕಟಣೆಯ ಸಮಯ

ಧರ್ಮ ಬಂದುಗಳೆ ಶ್ರೀಕ್ಷೇತ್ರ ಜೈನ ಮಠ ಕಂಬದಹಳ್ಳಿ ವತಿಯಿಂದ ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಒಂದು ಕನಸಿನ ಕೂಸು ಚಂದ್ರಗಿರಿ ಬೆಟ್ಟದ ಮೇಲಿನ ಚತುರ್ಮುಖ ಬಸದಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮತ್ತು ದಾನಿಗಳಾಗಿರುವಂತಹ ತಮ್ಮಗಳ ಸಹಕಾರ ಇಲ್ಲಿ ಅತಿ ಮುಖ್ಯವಾಗಿರುವಂತಹದು ಬ್ಯಾಂಕ್ ಖಾತೆ ಇಂತಿ‍ದೆ ಜೈನ ಮಠ ಕಂಬದಹಳ್ಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಬಿಂಡಿಗನವಲೆ ಖಾತೆ ಸಂಖ್ಯೆ : 54050140877 ಐ ಎಫ್ ಸಿ ಕೋಡ್ SBIN0040185 ದಯಮಾಡಿ ತಾವು ದಾನ ಮಾಡಿ ಸಹಕರಿಸಿ ಜಿನಮಂದಿರದ ಪೂರ್ಣ ಮುಕ್ತಾಯಕ್ಕೆ ತಾವು ನಾಂದಿಯನ್ನಹಾಡುತ್ತಿರ  ಈ ಕನಸು ಪೂಜ್ಯರ ಕನಸು ಏನಿದೆ ಅದು ನನಸಾಗುವಂತೆ ತಾವು ಮಾಡಿ ಈ ಕ್ಷೇತ್ರದಲ್ಲಿ ಇದೊಂದು ಸ್ಮಾರಕವಾಗಿ ಉಳಿಯುವಂತೆ ಮಾಡುತ್ತೀರೆಂದು ತಮ್ಮಲಿ ವಿನಯ ಪೂರಕವಾಗಿ ಬೇಡಿಕೊಳ್ಳುತ್ತೇನೆ.

ಆತ್ಮೀಯ ವಿದ್ಯಾರ್ಥಗಳೆ ನಿರ್ಮಾಣ ವಿಧ್ಯ ಸಹಾಯವಾಣಿ ಮತ್ತು ಬಾಹುಬಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಶ್ರವಣ ಬೆಳಗೊಳದ ಸಹಭಾಗಿತ್ವದಲ್ಲಿ ವಿಜ್ಞಾನ ವಿಭಾಗದ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕೋರ್ಸ್ ಗಳು ಮತ್ತು ವಿದ್ಯಾರ್ಥಿ ವೇತನವೆಂಬ ವೆಬಿನರ್ ನಡೆಸುತ್ತಿದೇವೆ, ಈ ವೆಬಿನರ್ ನಲ್ಲಿ ಭಾಗವಹಿಸಲು ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ 1800 425 2429

ಕುಬೇರ ಜೈನ್ ಮಿಲನ್ ಬೆಂಗಳೂರು ವತಿಯಿಂದ 127ನೇ ಮಾಸಿಕ ಸಭೆಯನ್ನು ಆನ್ ಲೈನ್ ನಲ್ಲಿ ನಡೆಸಿದ್ದು ಇದರ ಮುಖ್ಯ ಅತಿಥಿಯಾಗಿ ಶ್ರೀ ವಿಲಾಸ್ ಪಾಸಣ್ಣನವರು ಭಾಗವಹಿಸಿದರು.

20-09-2020ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕದ ಕಾರ್ಯಕ್ರಮದ ಅಡ್ಡಿಯಲ್ಲಿ ಬಡ ವಿದ್ಯಾರ್ಥಿನಿಯಾದ ಕುಮಾರಿ ಅಂಜನ ಇವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು 10,000ರೂ ಗಳ ವಿದ್ಯಾರ್ಥಿ ವೇತನವನ್ನು ನೀಡಿರುವುದು ಬಹಳ ಅಭಿನಂದನಾರ್ಹವಾಗಿದೆ. ಜೈನ್ ಮಿಲನ ವತಿಯಿಂದ ಹೀಗೆ ಸ್ಪೂರ್ತಿದಾಯಕವಾದ ಕಾರ್ಯಕ್ರಮಗಳು ನಡೆಯುತ್ತಿರಲಿ.

ವಾರದ ಜೈನ ಸುದ್ದಿಗಳು ವೀಕ್ಷಸಿದ ನಿಮ್ಮಗೆಲ್ಲರಿಗು ಧನ್ಯವಾದಗಳು

ಹೀಗೆ ವೀಕ್ಷಿಸುತಿರಿ, ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ. ವಾರದ ಜೈನ ಸುದ್ದಿಗಳು

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್