-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಶ್ರೀ ಕ್ಷೇತ್ರ ಕಂಬದಹಳ್ಳಿ ಪುರಾತನ ಜೈನ ಧಾರ್ಮಿಕ ಕೇಂದ್ರ ದ್ರಾವಿಡ ಶೈಲಿಯ ಪಂಚಕೂಟ ಬಸದಿಯನ್ನು ನೀವು ಇಲ್ಲಿ ನೋಡಬಹುದು ಬಸದಿಯ ದರ್ಶನದೊಂದಿಗೆ ಇತಿಹಾಸವನ್ನು ತಿಳಿಯೋಣ ಬನ್ನಿ.
ನಮ್ಮ ಜೈನ ಪರಂಪರೆಯ ಪ್ರಾಚೀನತೆಯನ್ನು ಸಾರಿ ಹೇಳುವ ಅಲ್ಲಿನ ಪ್ರತಿಯೊಂದು ಕಲ್ಲು ನಮ್ಮ ಸಂಸ್ಕೃತಿ ಇತಿಹಾಸದ ಕಥೆಗಳನ್ನು ತಿಳಿಸುವ ಅಮೋಘ ಶಿಲ್ಪ ಕಲೆಗಳ ಆಗರ ಜೈನ ಬಸದಿಗಳ ತವರೆಂದೆ ಕರೆಯಲಾದ ಕ್ಷೇತ್ರ ನೀವು ನೋಡುತ್ತಿರುವ ಶ್ರೀ ಕ್ಷೇತ್ರ ಕಂಬದಹಳ್ಳಿ. ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಿಂದ 18 ಕಿ,ಮೀ ದೂರದಲ್ಲಿದೆ ಈ ಕ್ಷೇತ್ರ.
50 ಅಡಿ ಎತ್ತರದ ಕರಿಕಲ್ಲಿನ ಮಾನಸ ಸ್ತಂಭವೆ ಈ ಸ್ಥಳಕ್ಕೆ ಕಂಬದಹಳ್ಳಿ ಎಂದು ಹೆಸರು ಬರಲು ಕಾರಣ. ಈ ಮಾನಸ್ತಂಭ ಒಂದು ಸ್ತಂಭ ಶಾಸನವಾಗಿದ್ದು ಕಂಬದ ಬುಡದಲ್ಲಿ ಅಯತಾಕರದ ಶಿಲಾ ಹಲಗೆಯಲ್ಲಿ ಶಾಸನ ಒಂದಿದೇ ಮೇಲೆ ಪೂರ್ವಾಭಿ ಮುಖವಾದ ಬ್ರಹ್ಮದೇವರ ಶಿಲ್ಪವಿದೆ. ಇದರ ಹಿಂದೆ ಒಂದು ಕಥೆಯೆ ಇದೆ.
ಇದು ಸುಮಾರು ನಾಲ್ಕನೇ ಶತಮಾನದಷ್ಟು ಪುರಾತನವಾದಂತಹ ಜೈನ ಕೇಂದ್ರವಾಗಿದು ಇಲ್ಲಿ ಪಂಚಕೂಟ ಬಸದಿ ಹಾಗೂ ಬ್ರಹ್ಮ ಸ್ತಂಭ ಮತ್ತು ಭಂಡಾರ ಬಸದಿ ಒಟ್ಟು ಮೂರು ಸ್ಮಾರಕಗಳು ಇದೆ. ಹಿಂದೆ ಸುಮಾರು 71 ಜಿನ ಮಂದಿರಗಳು ಇದ್ದವು ಎಂದು ಹೇಳಲಾಗುತ್ತದೆ ಮತ್ತು ಸುಮಾರು 5000 ಜೈನರ ಮನೆಗಳಿದವು ಹಾಗೂ ಈ ಕ್ಷೇತ್ರವನ್ನು ಧನ್ಯರಾಯ ಪಟ್ಟಣ ಎಂದು ಕರೆಯಲಾಗುತ್ತಿತ್ತು. ಪವಿತ್ರವಾದಂತಹ ಬ್ರಹ್ಮ ಸ್ತಂಭ ಇರುವುದರಿಂದ ಈ ಕ್ಷೇತ್ರಕ್ಕೆ ಕಂಬದಹಳ್ಳಿ ಎಂದು ಹೆಸರು ಬಂದಿದೆ.
ಇಲ್ಲಿ ಪುರಾತತ್ವ ಇಲಾಖೆಯಿಂದ ಜೀರ್ಣೋದ್ದಾರಗೊಂಡಿರುವ ದ್ರಾವಿಡ ಶೈಲಿಯಲ್ಲಿ ನಿರ್ಮಿತವಾದ ಏಳು ಶಿಲಾಮಯ ದೇವಾಲಯಗಳಿವೆ.
ಪ್ರಶಾಂತ ವಾತಾವರಣದಲ್ಲಿ ಪಂಚಕೂಟ ಬಸದಿಯ ನಡುವೆ ಇರುವುದೆ ತ್ರಿಕೂಟಚಲ ಆದಿನಾಥ ಬಸದಿ, ಪಲ್ಲವ ಶಿಲ್ಪದ ಪ್ರಭಾವ ಇಲ್ಲಿ ನೋಡಬಹುದು. ಬಸದಿಯು ಅಷ್ಟಕೋನಾಕರಾವಾಗಿದ್ದು ಮೂರು ಶಿಖರಗಳು ವಿವಿಧತೆಯಿಂದ ಕೂಡಿದೆ. ಅಲ್ಲದೆ ನಯನ ಮನೋಹರ ಕಲಾ ಕೆತ್ತನೆಯನ್ನು ಒಳಗೊಂಡಿದೆ. ಇಲ್ಲಿ ಮೂಲ ಗರ್ಭಗುಡಿಯಲ್ಲಿ ಮೂಲಮೂರ್ತಿ ಶ್ರೀ ಆದಿನಾಥರಾದರೆ ಚಕ್ರೇಶ್ವರಿ ತಾಯಿ ನಿತ್ಯ ಪೂಜೆ ಗೊಳ್ಳುತ್ತಿದ್ದಾರೆ. ಬಲಭಾಗದಲ್ಲಿರುವ ಕೂಟದಲ್ಲಿ ಶ್ರೀ
ನೇಮಿನಾಥ ತೀರ್ಥಂಕರರ ಮೂರ್ತಿ ಇದ್ದು ಇಕ್ಕಿಲಗಳಲ್ಲಿ ಸರ್ವಾಣಿ ಯಕ್ಷ ಮತ್ತು ಖುಷ್ಮಾಡಿನಿ ದೇವಿಯ ವಿಗ್ರಹಗಳಿವೆ. ಎಡಭಾಗದ ಕೂಟದಲ್ಲಿ ಶ್ರೀ ಶಾಂತಿನಾಥರ ವಿಗ್ರಹವಿದ್ದು ಮುಂಭಾಗದಲ್ಲಿ ಪಾರ್ಶ್ವನಾಥರ ಮೂರ್ತಿ ಇದೆ. ಈ ಬಸದಿಯಲ್ಲಿ ಹಲವು ಪುರಾತನ ಪ್ರತಿಮೆಗಳಿದ್ದು ಚಕ್ರೇಶ್ವರಿ ಮಾತೆಯ ವಿಗ್ರಹ ಮತ್ತು ಮಹಾವೀರ ವಿಗ್ರಹ ಗಮನಾರ್ಹವಾಗಿದೆ. ಈ ಮೂರ್ತಿಯು ದೀಪದ ಬೆಳಕಿನಲ್ಲಿ ಮೂರು ವಿಧವಾದ ಮುಖ ಮುದ್ರೆಯನ್ನು ಬಿಂಬಿಸುತ್ತದೆ. ನಗು ಮುಖ, ಧ್ಯಾನ ಮುದ್ರೆ, ಗಂಭೀರ ಭಾವ ಹೀಗೆ.
ಮುಂದಿನ ಬಸದಿಗಳಲ್ಲಿ ಎಡಭಾಗದಲ್ಲಿ ಶಾಂತಿನಾಥ ಸ್ವಾಮಿ ಬಲ ಭಾಗದಲ್ಲಿರುವುದು ಶ್ರೀ ಚಂದ್ರ ಪ್ರಭ ತೀರ್ಥಂಕರರ ಕೂಟ ಇಕ್ಕೆಲಗಳಲ್ಲಿ ಕ್ಷೇತ್ರಪಾಲ ಯಕ್ಷರ ಹಾಗೂ ಶ್ರೀ ಜ್ವಾಲಮಾಲಿನಿ ಮೂರ್ತಿ ಇದೆ. ಇಲ್ಲಿ ಶ್ರೀ ಪದ್ಮಾವತಿ ಮಾತೆಯ ವಿಗ್ರಹ ವಿಶೇಷತೆಯಿಂದ ಕೂಡಿದೆ, ಶಿರದಲ್ಲಿ ನಾಗರ ಹೆಡೆ ಸಮಾನ್ಯವಾದರೆ ಈ ಮಾತೆಯ ಶಿರದಲ್ಲಿ ಸಹಸ್ರ ಪಣಿ ಪಾರ್ಶ್ವನಾಥರಿದ್ದಾರೆ.
ಈ ಬಸದಿಗಳ ಮುಂಭಾಗ ಕಾಣುವುದೆ ವಿಶಾಲವಾದ ನವರಂಗವಿರುವ ಪರಿಸರಕ್ಕೆ ಮುಕ್ತವಾದ ಜಿನಾಲಯ ಇಲ್ಲಿನ ಮೇಲ್ ಚಾವಣಿಯಲ್ಲಿ ಒಂದೆಡೆ ಕಾಳ ಸರ್ಪ ದೋಷ ನಿವಾರಣೆಗಾಗಿ ಇರುವಂತಹ ಸುತ್ತಲು ಅಷ್ಟ ದಿಕ್ಪಾಲಕರು ಇರುವ ಹಾಗೂ ಉಬ್ಬು ಶಿಲ್ಪಗಳಲ್ಲಿ ಚತುರ್ ದೇವಿಗಳು ಪೂಜೆಗಾಗಿ ಹೂವಿನ ಹಾರ ಧೂಪ ಸ್ತಂಭ ಇತ್ಯಾದಿ ದ್ರವ್ಯಗಳನ್ನ ಹಿಡಿದಿರುವ ಶಿಲ್ಪಗಳು ಮಧ್ಯದಲ್ಲಿ ನೇಮಿನಾಥ ತೀರ್ಥಂಕರರಿದ್ದು ಎಡ ಬಲಗಳಲ್ಲಿ ಶೀರದಲ್ಲಿ ಹೆಡೆ ಹೊಂದಿರುವ ಕಾಳ ಸರ್ಪ ಯಕ್ಷೀಣಿಯರ ಕೆತ್ತನೆ ಇದೆ. ಇಲ್ಲಿ ಸರ್ಪ ದೋಷ ನಿವಾರಣೆಗಾಗಿ ಬಹಳಷ್ಟು ಕಡೆಯಿಂದ ಭಕ್ತಾದಿಗಳು ಆರಾಧನೆಯನ್ನು ಕೈಗೊಳುತ್ತಾರೆ. ಕೆಳ ಭಾಗದಲ್ಲಿ ಅಷ್ಟ ಕರ್ಮ ನಾಶಕ ಅಷ್ಠ ದೀಪಗಳನ್ನು ನೀವು ನೋಡಬಹುದು.
ಇಲ್ಲಿನ ಮಠದ ಪೀಠದಲ್ಲಿ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹಲವಾರು ಅಭಿವೃದ್ಧಿ ಕಾರ್ಯಕ್ಕೆ ನಾಂದಿ ಹಾಡಿದ್ದು ಇಲ್ಲಿನ ಮಠದಲ್ಲಿರುವ ಸುಂದರವಾದ 24 ತೀರ್ಥಂಕರರ ಪಂಚ ಲೋಹದ ವಿಗ್ರಹಗಳು ಬೆಲೆ ಬಾಳುವ ಕಲ್ಲಿನ ವಿಗ್ರಹಗಳು ಮೋಹಕ ವಿಗ್ರಹಗಳು ದಾನಿಗಳಿಂದ ಕೊಡುಗೆಯಾಗಿ ಬಂದಿವೆ.
ಮಠದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಡ ಶಾಲೆ ಕೂಡ ನಡೆಯುತ್ತಿದೆ. ಅಲ್ಲದೆ ಅಶ್ರಮವು ಇದ್ದು ಮಕ್ಕಳು ಉತ್ತಮ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾರೆ.
(ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ 23 ವರ್ಷದಿಂದ ನಡೆಯುತ್ತಿರುವ ಪ್ರಾಥಮಿಕ, ಪ್ರೌಡ ಶಾಲೆ ಮತ್ತು ಆಶ್ರಮ ನಡೆಸಿಕೊಂಡು ಬರುತ್ತಿರುವ ಪರಿಯನ್ನು ವಿವರಿಸಿದರು).
ಇಲ್ಲಿನ ಚಂದ್ರ ಗಿರಿ ಬೆಟ್ಟದಲ್ಲಿ ನೂತನವಾಗಿ ಜಿನಾಲಯ ಒಂದನ್ನು ನಿರ್ಮಿಸಲಾಗುತ್ತಿದ್ದು ಭಕ್ತಾದಿಗಳ ಅನುದಾನದ ಅವಶ್ಯಕತೆ ಇದೆ.
(ಮಾತಾಜಿಯವರು ಮಾತನಾಡಿ ಕ್ಷೇತ್ರದ ಜಿನ ಪ್ರತಿಮೆ ಮತ್ತು ಬ್ರಹ್ಮಸ್ತಂಭದ ಬಗ್ಗೆ ವಿವರಣೆ ನೀಡಿದರು).
ಇಂತಹ ಐತಿಹಾಸಿಕ ಕ್ಷೇತ್ರಗಳನ್ನು ವೀಕ್ಷಿಸಿ ಪುಣ್ಯ ಬಾಗಿಗಳಾಗಿ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನ ಕ್ಷೇತ್ರ ಪರಿಚಯದಲ್ಲಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














