ವಾರದ ಜೈನ ಸುದ್ದಿಗಳು-08 / 24-09-2020

ಮುಖ್ಯಾಂಶಗಳು :

ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸದಿ.

ಚಿಕ್ಕೋಡಿಯ ಕೋಥಳಿ ದೇಶಭೂಷಣ ಆಶ್ರಮಕ್ಕೆ ನೂತನ ಕಟ್ಟಡ ನಿರ್ಮಾಣ

ಸ್ತವನಿಧಿಯಲ್ಲಿ ನಡೆದ ಬ್ರಹ್ಮದೇವರ ಪಲ್ಲಕ್ಕಿ ಉತ್ಸವದ ವೈಭವ

ಶ್ರವಣಬೆಳಗೊಳ ಬಾಹುಬಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಶಿಕ್ಷಕರ ಹಾಗೂ ಇಂಜಿನಿಯರ್ಸ್ ದಿನಾಚರಣೆ.

ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಪ್ರೋಫೈಲ್ ಒಂದರಲ್ಲಿ ಕಂಡುಬಂದ ಜಿನಬಿಂಬದ ಅಪಚಾರ

ನಂಜನಗೂಡಿನ ಬಳಿ ಅನ್ಯಧರ್ಮೀಯರ ದೇವಸ್ಥಾನದಲ್ಲಿ ಪೂಜಿತವಾಗುತ್ತಿರುವ ಬಾಹುಬಲಿ ವಿಗ್ರಹದ ಪೂಜೆ

ರಾಜಾಜಿನಗರದಲ್ಲಿ ಜೈನ್ ಮಿಲನ್ ವತಿಯಿಂದ ನಡೆದ ಜನಸಾಹಿತ್ಯ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ.

ಸುದ್ದಿಗಳ ವಿವರ:

ಶ್ರೀ ಕ್ಷೇತ್ರ ಕಂಬದ ಹಳ್ಳಿಯಲ್ಲಿ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ  ಮಹಾಸ್ವಾಮಿಯವರ ನೇತೃತ್ವದಲ್ಲಿ

ಅಲ್ಲಿನ ಚಂದ್ರಗಿರಿ ಬೆಟ್ಟದಲ್ಲಿ ನೂತನ ಜಿನಮಂದಿರ ಕಾರ್ಯಕ್ರಮ  ಪ್ರಗತಿಯಲ್ಲಿದೆ ಎಂದು ಅಲ್ಲಿನ  ನಿರ್ದೇಶಕರಾದ ಬೆಳ್ಳೂರಿನ  ಶ್ರೀ ಪದ್ಮನಾಭ ಜೈನ್ ರವರು ಜ್ವಾಲಾಮಾಲಾಗೆ ತಿಳಿಸಿದ್ದಾರೆ.  ಪ್ರಾಚೀನ ಐತಿಹಾಸಿಕ  ಕ್ಷೇತ್ರವಾದ ಕಂಬದಹಳ್ಳಿಯಲ್ಲಿ ಬಹಳ ಹಿಂದೆ ವಾಸ್ತು ದೋಷ  ನಿವಾರಣೆಗಾಗಿ  ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಕಟ್ಟಲಾಗಿದ್ದ ಬಸದಿಯನ್ನು ಅನ್ಯ ಧರ್ಮೀಯರ ಪ್ರಭಾವದಿಂದ ನಾಶಗೊಳಿಸಲಾಗಿ ಅಲ್ಲಿನ  ಕಲ್ಲಿನಿಂದ ಊರಿನ  ಕೆರೆಯನ್ನು ನಿರ್ಮಿಸಲಾಯಿತು  ಎಂದು ಅಂದಿನಿಂದ  ಅಭಿವೃದ್ದಿ ಹೊಂದಿದ ಕ್ಷೇತ್ರ ಮತ್ತು ಅವಸಾನಗೊಂಡಿತೆಂದು ಶ್ರೀಗಳವರು  ಅಲ್ಲಿನ ಪ್ರತೀತಿ  ಇರುವ  ವಿಡಯಕ್ಕೆ ಒತ್ತು ಕೊಟ್ಟು ಈಗ ಮತ್ತೆ ಕ್ಷೇತ್ರದ ಅಭಿವೃದ್ಧಿಗಾಗಿ ಅದೇ  ಸ್ಥಳದಲ್ಲಿ ನೂತನ ಜಿನಮಂದಿರವೊಂದು  ನಿರ್ಮಾಣಗೊಳ್ಳುತಲಿದ್ದು ಜೈನ ಬಾಂಧವರ ಸಹಕಾರವನ್ನು  ಶ್ರೀಗಳವರು ಕೋರಿದ್ದಾರೆ. ಈ ಬಸದಿಯನ್ನು ಕಟ್ಟುವುದಕ್ಕೆ ಒಂದೂವರೆಯಿಂದ ೆರಡು ಕೋಟಿ ರೂಪಾಯಿ ಯನ್ನು ಅಂದಾಜು ಲೆಕ್ಕ ಇಡಲಾಗಿದೆ. ಈಗ ಏನಾಗಿದೆ ಎಂದರೆ ಅರ್ಧ ಕಟ್ಟಿಯಾಗಿದೆ  ಆದರೆ ಕೆಲಸಗಳು ಇನ್ನೂ ಬಾಕಿ ಇದೆ  ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಕೆಲಸಗಳು ಮುಗಿಯುವ ಹಂತದಲ್ಲಿದೆ ಆದರೆ ಸುಮಾರು ಎಪ್ಪತ್ತು ಲಕ್ಷದ ರೂಗಳು  ಅವಶ್ಯಕತೆ ಇದ್ದು ಯಾರಾದರೂ ದಾನಿಗಳು  ದಾನ ಮಾಡುವ ಮನಸ್ಸಿದ್ದವರು ಅವರ ಕೈಯ್ಯಲ್ಲಿ ಎಷ್ಟ ಆಗುತ್ಗೋ ಅಷ್ಟು ಧನ ಸಹಾಯವನ್ನು ಮಾಡಿ ಸಹಕಾರ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ 2022 ಕ್ಕೆ ಸಂಚಿಕರಣ ಪೂಜೆಯನ್ನು ನೆರವೇರಿಸಿಬೇಕೆಂದು ಅಂದುಕೊಂಡಿದ್ದೇವೆ , ಅಲ್ಲಿಯ ವರೆಗೂ ಧರ್ಮಶಾಲೆ ಆಗಬೇಕು , ಬಸ್ತಿ ಕಾರ್ಯ ಅರ್ಧ ಆಗಿದೆ ಅದು ಪೂರ್ಣವಾಗಬೇಕು. ಹಾಗೂ ಭಗವಾನ್ ಸ್ವಾಮಿಯ ಮಂಟಪವೂ ಸಹ ಆಗಬೇಕು.ಅಲ್ಲೂ ಆಗಬೇಕು ಹಾಗು ಇಲ್ಲೂ ಸಹ ಆಗಬೇಕು  ಏಕೆಂದರೆ

ಬಿಸಿಲಿನಲ್ಲಿ ಬಂದವರಿಗೆ ಕೂರಲು ವ್ಯವಸ್ಥೆಯಾಗಬೇಕು. ಒಟ್ಟಿನಲ್ಲಿ ನಮ್ಮ ಬಸದಿ ಮುಂಚೆ ಹೇಗೆ ವ್ಯವಸ್ಥಿತವಾಗಿತ್ತೋ ಹಾಗೆ ಇರುವುದಕ್ಕೆ ನಾವು ನಿರೀಕ್ಷಿಸುತ್ತಿದ್ದೇವೆ. ವಾಸ್ತು ದೋಷದ ಪರಿಹಾರಕ್ಕಾಗಿ ಈ ಬಸದಿಯನ್ನು ನಿರ್ಮಾಣಮಾಡುತ್ತಿರುವುದು ಹಾಗೂ ಸಕಲ ಜೈನ ಕುಲಬಾಂದವರ ಉದ್ದಾರಕ್ಕಾಗಿ ನಮ್ಮ ಈ ಪ್ರಯತ್ನ ದಯಮಾಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು  ಕೋತಳಿ ಕೊಪ್ಪನವಾಡಿ ದೇಷಭೂಷಣ ಆಶ್ರಮದಲ್ಲಿ ಅನೇಕ ವಿದ್ಯಾರ್ಥಿಗಳು  ಅದ್ಯಯನ ನಡೆಸುತ್ತಿದ್ದು ಅವರಿಗಾಗಿ ಕಟ್ಟಡವೊಂದು ನಿರ್ಮಾಣ ವಾಗುತ್ತಿದ್ದು ಅದರ ಪ್ರಗತಿ ಕಾರ್ಯ ಅರ್ಧಕ್ಕೆ ನಿಂತಿದೆ. ಸುಮಾರು 170 ಪ್ರಾಥಮಿಕ ಶಾಲೆ ಯಲ್ಲಿ ಹಾಗೂ 600 ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ  ದೇಷಭೂಷಣ ಶಾಲೆಯಲ್ಲಿ ಮಕ್ಕಳು ಧಾರ್ಮಿಕ ಸಂಸ್ಕಾರದ ಹಾದಿಯಲ್ಲಿ ತಯಾರಾಗುತ್ತಿದ್ದಾರೆ. ಪೂಜೆ ಪ್ರಾರ್ಥನೆ ಧಾರ್ಮಿಕ ಶಿಕ್ಷಣ  ಕೊಡುವ  ಸಲುವಾಗಿ 70/40 ಪೂಟ್ ಅಳತೆಯ  ಅಗಲದ ಕಟ್ಟಡ ನಿರ್ಮಾಣವಾಗುತ್ತಿದ್ದು  ಹಣದ ಕೊರತೆಯಿಂದ  ಅರ್ಧಕ್ಕೆ ನಿಂತಿದೆ. ದಾನಿಗಳಿಗೆ ದಾನದ ಪುಣ್ಯ ಲಾಭ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ  ಎಂದು ಶ್ರೀ ದೇಶಭೂಶಣ ಟ್ರಸ್ಟ್ ವತಿಯಿಂದ  ಕೋರಲಾಗಿದೆ. ಹೆಚ್ಚಿನ ಮಾಗಿತಿಗಾಗಿ ಸಂಪರ್ಕಿಸಿ : 9900108703/9108558103 .

ಬೆಳಗಾವಿಯ ನಿಪ್ಪಾಣಿ ತಾಲ್ಲೂಕಿನ ಸ್ತವನಿದಿಯಲ್ಲಿ ಗ್ರಹದೇವರ ಪಲ್ಲಕ್ಕಿ ಉತ್ಸವ  ನಡೆದ ಸುಂದರ ದೃಶ್ಯಾವಳಿಗಳು ನಿಮ್ಮ ಮುಂದೆ: ಹಾಗೂ ವಿವಿದೆಡೆಗಳಲ್ಲಿ ದಶಲಕ್ಷಣ  ಪೂಜಾರಾಧನೆಯ ಸುದ್ದಿಗಳು  ಬಹಳಷ್ಟು ಬಂದಿದ್ದು ದಯವಿಟ್ಟು  ಸುದ್ದಿ ಕಳುಹಿಸುವಾಗ ಗುಣಮಟ್ಟದ  ವೀಡಿಯೋಗಳನ್ನು ಕಳುಹಿಸಿದಲ್ಲಿ  ಇಲ್ಲಿ ಪ್ರಸ್ತುತಪಡಿಸಲು ಅನುಕೂಲವಾಗುತ್ತದೆ ಎಂದು ತಿಳಿಸಲು ಇಚ್ಛಿಸುತ್ತೇವೆ . ಅವುಗಳಲ್ಲಿ ಕೆಲವು ದೃಶ್ಯಾವಳಿಗಳನ್ನು ಮಾತ್ರ ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿನ  ಶ್ರೀ ಬಾಹಿಬಲಿ ಇಂಜಿನಿಯರಿಂಗ್  ಕಾಲೇಜು  ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ  ಇಂಜಿನಿಯರಿಂಗ್ ದಿನಾಚರಣೆ  ಇಲ್ಲಿನ ಪ್ರಾಂಶುಪಾಲರಾದ ಶ್ರೀ ಗೊಮ್ಮಟೇಶ ಎಂ. ರಾಮಣ್ಣ ನವರ ನೇತೃತ್ವದಲ್ಲಿ  ನಡೆಯಿತು. ನಡೆದ ಕಾರ್ಯಕ್ರಮದಲ್ಲಿ  ಇತ್ತೀಚೆಗೆ ಶ್ರೀ ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾನಿಲಯದಿಂದ  ಪಿಹೆಚ್ ಡಿ ಪದವಿ ಪಡೆದ  ಕಂಪ್ಯೂಟರ್ ಸೈನ್ಸ್ ವಿಭಾಗದ  ಪ್ರೊಫೆಸರ್ ಎಂ . ಯಶೋಧರವರಿಗೆ ಸನ್ಮಾನ ಮಾಡಿ  ಗೌರವ ಸಲ್ಲಿಸಲಾಯಿತು. ಈ ಕರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು  ಕಾಯ್ದುಕೊಳ್ಳುವ ಸಲುವಾಗಿ ಸರಳವಾಗಿ ಸಮಾರಂಭವನ್ನು ನಡೆಸಲಾಯಿತು. ಹಾಗೂ ಆನ್ ಲೈನ್ ಮೂಲಕ  ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊಫೆಸರ್ ಅಭಿಲಾಶ್, ಕಾಲೇಜಿನ ಉಪನ್ಯಾಸಕರು , ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು .

ಇತ್ತೀಚೆಗೆ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ  ಫೇಸ್ ಬುಕ್ ಪ್ರೊಫೈಲ್ ಒಂದರಲ್ಲಿ  ಜಿನಬಿಂಬದ ಅಪಚಾರದ ಬಗ್ಗೆ ಸುದ್ದಿ ವಿವರ ಇಲ್ಲಿದೆ. ವ್ಯಕ್ತಿ ಯೊಬ್ಬ ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಜಿನಬಿಂಬದ ಒಂದು ಭಗ್ನ ಮೂರ್ತಿಯೊಂದಿಗೆ ಹಾಸ್ಯಾಸ್ಪದವಾಗಿ ತೆಗೆದುಕೊಂಡ  ಫೋಟೋವನ್ನು ಅಪ್ ಲೋಡ್ ಮಾಡಲಾಗಿ  ಸಮುದಾಯದ ಹಿತದೃಷ್ಠಿಯಿಂದ  ಅವರಲ್ಲಿ ಸಂಯಕ್ ದರ್ಶನ್ ರವರು ತಿಳಿಸಿ ಹೇಳದರೂ ಉದ್ಧಟತನ  ಕೋರಿದ ಕಾರಣ  ಸಂಯೇಕ್ ದರ್ಶನ್ ರವರು  ಹರ್ಷೇಂದ್ರ ಜೈನ್ ರವರನ್ನು ಸಂಪರ್ಕಿಸಿ  ನಂತರ ಹರ್ಷೇಂದ್ರ ಜೈನ್ ರವರಿಂದ  ಇದು ಇಡೀ ಜೈನ ಧರ್ಮಕ್ಕೆ  ಹಾಗೂ ಜೈನ ಬಾಂಧವರಿಗೆ ನೋವುಂಟು ಮಾಡಿದೆ  ಎಂದು ಎಚ್ಚರಿಕೆ  ಪತ್ರ ರವಾನಿಸಿ  ಫೇಸ್ ಬುಕ್ ಪೇಜ್ ನ ಪ್ರೊಫೈಲ್ ನಿಂದ  ಫೋಟೋವನ್ನು ತೆಗೆಯಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆ ವ್ಯಕ್ತಿಯು  ಈಗ ಪ್ರೊಫೈಲ್ ನಿಂದ ಚಿತ್ರವನ್ನು ತೆಗೆದುಹಾಕಿದ್ದಾರೆ.  ಇಂತಹ ಅಪಚಾರಗಳು ನಡೆಯದಂತೆ ತಕ್ಷಣ  ಕಾರ್ಯ ಪ್ರವೃತ್ತರಾಗುವ  ಎಮ್ ಹರ್ಷೇಂದ್ರ ಜೈನ್ ರವರಿಗೂ  ಈ ಕಾರ್ಯಕ್ಕಾಗಿ ತಮ್ಮ ಮೊದಲ ಪುಟ್ಟ ಪ್ರಯತ್ನ ಮಾಡಿದ ಸಂಯೇಕ್ ದರ್ಶನ್ ರವರಿಗೂ  ಜ್ವಾಲಾಮಾಲ ಅಭಿನಂದನೆ ಸಲ್ಲಿಸುತ್ತಿದ್ದು  ಈರ್ವರೂ ತಮ್ಮ ಮಾತಿಗೆ ಓಗೊಟ್ಟು  ಪ್ರೊಫೈಲ್ ಚಿತ್ರವನ್ನು ತೆಗೆದುಹಾಕಿದ  ಅ ವ್ಯಕ್ತಿಗೂ ಸಹ ತನ್ನ ಧನ್ಯವಾದಗಳನ್ನು ತಿಳಿಸುತ್ತಾ  ಆಗಿರುವ ತಪ್ಪಿಗೆ ಕ್ಷಮೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು  ಅಭಿಪ್ರಾಯ ಪಟ್ಟಿದ್ದಾರೆ.

ನಂಜನಗೂಡಿನ ನಂಜುಂಡೇಶ್ವರನ  ದೇವಸ್ಥಾನದ ಪಕ್ಕದ ಗಲ್ಲಿಯಲ್ಲಿ ಇರುವ ನವಗ್ರಹ  ದೇವಸ್ಥಾನ ದ ಮುಂಭಾಗದಲ್ಲಿಯೇ  ಗೊಮ್ಮಟೇಶನ ವಿಗ್ರಹವೊಂದು ಕಂಡುಬಂದಿದೆ, ನೋಡಲು ಶ್ರೀ  ಬಾಹುಬಲಿ ವಿಗ್ರಹದ ಮಾದರಿಯಲ್ಲೇ ಇರುವ ಈ ಮೂರ್ತಿಯಲ್ಲಿ ಹುತ್ತದ  ಹಾಗೂ ಬಳ್ಳಿಗಳ ಕೆತ್ತನೆ ಯು ಅಸ್ಪಷ್ಟವಾಗಿ  ಗೋಚರಿಸುತ್ತಿದ್ದು  ಬಣ್ಣದಿಂದ ಮುಚ್ಚಿ ಹೋಗಿದೆ. ಸುತ್ತಲೂ ಯಾವ ರಕ್ಷಣೆಯೂ ಇಲ್ಲದೇ  ಈ ವಿಗ್ರಹ ಪೂಜೆ ಗೊಳ್ಳುತ್ತಿದ್ದು  ಇಲ್ಲಿನ ಸ್ಥಳೀಯರು ಇದರ ಬಗ್ಗೆ  ಭಾವನಾತ್ಮಕ ಭಕ್ತಿ ಭಾವನೆಗಳನ್ನು ಹೊಂದಿದ್ದು ನಮ್ಮ ತಂಡದವರು  ಅಲ್ಲಿ ವಿಚಾರಿಸಿದಾಗ ಜೈನ ಸಮಾಜ ದವರೂ ಬಂದರೂ ಸಹ ಈ ವಿಗ್ರಹವನ್ನು ನಾವು  ಕೊಡುವುದಿಲ್ಲ  ಎಂದು ಹೇಳಿದ್ದಾರೆ.

ರಾಜಾಜಿನಗರ  ಜೈನ್ ಮಿಲನ್ ವತಿಯಿಂದ  ರಜತಮಹೋತ್ಸವದ ಅಂಗವಾಗಿ ನಡೆದ  ಜೈನ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದೆ. ರಾಜಾಜಿನಗರ ಜೈನ್ ಮಿಲನ್ ವತಿಯಿಂದ  16/08/2020 ರಂದು ಆನ್ಲೈನ್ ಮೂಲಕ  ನಡೆಸಿದ ಸ್ಪರ್ಧಯ ಫಲಿತಾಂಶದ ಪ್ರಕಾರ  ಪ್ರಿಶಾ ಆರ. ಹೆಗ್ಡೆ ಪ್ರಧಮ ಬಹುಮಾನ, ನಿಶ್ಖಾ ಮಹಾವೀರ್  ದ್ವಿತೀಯ ಬಹುಮಾನ, ಆರ್ಯ ಎ. ಜೈನ್ ತೃತೀಯ ಬಹುಮಾನ,

ಇನ್ನು 6 ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.  ಶ್ರೀಮತಿ  ಎಸ್. ವಿ ಸುಜಾತರವರು, ಶ್ರೀಮತಿ ನೀರಜಾ ನಾಗೇಂದ್ರ ಕುಮಾರ್ ರವರು  ತೀರ್ಪುಗಾರರಾಗಿದ್ದಾರೆಂದು  ಮಿಲನ್ ತಿಳಿಸಿದೆ.  ಬಹುಮಾನಿತ ಮಕ್ಕಳಿಗೆ  ಜ್ವಾಲಾಮಾಲಾ ಅಭಿನಂದನೆಗಳನ್ನು ಡಿಳಿಸುತ್ತದೆ.

ವಾರದ ಸುದ್ದಿಗಳನ್ನು ವೀಕ್ಷಿಸಿದ ತಮಗೆಲ್ಲಾ ಜ್ವಾಲಾಮಾಲಾ ಡಾಟ್ ನ್ಯೂಸ್ ವತಿಯಿಂದ ಅಭಿನಂದನೆಗಳು.