ಕ್ಷೇತ್ರ ಪರಿಚಯ-04 / ಸವಣಲು / ದಕ್ಷಿಣ ಕನ್ನಡ

ತುಳುನಾಡು ದೇವಾನುದೇವತೆಗಳ ಆಲಯ ,ಧೈವಗಳ ನೆಲೆ , ಭೋರ್ಗರೆವ ಕಡಲ ಕಿನಾರೆ,   ಪ್ರವಾಸಿಗರ ತಾಣ,  ಯಕ್ಷಗಾನ ಕಂಬಳದಂತಹ  ಕಲೆಯಿರುವ ಸಾಂಸ್ಕೃತಿಕ  ಬೀಡು, ಸಾಹಿತ್ಯ ಸಂಸ್ಕೃತಿಯ  ಸ್ನೇಹ ಸೌಹಾರ್ದತೆಯ  ಪುಣ್ಯಭೂಮಿ.  ಎತ್ತೆತ್ತ ನೋಡಿದರೂ ಹಸಿರು ವನರಾಶಿ . ಇದೆಲ್ಲಕ್ಕಿಂತ ಬಹು ಮುಖ್ಯವಾಗಿ  ಸುಂದರ ಜೈನ ತೀರ್ಥಕ್ಷೇತ್ರಗಳ ನಾಡು ಈ ತುಳುನಾಡು .

ಈ ತುಳುನಾಡಿನಿಂದ ಬೆಳ್ತಂಗಡಿಯಿಂದ 5 ಕಿಲೋಮೀಟರ್  ದೂರ ಕ್ರಮಿಸಿದಾಗ ಸಿಗುವುದೇ  ಸವಣಾಲು ಕ್ಷೇತ್ರ.  ದಟ್ಟ ಕಾನನದಂತಿರುವ  ಮನೋಹರ ಸ್ಥಳದಲ್ಲಿ ಕಿರಿದಾದ  ಮೆಟ್ಟಿಲ ಹಾದಿಯಲ್ಲಿ ನಾವು  ಸಾಗಿ ಹೋದಾಗ  ನಮ್ಮ ತಂಡಕ್ಕೆ ಗೋಚರಿಸಿದ್ದು  ಹಸಿರು  ಕಲ್ಲು ಬಂಡೆಗಳ ರಾಶಿಯ ನಡುವೆ ಇರುವ ಪುಟ್ಟ ಗುಹೆ . ಇಂತಹ ಒಂದು  ಅದ್ಬುತ ಸ್ಥಳ  ನಮ್ಮ ಜೈನ ತೀರ್ಥಕ್ಷೇತ್ರ  ಎಂಬ ಊಹೆಗೂ ನಿಲುಕದಂತಿರುವಾಗ  ನಮಗಾಗಿದ್ದು ವಿಸ್ಮಯವಂತೆ.  ಆ ಗುಹೆಯ ಒಳಗೆ ಪ್ರವೇಶಿಸುತ್ತಿದ್ದಂತೆ  ಕವಿದ ಕತ್ತಲಿನಲ್ಲಿ  ಸುತ್ತೆಲ್ಲೂ ಇಲ್ಲದ ಆ ಗುಹೆಯ ಒಳಗೆ  ಮಾತ್ರ ಸುರಿಯುತ್ತಿರುವ ತುಂತುರು ವೃಷ್ಠಿ.  ನೀರಿನ ಮೂಲ ಮಾತ್ರ  ಇನ್ನೂ ತಿಳಿದುಬಂದಿಲ್ಲ. ಬಹಳ ಕಾಲದಿಂದಲೂ  ಜೈನ ಬಂಧುಗಳು ಇಲ್ಲಿ ಬಂದು  ಈ ಪವಿತ್ರ ಜಲದಲ್ಲಿ ಮಿಂದು ಪಾವನರಾದ ಭಾವ ಹೊಂದುತ್ತಿದ್ದಾರಲ್ಲದೇ  ಈ ಜಲದಲ್ಲಿ  ರೋಗ ರುಜಿನಗಳ ನಾಶ ಮಾಡುವ  ಔಷಧಿ ಗುಣವೂ ಕೂಡ  ಇದೆ ಎಂದು ಹೇಳುತ್ತಾರೆ. ಹೀಗೆ  ಆ ಮೆಟ್ಟಿಲ ಹಾದಿಯಲ್ಲಿ ಮೇಲೆ ಸಾಗಿದಾಗ ನಮಗೆ ಕಾಣುವುದು  ಗುಹೆಯ ಮೇಲಿರುವ  ಭಗವಾನ್ ಆದಿನಾಥ ತೀರ್ಥಂಕರರ  ವಿಗ್ರಹ. ವಿಗ್ರಹದ ಬಳಿ  ಇಲ್ಲಿನ ಪ್ರತೀತಿಯ ಪ್ರಕಾರ  ಶ್ರವಣ ಮಿನಿಗಳು ತಪಸ್ಸನ್ನಾಚರಿಸಿದ ಕಥೆಯೊಂದರ ಕುರುಹಾಗಿ  ಮುನಿಗಳ ಪಾದದ ಕೆತ್ತನೆಯನ್ನು  ಸಹಾ ನೀವಿಲ್ಲಿ ನೀಡಬಹುದು.  ಅಲ್ಲಿನ  ಅರ್ಚಕರಾದ ವೃಷಭ ಇಂದ್ರ ರನ್ನು ನಾವು ಮಾತನಾಡಿಸಿದಾಗ ಅವರು ಹೇಳಿದ ಹಿನ್ನೆಲೆಯನ್ನು ಕೇಳಿ ಮೈ ಜುಮ್ಮೆನಿಸಿತು.

ಪ್ರತಿ ಅಮಾವಾಸ್ಯೆಯ ದಿನದಂದು ಇಲ್ಲಿ ಸುತ್ತ ಮುತ್ತಲಿನ ಜೈನರು ಶ್ರಾವಕ ಶ್ರಾವಕಿಯರೆಲ್ಲರೂ ಹೆಚ್ಚನ ಸಂಖ್ಯೆಯಲ್ಲಿ ಸೇರಿ ತೀರ್ಥಜಲದಲ್ಲಿ ಮಿಂದು ಅಭಿಷೇಕ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಇಲ್ಲಿ ತಿಂಗಳಿಗೊಮ್ಮೆ ನಡೆಯುವ ಕಾರ್ಯಕ್ರಮದಲ್ಲಿ ಊಟೋಪಚಾರದ ಸಲುವಾಗಿ  ಇಲ್ಲಿ ಒಂದು ಭೋಜನಶಾಲೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ವೀಕ್ಷಕರೇ  ಇನ್ನೂ ಹೆಚ್ಚು ಪ್ರವಾಸಿ ತಾಣಗಳನ್ನು ವೀಕ್ಷಿಸಲು ನೋಡುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್, ಕ್ಷೇತ್ರ ಪರಿಚಯಕ್ಕಾಗಿ ಸಂಪರ್ಕಿಸಿ: 7026261255.