ವಾರದ ಜೈನ ಸುದ್ದಿಗಳು-07 / 14-09-2020

ಜೈ ಜಿನೇಂದ್ರ ವೀಕ್ಷಕರೆ, ಜ್ವಾಲಮಾಲ ಡಾಟ್ ನ್ಯೂಸ್ ನ ರಾಜ್ಯದೆಲ್ಲೆಡೆಯ ವಾರದ ಸುದ್ದಿ ಸಂಚಯಕ್ಕೆ ನಿಮ್ಮನ್ನು ಸ್ವಾಗತಿಸುತ್ತ

ಮುಖ್ಯಾಂಶಗಳು:-

ಪಿಯುಸಿ ಪಠ್ಯ ದೋಷ ತಿದ್ದುಪಡಿ ಮನವಿಗೆ ಸಿಕ್ಕ ಫಲಶ್ರುತಿ.

ಕಾರ್ಕಳ ಮಂಗಳ ಭಾದೆ ಜಿನಬಿಂಬ ಬಳಿ ಕಿಡಿಗೇಡಿಗಳ ದುರ್ವರ್ತನೆ.

ಸ್ವಾದಿ ಶ್ರೀಗಳಿಂದ ಮಠದಲ್ಲಿ ತೆಂಗಿನ ಗಿಡ ನೆಡುವ ಕಾರ್ಯಕ್ರಮ.

ವಿದೇಶ ಸಂಗ್ರಹಾಲಯದಲ್ಲಿರುವ ಪುರಾತನ ಜಿನಬಿಂಬಗಳು.

ಕಾ.ಸ.ಪ ದತ್ತಿ ಪ್ರಶಸ್ತಿಗೆ  ಝಾಣಜ್ಝಯಣ ಪಾಹುಡ. ವೀರಾನ್ವಯ ಕೃತಿಗಳ ಆಯ್ಕೆ.

ಮನ ಮುಟ್ಟಿದ ಭಕ್ತಾಮರ ದೀಪಾರಾಧನೆ.

ಸಿಬಿಐ ಉನ್ನತ ಪಧವಿಗೆ ಜೈನ ಅಧಿಕಾರಿ ಆಯ್ಕೆ.

ಮೈಸೂರಿನ ವರ್ಧಮಾನ ಜೈನ್ ಮಿಲನ್ ವತಿಯಿಂದ ಪ್ರಾಣಾಯಾಮ ಕಾರ್ಯಗಾರ.

ಸುದ್ದಿಗಳ ವಿವರ:-

ಪಿಯುಸಿ ಪಠ್ಯ ಪುಸ್ತಕದಲ್ಲಿನ ದೋಷ ನಿವಾರಣೆಗಾಗಿ ಶಿಕ್ಷಣ ಸಚಿವರಲ್ಲಿ ಮಾಡಿದ  ಮನವಿಯ ಬಗ್ಗೆ ಕಳೆದ ಸಂಚಿಕೆಯಲ್ಲಿ ಸುದ್ದಿಮಾಡಲಾಗಿತ್ತು. ಈಗ ಮೂಡುಬಿದ್ರೆ ಶ್ರೀಗಳೊಂದಿಗೆ ಶಿಕ್ಷಣ ಸಚಿವರು ಮಾತನಾಡಿದ್ದಾರೆ.

ಸ್ವತಃ ಸ್ವಾಮೀಜಿಯವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಆಗ್ರಹಿಸುತ್ತಿದ್ದಂತೆ ಹಾಗೂ ಹಲವು ಧಾರ್ಮಿಕ ಚಿಂತಕರ ವಿರೋಧ ವ್ಯಕ್ತವಾಗುತ್ತಿದಂತೆ. ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದಂತೆ. ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ರವರು ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಶ್ರೀಗಳೊಂದಿಗೆ ಮಾತನಾಡಿ ತಿದ್ದುಪಡಿಯ ಭರವಸೆ ನೀಡಿದ್ದಾರೆ. ಈ ಬಗ್ಗೆ ಕಾಳಜಿವಹಿಸಿದ ಶ್ರೀಗಳವರಿಗೂ ಲೇಖನ ಪ್ರಕಟಿಸಿದ ನಿರಂಜನ್ ಕುದ್ಯಾಡಿ ಹಾಗೂ ಯಾರೆಲ್ಲಾ ಸಹಕರಿಸಿದರು ಅವರೆಲ್ಲರಿಗೂ ಜ್ವಾಲಮಾಲ ಅಭಿನಂದಿಸುತ್ತದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ ನಂಬಿಕೆ ಅವರಿಗೆ ಭಾವನಾತ್ಮಕವಾಗಿರುತ್ತದೆ. ಇದರ ಅಲ್ಪಹರಿವು ಇಲ್ಲದ ಮತಾಂಧರು ಕಾರ್ಕಳ ಮಂಗಳ ಪಾದೆಯ ಜಿನಬಿಂಬ ಬಳಿ ಕಿಡಿಗೇಡಿತನ ಪ್ರದರ್ಶಿಸಿದ್ದು ತಕ್ಷಣ ಜೈನ್ ಬ್ರಿಗೆಡ್ ನ ಯುವಕರು ಹಾಗೂ ಜೈನ್ ಮಿಲನ್ ವತಿಯಿಂದ ಕಾರ್ಯಪ್ರೌರುತ್ತರಾಗಿದ್ದಾರೆ.

ಕಾರ್ಕಳ ಕಸಬ ಗ್ರಾಮದ ಮಂಗಳ ಭಾದೆಯ ಪರಿಸರದಲ್ಲಿ ಭಿನ್ನವಾದ ಜಿನ ಬಿಂಬವಿದ್ದು ಕೆಲವು ಕಿಡಿಗೇಡಿಗಳು ಚಪ್ಪಲಿ ಹಾಗೂ ಶೂ ಕಾಲಿನಲ್ಲಿ ಮೂರ್ತಿಯ ಮೇಲೆ ನಿಂತು ಚಿತ್ರಿಕರಿಸಿ ಅಪ್ಲೋಡ್ ಮಾಡಿದ ಫೋಟೊಗಳು ಜಾಲತಾಣಗಳಲ್ಲಿ ವೈರಲ್ ಹಾಗಿ ನಿರಂಜನ್ ಜೈನ್ ಕುದ್ಯಾಡಿ ಪ್ರೊಫೆಸರ್ ಅಜಿತ್ ಪ್ರಸಾದ್ ಹಾಗೂ ಬಹಳಷ್ಟು ವಿರೋಧ ಹೇಳಿಕೆಗಳು ಮೊಳಗಿದ್ದರ ಪರಿಣಾಮವಾಗಿ, ಅಲ್ಲಿ ಕಾರ್ಯ ಪ್ರೌರುತ್ತರಾದ ಕಾರ್ಕಳ ಜೈನ್ ಬ್ರಿಗೆಡ್ ಹಾಗೂ ಅಲ್ಲಿನ ಜೈನ್ ಮಿಲನ್ ವತಿಯಿಂದ ಶ್ರೀ ಡಿ ಸುರೇಂದ್ರ ಕುಮಾರ್ ರವರಿಂದ ಸೂಚನೆ ಮೇರೆಗೆ ಸ್ಥಳದಲ್ಲಿ ಪರಿಶೀಲನೆ ನಡೆಸಿ ಅಲ್ಲಿನ ತಹಶೀಲ್ದಾರರಲ್ಲಿ ಜಿನ ಬಿಂಬದ ಸೂಕ್ತ ರಕ್ಷಣೆಗೆ ಮನವಿ ಸಲ್ಲಿಸಿದರಲ್ಲದೆ, ಜೈನ್ ಬ್ರಿಗೆಡ್ ನ ವತಿಯಿಂದ ಅಲ್ಲಿ ಸ್ವಚತಾ ಕಾರ್ಯವನ್ನು ಕೈ ಗೊಂಡ ಬಗ್ಗೆ ಕಾರ್ಕಳ ಜೈನ್ ಬ್ರಿಗೆಡ್ ನ ವಿಕ್ಯ ಜೈನ್ ಜ್ವಾಲಮಾಲಗೆ ತಿಳಿಸಿದ್ದು ಅಷ್ಟೇ ಅಲ್ಲದೇ ಹೀಗ ಎಚ್ಚೆತ್ತ ಆಡಳಿತ ಮಂಡಳಿಯಿಂದ ಸೂಚನ ಫಲಕದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇದಕ್ಕಾಗಿ ಹೋರಾಡಿದ ಪ್ರತಿಯೊಬ್ಬರು ಇಂತಹ ಸತ್ಕಾರ್ಯದ ಫಲಶ್ರುತಿಗೆ ಜ್ವಾಲಮಾಲ ಅಭಿನಂದನೆಯನ್ನು ಸಲ್ಲಿಸುತ್ತದೆ.

ಶ್ರೀ ಸ್ವಾದಿ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಭಟ್ಟಕಲಂಕ ಭಟ್ಟಾರಕ ಸ್ವಾಮೀಜಿಯವರ ಅಮೃತ ಹಸ್ತದಿಂದ ದಿನಾಂಕ 06-09-2020ರಂದು ಸೋಂದ ಸಮಸ್ತ ಜೈನ ಶ್ರಾವಕರ ಸಂಪೂರ್ಣ ಸಹಕಾರದಿಂದ 108 ತೆಂಗಿನ ಗಿಡ ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತ್ತು.

ಪಾಕಿಸ್ತಾನ ಲಹೋರ್ನ ಸಂಗ್ರಹಾಲಯದಲ್ಲಿ ಜಿನ ಬಿಂಬಗಳು ಇರುವ ವಿಷಯ ಈಗ ಪ್ರಸ್ತಾಪವಾಗಿದೆ.

ಅಲ್ಲಿರುವ ಪುರಾತನ ಮೂರ್ತಿಗಳನ್ನು ಮತ್ತೆ ಭಾರತಕ್ಕೆ ತರುವ ಪ್ರಯತ್ನವಾಗಲಿ ಎಂದು ಜೈನ ಸಂಘ ಸಂಸ್ಥೆಗಳಿಗೆ ವಿಶ್ವ ಜೈನ ಸಂಘಟನೆಯ ಪುಟ ಮಾಹಿತಿ ನೀಡಿದೆ. ಪಾಕಿಸ್ತಾನದ ಉರ್ದು ಇತಿಹಾಸಕಾರರಾದ ಜನಾಬ್ ಇಕ್ಬಾಲ್ ಕೌಸರ್ ಇವರು ಅಲ್ಲಿರುವ ಪುರಾತನ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಅವರು ಈ ಸಂಶೋದನೆಯ ಬಗ್ಗೆ ಉಜುಡ ದರಾದೆ ದರ್ಶನ್ ಹೆಸರಿನ ಪುಸ್ತಕವನ್ನು ಬರೆದಿದ್ದಾರೆ. ಅದನ್ನು ಮಹೇಂದ್ರ ಕುಮಾರ್ ರವರು ಹಿಂದಿಗೆ ಅನುವಾದಿಸಿದ್ದಾರೆ.

ಜಾಹೀರಾತು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ದತ್ತಿ ಪ್ರಶಸ್ತಿಗೆ ಡಾ|| ನಿರಜ ನಾಗೇಂದ್ರ ಕುಮಾರ್ ರವರ ಹಾಗೂ ಪಿ. ನ್ಯಾಮ ಗೌಡ ರವರ ಕೃತಿ ಆಯ್ಕೆಯಾಗಿವೆ.

2019ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ 47 ದತ್ತಿ ಪ್ರಶಸ್ತಿ ಪಟ್ಟಿಯಲ್ಲಿ ಶ್ರೀ ಮತಿ ನಿರಜ ನಾಗೇಂದ್ರ ಕುಮಾರ್ ರವರ ಝಾಣಜ್ಝಣ ಪಾಹುಡ ಕೃತಿಗೆ ಹೊಳಲ್ಕೇರೆ ಪದ್ಮಾವತಮ್ಮಶ್ರೀ ಪಾಲ ಶೆಟ್ಟಿ ಶ್ರೀ ಮಧ ಕೇಸರಿ ಜೈನ ದತ್ತಿ ಪ್ರಶಸ್ತಿ ಹಾಗೂ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ದತ್ತಿ ಪ್ರಶಸ್ತಿ ಡಾ||. ನ್ಯಾಮ ಗೌಡ ರವರ ವೀರಾನ್ವಯ ಕೃತಿಗೆ ಲಭಿಸಿದೆ ಇವರಿಗೂ ಜ್ವಾಲಮಾಲ ಅಭಿನಂದನೆಗಳು

ಕೆಲವು ದಿನಗಳ ಹಿಂದಷ್ಟೆ ಫೆಸ್ ಬುಕ್ ಪೆಜ್ ನಲ್ಲಿ ನಡೆದ ಭಕ್ತಾಮರ ದೀಪಾರಾಧನೆ ಹಾಗೂ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮ ಜನರ ಮನ ಮುಟ್ಟಿತು.

ರತ್ನ ಕರಂಡಕ ಶ್ರಾವಕಾಚಾರ ಸ್ವಾದ್ಯಾಯ ಗಣದವರ ನೇತೃತ್ವದಲ್ಲಿ ನಡೆದ ಭಕ್ತಾಮರ ದೀಪಾರಾಧನೆ ಬಹಳಷ್ಟು ಎಂಗಳೆಯರು ಪಾಲ್ಗೊಂಡು 48 ದೀಪಗಳನ್ನು ವಿವಿಧವಾಗಿ ಅಲಂಕರಿಸಿ ಸಂಭ್ರಮಿಸಿದರು. ಸಿದ್ದ ಭಗವಂತರ ದರ್ಶನ ಮನೋಹರವಾಗಿತ್ತು.

 ಹಾಗೂ ನಿರಂಜನ್ ಕುದ್ಯಾಡಿ ರವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಕ್ಷಮಾವಳಿ (ಕೂಡ) ನಡೆಯಿತು. 

ಇದು ಪ್ರಕಟಣೆಯ ಸಮಯ

ಇದು ಬಾಹುಬಲಿ ತಾಂತ್ರಿಕ ಮಹಾವಿಧ್ಯಾಲಯದ ಪ್ರಕಟಣೆ. ಇತ್ತಿಚೇಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ವರ್ಷ 2020-21ನೇ ಸಾಲಿನ ಬಿ.ಸಿ.ಇ. ಗೆ ಪ್ರವೇಶ ಪಡೆಯಲು ಅರ್ಹ ವಿಧ್ಯಾರ್ಥಿಗಳಿಗೆ ಬಿ.ಸಿ.ಇ  ವಿದ್ಯಾರ್ಥಿ ವೇತನ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಶ್ರೀಗಳ ಸುವರ್ಣ ದೀಕ್ಷಾ ಮಹೋತ್ಸವ ಪ್ರಯುಕ್ತ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯ ಶ್ರವಣ ಬೆಳಗೊಳ ಇಲ್ಲಿ 2020-21ನೇ ಸಾಲಿನಲ್ಲಿ ಪ್ರವೇಶ ಪಡೆಯುವ 50 ಜನ ಅರ್ಹ ವಿಧ್ಯಾರ್ಥಿಗಳಿಗೆ ಚಾರುಶ್ರೀ ವಿಧ್ಯಾರ್ಥಿ ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಾಂಶುಪಾಲರಾದ ಡಾ|| ಗೋಮಟೇಶ ಮ. ರಾವನವರು

ಭಕ್ತಾದಿಗಳ ಗಮನಕ್ಕೆ

ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ ಬಸದಿಗಳ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಶ್ರೀ ಕ್ಷೇತ್ರ ಹೊಂಬುಜ ಮಠದಿಂದ ಪ್ರಕಟನೆಯನ್ನು ಹೊರಡಿಸಲಾಗಿದೆ.

ಬಸದಿಗಳ ದರ್ಶನದ ಸಮಯ ಬೆಳಿಗ್ಗೆ 07-00ರಿಂದ 1-00 ಗಂಟೆ ಮತ್ತು ಸಂಜೆ 04 ರಿಂದ 06 ಗಂಟೆಯವರೆಗೆ ಅವಕಾಶವಿರುತ್ತದೆ.

ದೇವಾಲಯದ ಪರಿಸರದಲ್ಲಿ ಒಬ್ಬರಿಗೆ, ದೇವ ದರ್ಶನಕ್ಕೆ ಕೇವಲ 10 ನಿಮಿಷಗಳ ಸಮಯಾವಕಾಶವಿರುತ್ತದೆ.

ಶ್ರೀ ಕ್ಷೇತ್ರದಲ್ಲಿ ಊಟದ ಮತ್ತು ವಸತಿಯ ವ್ಯವಸ್ಥೆ ಇರುತ್ತದೆ.

ಮಕ್ಕಳು, ವಯೋವೃದ್ಧ ಮತ್ತು ಅನಾರೋಗ್ಯ ಪೀಡಿತರು ಪ್ರವಾಸವನ್ನು  ಮುಂದೂಡುವುದು ಸೂಕ್ತ. ಎಂದು ಹೊಂಬುಜ ಜೈನ ಮಠ ತಿಳಿಸಿದೆ.

ಜೈನ ಅಧಿಕಾರಿಯೋಬ್ಬರು ಸಿಬಿಐ ನ ಉನ್ನತ ಪಧವಿಗೆ ಆಯ್ಕೆಯಾಗಿದು ಹೆಮ್ಮೆಯ ವಿಷಯವಾಗಿದೆ.

ರಾಜಸ್ಥಾನದ ಕೆಡರ್ ನ ಐ ಪಿ ಎಸ್ ಅಧಿಕಾರಿ ಟೊಂಗ್ ಜಿಲ್ಲೆಯ ನಿವಾಸಿಯಾದ ಶ್ರೀ ಡಿ ಸಿ ಜೈನ್ ಅವರು ಪೋಲಿಸ್ ಮಹಾ ನಿರ್ದೇಶಕರಾಗಿ ಜೋದ್ ಪುರ್ ಮತ್ತು ಜೈಪುರ್ ನಲ್ಲಿ ಕಾರ್ಯ ನಿರ್ವಹಿಸಿದರು ಇವರ ಕಾರ್ಯಕ್ಕೆ ಮೆಚ್ಚಿ ಭಾರತ ಸರ್ಕಾರ ಭಾರತದ ಸರ್ವೊಚ್ಚ ತನಿಖಾ ಧಳ ಸಿ ಬಿ ಐ ನ ಅಡಿಶ್ನಲ್ ಡೈರೆಕ್ಟರ್ ಆಗಿ ಪದೋನ್ನತಿ ಗೊಳಿಸಲಾಗಿದೆ. ಜೈನ ಅಧಿಕಾರಿಗೆ ಸಿಕ್ಕ ಪ್ರಶಂಸೆ ಸಮೂದಾಯಕ್ಕೆ ಹೆಮ್ಮೆ ತಂದಿದೆ. ಹಾಗೂ ಬಾಗಲಕೋಟೆ ಜಿಲ್ಲೆಗೆ ಜಮಖಂಡಿ ತಾಲ್ಲೂಕಿನ ತೆರದಾಳ ಗ್ರಾಮದ ಅಶ್ವಿನಿ ಭುಜಬಲಿರವರು ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದಾರಲ್ಲದೆ, ರಾಯಭಾಗ ತಾಲ್ಲೂಕಿನ ಗುಂಡವಾಡ ಗ್ರಾಮದ ಭರತೇಶ್ ಪಾಟೀಲ್ ಸಹ ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಪಿ ಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಜ್ವಾಲಮಾಲ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಮೈಸೂರಿ ವರ್ಧಮಾನ್ ಜೈನ್ ವತಿಯಿಂದ ಮಾಸಿಕ ಸಭೆಯು ಜೂಮ್ ಮಿಟಿಂಗ್ ಮೂಲಕ ಏರ್ಪಡಿಸಲಾಗಿದ್ದು ಪ್ರಣಾಯಾಮ ತರಬೇತಿಯನ್ನು ಆಯೋಜಿಸಲಾಗಿತ್ತು.

ದಿನಾಂಕ 06-09-2020ರಂದು ಮಿಲನ್ನ ಮಾಸಿಕ ಸಭೆಯ ಪ್ರಯುಕ್ತ ಶ್ರೀ ಮತಿ ಜೋತಿರವರಿಂದ ಪ್ರಾಣಾಯಾಮ ತರಬೇತಿಯನ್ನು ಜೂಮ್ ಮಿಟಿಂಗ್ ಮೂಲಕ ಅಯೋಜಿಸಲಾಗಿದ್ದು ವಲಯ ಕಾರ್ಯಧ್ಯಕ್ಷರಾದ ವೀರ್ ಯುವರಾಜ್ ಭಂಡಾರಿ, ವಲಯ ನಿರ್ದೇಶಕರಾದ ವೀರ್ ವಿನೋದ್, ಮಿಲನ್ ಅಧ್ಯಕ್ಷರಾದ ವೀರ್ ಪ್ರಶಾಂತ್ ರವರು ಕಾರ್ಯದರ್ಶಿಗಳಾದ ಸುರಕ್ಷರವರು ಮಿಲನ್ ನ ಇತರೆ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರುಗಳು ಪ್ರಾಣಾಯಾಮದ ಲಾಭ ಪಡೆದರಲ್ಲದೆ ಅವರಲ್ಲಿದ ಪ್ರಶ್ನೆಗಳಿಗೂ ಸಹ ಉತ್ತರ ಪಡೆದುಕೊಂಡರು.

ಈ ತನಕ ವಾರದ ಸುದ್ದಿಗಳನ್ನು ವೀಕ್ಷಿಸಿದ ತಮ್ಮಗೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತ.

ಹೀಗೆ ಪ್ರತಿ ವಾರ ವೀಕ್ಷಿಸುತಿರಿ, ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್