ಪ್ರಕೃತಿಯ ಮಡಿಲಲ್ಲಿ ರಮಣೀಯ ಹಸಿರುಬನದಲ್ಲಿರುವ ಚಂದ್ರನಾಥನ ತಾಣ.
ವೀಕ್ಷಕರೆ ಇಲ್ಲಿದೆ ಶಿಶಿಲ ಚಂದ್ರಪುರ ಬಸದಿಯ ಸಮಗ್ರ ಚಿತ್ರಣ.
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಎಂಬ ಊರಿನ ಕಪಿಲ ನದಿ ದಂಡೆಯಲ್ಲಿರುವ ಪುರಾತನ ಜಿನ ಮಂದಿರ ಕಲ್ಲರಳಿ ಹೂವಾಗಿ ನಿಂತಿದೆ. ಇತಿಹಾಸದ ಕಾಲ ಗರ್ಭದಲ್ಲಿ ಜೈನರ ಪ್ರಮುಖ ಕೇಂದ್ರವಾಗಿದ್ದ ಶಿಶಿಲ ಒಂದೇಒಂದು ಜೈನರ ಕುಟುಂಬ ಇರದಿದ್ದರು ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಡಾ|| ವೀರೆಂದ್ರ ಹೆಗ್ಗಡೆಯವರ ಪ್ರೇರಣೆಯಿಂದ ಉತ್ಸಾಹಿ ಜೈನ ಶ್ರಾವಕರ ಶ್ರದ್ದ ಭಕ್ತಿಯ ದ್ಯೋತಕವಾಗಿ ಧರ್ಮೋತ್ತಾನ ಟ್ರಸ್ಟ್ ಇದರ ಮುಖಾಂತರವಾಗಿ ಸಂಪೂರ್ಣ ಶಿಲಾಮಯ ಬಸದಿಯಾಗಿ ಜೀರ್ಣೋದ್ದಾರಗೊಂಡು ಅಚ್ಚ ಹಸಿರಿನ ವನರಾಶಿಯಲ್ಲಿ ಕಂಗೊಳಿಸುತ್ತಿದೆ.
(ಅಲ್ಲಿಯ ಶ್ರಾವಕರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸಮೀಪದ ಶಿಶಿಲ ಚಂದ್ರಪುರದ ಚಂದ್ರನಾಥಸ್ವಾಮಿ ಬಸದಿ ಬಹಳ ಪುರಾತನವಾದ ಬಸದಿ ಶಿತಿಲಾವಸ್ಥೆಯಲ್ಲಿ ಇತ್ತು. ಪೂಜ್ಯ ಧರ್ಮಸ್ಥಳದ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಸಹಾಯ ಮತ್ತು ಬಸದಿಯನ್ನು ಅಭಿವೃದ್ಧಿ ಮಾಡಲು ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡಿದರು. ಹಾಗೂ ಕ್ಷೇತ್ರದ ಸುರೇಂದ್ರ ಕುಮಾರ್ ಮತ್ತು ಹರ್ಷೇಂದ್ರ ಕುಮಾರ್ ರವರು ಕೂಡ ನಮಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದರು. ಕಾರ್ಕಳದ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಊರು ಮತ್ತು ಪರ ಊರಿನ ಶ್ರಾವಕ ಶ್ರಾವಕಿಯರ ಸಹಕಾರದಿಂದ ಅಭಿವೃದ್ಧಿಮಾಡಲಾಗಿದೆ ಎಂದರು).
ಉಜಿರೆಯ ಖ್ಯಾತ ಇತಿಹಾಸ ಸಂಶೋಧಕ ಡಾ|| ಎಸ್.ಡಿ ಶೆಟ್ಟಿ ಹಾಗೂ ಅಲ್ಲಿನ ಸಂಚಾರಕರಾದ ಜಯ ಕೀರ್ತಿಯರವರ ಅಭಿಪ್ರಾಯದಂತೆ ಹೇಳುವುದಾದರೆ 1500 ವರ್ಷಗಳ ಹಿಂದೆ ಶಿಶಿಲದಲ್ಲಿ ಸಾಮಂತರಸು ಹೊಂಬುಜದ ರಾಜಧಾನಿಯಾಗಿ ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಇದು ಪ್ರಮುಖ ವ್ಯಾಪಾರಿ ಕೇಂದ್ರ ಕೂಡ ಹಾಗಿತ್ತು. ಇಲ್ಲಿ ಸುಮಾರು ಎಂಟು ಶಿಲಾಮಯ ಬಸದಿಗಳು ಇದ್ದ ಕುರುಹುಗಳು ಕೂಡ ಹಿಂದಿಗು ಕಾಣಸಿಗುತ್ತವೆ. ಅದಷ್ಟೇಯಲ್ಲಾ ಜೈನ ಅರಸರುಗಳ ಅರಮನೆ ಕೋಟೆಗಳ ಅವಶೇಷಗಳು ಕಂಡುಬರುತ್ತವೆ. ಹಿಂದೆ ಇದ್ದ ಎಂಟು ಬಸದಿಗಳಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯೊಂದನ್ನು ಪ್ರಥಮವಾಗಿ ಜೀರ್ಣೋದ್ದಾರಕಾಗಿ ಪ್ರಾರಂಭಿಸಲಾಗುತ್ತದೆ.
ಧ್ವಾರಗಳಲ್ಲಿನ ಅಷ್ಟಪ್ರಾತಿ ಆರ್ಯದ ಸುಂದರ ಕೆತ್ತನೆ ಜಾಲಂದರಗಳು ಕಂಬದ ಮೇಲಿನ ಕೆತ್ತನೆಗಳು ಮಂದಿರದ ಪ್ರತಿಯೊಂದು ಅಂಶವು ಭಕ್ತಿ ತಲ್ಲಿನತೆಯ ಭಾವವನ್ನು ತುಂಬುತ್ತದೆ. ಮುಂದೆ ನಿರ್ಮಾಣವಾಗುವ ದೇವಾಲಯಗಳನ್ನು ಸಹ ಹಿಂದಿ ಘತಕಾಲ ವೈಭವ ಮರುಕಳಿಸು ಸಂಕಲ್ಪವನ್ನು ಮಾಡಲಾಗಿದೆ. ಕ್ಷೇತ್ರವು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಆಶೀರ್ವಾದದಿಂದ ಶ್ರೀ ಯುತ ಕಾವಂದರ ಹೇಮಾವತಿ ಅಮ್ಮನವರ ಮತ್ತು ಹೆಗ್ಗಡೆ ಪರಿವಾರದವರಿಂದ ಸುತ್ತಲಿನ ಶ್ರಾವಕರ ಸಹಕಾರದಿಂದ ಈ ಸುಂದರ ಶಿಲಾಮಯ ಬಸದಿಯನ್ನು ಶ್ರಾವಕರಿಗೆ ಸಮರ್ಪಿಸಲಾಗಿದೆ. ಈಗ ಬಸದಿಯಲ್ಲಿ ನಿತ್ಯವೂ ಪೂಜೆ ನಡೆಯುತ್ತಿದ್ದು ಮೂಲ ಸ್ವಾಮಿ ಚಂದ್ರನಾಥ ಸ್ವಾಮಿಯಾದರೆ ಪದ್ಮಾವತಿ ತಾಯಿಯು ಸಕಲ ಅಬಿಷ್ಟಗಳನ್ನು ಈಡೇರಿಸುತ್ತಿದ್ದಾರೆ.
(ಅಲ್ಲಿಯ ಶ್ರಾವಕರು ಮಾತನಾಡಿ ಬಸದಿಯ ಪೂಜಾಕಾರ್ಯಕ್ರಮಗಳ ಬಗ್ಗೆ ವಿವರಿಸಿದರು).
ಹೀಗಾಗಲೆ ಈ ಕ್ಷೇತ್ರದ ಅಭಿವೃದ್ಧಿಗಾಗಿ ಎಂಟು ಬಸದಿಗಳ ಜೀರ್ಣೋದ್ದಾರವನ್ನು ಸಹ ಮಾಡಿ ಇದನ್ನೋಂದು ಧಾರ್ಮಿಕ ಕೇಂದ್ರವನ್ನಾಗಿ ಮಾಡುವ ಸಂಕಲ್ಪದಿಂದ ಸಮಿತಿ ಕೂಡ ರಚನೆಯಾಗಿದ್ದು, ಅಲ್ಲಿನ ಅಧ್ಯಕ್ಷರು ಶ್ರೀ ವಿಜಯ್ ಕುಮಾರ್ ರವರು ಹಾಗೂ ಸಮಿತಿಯ ಸದಸ್ಯರನ್ನು ಕೂಡ ಇಲ್ಲಿ ನೋಡಬಹುದು ಹೀಗಾಗಲೆ ಹಲವಾರು ಮಠಾದೀಶರನ್ನು ಹಾಗೂ ಪೂಜ್ಯ ಕಾವಂದರನ್ನು ಸಂಪರ್ಕಿಸಿ ತೀರ್ಮಾನಿಸಲಾಗಿದೆ. ಇದಕ್ಕೆ ಶ್ರಾವಕರುಗಳ ಧರ್ಮಾತ್ಮರುಗಳ ಸಹಕಾರ ಕೂಡ ಅಗತ್ಯವಿದೆ. ಖಂಡಿತ ಬನ್ನಿ ಒಮ್ಮೆ ವೀಕ್ಷಿಸಿ ಧರ್ಮದ ಲಾಭ ಪಡೆಯುವುದಲ್ಲದೆ. ಕಣ್ಣಗೆ ಹಬ್ಬವನ್ನು ಸಹ ಪಡೆದುಕೊಳ್ಳಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














