ಧರ್ಮದ ಕುಡಿ / ಎಪಿಸೋಡ್-05

ಇಂದಿನ ಧರ್ಮದ ಕುಡಿ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾ , ಇಂದು ನಮ್ಮೊಂದಿಗೆ ಕಡಬಾದ ಗ್ರೀಷ್ಮ ಹಾಗೂ ಬೆಂಗಳೂರಿನ  ಚಾರ್ವಿ ಇದ್ದಾಳೆ.  ಬನ್ನಿ ಮೊದಲು ಕಡಬಾದ ಗ್ರೀಷ್ಮಾ ಅವರ ಪರಿಚಯ ಮಾಡಿಕೊಳ್ಳೋಣ.

ಗ್ರೀಷ್ಮಾ ಜೈನ್ ಇವರು ಕಡಬಾ ತಾಲ್ಲೂಕಿನ ನೋಜಿಬಾಂತಿಲಾ ಶ್ರೀ ಜಯಕುಮಾರ್ ಹಾಗೂ ಶ್ರೀಮತಿ ಸುರಭಿ ದಂಪತಿಗಳ ಪುತ್ರಿ. ಇವರು ಹಳ್ಳಿಯಲ್ಲಿ ಬೆಳೆಯುತ್ತಿರುವ ಪ್ರತಿಭೆ.  ಬಾಲ್ಯದಿಂದಲೇ ತುಂಬಾ ಮೃದು ಸ್ವಭಾವದ ಹುಡುಗಿ. ಪ್ರಸ್ತುತ 6 ನೇ ತರಗತಿಯಲ್ಲಿ ಓದುತ್ತಿರುವ ಜ್ನಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬಾ ಇಲ್ಲಿ ಮುಂದುವರೆಸಿದ್ದಾಳೆ. ತನ್ನ ವಿದ್ಯಾಭ್ಯಸದ ಪ್ರಾಥಮಿಕ ಹಂತದಲ್ಲಿ ಪಠ್ಯ ಹಾಗೂ ಪಠ್ಯೇತರ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿ ಇದ್ದು ಬಿಡುವಿನ ಸಮಯದಲ್ಲಿ ಹಾಡು ಹೇಳುವುದು, ಸೈಕ್ಲಿಂಗ್, ನ್ಯೂಸ್ ಪೇಪರ್ ಓದುವುದು ಇವಳ ಅಭ್ಯಾಸ . ಯೋಗ ಮಾಡುವುದು ಎಂದರೆ ಇವಳಿಗೆ ಅಚ್ಚುಮೆಚ್ಚು. ವಿನ್ ನ್ಯಾಷನಲ್ ಸ್ಪೆಲ್ ಎಗ್ಸಾಂ ನಲ್ಲಿ ಸ್ಕೂಲ್ ಲೆವೆಲ್ ನಲ್ಲಿ ಗೋಲ್ಡ್ ಮೆಡಲನ್ನು ಹಾಗೂ ಇಂಟರ್ ಸ್ಕೂಲ್ ಲೆವೆಲ್ ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿರುತ್ತಾಳೆ. ಲಾಕ್ ಡೌನ್ ಸಂದರ್ಭದಲ್ಲಿ ಜಿನಭಕ್ತಿಗೀತೆ, ಮಹಾವೀರ ಅಷ್ಟಕ, ಸರಸ್ವತಿ ಸ್ತೋತ್ರ, ಅಷ್ಟಾಂಬರ ಸ್ತೋತ್ರವನ್ನು ಕಲಿಯುತ್ತಾ ಸಮಯದ ಸದುಪಯೋಗದಲ್ಲಿ ತಲ್ಲೀನಳಾಗಿದ್ದಾಳೆ. ಜಿನ ಗಾನಸುಧಾಗಣದಲ್ಲಿ ಜಿನಭಕ್ತಿಗೀತೆಗಳನ್ನು ಹಾಡುತ್ತಾ  ಇಲ್ಲರ ಪ್ರೋತ್ಸಾಹವನ್ನು ಪಡೆದಿರುತ್ತಾಳೆ. ಮುಂದೆ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿಯನ್ನು ಹೊಂದಿದ್ದಾಳೆ.  ವೀಕ್ಷಕರೇ ಇವಳಿಗೆ ನಮ್ಮ ಹಾಗೂ ನಿಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ.

ನಾವು ಅವಳನ್ನು ಮಾತನಾಡಿಸಿದಾಗ ಅವಳು ಮಾಡುವ ದಿನನಿತ್ಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಯೋಗ ಹಾಗೂ ಸಂಗೀತ ಅಭ್ಯಾಸ ನನಗೆ ದಿನನಿತ್ಯದ ಅಭ್ಯಾಸ ಹಾಗೂ ಇದಕ್ಕೆಲ್ಲಾ ಸ್ಪೂರ್ತಿ ನನಗೆ ಲಾಕ್ ಡೌನ್ ಸಂದರ್ಭದಲ್ಲಿ ನನಗೆ ಭಜನೆಗಳನ್ನು ಕಲಿಯಲು ಜ್ವಾಲಾಮಾಲಾ ಡಾಟ್ ನ್ಯೂಸ್ ಚಾನಲ್ ಕಾರಣ ಎಂದು ತಿಳಿಸಿದಳು ಹಾಗೂ ನಾವು ಕೇಳಿದ ಹಲವು ಬಗೆಯ ಸ್ತೋತ್ರಗಳನ್ನು ಹಾಗೂ ಭಜನೆಗಳನ್ನು ತುಂಬಾ ಸಂತೋಷದಿಂದ ಹೇಳಿದಳು.  

ಈಗ ಜಾಹಿರಾತಿನ ಸಮಯ :

ಬಾಹುಬಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಗೊಮ್ಮಟ ನಗರ, ಶ್ರವಣಬೆಳಗೊಳ. ವಿದ್ಯಾಭ್ಯಾಸಕ್ಕೆ ಅನುಕೂಲಕರವಾದ ಪ್ರಶಾಂತವಾದ ವಾತಾವರಣ  ಪ್ರತಿಭಾವಂತ ವಿದ್ಯಾರ್ಥಿಗಳಿಗೂ  ಒಂದು ಸುವರ್ಣಾವಕಾಶ . 2020-

21 ನೇ ಸಾಲಿಗೆ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಮ್ಯಾನೇಜ್ ಮೆಂಟ್ ಕೋಟಾ ಅಡಿಯಲ್ಲಿ ದಾಖಲಾತಿ ಪ್ರಾರಂಭವಾಗಿದೆ. ನಮ್ಮಲ್ಲಿರುವ ಕೋರ್ಸ್ ಗಳ ವಿವರ : ಬಿ.ಇ ನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ , ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ , ಎಮ್ ಟೆಕ್ ನಲ್ಲಿ ಎಮ್ ಟೆಕ್ ಇನ್ ಇಂಜಿನಿಯರಿಂಗ್ , ಮ್ಯಾನೇಜ್ ಮೆಂಟ್ (ಎಮ್ ಇ ಎಮ್ ) ಸಿಇಟಿ ಕೋಡ್ – ಟಿ908 ಕೋರ್ಸ್ ಗಳಿಗೆ ಪ್ರವೇಶಕ್ಕೆ ದಾಖಲಾತಿ ಪ್ರಾರಂಭವಾಗಿದೆ. ಪ್ರವೇಶಾತಿಗಾಗಿ ಸಂಪರ್ಕಿಸಿ : ಬಾಹುಬಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಗೊಮ್ಮಟ ನಗರ, ಶ್ರವಣಬೆಳಗೊಳ. ಫೋನ್ ನಂಬರ್ 9448705707.

ಈಗ ಚಾರ್ವಿ ನಮ್ಮೊಂದಿಗಿದ್ದಾರೆ. ಚಾರ್ವಿ ಬಗ್ಗೆ ಒಂದೆರೆಡು ಮಾತು.

ಚಾರ್ವಿ ಇವರು ಬೆಂಗಳೂರಿನ ಬಾಹುಬಲಿ ಪುರೋಹಿತ್ ಹಾಗೂ ಸುಧಾ ಬಾಹುಬಲಿ ಪುರೋಹಿತ್ ದಂಪತಿ ಇವರ ಇನ್ನೂ 6 ವರ್ಷದ ಪುಟ್ಟ ಹುಡುಗಿ. ಮಲ್ಲೇಶ್ವರಂ ಶಾಲೆಯಲ್ಲಿ ಯು. ಕೆ. ಜಿ ಓದುತ್ತಿರುವ  ಈಕೆಗೆ ಡ್ರಾಯಿಂಗ್ ನಲ್ಲಿ ಆಸಕ್ತಿ ಇದೆ. ಜಿನ ಸಮ್ಮಿಲನದಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ. ಆಟ ಆಡಿಕೊಂಡೆ ಧರ್ಮದ ಪಾಠವನ್ನು ಕಲಿತಿದ್ದಾಳೆ.  ಇವಳಿಗೆ ಡ್ಯಾನ್ಸ್ ಎಂದರೆ ತುಂಬಾನೆ ಇಷ್ಟ. ಧಾರ್ಮಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ ಭಾಗವಹಿಸಿದ್ದಾಳೆ. ಇವಳಿಗೆ ಮಂತ್ರ ಕಲಿಯವ ಆಸಕ್ತಿ ಈಗ ಮೊಳೆಯುತ್ತದೆ. ಅವಳಿಗೆ ಪ್ರೋತ್ಸಾಹಿಸಿದರೆ ಮುಂದೆ ಇನ್ನಷ್ಟು ಧಾರ್ಮಿಕ ವಿಚಾರಗಳಲ್ಲಿ ಪಾಲ್ಗೊಳ್ಳುತ್ತಾಳೆ.  ನಾವು ಚಾರ್ವಿಯನ್ನು ಮಾತನಾಡಿಸಿದಾಗ  ಅವಳು ಲವಲವಿಕೆಯಿಂದ  ಜಿನಭಕ್ತಿಗೀತೆಯನ್ನು ಹಾಡಿದಳು . ಕೆಲವು ಪದಗಳು ಸ್ಪಷ್ಟವಾಗಿ  ಉಚ್ಚಾರಣೆ ಆಗುತ್ತಿಲ್ಲ ಎಂದು ನಿರೂಪಕಿಯೇ ಕೆಲವೊಂದು ಹಿತವಚನ ಹಾಗೂ ಅವರೇ ಸ್ವತಃ ಶ್ಲೋಕವನ್ನು ಪಠಿಸಿ ಹೇಳಿಕೊಟ್ಟರು. ನಾವು ಚಾರ್ವಿಯನ್ನು ನೋಡಿ ಮಾತನಾಡಿಸಿದ್ದು ತುಂಬಾ ಖುಷಿಯಾಯಿತು.

ವೀಕ್ಷಕರೇ ಮೊದಲೇ ತಿಳಿಸಿದ ಹಾಗೇ ಧಾರ್ಮಿಕ  ಸಂಸ್ಕಾರದ ಅವಶ್ಯಕತೆಯನ್ನು  ಆಯ್ದ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಹೇಳತ್ತಾ  ಪ್ರತಿ ಭಾನುವಾರ ಬೆಳಗ್ಗೆ 10.30 ಕ್ಕೆ ಸರಿಯಾಗಿ ವೀಕ್ಷಿಸಿ ಜ್ವಾಲಾಮಾಲಾ ಡಾಟ್ ನ್ಯೂಸ್.