ವಾರದ ಜೈನ ಸುದ್ದಿಗಳು-06 / 06-09-2020

ಜೈ ಜಿನೇಂದ್ರ ವೀಕ್ಷಕರೆ, ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ. ವಿವಿಧೆಡೆಗಳಲ್ಲಿನ ಜೈನ ಸಂಸ್ಕೃತಿಯನ್ನು ಬಿಂಬಿಸುವ ಸುದ್ದಿ ಸಂಚಯದೊಂದಿಗೆ ಮತ್ತೆ ನಿಮ್ಮೊಂದಿಗಿದ್ದೆನೆ.

ಮುಖ್ಯಾಂಶಗಳು:-

ರಾಜ್ಯದ ವಿವಿಧೆಡೆಗಳಲ್ಲಿ ಅನಂತನೋಂಪಿ ಆಚರಣೆ ವಿವರ.

ಗಣ್ಯಾತಿಗಣ್ಯರಿಂದಲೂ ಕ್ಷಮಾವಳಿ ಪರ್ವದ ಆಚರಣೆ.

ಬೆಳಗಾವಿ ನಿಶ್ಚಯಗಿರಿಯಲ್ಲಿ ಮುನಿಮಹಾರಾಜರ ಉಪವಾಸ ಪಾರಣ ಕಾರ್ಯಕ್ರಮ.

ಪಿ.ಯು.ಸಿ. ಇತಿಹಾಸ ಪಠ್ಯದಲ್ಲಿನ ತಪ್ಪು ಮಾಹಿತಿ ತಿದ್ದುಪಡಿಗೆ ಮೂಡುಬಿದ್ರೆ ಶ್ರೀಗಳ ಆಗ್ರಹ.

ಜೈನ ಮಠಗಳಿಗೇಕಿಲ್ಲ ಅನುದಾನ ಧರ್ಮದ ಚಿಂತಕರ ಪ್ರಶ್ನೆ.

ಸೆಂಟ್ರಲ್ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಪಥ ಪುಸ್ತಕ ಬಿಡುಗಡೆ.

ಸುದ್ದಿಗಳ ವಿವರ:-

ರಾಜ್ಯದ ಹಲವೆಡೆ ಅನಂತನೋಂಪಿ ವ್ರತವನ್ನು ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಆಯ್ದ ಕೆಲವೊಂದೆಡೆಯ ಆರಾಧನೆಯ ಹಾಗೂ ದಶಲಕ್ಷಣ ಪರ್ವಾಚರಣೆಯ ಸುದ್ದಿಗಳನ್ನು ನಿಮಗಾಗಿ ಒಟ್ಟುಗೂಡಿಸಿತಂದಿದೇವೆ ವೀಕ್ಷಿಸಿ.

ಭಾದ್ರಪದ ಶುಕ್ಲ ಪಕ್ಷದ ಚತುರ್ದರ್ಶಿಯನ್ನು ಅನಂತ ಚತುರ್ದರ್ಶಿ ಎಂದು ಕರೆಯಲಾಗುತ್ತದೆ. ಅಂದು ಶ್ರೀ ಭಗವಾನ್ ಅನಂತನಾಥ ಸ್ವಾಮಿ ತೀರ್ಥಂಕರರ ಆರಾಧನೆ ನಡೆಸಲಾಗುತ್ತದೆ. ಆತ್ಮನ ಉನ್ನತ ಗುಣಗಳನ್ನು ನಮ್ಮದಾಗಿಸಲು ಮಾಡುವ ಪೂಜಾರಾಧನೆಯನ್ನು ನೋಂಪಿಯೆಂದು ಕರೆದಿದ್ದು. ಆ ದಿನ ಅನಂತನೋಂಪಿಯನ್ನು ಆಚರಿಸಲಾಗುತ್ತದೆ. ಇಂತಹ ಆಚರಣೆಯನ್ನು ಕರೋನ ಕಾರಣದಿಂದಾಗಿ ಮನೆಯಲ್ಲಿ ಆಚರಿಸುವಂತಾಗಿದ್ದು ಈ ಬಾರಿ ವಿಶೇಷವಾಗಿ ಜೆ.ಸಿ. ಹೊರನಾಡು ರವರ  ಹೆಸರಿಗೆ ತಕ್ಕಂತೆ ಇರುವ ದೇವರ ಮನೆಯಲ್ಲಿ ದಶಲಕ್ಷಣ ಪರ್ವದ ಆರಾಧನೆಗಳು ನಡೆದು ಅಭಿಷೇಕ ಪೂಜಾ ಕಾರ್ಯಗಳೊಂದಿಗೆ ರಾಜ್ಯದ ನಾನಾ ಭಾಗದಿಂದ 200ಕ್ಕೂ ಅಧಿಕ ಶ್ರಾವಕ ಶ್ರಾವಕಿಯರು ಇದರಲ್ಲಿ ಭಾಗವಹಿಸಿದ್ದರು. ಫೇಸ್ ಬುಕ್ ಲೈವ್ ಹಾಗೂ ನಾಗಶ್ರೀ ಮುಪ್ಪಾನೆ ರವರ ಜೂಮ್ ಆ್ಯಫ್ ಮೂಲಕ ಈ ಪೂಜೆಗಳಲ್ಲಿ ಪಾಲ್ಗೊಂಡಿದ್ದಲ್ಲದೆ ಹಲವರು ಅದನ್ನು ವೀಕ್ಷಿಸಿದರು.

ಬಂದುಗಳೇ ನಮ್ಮ ಧರ್ಮದಲ್ಲಿ ಆಚರಿಸುವ ಕ್ಷಮಾವಳಿ ಪರ್ವವು ನಮ್ಮ ಪರಂಪರೆಯ ದ್ಯೂತಕವಾಗಿದ್ದು. ಇದನ್ನು ನಮ್ಮ ದೇಶದಲ್ಲಷ್ಟೇ ಅಲ್ಲ ವಿಶ್ವದಲ್ಲಿ ಮಾನ್ಯತೆ ಪಡೆದಿದ್ದು ಸರ್ವರೂ ಹೆಮ್ಮೆ ಇಂದ ಆಚರಿಸುತ್ತಾರೆ.

ಪ್ರಧಾನ ಮಂತ್ರಿ ಮೋದಿಯವರು ಪ್ರತಿ ವರ್ಷದಂತೆ  ಈ ವರ್ಷವು ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಮಿಚಾಮಿ ದುಕುಡಂ ಎಂದು ಟ್ವಟ್ ಮಾಡುತ್ತಾ ಜೈನ ಬಾಂಧವರಿಗೆ ಕ್ಷಮಾವಳಿ ಪರ್ವದ ಶುಭಾಶಯವನ್ನು ಹೇಳಿದ್ದಾರೆ. ಅಷ್ಟೇಯಲ್ಲಾ ಅಮೇರಿಕ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಜೋ ಬೈಡನ್ ರಿಂದ ಕ್ಷಮಾವಳಿ ಟ್ವಿಟ್ ಮಾಡಿದ್ದು ಸಮಸ್ತ ಜೈನ ಬಾಂಧವರಲ್ಲಿ ಹಾಗೂ ಎಲ್ಲರಲ್ಲಿ ಕ್ಷಮಾ ಭಾವವನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲಿನ ಉದ್ಯೋಗ ವ್ಯಾಪಾರ ವೃತಿಗಳಲ್ಲಿ ಭಾರತೀಯರ ಜೈನರ ಪ್ರಭಾವದ ಅರಿವು ಇದರಿಂದ ನಮಗೆ ದೊರೆಯುತ್ತಿದೆ.

ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಶ್ರೀ ಪಾರ್ಶ್ವನಾಥ ಜೈನ ತೀರ್ಥ ಕ್ಷೇತ್ರ ನಿಶ್ಚಯಗಿರಿಯಲ್ಲಿ ಆಚಾರ್ಯ ಶ್ರೀ 108 ನಿಶ್ಚಯ ಸಾಗರ ಮುನಿಮಹಾರಾಜರ ಉಪವಾಸ ಪಾರಣ ಕಾರ್ಯಕ್ರಮ ನಾಂದಣಿ ಹಾಗೂ ವರೂರು ಶ್ರೀಗಳ ಸಾನಿಧ್ಯದಲ್ಲಿ ನಡೆಯಿತು.

ಕುಂತು ಗಿರಿ ತೀರ್ಥ ಪ್ರಣಿತ ಗಣಾಧಿಪತಿ ಗಣದರಾಚಾರ್ಯ 108 ಶ್ರೀ ಕುಂತು ಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ನಿಶ್ಚಯಗಿರಿ ಪ್ರಣೀತ ದೀರ್ಘೋಪವಾಸಿ ತಪಸ್ವಿ ಸಾಮ್ರಾಟ ಆಚಾರ್ಯ ಶ್ರೀ 108 ನಿಶ್ಚಯ ಸಾಗರ ಮುನಿಮಹಾರಾಜರು, ದಿನಾಂಕ 11-07-2020ರಿಂದ 30-07-2020ರವರೆಗೆ ಶ್ರೀ ಅಷ್ಟ ನಂದೀಶ್ವರ ದೀಪದಲ್ಲಿಯ 52 ಜಿನ ಚೈತ್ಯಾಲಯಗಳ ಸಂಬಂಧಿ 52 ಉಪವಾಸ ಪ್ರಾರಂಭಮಾಡಿ ನೆನ್ನೆ ಸೋಮವಾರ 31-09-2020ರಂದು 52ನೇಯ ಉಪವಾಸ ಸಮಾಪ್ತಿಯಾಯಿತು. ಈ ಉಪವಾಸ ಪಾರಣೆ 1-09-2020ರಂದು ಜಿನ ಸೇನಾ ಭಟ್ಟಾರಕ ಸ್ವಾಮೀಜಿ ನಾಂದಿಣಿ ಮಠ ವೃಷಭ ಸೇನಾ ಭಟ್ಟಾರಕರು ವರೂರು ಸುಧರ್ಮ ಗುಪ್ತಿ ಕ್ಷುಲಕರು ಮತ್ತು ಆಹಾರ ದಾನದ ಸವಾಲುದಾರಕರಿಂದ ಮುನಿಗಳು ಆಹಾರ ಸ್ವೀಕರಿಸಿ ವ್ರತ ಸಮಾಪ್ತಿಗೊಳಿಸಿದರು. ಈ ಕಾರ್ಯಕ್ರಮಕ್ಕೆ ಸುತ್ತಲಿನ ಊರುಗಳಿಂದ ಬಂದಂತಹ ಶ್ರಾವಕ ಶ್ರಾವಕಿಯರು ಪೂಜೆ ತಪೋಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅದರಂತೆಯೇ ಇಲ್ಲಿ ನೋಡಿ ಈ ಮಹಾ ತಪಸ್ವಿ ಈ ತನಕ ಮಾಡಿದ ಉಪವಾಸ 9800 ತಿಂಗಳಲ್ಲಿ ಒಂದು ಸಲ ಆಹಾರ ಮಧ್ಯೆ ನೀರು ಸೇವನೆ ಸಹ ಇಲ್ಲಾ. ಪರಮ ಪೂಜ್ಯ 108 ಮಹಾಸಾಗರ ಮಹಾರಾಜರು ಸಧ್ಯ 5-07-2020ರಿಂದ ಶ್ರೀ ಕ್ಷೇತ್ರ ಕಸಮಳಿಗೆಯಲ್ಲಿ ಚಾತುರ್ಮಮಾಸ ವರ್ಷಾಯೋಗ ಮಾಡುತ್ತಿದ್ದಾರೆ. ಇಲ್ಲಿಗೆ ಬಂದ ನಂತರ ಅಂದರೆ 28 ದಿನಗಳ ನಂತರ ಆಹಾರವಾಗಿದ್ದು ಮುಂದಿನ ಆಹಾರ 35 ದಿವಸಗಳ ನಂತರ ಇವರ ಗುರುಗಳು ಪರಮ ಪೂಜ್ಯ 108 ಜಯ ಸಾಗರ ಮಹಾರಾಜರು.

ಜಾಹೀರಾತು.

ಪಿ ಯು ಸಿ ಇತಿಹಾಸ ಪಠ್ಯದಲ್ಲಿ ಜೈನ ಧರ್ಮ ಬಗೆಗಿನ ತಪ್ಪು ಮಾಹಿತಿಯನ್ನು ತಿದ್ದುಪಡಿಗೊಸ್ಕರ ಮಾನ್ಯ ಶಿಕ್ಷಣ ಸಚಿವರಲ್ಲಿ ಮೂಡುಬಿದ್ರೆ ಶ್ರೀಗಳು ಆಗ್ರಹಿಸಿದ್ದಾರೆ.

ಪಠ್ಯದಲ್ಲಿ ಆದ ಪ್ರಮಾದವೇನು ಪಿ ಯು ಸಿ ಇತಿಹಾಸ ಪಠ್ಯದಲ್ಲಿ ಉಲ್ಲೇಕಿತವಾಗಿರುವ  ಜೈನರ ಬಗೆಗಿನ ಮಾಹಿತಿ ತಪ್ಪಾಗಿದ್ದು ಮೂಡುಬಿದ್ರೆ ಶ್ರೀಗಳಾದ ಸ್ವಸ್ತಿಶ್ರೀ ಚಾರು ಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ರವರಲ್ಲಿ ನಮ್ಮ ದೇಶದ ಪ್ರಾಚೀನ ಧರ್ಮ ಜೈನ ಧರ್ಮ ಸಮಿತಿ ಎಡವಟ್ಟಿನಿಂದ ತಪ್ಪು ಮಾಹಿತಿಗಳು ವಿದ್ಯಾರ್ಥಿಗಳಿಗೆ ರವಾನೆಯಾಗುತ್ತಿದು ಪಠ್ಯ ಪುಸ್ತಕದಲಿರುವ ತಪ್ಪು ಮಾಹಿತಿಗಳನ್ನು ಸರಿಪಡಿಸಲೇ ಬೇಕು ಎಂಬ ಆಗ್ರಹವನ್ನು ರಾಜ್ಯಾದ್ಯಂತ ವಿವಿಧ ಜೈನ  ಸಂಘಟನೆಗಳು ಮಾಡಿವೆ. ಮಠಾಧಿಪತಿಗಳಾದ ನಮಗೆಲ್ಲ ಸಮಾಜಕ್ಕೆ ಉತ್ತರಿಸ ಬೇಕಾದರಿಂದ ಸಜ್ಜನ ರಾಜಕಾರಣಿಯಾದ ತಾವು ಸೂಕ್ತ ನಿರ್ಧಾರ ಕೈಗೊಂಡು ಸಮಾಜದ ಮನವಿಯನ್ನು ಪುರಸ್ಕರಿಸಿ ತಪ್ಪು ಮಾಹಿತಿಯುಳ್ಳ ಪಿ ಯು ಸಿ ಕನ್ನಡ ಪುಸ್ತಕ ತಡೆಹಿಡಿಯ ಬೇಕು ಎಂದು ಆಗ್ರಹಿಸಿದ್ದಾರೆ.

ಜೈನರೆ ಜಾಗೃತರಾಗಿ ಬಹುತೇಕ ಮಠಗಳಿಗೆ ನೀಡುವ ಅನುದಾನ ಜೈನ ಮಠಗಳಿಗೆ ಹೇಕ್ಕಿಲ್ಲಾ ಎನ್ನುವ ಪ್ರಶ್ನೆ ಮೊಳಗಿದೆ. ಈ ಬಗ್ಗೆ ಒಂದು ಚರ್ಚೆ.

ಒಂದು ಪತ್ರಿಕಾ ಪ್ರಕಟಣೆಯಲ್ಲಿ 39 ಮಠಗಳಿಗೆ ತಲಾ ಒಂದು ಕೋಟಿ ರೂ ಅನುದಾನ ಬಿಡುಗಡೆಗೆ ಪ್ರಸ್ತಾಪ ಕಳುಹಿಸಿದೇನೆ ಎನ್ನುವ ಹೇಳಿಕೆ ಮಾನ್ಯ ಮುಜರಾಯಿ ಸಚಿವರಿಂದ ನೀಡಲಾಗಿದ್ದು, ಆ ಪಟ್ಟಿಯಲ್ಲಿ ಜೈನ ಮಠಗಳು ಗೋಚರಿಸದಿರುವ ಕಾರಣ ಮಾನ್ಯ ಮುಜರಾಯಿ ಸಚಿವರೆ ಜೈನ ಮಠಗಳಿಗೆಕಿಲ್ಲಾ ಅನುದಾನ. ಜೈನ ಮಠಗಳು ತಮಗೆ ಕಾಣಲಿಲ್ಲವೆ ಜೈನರು ಓಟ್ ಬ್ಯಾಂಕಿಗೆ ಒಳಪಡುವುದ್ದಿಲ್ಲಾ ಎಂಬ ತಾತ್ಸಾರವೆ. ಆದರೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಬೇಕಾದ್ದು ಸರ್ಕಾರದ ಕರ್ತವ್ಯವಾಗಿದೆ. ಈ ದೇಶದ ಮಣ್ಣಿನ ಸಂಸ್ಕೃತಿಗೆ ಆಚಾರ ವಿಚಾರಕ್ಕೆ ದಾನ ಪರಂಪರೆಗೆ ಜೈನ ಸಮುದಾಯದ ಕೊಡುಗೆ ಆಪಾರವಾಗಿದೆ. ಸರಕಾರಕ್ಕೆ ತೆರಿಗೆ ಪಾವತಿಸುವದರಲ್ಲಿಯೂ ಜೈನ ಸಮುದಾಯವೇ ಮುಂಚೂಣಿಯಲ್ಲಿದೆ. ಜೈನ ಸಮುದಾಯಕ್ಕೆ ಒಂದೇ ಒಂದು ಮಂತ್ರಿ ಸ್ಥಾನವು ದೊರೆತ್ತಿಲ್ಲಾ , ಕಳೆದ ಬಜೆಟಿನಲ್ಲು ಜೈನರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹೀದಿಗಾ ಒಂದೇಒಂದು ಜೈನ ಮಠ ಕಾಣಿಸದಿರುವುದು ವಿಪರ್ಯಾಸವೇ ಹಾಗಿದೆ. ಜೈನ ಮಠಗಳಿಗೆ ಒಮ್ಮೆ ಭೇಟಿ ನೀಡ ಬೇಕೆಂದು ಮನವಿ ಮಾಡಿಕೊಳ್ಳುತ್ತಿದೇನೆ ಎಂದು ನಿರಂಜನ್ ಕುದ್ಯಾಡಿರವರು ಆಗ್ರಹಿಸಿದ್ದಾರೆ.

ಇಂದಿನ ಪ್ರಕಟಣೆಯನ್ನೊಮ್ಮೆ ನೋಡಿ ಬರೋಣ.

ಬಾಹುಬಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಗೊಮ್ಮಟನಗರ, ಶ್ರವಣಬೆಳಗೊಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾದ ಪ್ರಶಾಂತವಾದ ವಾತಾವರಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ, ವಿಧ್ಯಾರ್ಥಿಯ ಸರ್ವಾಂಗಿಣೀಯ ಅಭಿವೃದ್ಧಿಗಾಗಿ ಶ್ರಮಿಸುವ ನುರಿತ ಅಧ್ಯಾಪಕ ವೃಂದ. 2020-21 ನೇ ಸಾಲಿನ ಇಂಜಿನಿಯರ್ ಕೋರ್ಸ್ ಗಳಿಗೆ ದಾಖಲಾತಿ ಪ್ರಾರಂಭವಾಗಿದೆ.

ನಮ್ಮಲ್ಲಿರುವ ಕೋರ್ಸ್ ಗಳ ವಿವರ : ಬಿ ಇ ಕೋರ್ಸ್ ಗಳ ಪ್ರವೇಶಕ್ಕೆ.

ಮೆಕಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್.

ಕೋರ್ಸ್ ಗಳ ಪ್ರವೇಶಕ್ಕೆ ದಾಖಲಾತಿ ಪ್ರಾರಂಭವಾಗಿದೆ.

ಪ್ರವೇಶಾತಿಗಾಗಿ ಸಂಪರ್ಕಿಸಿ. ಪ್ರಾಂಶುಪಾಲರು ಬಾಹುಬಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಗೊಮ್ಮಟನಗರ, ಶ್ರವಣಬೆಳಗೊಳ.

ಸೆಂಟ್ರಲ್ ಜೈನ್ ಮಿಲನ್ ನ ತನ್ನ ನಾನೂರನೇ ಮಾಸಿಕ ಸಭೆಯ ವಿಶೇಷವಾಗಿ ಪಥ ಪುಸ್ತಕಗಳ ಬಿಡುಗಡೆ ಅನ್ ಲೈನ್ ಮಿಟಿಂಗ್ ನಲ್ಲಿ ಡಿ ಸುರೇಂದ್ರ ಕುಮಾರ್ ರವರ ಮೂಲಕ ಆಯಿತು.

ಸೆಂಟ್ರಲ್ ಜೈನ್ ಮಿಲನ್ ವತಿಯಿಂದ  ನಾನೂರನೇ ಮಾಸಿಕ ಸಭೆ 3-8-2020ರಂದು ನಡೆದು ಇದರ ವಿಶೇಷವಾಗಿ ಎ.ಆರ್ ನಿರ್ಮಲ್ ಕುಮಾರ್, ಡಾ|| ಪದ್ಮಿನಿ ನಾಗರಾಜ್ ಹಾಗೂ ಸುಜನ್ ಪದ್ಮಸೇನ್ ಇವರುಗಳ ಸಹಯೋಗದ ಪಥ ಪುಸ್ತಕವನ್ನು ಶ್ರೀ ಡಿ ಸುರೇಂದ್ರ ಕುಮಾರ್ ರವರಿಂದ ಬಿಡುಗಡೆಗೊಳಿಸಲಾಯಿತ್ತು. ಪ್ರತಿ ಮಿಲನ್ ಗು ಪುಸ್ತಕವನ್ನು ತಲುಪಿಸಲಾಗುವುದು ಎಂದು ಜೈನ್ ಮಿಲನ್ ವತಿಯಿಂದ ತಿಳಿಸಲಾಗಿದೆ.

ಈ ವಾರದ ಜೈನ ಸುದ್ದಿಗಳನ್ನು ವೀಕ್ಷಿಸಿದ ತಮ್ಮಗೆಲ್ಲರಿಗು ಧನ್ಯವಾದಗಳು

ಇಂದಿನ ಸುದ್ದಿವಿವರವನ್ನು ವೀಕ್ಷಿಸಿದ ತಮ್ಮಗೆಲ್ಲರಿಗು ಧನ್ಯವಾದಗಳನ್ನು ತಿಳಿಸುತ್ತ.

ಹೀಗೆ ವೀಕ್ಷಿಸುತ್ತಿರಿ ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್