ಜೈ ಜಿನೇಂದ್ರ ವೀಕ್ಷಕರೆ, ದಶಲಕ್ಷಣದ ಮಹಾ ಪರ್ವದ ಶುಭಾಷಯಗಳೊಂದಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಬನ್ನಿ ಮುಖ್ಯಾಂಶಗಳೇಡೆಗೆ ಒಂದು ನೋಟ.
ಮುಖ್ಯಾಂಶಗಳು:-
ರಾಜ್ಯದೆಲ್ಲೆಡೆ ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿ ಮಹಾರಾಜರ ಪುಣ್ಯತಿಥಿ ಆಚರಣೆ.
ಹುಬ್ಬಳ್ಳಿಯಲ್ಲಿ ಆಚಾರ್ಯ ಶ್ರೀ ಶಾಂತಿಸಾಗರರ ಅಂಚೆಚೀಟಿ ಬಿಡುಗಡೆ ಆಗ್ರಹ.
ಕೊರೊನ ಕಾರಣದಿಂದಾಗಿ ಹಲವೆಡೆ ದಶಲಕ್ಷಣಪರ್ವದ ಆಚರಣೆ ರದ್ದು
ಮುನಿಗಳ ಚಾತುರ್ಮಾಸಾಚರಣೆಯ ಸುದ್ದಿ ವಿವರ.
ಇತಿಹಾಸ ಸಂಶೋದರರಿಂದ ಖಾನಾಪುರ ಬಸದಿಯ ಹಳೆ ಇತಿಹಾಸಮೂರ್ತಿಯ ಬಗ್ಗೆ ಸಂಶೋಧನೆ.
ಮಕ್ಕಳ ಧಾರ್ಮಿಕ ಶಿಕ್ಷಣ ಪಾಠಕ್ಕೆ ಮೂಡಬಿದ್ರೆ ಶ್ರೀಗಳಿಂದ ಚಾಲನೆ
ಸುದ್ದಿಗಳ ವಿವರ:-
ರಾಜ್ಯದೆಲ್ಲಡೆ ಪ್ರಥಮಾಚರ್ಯ ಚಾರಿತ್ರ್ಯ ಚಕ್ರವರ್ತಿ ಶ್ರೀ ಶಾಂತಿ ಸಾಗರ ಮುನಿ ಮಹಾರಾಜರ ಪುಣ್ಯತಿಥಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವಿಷಮ ಪರಿಸ್ಥಿತಿಯಲ್ಲೂ ಕೂಡ ಆಚರಿಸಲಾಗುತ್ತಿದೆ.
ಚಾರಿತ್ರ್ಯ ಚಕ್ರವರ್ತಿ ಪ್ರಥಮಾಚರ್ಯ ಶ್ರೀ 108 ಶಾಂತಿ ಸಾಗರ ಮಹಾರಾಜರ 65ನೇ ಪುಣ್ಯತಿಥಿ ಪ್ರಯುಕ್ತ ಶ್ರೀ ಸ್ವಾದಿ ಮಠದಲ್ಲಿ ಮಹಾರಾಜರ ಚರಣ ಪಾದುಕ್ಕೆಗಳಿಗೆ ಅಭಿಷೇಕ ಅಷ್ಟ ವಿಧಾರ್ಚನೆ ಪೂಜಾ ಕಾರ್ಯಕ್ರಮ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಿತು.
(ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿಯವರು ಮಾತನಾಡಿ ಚಕ್ರವರ್ತಿ ಪ್ರಥಮಾಚರ್ಯ ಶ್ರೀ 108 ಶಾಂತಿ ಸಾಗರ ಮಹಾರಾಜರು 20ನೇ ಶತಮಾನದ ಅಂದರೆ 1872ರಿಂದ 1955ರ ವರೆಗೆ 20ನೇ ಶತಮಾನದ ಪ್ರಥಮ ದಿಗಂಬರ ಆಚಾರ್ಯರಾಗಿ ಭರತದಲ್ಲಿ ಸಂಪೂರ್ಣ ಶ್ರೀ ವಿಹಾರವನ್ನು ಮಾಡಿದ್ದಾರೆ. ಅವರ ಆದರ್ಶಗಳು ತಪದ ತೇಜಸ್ಸು ಅಸಾಧಾರಣ ಶಕ್ತಿ ಪ್ರತಿಭೆ, ದೂರದೃಷ್ಟಿ ಸಹಜ ಕರುಣಾ ಭಾವಗಳು ಅವರ ನಡೆ ನುಡಿ ಏಕತೆಯ ಸಂದೇಶ ಶ್ರೀ ಸಾಮಾನ್ಯರಿಂದ ಜನ ಮನ್ನಣೆಗಳಿಸಿ ಪ್ರಭಾವಿವ್ಯಕ್ತಿಯನ್ನು ಕೂಡ ಆಕರ್ಷಿಸಿದರು.
ಸಕಲ ಜೈನ ಭಕ್ತರ ಪರಂಪರೆಯಿಂದ ಆಗ್ರಹ ಮಾಡುವುದೆನೆಂದರೆ ಶ್ರೀ ಶಾಂತಿ ಸಾಗರ ಮಹಾರಾಜರ ಅಂಚೆ ಚಿಟ್ಟಿಯನ್ನು ತರುವುದರ ಮೂಲಕ ಅಂತ ಮಹಾನ್ ಸಂತರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದರು).
ಹೊಂಬುಜ ಮಠದಲ್ಲಿ ಕೂಡ ಹೊಂಬುಜ ಶ್ರೀಗಳಿಂದ ಆಚಾರ್ಯ ಶ್ರೀಗಳ ಭಾವಚಿತ್ರಕ್ಕೆ ಪೂಜಾರಾಧನ ಕಾರ್ಯಕ್ರಮ ನೆರವೆರಿತು.
ನರಸಿಂಹ ರಾಜ ಪುರದ ಶ್ರೀಗಳಿಂದಲು ಕೂಡ ಮಠದಲ್ಲಿ ಆಚಾರ್ಯರ ಪೂಣ್ಯತಿಥಿಯನ್ನು ಆಚರಿಸಲಾಯಿತು.
ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜ ಹಾಗೂ ದಿಗಂಬರ ಜೈನ ಸಮಾಜದ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಶ್ರೀ ಶಾಂತಿ ಸಾಗರರ ಪೂಣ್ಯತಿಥಿ ಆಚರಣೆ ಸಮಾಜಿಕ ಅಂತರದಲ್ಲಿ ಸಂಗಾವಾಗಿ ನಡೆಯಿತು. ಎರಡು ಸಮಾಜದ ಅಧ್ಯಕ್ಷರುಗಳಾದ ಎಂ. ಆರ್. ಸುನೀಲ್ ಕುಮಾರ್ ಹಾಗೂ ಶ್ರೀ ಮತಿ ಲತಾ ಸುದರ್ಶನ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಆಚಾರ್ಯ ಶ್ರೀ ಶಾಂತಿ ಸಾಗರರ ಪೂಣ್ಯತಿಥಿಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಹುಬ್ಬಳ್ಳಿ ಜೈನ ಸಮಾಜದ ಪ್ರಮುಖರು ಒತ್ತಾಯಿಸಿದ್ದಾರೆ.
ಮಹಾವೀರ ಶ್ರೀ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ ಶ್ರೀ ಶಾಂತಿ ಸಾಗರ ಪುಣ್ಯತಿಥಿ ಕಾರ್ಯಕ್ರಮದಲ್ಲಿ 20ನೇ ಶತಮಾನದ ಪ್ರಥಮ ಆಚಾರ್ಯರಾಗಿ ದೇಶದಲ್ಲಿ ಪಾದ ಯಾತ್ರೆ ಮಾಡಿ ಸಮಾಜದಲ್ಲಿನ ಕಂದಚಾರಗಳು ಬಾಲ್ಯವಿವಾಹದಂತಹ ಪದ್ಧತಿಗಳ ವಿರುದ್ದ ಜನಜಾಗೃತಿ ಮೂಡಿಸುತ್ತಾ, ಶಾಂತಿ ಅಹಿಂಸೆ ಏಕತೆಯ ಸ್ಥಾಪನೆಗೆ ಶ್ರಮಿಸಿದ ಆಚಾರ್ಯಶ್ರೀ ಶಾಂತಿ ಸಾಗರರ ಪುಣ್ಯ ತಿಥಿಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಸ್ಥಳದಲ್ಲಿ ಶಾಂತಿನಾಥ ಹೊಸಪೇಟೆ, ಮಹಾವೀರ ಗೊಂಗಡಿ, ಮಹಾವೀರ ಪುಂದುರಾ, ಮಹಾವೀರ ಸೂಜಿ, ದತ್ತ ಡೊರ್ಲೆ, ಆಟಿ ತವನಪ್ಪ ಉಪಸ್ಥಿತರಿದ್ದರು.
ಕರೊನ ಮಹಾಮಾರಿಯ ಈ ಸಂದರ್ಭದಲ್ಲಿ ದಶಲಕ್ಷಣದ ಆಚರಣೆ ಹಾಗೂ ನೋಂಪಿ ಆಚರಣೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಗ್ಗೆ ಹೊಂಬುಜ ಶ್ರೀಗಳಾದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ತಮ್ಮಲಿ ಒಂದು ಆಗ್ರಹವನ್ನು ಹಿಟ್ಟಿದ್ದಾರೆ.
(ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಮಾತನಾಡಿ ದಶಲಕ್ಷಣ ಪರ್ವ ಬಹಳ ವಿಶಿಷ್ಟವಾದುದು, ಆದರೆ ಈ ವರ್ಷ ಕೊರೊನ ಕಾರಣದಿಂದ ಬಸದಿಗಳಿಗೆ ಹೊಗುವಂತಹದ್ದು ಅಥವಾ ಮೆರವಣಿಗೆ ಉತ್ಸವ ಮಾಡುವಂತಹದ್ದು ಕಷ್ಟವಾಗಿರುವುದರಿಂದ ಮನೆಯಲ್ಲಿಯೇ
ಉತೃಷ್ಟವಾದಂತಹ ವಾತಾವರಣ ನಿರ್ಮಾಣ ಮಾಡಿಕೊಂಡು ದೇವರ ಧ್ಯಾನ ಮತ್ತು ಶಾಸ್ತ್ರಗಳನ್ನು ಓದುವುದರೊಂದಿಗೆ ಉತ್ತಮ ಶ್ರಾವಕರ ಶಾಸ್ತ್ರ ಗ್ರಂಥಗಳ ಪ್ರವಚನ ಕೇಳುವುದರ ಮೂಲಕ ದಶಲಕ್ಷಣ ಪರ್ವವನ್ನು ಆಚರಿಸುವ ಪರಿಯನ್ನು ತಿಳಿಸಿದರು).
ಜಾಹೀರಾತು
ಮುನಿಗಳ ಚಾತುರ್ಮಾಸಾಚರಣೆ ಸಾಂಗವಾಗಿ ನಡೆಯುತ್ತಿದ್ದು ಪರಮ ಪೂಜ್ಯ 108 ಶ್ರೀ ಪ್ರಸನ್ನ ಸಾಗರ ಮುನಿ ಮಹಾರಾಜರ ಮಹಾ ಪಾರಣ ಮಹೋತ್ಸವ, ಹಾಗೂ ಮುನಿಶ್ರೀ ಜಯ ಕೀರ್ತಿ ಮುನಿ ಮಹಾರಾಜರ ಗಜ ಪಂಥದಲ್ಲಿ ನಡೆಯುತ್ತಿರುವ ಕೇಶಲೋಚನ ಕಾರ್ಯಕ್ರಮದ ಒಂದು ಪುಟ್ಟ ವರದಿ.
ಪರಮ ಪೂಜ್ಯ ಆಚಾರ್ಯ ಶ್ರೀ 108 ಶ್ರೀ ಪ್ರಸನ್ನ ಸಾಗರ ಮುನಿ ಮಹಾರಾಜರ ನಿರ್ಜಲ 50 ದಿವಸಗಳ ಆಖಂಡ ಉಪವಾಸದ ಹಾಗೂ ಹಾಗೂ ಮೌನ ವ್ರತಾಚರಣೆ 17-08-2020ರಂದು ಯಶಸ್ವಿಯಾಗಿ ಪೂರ್ಣಗೊಂಡು ಭಕ್ತಾಂಬರ ವ್ರತ ಮಹಾಪಾರಣ ಮಹೋತ್ಸವ ನೆರವೇರಿತ್ತು. ಹಾಗೂ 17-08-2020ರಂದು ಮುಂಜಾನೆ ಪರಮ ಪೂಜ್ಯ ಧ್ಯಾನ ದಿವಾಕರ ಮುನಿಮಹಾರಾಜರದ 108 ಜಯ ಕೀರ್ತಿ ಮುನಿ ಮಹಾರಾಜರ ಕೇಶ ಲೋಚನ ಕಾರ್ಯಕ್ರಮವು ಸಿದ್ದ ಕ್ಷೇತ್ರ ಗಜಪಂಥದಲ್ಲಿ ನಡೆಯಿತು.
ಹುಕ್ಕೇರಿ ಸಮೀಪದ ಖಾನಾ ಪುರ ಗ್ರಾಮದ ಪಾರ್ಶ್ವನಾಥ ಬಸದಿಯಲ್ಲಿದ ಮೂರ್ತಿಯ ಅಧ್ಯಾಯನ ಮಾಡಲಾಗಿ, ಮೂರ್ತಿಯ ಹಿಂಭಾಗ 19 ಸಾಲಿನ ಶಾಸನ ಪತ್ತೆಯಾಗಿದೆ.
ಹುಕ್ಕೇರಿ ಇಂದ ಪಶ್ಚಿಮಕ್ಕೆ 15 ಕಿ.ಮೀ ದೂರದಲ್ಲಿರುವ ಖಾನಾ ಪುರದಲ್ಲಿ ಕ್ರಿ.ಶ 1129-30ರ ಕಾಲದಲ್ಲಿ ಸವದತ್ತಿ ರಟ್ಟರ ಅಂಕಿತ ದೇವ ನಾಮ ಮಹಾಪ್ರಧಾನನಾದ ಭಮೈಯ ಅರಸನು ಕಟ್ಟಿಸಿದ ಬಸದಿ ಇದ್ದಿತೆಂದು. ಆದರೆ ಈಗ ಪ್ರಸ್ತುತ ಇಲ್ಲವಾದರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪಾರ್ಶ್ವನಾಥನ ಬಸದಿಯ ಪಕ್ಕದಲ್ಲಿರುವ ಧರ್ಮ ಶಾಲೆಯಲ್ಲಿ ಅಲ್ಲಿನ ಮೂಲ ಮೂರ್ತಿಯೊಂದನ್ನು ಇಡಲಾಗಿದೆ. ಆ ಮೂರ್ತಿಯ ಹಿಂಭಾಗದಲ್ಲಿ 19 ಸಾಲುಗಳಿಂದ ಕೂಡಿದ ಶಾಸನ ಪತ್ತೆಯಾಗಿದ್ದು ಇತಿಹಾಸ ಸಂಶೋದಕರಾದ ಶ್ರೀ ಬಾಹುಬಲಿ ಹಂದೂರರವರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಪ್ರಶಾಂತ್ ಜಿ. ಅವರು ಕೂಡ ಉಪಸ್ಥಿತರಿದ್ದರು.
ಇದೀಗ ಪ್ರಕಟಣೆಯ ಸಮಯ
ಇದು ಬಾಹುಬಲಿ ತಾಂತ್ರಿಕ ಮಹಾವಿಧ್ಯಾಲಯದ ಪ್ರಕಟಣೆ. ಇತ್ತಿಚೇಗೆ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ವರ್ಷ 2020-21ನೇ ಸಾಲಿನ ಬಿ.ಸಿ.ಇ. ಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಗೆ ಬಿ.ಸಿ.ಇ ವಿಧ್ಯಾರ್ಥಿ ವೇತನ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಶ್ರೀಗಳ ಸುವರ್ಣ ದೀಕ್ಷಾ ಮಹೋತ್ಸವ ಪ್ರಯುಕ್ತ
ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯ ಶ್ರವಣ ಬೆಳಗೊಳ ಇಲ್ಲಿ 2020-21ನೇ ಸಾಲಿನಲ್ಲಿ ಪ್ರವೇಶ ಪಡೆಯುವ 50 ಜನ ಅರ್ಹ ವಿದ್ಯಾರ್ಥಿಗಳಿಗೆ ಚಾರುಶ್ರೀ ವಿಧ್ಯಾರ್ಥಿ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪ್ರಾಂಶುಪಾಲರಾದ ಡಾ|| ಗೋಮಟೇಶ ಮ. ರಾವನವರು
ಶ್ರೀ ನಿರಂಜನ್ ಜೈನ್ ಕುದ್ಯಾಡಿ ಹಾಗೂ ಮಹಾವೀರ್ ಪ್ರಸಾದ್ ಉನಾಡು ಇವರಿಂದ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಸಲುವಾಗಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಮೂಡುಬಿದ್ರೆ ಶ್ರೀಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೂಡುಬಿದ್ರೆಯ ಮಠಾದೀಶರಾದ ಪರಮ ಪೂಜ್ಯ ಡಾ|| ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಪ್ರೇರಣೆ ಹಾಗೂ ಆಶೀರ್ವಾದದೊಂದಿಗೆ ಮಕ್ಕಳಿಗೆ ಜೂಮ್ ಆ್ಯಪ್ ಮೂಲಕ ಅನ್ ಲೈನ್ ಧಾರ್ಮಿಕ ಪಾಠವನ್ನು ಮಹಾವೀರ ಪ್ರಸಾದ್ ಹೊರನಾಡು ಹಾಗೂ ನಿರಂಜನ್ ಜೈನ್ ಕುದ್ಯಾಡಿ ಆರಂಭಿಸಿದ್ದು ಕಾರ್ಯಕ್ರಮದ ಉದ್ಗಾಟನೆ ದಿನಾಂಕ 16-08-2020ರಂದು ಮೂಡುಬಿದ್ರೆ ಶ್ರೀಗಳವರಿಂದ ನಡೆಯಿತು.
ಹೀಗೆ ಪ್ರತಿವಾರವು ವೀಕ್ಷಿಸುತ್ತಿರಿ ವಾರದ ನಿಮ್ಮ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














