ಮಕ್ಕಳಿಗೆ ಶೈಕ್ಷಣಿಕ ಜ್ನಾನ ಬೆಳೆಯುತ್ತಾ ವ್ಯಾವಹಾರಿಕ ಜ್ನಾನ ಎಷ್ಟು ಮುಖ್ಯವೋ ಧರ್ಮದ ಜ್ನಾನವೂ ಕೂಡ ಅಷ್ಟೇ ಮುಖ್ಯವಾಗಿದೆ. ಆಧ್ಯಾತ್ಮಿಕ ಚಿಂತನೆ ಮಕ್ಕಳನ್ನು ಸಧೃಡಗೊಳಿಸುತ್ತದೆ. ಇಂದು ನಮ್ಮೊಂದಿಗೆ ಶ್ರೀ ಶ್ರೇಚಿತ್, ಸುಹಾನಿ ಹಾಗೂ ರಿದೀಕ್ಷಾಇದ್ದಾರೆ ಬನ್ನಿ ಅವರೊಂದಿಗೆ ಮಾತನಾಡೋಣ.
ಶ್ರೇಚಿತ್ ಬಗ್ಗೆ ಒಂದು ಕಿರುಪರಿಚಯ:
ಶ್ರೇಚಿತ್ ಮೂರುವರೆ ವರ್ಷದ ಬಾಲಕ ಇನ್ನೂ ಪ್ರಿ. ಕೆ ಜಿ ಮಂಡ್ಯದ ಶ್ರೇಯಸ್ ಮತ್ತು ಸಂಚಿತಾ ದಂಪತಿಗಳ ಮುದ್ದು ಕಂದ. ದಂಪತಿಗಳ ಹೆಸರುಗಳು ಸೇರಿ ಶ್ರೇಚಿತ್ ಎಂಬ ಹೆಸರು ಬಂದಿದೆ. ಇವನು ತನ್ನ ಅಜ್ಜಿಯ ಜೊತೆ ಬಸದಿ ಕಾರ್ಯಕ್ರಮಗಳಲ್ಲಿ ಜೊತೆಯಾಗುವುದಲ್ಲದೇ ಅವನ ಅಜ್ಜಿ ಹೇಳಿಕೊಡುವ ಮಂತ್ರವನ್ನೇಲ್ಲಾ ಚೆನ್ನಾಗಿ ಹೇಳುತ್ತಾನೆ. ಇವನಿಗೆ ಎಲ್ಲಾ ಮಕ್ಕಳಂತೆ ಆಟೋಟದಲ್ಲಿ ಆಸಕ್ತಿ ತುಂಬಾ ಇದ್ದು . ಸ್ಕೇಟಿಂಗ್ ಬಹಳ ಇಷ್ಟ ಪಟ್ಟು ಕಲಿತಿದ್ದಾನೆ. ಇನ್ನು ಈಗ ತಾನೆ ಧರ್ಮ ವಿಷಯಗಳಲ್ಲಿ
ಆಸಕ್ತಿ ತೋರಿಸುತ್ತುವ ಶ್ರೇಚಿತ್ ಪುಟ್ಟ ಪ್ರಯತ್ನವನ್ನು ಖಂಡಿತ ಪ್ರೋತ್ಸಾಹಿಸೋಣ. ಹಾಗೂ ಶ್ರೇಚಿತ್ ನನ್ನು ಮಾತನಾಡಿಸಿದಾಗ ಅವನ ತಂದೆ ತಾಯಿ ಬಗ್ಗೆ , ಅವನ ದಿನನಿತ್ಯದ ಕಾರ್ಯಗಳ ಬಗ್ಗೆ ಹಾಗೂ ಅವನಲ್ಲಿರುವ ಧರ್ಮದ ಆಸಕ್ತಿಯ ಬಗ್ಗೆ ಅತಿ ಚುರುಕಾಗಿ ಹಾಗೂ ಉತ್ಸಾಹದಿಂದ ಮಾತನಾಡಿ ಮಂತ್ರಗಳನ್ನು ಹೇಳಿದನು.
ಈಗ ನಮ್ಮ ಜೊತೆ ಸುಹಾನಿ ಕೂಡ ಇದ್ದಾರೆ. ಬನ್ನಿ ಅವರ ಬಗ್ಗೆ ಕಿರುನೋಟ. 14 ವಯಸ್ಸಿನ 9ನೇ ತರಗತಿಯಲ್ಲಿ ಓದುತ್ತಿ ದ್ದಾಳೆ ಈಕೆ. ತಂದೆ ಸೂರಜ್ ಕುಮಾರ್, ತಾಯಿ ಅಶ್ವಿನಿ . ಪ್ರತಿ ತರಗತಿಯಲ್ಲೂ ಉತ್ತಮ ಸ್ಥಾನದಲ್ಲಿ ಮುಂದಿದ್ದಾಳೆ. ಶಾಲೆಯಲ್ಲಿ ನಡೆಯುವ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಾಳೆ. ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ರಾಜ್ಯ ಮಟ್ಟದ ಪುರಸ್ಕಾರ ಗೆದ್ದಿದ್ದಾಳೆ. ಪ್ರತಿಷ್ಠಿತ ಸಂಸ್ಥೆಗಳಿಂದ
ಸಂಗೀತ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದವರೆಗೂ ತಲುಪಿದ್ದಾಳೆ. ಇಲ್ಲಿಯವರೆಗೆ ಶಾಲೆಯಲ್ಲಿ 2 ಬಾರಿ ಆಲ್ ರೌಂಡರ್ ಅವಾರ್ಡನ್ನು ತನ್ನದಾಗಿಸಿಕೊಂಡಿದ್ದಾಳೆ. ಖೋ-ಖೋ ಟೀಮ್ ನಲ್ಲೂ ಇದ್ದಾಳೆ. ಸಂಗೀತದಲ್ಲಿ ಡಿಸ್ಟಿಂಕ್ಶನ್ ಪಾಸಾಗಿ ಸೀನಿಯರ್ ನಲ್ಲದ್ದಾಳೆ. ನವಿಲು ಹಾಗೂ ಹಲವಾರು ಛದ್ಮವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ಜಿನಭಜನಾ ಸ್ಪರ್ಧಯಲ್ಲೂ ಕೂಡ 2 ಬಾರಿ ಝೋನಲ್ ಲೆವಲ್ ನಲ್ಲಿ ಗಳಿಸಿರುತ್ತಾಳೆ. ತಮ್ಮ ಒಂಭತ್ತನೇ ವಯಸ್ಸಿನಲ್ಲಿಯೇ ಶಿಖರ್ ಜೀ ದರ್ಶನ ಮಾಡಿರುವ ಈಕೆ ಸಾಧ್ಯವಾದಾಗಲೆಲ್ಲಾ ಮುನಿಗಳ ಆಹಾರ ವಿಹಾರ ಹಾಗೂ ದಶಲಕ್ಷಣ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾಳೆ. ಭಜನಕಾ ಮಠ ಹಾಗೂ ವೇಲೂರಿನಲ್ಲಿ ನಡೆಯುವ ಧಾರ್ಮಿಕ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾಳೆ. ಸುಹಾನಿಯ ಬಗ್ಗೆ ತಿಳಿಯಲು ನಾವು ಅವಳನ್ನು ಮಾತನಾಡಿಸಿದಾಗ ತುಂಬಾ ಉತ್ಸಾಹದಿಂದ ಹಾಗೂ ಸಂತೋಷದಿಂದ ಅವಳು ಮಾತನಾಡಿ ಅವಳು ಕಲಿತಿರುವ ಭಜನೆ ಹಾಗೂ ಸಂಗೀತದ ರಸದೌತಣ ಮಾಡಿಸಿದಳು.
ನಂತರ ಇನ್ನೊಬ್ಬ ಪ್ರತಿಭೆಯನ್ನು ನಿಮಗೆ ಪರಿಚಯ ಮಾಡಬೇಕಾಗಿದೆ. ಅವಳ ಹೆಸರು ರಿದೀಕ್ಷಾ ಬಗ್ಗೆ ಹೇಳಬೇಕೆಂದರೆ , ಬೆಂಗಳೂರಿನ ಶೀತಲ್ ಹಾಗು ದಿನೇಶ್ ಕುಮಾರ್ ದಂಪತಿಗಳ ಪುತ್ರಿ ಈಕೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈಕೆ ಓದುವುದರಲ್ಲಿ ಬಹಳ ಆಸಕ್ತಿ ಇದೆ. ಅಲ್ಲದೇ ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಕೂಡ ಪಡೆದಿದ್ದಾಳೆ. ಧರ್ಮದ ವಿಷಯದಲ್ಲಿ ಕಂಡುಬರುವ ಪುಟ್ಟ ಪುಟ್ಟ ಆಸಕ್ತಿಯನ್ನು ಗುರುತಿಸಿ ದೊಡ್ಡ ಮರ ವಾಗಿಸುವ ಒಂದು ಸಣ್ಣ ಪ್ರಯತ್ನ ಇದು ಬನ್ನಿ ನಾವು ಇವಳನ್ನು ಪರಿಚಯ ಮಾಡಿಕೊಳ್ಳೋಣ. ಅವಳನ್ನು ಪರಿಚಯ ಮಾಡಿದಾಗ ಅತ್ಯಂತ ಚೂಟಿಯಾಗಿ ಮಾತನಾಡಿ ತಮ್ಮ ಬಗ್ಗೆ ಪರಿಚಯ ಮಾಡಿಸಿ ನಮಗೆ ಭಜನೆ ಹಾಗೂ ನೃತ್ಯಗಳಿಂದ ನಮಗೆಲ್ಲಾ ರಂಜನೆಯನ್ನು ನೀಡಿದರು.
ಹೀಗೆ ವೀಕ್ಷಕರೆ ಮಕ್ಕಳ ಧಾರ್ಮಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಪ್ರತಿ ಭಾನುವಾರ ಬೆಳಗ್ಗೆ 10-30ಕ್ಕೆ ಪ್ರಸಾರವಾಗುವುದು ನಿಮ್ಮ ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ.














