ವಾರನಿಕ ಜೈನ್ ಸುದ್ದಿ-03 / 15-08-2020

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ ಬನ್ನಿ ಮುಖ್ಯಾಂಶಗಳನ್ನೊಮ್ಮೆ ನೋಡಿ ಬರೋಣ.

ಮುಖ್ಯಾಂಶಗಳು:-

ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿ. ದಕ್ಷಿಣಾಂಚಲ ಅಧ್ಯಕ್ಷರಾಗಿ ಮೈಸೂರಿನ ವಿನೋದ್ ಬಾಕ್ಲಿವಾಲಾ ಆಯ್ಕೆ ತಂದ ಫಲಶೃತಿ.

ಸೋಂದಾ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ವಿವಿಧ ಆರಾಧನೆ.

ವರೂರಿನಲ್ಲಿ ಪ.ಪೂ ಮುನಿಶ್ರೀ 108 ಪ್ರಸಂಗ ಸಾಗರ ಮುನಿಮಹಾರಾಜರ ಸಾನಿಧ್ಯದಲ್ಲಿ ಸರ್ವದೋಷ ಪ್ರಾಯಶ್ಚಿತ ಆರಾಧನೆ.

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.

ಕೋಥಳಿ, ಕುಪ್ಪನವಾಡಿಯಲ್ಲಿ ಶ್ರಾವಿಕೆಯರಿಗೆ ಪಂಚಾಮೃತ ಅಭಿಷೇಕ ಪೂಜೆ ಪಾಠ.

ಸುದ್ದಿಗಳ ವಿವರ:-

ಮೈಸೂರಿನ ವಿನೋದ್ ಬಾಕ್ಲಿವಾಲಾರವರು ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಮಾತನಾಡಿ ತಮ್ಮಿಂದಾದ ಅನುದಾನಗಳ ಬಿಡುಗಡೆ ಬಗ್ಗೆ ಹಾಗೂ ಅವರ ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು.

ಶ್ರೀ ಯುತರಾದ ವಿನೋದ್ ಬಾಕ್ಲಿವಾಲಾರವರು ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿ ಕರ್ನಾಟಕ ವಿಭಾಗ ಹಾಗೂ ದಕ್ಷಿಣಾಂಚಲ ಪ್ರದೇಶದ ಅಧ್ಯಕ್ಷರಾಗಿ  ಆಯ್ಕೆಯಾಗಿರುವುದನ್ನು ನಮಗೆಲ್ಲ ತಿಳಿಸಲು ಹರ್ಷ ವ್ಯಕ್ತಪಡಿಸಿದರು.

(ಸರ್ವ ಭಟ್ಟಾರಕರ ಆಶೀರ್ವಾದದಿಂದ ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿ ಕರ್ನಾಟಕ ವಿಭಾಗ ಮತ್ತು ದಕ್ಷಿಣಾಂಚಲ ಪ್ರದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತಸವಾಗುತ್ತಿದೆ).

ಅಲ್ಲದೇ ಮಹಾಮಾರಿ ಕರೋನ ಕಾರಣದಿಂದಾಗಿ ನಮ್ಮ ಕೆಲವೊಂದು ಮಠಗಳಲ್ಲಿ ಸಂದಿಗ್ದಾ ಪರಿಸ್ಥಿತಿ ಉಂಟಾಗಿದು ಯಾತ್ರಾರ್ಥಿಗಳಾಗಲ್ಲಿ ದರ್ಶನಾರ್ಥಿಗಳಾಗಲ್ಲಿ

ಈ ಸಂದರ್ಭದಲ್ಲಿ ಬಸದಿಗಳಿಗೆ ಭೇಟಿ ನೀಡಲಾಗದಂತಹ ಪರಿಸ್ಥಿತಿ ಇರುವುದರಿಂದ ‍ಅಲ್ಲಿನ ವರಮಾನ ಕ್ಷೀಣಿಸುತಿದ್ದಾಗಿ ಹಾಗೂ ಇಂತಹ ಪರಿಸ್ಥಿತಿಯ ನಿರ್ವಹಣೆಗಾಗಿ ಮಠಗಳಿಂದ ಇಲ್ಲಿಯವರೆಗೆ ಯಾರು ಸಹಾಯವನ್ನು ಕೇಳಲಿಲ್ಲ. ಆದರೆ ಉತ್ತರ ಭಾರತದವರಾಗಲ್ಲಿ ಅಥವಾ ಎಲ್ಲಿಂದ ಯಾರೆ ಬಂದರು ಯಾವಗಲು ಬಂದ ಭಕ್ತಾಧಿಗಳಿಗೆ ಊಟೋಪಚಾರ ವ್ಯವಸ್ಥೆ ಸಂಗಾವಾಗಿ ನಡೆಯುತ್ತಿದ್ದ ಸ್ಥಳಗಳಲ್ಲಿ ಕರ್ಮಚಾರಿಗಳ ಸಂಬಳದ ವ್ಯವಸ್ಥೆ ಹಾಗೂ ಮಠದ ನಿರ್ವಹಣೆಗೆ ಧಕ್ಕೆ ಉಂಟ್ಟಾಗುವುದಂತು ನಿಜ ಎಂದು ಮನಗಂಡ ತಾವೇ ತೀರ್ಥಕ್ಷೇತ್ರ ಕಮಿಟಿಯೊಂದಿಗೆ ಚರ್ಚಿಸಿ ಅನುದಾನವನ್ನು ಬಿಡುಗಡೆ ಗೊಳ್ಳಿಸಿದ್ದೇವೆಂದು ಹೇಳಿದ್ದಾರೆ. ಈ ಬಗ್ಗೆ ಅವರಿಂದಲೇ ತಿಳಿಯೋಣ.

ಆದರೆ ಉತ್ತರ ಭಾರತ ದಿಗಂಬರ ಜೈನ ಪಂಗಡದವರಾದ ಅವರಿಗೆ ಕನ್ನಡ  ಭಾಷೆಯ ಸ್ಪಷ್ಟತೆ ತೊಂದರೆಯಾದ ಕಾರಣ ದಯವಿಟ್ಟು ತಿದ್ದಿಕೊಳ್ಳಬೇಕು  ಎಂದು ಸಹ ಹೇಳಿದ್ದಾರೆ.

ತೀರ್ಥಕ್ಷೇತ್ರ ಕಮಿಟಿ ಇಂದ ಮಠಗಳಿಗೆ ಬಿಡುಗಡೆ ಯಾಗಿರುವ ಅನುದಾನದ ವಿವರಣ. ಕನಕ ಗಿರಿ ಮಠಕ್ಕೆ  ಮೂರು ಲಕ್ಷ, ಆರತಿ ಪುರ ಮಠಕ್ಕೆ ಒಂದು ಲಕ್ಷ, ಕಂಬದಹಳ್ಳಿ ಮಠಕ್ಕೆ ಒಂದು ಲಕ್ಷ, ಸೋಂದಾ ಮಠಕ್ಕೆ ಒಂದು ಲಕ್ಷ, ವರೂರು ಮಠಕ್ಕೆ ಒಂದು ಲಕ್ಷ, ಎನ್, ಆರ್ ಪುರ ಮಠಕ್ಕೆ ಒಂದು ಲಕ್ಷ ಮತ್ತು ನಾನ್ನಣಿ ಮಠಕ್ಕೆ ಒಂದು ಲಕ್ಷ, ಕೋಲಾಪುರ ಮಠಕ್ಕೆ ಒಂದು ಲಕ್ಷ ಎಂದು ವಿವರಿಸಿದರು. ಮತ್ತು ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಕನಕ ಗಿರಿ ಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮತ್ತು ಹೊಂಬುಜ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇವರ ಅಶೀರ್ವಾದ ಮಾರ್ಗದರ್ಶನದಲ್ಲಿ ಮುಂದೆ ಇನ್ನೂ ಒಳ್ಳೆಯ ಧರ್ಮಕಾರ್ತಗಳನ್ನು ಮಾಡುವುದಾಗಿ ತಿಳಿಸಿದರು).

ಲೋಕಕಲ್ಯಾಣಾರ್ಥವಾಗಿ ಸ್ವಾದಿ  ದಿಗಂಬರ ಜೈನ ಮಠದಲ್ಲಿ ಆರಾಧನೆಗಳು ನಡೆಯುತ್ತಿದ್ದು ಕೆಲವು ದೃಶ್ಯಾವಳಿಗಳನ್ನು ನಿಮಗಾಗಿ ತಂದಿದ್ದೇವೆ.

ಸೋಂದಾ ಶ್ರೀ ಕ್ಷೇತ್ರ ದಿಗಂಬರ ಜೈನ ಮಠದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ವಿವಿಧ ಆರಾಧನೆಗಳು ನಡೆಯುತ್ತಾ ಬರುತ್ತಿದ್ದು. ದಿನಾಂಕ 13-08-2020ರಂದು ನಡೆದ ಶ್ರೀ ಚರುಶಷ್ಟಿ ವಿಧಾನ ಪೂಜೆಯ ಕೆಲವು ಕ್ಷಣಗಳು.

ಧಾರವಾಡದ ವರೂರಿನಲ್ಲಿ ಪರಮಪೂಜ್ಯ ಮುನಿಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರು ಪಾವನ ವರ್ಷಯೋಗ ವನ್ನು ಆಚರಿಸುತ್ತಿದ್ದು ಅವರ ಪಾವನ ಸಾನಿಧ್ಯದಲ್ಲಿ ಸರ್ವದೋಷ ನಿವಾರಣ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ.

ವರೂರಿನಲ್ಲಿ 16ವರ್ಷಗಳ ನಂತರ ತಮ್ಮ ಹುಟ್ಟೂರಿನಲ್ಲಿ ಪಾವನ ವರ್ಷಯೋಗ ಚಾತುರ್ಮಾಸವನ್ನು ಪರಮ ಪೂಜ್ಯ ಮುನಿಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರು ನಡೆಸುತ್ತಿದ್ದು ಅಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಅವರ ಪಾವನ ಸಾನಿಧ್ಯದಲ್ಲಿ ದಿನಾಂಕ 18-08-2020ರಂದು ಪ್ರಾತಕಾಲ 11 ಗಂಟೆಗೆ ಸರ್ವ ದೋಷ ಪ್ರಾಯಶ್ಚೊತ ಆರಾಧನೆಯನ್ನು ಸಹ ಹಮ್ಮಿಕೊಳ್ಳಲಾಗಿದೆ. ಅಂದು ಮಹಾರಾಜರ   38ನೇ ಜನ್ಮೋತ್ಸವ ಕಾರ್ಯ ಕ್ರಮವನ್ನು ಸಹ ಅಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಶೀರ್ವಾದವನ್ನು ಪಡೆಯಲು ಸಹ ಕೋರಲಾಗಿದೆ.

ಜಾಹೀರಾತು

ಕಾರ್ಯಕ್ರಮಕ್ಕೆ ಮತ್ತೊಮ್ಮೆ ಸ್ವಾಗತ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದು ನಮ್ಮ ಸಮುದಾಯಕ್ಕೆ ಗೌರವತಂದ ಮಕ್ಕಳ ಪಟ್ಟಿ ಇಲ್ಲಿದೆ.

ಹುಬ್ಬಳ್ಳಿಯ ನವ ನಗರದ ಹೆಸರಾಂತ ನರರೋಗ ತಜ್ಞರಾದ ಡಾ|| ಸಂಜೀವ್ ಕಳಸೂರ ಹಾಗೂ ಸೋನಾಲಿ ದಂಪತಿಗಳ ಪುತ್ರ ಅರ್ಹನ್ ಇವರು ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಶೇಕಡ 98.72ರಷ್ಟು ಅಂಕ ಪಡೆದು ಕನ್ನಡ ಹಿಂದಿ ಗಣಿತದಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಕೀರ್ತಿ ತಂದಿದ್ದಾರೆ.

ಮೂಡುಬಿದ್ರೆಯ ಉಷಾ ಹಾಗೂ ಅಭಿಜಿತ್ ರವರ ಪುತ್ರಿ 98.5% ಪಡೆದ್ದಿದಾಳೆ. ಹಾಗೂ ಅಲ್ಲಿನ ವಿಧ್ಯಾರ್ಥಿಯೇ ಆದ ರಘು ಚಂದ್ರ ಪ್ರೇಮ ದಂಪತಿಗಳ ಪುತ್ರಿ 

ನಾಗಶ್ರೀ ಕೂಡ 98.4% ಅಂಕ ಪಡೆದ್ದಿದಾಳೆ.

ಚಿಕ್ಕೋಡಿಯ ಘಳತಗಾ ಇಂದ ಶ್ರೀ ಬಾಬಾ ಸಾಹೇಬ್ ಕಣ್ಣೂರೆ ಮತ್ತು ತೇಜಸ್ವಿನಿ ಪುತ್ರಿ ಕುಮಾರಿ ಸೃಷ್ಟಿ ಬಾಬಾ ಸಾಹೇಬ್ ಕಣ್ಣೂರೆ ಇವಳು 98.56% ಅಂಕ ಪಡೆದ್ದಿದಾಳೆ.

ತಮ್ಮ ಸಾಧನೆಯನ್ನು ಮೆರೆದ ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗು ಜ್ವಾಲಮಾಲ ಶುಭಾಶಯವನ್ನು ಕೊರುತ್ತ ಇನ್ನೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳ ಮಾಹಿತಿ ಇದ್ದಲ್ಲಿ ನಮಗೆ ತಿಳಿಸತಕ್ಕದು. ಮುಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು .

ಕಂಬದಹಳ್ಳಿ ಜೈನ ಮಠದವತಿಯಿಂದ ನಡೆಯುತ್ತಿರುವ ಪ್ರೌಢಶಾಲಾ 10ನೇ ತರಗತಿ ಫಲಿತಾಂಶವು ಶೇಕಡ 93ರಷ್ಟು ಬಂದಿರುತ್ತದೆ. ಪರಿಕ್ಷೇಗೆ ಕುಳಿತ 40 ವಿಧ್ಯಾರ್ಥಗಳಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣವಾಗಿರುತ್ತಾರೆ. ಕಂಬದಹಳ್ಳಿ ಜೈನ ಮಠದ ಪ್ರೌಢ ಶಾಲೆಗೆ ಜ್ವಾಲಮಾಲ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ.

ಕೊತಣಿ ಕುಪ್ಪನವಾಡಿಯ ಶ್ರೀ ಆದಿನಾಥ ಜಿನಾಲಯದಲ್ಲಿ ಗಣನಿ ಆರಿಕಾ ಶ್ರೀ ಸರಸ್ವತಿ ಮಾತಾಜೀಯವರಿಂದ ಪಂಚಾಮೃತ ಪೂಜೆಯ ಅಭಿಷೇಕವನ್ನು ಶ್ರಾವಕಿಯರಿಗೆ ಭೋದಿಸಲಾಯಿತು.

ಗಣನಿ ಆರಿಕಾ 105 ಶ್ರೀ ಸರಸ್ವತಿ ಮಾತಾಜೀಯವರ ಸಾನಿಧ್ಯದಲ್ಲಿ ಜಿನ ಭಗವಂತರಿಗೆ ಪಂಚಾಮೃತ ಅಭಿಷೇಕವನ್ನು ಮಾಡುವ ವಿಧಾನದ ಪರಿಚಯದೊಂದಿಗೆ ಶ್ರವಕಿಯರು ಅಭಿಷೇಕ ಪೂಜೆಯನ್ನು ಚಿಕ್ಕೋಡಿಯ ಶ್ರೀ 1008 ಆದಿನಾಥ ಜಿನಾಲಯದಲ್ಲಿ ನಡೆಸಿದರು.

ಇಲ್ಲಿಯವರೆಗೆ ವಾರದ ಸುದ್ದಿಗಳನ್ನು ವೀಕ್ಷಿಸಿದ್ದಿರಿ, ಹೀಗೆ ಪ್ರತಿ ಶನಿವಾರ 7:30ಕ್ಕೆ ಸರಿಯಾಗಿ ತಪ್ಪದೆ ವೀಕ್ಷಿಸಿ ವಾರದ ನಿಮ್ಮ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್