ಧರ್ಮದ ಕುಡಿ / ಎಪಿಸೋಡ್-02

ಜೈ ಜಿನೇಂದ್ರ ವೀಕ್ಷಕರೆ, ಇಂದಿನ ಅನುಮತಿ  ಮಕ್ಕಳ ಧಾರ್ಮಿಕ ಆಸಕ್ತಿಯನ್ನು ಗುರುತಿಸುವ ಹಾಗೂ ಪ್ರೊತ್ಸಹಿಸುವ ಸಲುವಾಗಿ ಧರ್ಮದ ಕುಡಿ ಕಾರ್ಯಕ್ರಮದಲ್ಲಿ ನಿಮ್ಮೊಂದಿಗಿದೇನೆ. ಬನ್ನಿ ನೀವು ನನ್ನೊಟ್ಟಿಗೆ  ಹೀಗತಾನೆ ಚಿಗುರೊಡೆಯುತ್ತಿರುವ ಕುಡಿಗಳಿಗೆ ನೀರೆರೆದು ಪೋಷಿಸೋಣ.

ಇಂದು ನಮ್ಮೊಂದಿಗೆ ಸ್ಪಟಿಕ ಹಾಗೂ ತೃಷಾರ್ಥ ಇದ್ದಾರೆ, ಕೊನೆಯಲ್ಲಿ ಮುದ್ದಾದ ಮಗು ಕೂಡ ಇದೆ. ಬನ್ನಿ ತೃಷಾರ್ಥ ಬಗ್ಗೆ ಒಂದು ಕಿರುನೋಟ.

ತುರ್ಷಾರ್ಥ ಈಕೆ ಓದಿನಲ್ಲೂ ಮುಂದು ಆಟದಲ್ಲೂ ಮುಂದು ಗಾಯನ ನೃತ್ಯ ಪೂಜೆ  ಮಂತ್ರ ಹೀಗೆ ಬಹಳಷ್ಟು ವಿಷಯದಲ್ಲಿ ಆಸಕ್ತಿ ಇರುವ ಹುಡುಗಿ. ನೃತ್ಯ ಹಾಗೂ ಸಂಗೀತ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳು ಬಂದಿವೆ. ಓದಿನಲ್ಲಿ ಗರಿಷ್ಟ 95% ಇರುವ ಈಕೆ ಆಬಾಕಸ್ ನಲ್ಲಿ ಸ್ಟೇಟ್ ಲೆವೆಲ್ ಪ್ರೈಸ್ ತೆಗೆದುಕೊಂಡಿದ್ದಾಳೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುರ್ಷಾರ್ಥಳ ಹಾಡು ನೃತ್ಯ ಕಾರ್ಯಕ್ರಮ ಇರಲೆ ಬೇಕು, ಅಷ್ಟೆಯಲ್ಲಾ ಅಷ್ಟಾನಿಕ ಅನಂತನೋಂಪಿಯಂತಹ ಪೂಜೆಗಳಲು ಕೂಡ ತಾಯಿಯೊಂದಿಗೆ ಜೋತೆಯಾಗುತ್ತಾಳೆ ಈಕೆ, ಅವಳ ಪ್ರಶಸ್ತಿಗಳ ಪಟ್ಟಿ ತುಂಬಾ ಇದೆ. ಕಂಠಪಾಠ, ಕೈಬರಹ ಎಲ್ಲಾ ವಿಷಯದಲ್ಲೂ ಆಕೆ ಪ್ರಶಸ್ತಿ ಪಡೆದು ಸಾಹಿತ್ಯ ಸಂಮೇಳನಗಳಲ್ಲೂ ಕೂಡ ಭಾಗವಹಿಸಿದ್ದಾಳೆ. ಕ್ಲೇ ಆರ್ಟ್ ಕೂಡ ಮಾಡುತ್ತಾಳೆ, ಇಷ್ಟೆಲ್ಲಾ ಆಸಕ್ತಿ ಮೂಡಿಸಿಕೊಂಡಿರುವುದನ್ನು ನೋಡಿದರೆ ಈಕೆ ತುಂಬ ಜಾಣೆ, ಸಮಯವನ್ನು ಸರಿಯಾಗಿ ಅಭಿರೂಚಿಗಳಿಗೆ ಬಳಸಿಕೊಳ್ಳುತಿದ್ದಾಳೆ ಎಂದು ಅನಿಸುತ್ತದೆ.

ತುರ್ಷಾರ್ಥಳನ್ನಾ ಒಮ್ಮೆ ಮಾತನಾಡಿಸೋಣ.

ನಿರೂಪಕರು :- ಜೈ ಜಿನೇಂದ್ರ ತುರ್ಷಾರ್ಥ.

ತುರ್ಷಾರ್ಥ  :- ಜೈ ಜಿನೇಂದ್ರ ಮೇಡಂ.

ನಿರೂಪಕರು :- ಧರ್ಮದ ಕುಡಿ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದೇನೆ.

ತುರ್ಷಾರ್ಥ  :- ತ್ಯಾಂಕ್ ಯೂ.

ನಿರೂಪಕರು :- ತುರ್ಷಾರ್ಥ ನಿಮ್ಮ ಹೆಸರಿನ ಅರ್ಥ ಏನು ?

ತುರ್ಷಾರ್ಥ  :- ನನ್ನ ಹೆಸರಿನ ಅರ್ಥ ಸಂವಿಜ್ಞಾನ, ಸಂವಿದರ್ಶನ, ಸಂವಿಚಾ ಹಿರ್ತ್ರ.

ನಿರೂಪಕರು :- ಸುಂದರವಾಗಿ ತಯಾರಾಗಿದ್ದೀರಾ.

ತುರ್ಷಾರ್ಥ  :- ಧನ್ಯವಾದಗಳು.

ನಿರೂಪಕರು :- ನಿಮ್ಮ ತಂದೆ ತಾಯಿಯ ಹೆಸರೇನು ?

ತುರ್ಷಾರ್ಥ  :- ತಂದೆ ಬ್ರಹ್ಮ ಪ್ರಕಾಶ್ ಆರ್.ಪಿ. ತಾಯಿ ರೂಪಶ್ರೀ ಹೆಚ್. ಎಂ.

ನಿರೂಪಕರು :- ಏನು ಓದುತ್ತಿದ್ದೀರಾ ?

ತುರ್ಷಾರ್ಥ  :- ವಿದ್ಯಾ ನಿಧಿ ಪಬ್ಲಿಕ್ ಸ್ಕೂಲ್ ನಲ್ಲಿ 5ನೇ ತರಗತಿ ಓದುತ್ತಾ ಇದ್ದೀನಿ.

ನಿರೂಪಕರು :- ನಿಮ್ಮ ಹವ್ಯಾಸವೇನು ಅದರ ಬಗ್ಗೆ ಹೇಳುತ್ತಿರಾ?

ತುರ್ಷಾರ್ಥ  :- ನನ್ನ ಹವ್ಯಾಸ ಕ್ರೀಡೆ, ಹಾಡುಗಾರಿಕೆ, ಭರತ ನಾಟ್ಯ ಮತ್ತು ಅಭಾಕಸ್. ಅಭಾಕಸ್ ರಶ್ಮಿ ಮೇಡಂ ಹೇಳಿ ಕೊಡುತ್ತಾರೆ. ಎರಡು ವರ್ಷ ಸ್ಟೇಟ್ ಲೆವೆಲ್ ಪ್ರೈಸ್ ಗೆದ್ದಿದೇನೆ. ಭರತನಾಟ್ಯ ವೇದವತಿ ಮೇಡಂ ಹೇಳಿಕೊಡುತ್ತಾರೆ, ಸಾಕಷ್ಟು ಪ್ರೋಗ್ರಾಂಸ್ ಮಾಡಿದ್ದೇನೆ, ಆಧ್ಯ ಮತ್ತು  ಪರೀಕ್ಷೆ ಬರೆದಿದ್ದೇನೆ. ಹಾಡುಗಾರಿಕೆ ವಿಜಯ ಲಕ್ಷ್ಮಿ ಮೇಡಂ ಹೇಳಿ ಕೊಡುತ್ತಾರೆ. ಸಾಕಷ್ಟು ಪ್ರೋಗ್ರಾಂಸ್ ಮಾಡಿದ್ದೇನೆ. ಕ್ರೀಡೆ ನನಗೆ ತುಂಬ ಇಷ್ಟ ಅದರಲ್ಲೂ ಶಟಲ್, ಕೆರಂ, ಚಸ್ ನನಗೆ ಬಹಳ ಇಷ್ಟ ಮತ್ತು ಲಾಂಗ್ ಜಂಪ್, ತ್ರಿಲೆಗರ್ ರೇಸ್ ನಲ್ಲಿ ಪ್ರೈಸ್ ಬಂದಿದೆ. ಮತ್ತೆ ಪೂಜೆಯಲ್ಲಿ ನಮ್ಮ ಅಮ್ಮ ದಿನನಿತ್ಯ ಪೂಜೆಯಲ್ಲಿ ಪಾಲ್ಗೊಳುತ್ತೇನೆ ಮತ್ತು ಅನಂತನೋಂಪಿ ಪೂಜೆಯಲ್ಲಿ ಅಮ್ಮನ ಜೊತೆ ಪಾಲ್ಗೊಳುತ್ತೇನೆ.

ನಿರೂಪಕರು :- ಹೆಣ್ಣು ಮಕ್ಕಳು  ಸಮಾನ್ಯವಾಗಿ ಹಾಡು ನೃತ್ಯದಲ್ಲಿ ಆಸಕ್ತಿ ತೋರಿಸುತ್ತಾರೆ, ಆದರೆ ನಿಮಗೆ ಜಿನ ಭಕ್ತಿಗೀತೆಗಳು ಅದಕ್ಕೆ ನೃತ್ಯ ಸಂಯೋಜನೆ ಮಾಡಬೇಕು ಎಂದು ಏಕೆ ಅನಿಸಿತು. ಅಮ್ಮ ಹೇಳಿ ಕೊಟ್ಟರ ಅಥವಾ ನಿಮಗೆ ಇಷ್ಟವಾಯಿತಾ ?

ತುರ್ಷಾರ್ಥ :- ನನಗೂ ಇಷ್ಟವಾಯಿತ್ತು ಅಮ್ಮನ್ನು ಹೇಳಿಕೊಟ್ಟರು. ಇವಾಗ ಭರತನಾಟ್ಯ ಕ್ಲಾಸ್ ನಲ್ಲಿ ಬೇರೆ ಧರ್ಮದ ಹಾಡಿಗೆ ಭರತನಾಟ್ಯ ಹೇಳಿಕೊಡುತ್ತಾರೆ. ಅದಕ್ಕಾಗಿ ಮಹಾವೀರ ಜಯಂತಿಗೆ ಮತ್ತು ಪಂಚ ಕಲ್ಯಾಣದಲ್ಲಿ ನಮ್ಮ ಹಾಡಿಗೆ ನೃತ್ಯ ಮಾಡಬೇಕು ಅದಕ್ಕಾಗಿ ಜಿನ ಭಕ್ತಿಗೀತೆಗಳಿಗೆ ಭರತನಾಟ್ಯ ಮಾಡಿದ್ದೀನಿ.

ನಿರೂಪಕರು :- ಒಂದು ಜಿನ ಭಕ್ತಿಗೀತೆಯನ್ನು ಹಾಡುವಿರಾ

ತುರ್ಷಾರ್ಥ :- ಆ ಖಂಡಿತವಾಗಿ, ಶ್ರೀ ಸಂವತ್ಸರ ವರ್ಣನೆಯ ಗೀತೆಯನ್ನು ಹಾಡುತ್ತೇನೆ ರಾಗ ಶಂಕರಾಭರಣ.

(ತುರ್ಷಾರ್ಥರವರು ಒಂದು ಜಿನ ಭಕ್ತಿಗೀತೆಯನ್ನು ಹಾಡಿದರು).

ನಿರೂಪಕರು :- ಸುಂದರವಾಗಿತ್ತು.

ತುರ್ಷಾರ್ಥ :- ತ್ಯಾಂಕ್ ಯೂ.

ನಿರೂಪಕರು :- ಓದುವುದರಲ್ಲಿ ತುಂಬ ಮುಂದೆ ಇದ್ದಿರ ಅದರೊಟ್ಟಿಗೆ ಈ ವಿಷಯದಲ್ಲಿ ಸಮಯವನ್ನು ಹೇಗೆ ಹೊಂದಿಸುತ್ತೀರಿ.

ತುರ್ಷಾರ್ಥ :- ನನಗೆ ಎಲ್ಲಾ ವಿಷಯಗಳು ಇಷ್ಟ ಶಾಲೆಗೆ ಹೋಗಿ ಬಂದ ನಂತರ ಶನಿವಾರ ಮತ್ತು ಭಾನುವಾರ ಅಭಾಕಸ್ ಮತ್ತು ನೃತ್ಯವು ಇರುತ್ತದೆ, ಮತ್ತು ಸಂಗೀತ ಸೋಮವಾರ, ಮಂಗಳವಾರ ಮತ್ತು ಬುಧವಾರ ಇರುತ್ತದೆ, ಹಾಗಾಗಿ ಸಮಯವನ್ನು ಸಂಭಾಳಿಸುತ್ತೇನೆ.

ನಿರೂಪಕರು :- ನೀವು ತಯಾರಾಗಿರುವುದ ನೃತ್ಯಕ್ಕೆ ಎಂದು ಗೊತ್ತಾಗುತ್ತೀದೆ ಒಂದು ನೃತ್ಯಮಾಡಿ ತೋರಿಸುತ್ತಿರಾ.

ತುರ್ಷಾರ್ಥ :- ಆ ಖಂಡಿತವಾಗಿ.

ನಿರೂಪಕರು :- ವೆರಿ ವೆಲ್ಡನ್

ತುರ್ಷಾರ್ಥ :- ತ್ಯಾಂಕ್ ಯೂ.

ನಿರೂಪಕರು :- ನಿಮಗೆ ಇಷ್ಟೆಲ್ಲಾ ಪ್ರಶಸ್ತಿ ಸಿಕ್ಕಿರುವುದಕ್ಕೆ ನಿಮಗೆ ಹೆಮ್ಮೆ ಇದ್ದೆಇರುತ್ತದೆ, ಹೇಗೆ ಅನಿಸುತ್ತದೆ ಇನ್ನೂ ಈ ನಿಟ್ಟಿನಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳ ಬೇಕು ಎನಿಸುತ್ತದೆಯ.

ತುರ್ಷಾರ್ಥ :- ಆ ಹೌದು

ನಿರೂಪಕರು :- ಮಂತ್ರಗಳನ್ನು ತುಂಬ ಚೆನ್ನಾಗಿ ಕಲಿತ್ತಿದ್ದೀರಾ ಅದಕ್ಕೂ ಈಗ ಸಮಯನ್ನು ಮೀಸಲಿಟ್ಟಿದ್ದೀರಾ ಎಂದು ತಿಳಿಯಿತ್ತು ಯಾವ ಮಂತ್ರವನ್ನು ಹೇಳುತ್ತೀರಾ.

ತುರ್ಷಾರ್ಥ :- ಓಂ ನಮೋ ಹರಿಹಂತಾಣಂ ಹೇಳುತ್ತೇನೆ, ಚತ್ತಾಯಿ ಪಾಠ ಹೇಳುತ್ತೇನೆ, ಭಕ್ತಂಬರ ಸ್ತೋತ್ರ ಹೇಳುತ್ತೇನೆ.

ನಿರೂಪಕರು :- ಹಾಗಾದರೆ ಏಳನೇ ಶ್ಲೋಕವನ್ನು ಹೇಳುತ್ತೀರಾ.

ತುರ್ಷಾರ್ಥ :- ಹಾಃ

ನಿರೂಪಕರು :- ಯಾವುದು ಎಂದು ಗೊತ್ತಾಯ್ತಾ

ತುರ್ಷಾರ್ಥ :- ಹಾಃ ಗೊತ್ತಾಯಿತು.

(ತುರ್ಷಾರ್ಥರವರು ಏಳನೇ ಶ್ಲೋಕವನ್ನು ಹೇಳಿದರು).

ನಿರೂಪಕರು :-  ಹೀಗೆ ನಿಮ್ಮ ಕಲೆಯನ್ನು ಮುಂದುವರಿಸಿ, ಧರ್ಮದ ವಿಷಯಕ್ಕೂ ಸಮಯನ್ನು ಮೀಸಲಿಡಿ ಏಕೆಂದರೆ ಅದೆ ಭದ್ರ ಭೂನಾದಿ ಎಂದು ಹೇಳುತ್ತ, ತ್ಯಾಂಕ್ ಯೂ.

ತುರ್ಷಾರ್ಥ :- ತ್ಯಾಂಕ್ ಯೂ ಮೇಡಂ.

ವಾರದುದ್ದಕ್ಕೂ ರಾಜ್ಯಾದ್ಯಂತ ನಡೆಯುವ ಧಾರ್ಮಿಕ ವಿಚಾರಗಳ ಕಾರ್ಯಕ್ರಮಗಳ ಸಂಪೂರ್ಣ ಸುದ್ದಿವಿವರ  ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಪ್ರತಿ ಶನಿವಾರ ಸಂಜೆ 7 ರಿಂದ 7:30ಕ್ಕೆ.

ಇವೆಲ್ಲಾ ಕಾರ್ಯಕ್ರಮಗಳು ಜ್ವಾಲಮಾಲ ಡಾಟ್ ನ್ಯೂಸ್ ಫೆಸ್ ಬುಕ್ ಲೈವ್ ನಲ್ಲಿ ಹಾಗೂ  ಜ್ವಾಲಮಾಲ ನ್ಯೂಸ್ ಯೂಟ್ಟೂಬ್ ಚಾನಲ್ ನಲ್ಲೂ ಕೂಡ ಪ್ರಸಾರವಾಗಲ್ಲಿದೆ.

ಸ್ಪಟಿಕ ಬೆಂಗಳೂರಿನ ಶ್ರೇಯಸ್ ಹಾಗೂ ಮಂಜುಶ್ರೀ ದಂಪತಿಗಳ ನಾಲ್ಕು ವರ್ಷದ ಮಗು. ಶಾಲೆಯ ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಚೂಟ್ಟಿ ಹುಡುಗಿ, ಇಷ್ಟು ಚಿಕ್ಕವಯಸ್ಸಿನಲ್ಲೆ ಪೋಷಕರ ಸಹಾಯದಿಂದ ಧರ್ಮದ ಸ್ತೋತ್ರಗಳು ಹಾಗೂ ಪೂಜೆ  ಅಷ್ಟ ವಿದ್ದಾರ್ಚನೆಯನ್ನು ಕೂಡ ಒಬ್ಬಳೇ ಮಾಡಬಲ್ಲಳು ಎಂಬುದು ನಿಮಗೆಲ್ಲರಿಗೂ ಸೊಜಿಗತರುವ ವಿಷಯ ನೀವೇ ಈಗ ನೋಡಲ್ಲಿದ್ದಿರಿ.

ನಿರೂಪಕರು :- ಜೈ ಜಿನೇಂದ್ರ ಪುಟ್ಟಿ.

ಸ್ಪಟಿಕ :- ಜೈ ಜಿನೇಂದ್ರ.

ನಿರೂಪಕರು :- ಸ್ಪಟಿಕ ಅಲ್ಲವಾ ನಿಮ್ಮ ಹೆಸರು.

ಸ್ಪಟಿಕ :- ಹೌದು.            

ನಿರೂಪಕರು :- ಏನನ್ನು ಓದುತ್ತಿದ್ದೀರಾ.

ಸ್ಪಟಿಕ :- ಎಲ್.ಕೆ.ಜಿ

ನಿರೂಪಕರು :- ರಜಾದಲ್ಲೂ ಅಮ್ಮ ಮಂತ್ರ ಕಲಿಯಲು ಹೇಳ್ತಾರಲ್ಲವಾ.

ಸ್ಪಟಿಕ :- ಹೌದು.

ನಿರೂಪಕರು :- ಏನೆನಿಸುತ್ತದೆ ಖುಷಿಯಾಗುತ್ತಾ ಬೇಜಾರ ಮಂತ್ರ ಕಲಿಯುವುದ್ದಕ್ಕೆ.

ಸ್ಪಟಿಕ :- ತುಂಬ ಖುಷಿಯಾಗುತ್ತೆ.

ನಿರೂಪಕರು :- ಸೊ ನೈಸ್. ಸರಿ ಹಾಗಾದರೆ ಡಿಫ್ರೆಂಟಾಗಿ ಕನ್ನಡದಲ್ಲಿ ಭಕ್ತಾಂಬರವನ್ನು ಹೇಳುತ್ತಿರಂತೆ ನೀವು, ಐದನೇ ಶ್ಲೋಕವನ್ನು ಹೇಳುತ್ತಿರಾ.

ಸ್ಪಟಿಕ :- ಹೌದು ಹೇಳುತ್ತೇನೆ.

(ಸ್ಪಟಿಕರವರು ಭಕ್ತಾಂಬರ ಶ್ಲೋಕವನ್ನು ಹೇಳಿದರು).

ನಿರೂಪಕರು :- ಸೂಪರ್,

ನಿರೂಪಕರು :- ಅಷ್ಟವಿಧಾರ್ಚನೆಯನ್ನು ಕೂಡ ಮಾಡುತ್ತಿರಂತೆ ಒಮ್ಮೆ ಮಾಡಿ ತೋರಿಸುತ್ತೀರ.

ಸ್ಪಟಿಕ :- ಹೌದು ತೋರಿಸುತ್ತೀನಿ ದ್ರವ್ಯ ಪೂಜೆ

ಸ್ಪಟಿಕರವರು ಅಷ್ಟವಿಧಾರ್ಚನೆಯ ದ್ರವ್ಯ ಪೂಜೆಯನ್ನು ಮಾಡಿ ತೋರಿಸಿದರು).

ನಿರೂಪಕರು :- ಅಬ್ಬಾ ತುಂಬ ಖುಷಿಯಾಗುತ್ತದೆ, ಹೆಮ್ಮೆ ಎನಿಸುತ್ತದೆ ಪುಟ್ಟ ನಿನ್ನ ಬಗ್ಗೆ. ಹೀಗೆ ನಿಮ್ಮ ಧರ್ಮದ ಆಸಕ್ತಿ ಬೆಳಸಿಕೊಂಡು ಹೋಗಿ ರೂಢಿಸಿಕೊಂಡು ಹೋಗಿ ಅಂತ ಹೇಳುತ್ತ, ತ್ಯಾಂಕ್ ಯೂ ಪುಟ್ಟ.

ವೀಕ್ಷಕರೆ ಮಹಾರಾಷ್ಟ್ರ ಮೂಲದ ಭಾಗ್ಯಶ್ರೀಯೆನ್ನೊ ಮುದ್ದಾದ ಮಗುವಿನ ತೊದಲು ನುಡಿ ಭಕ್ತಾಬಂರವನ್ನು ಹೇಳುತ್ತಿದ್ದರೆ  ಕೇಳುವುದಕ್ಕೆ ತುಂಬ ಚೆನ್ನಾಗಿದೆ. ಒಮ್ಮೆ ಕೇಳಿಬರೋಣ.

(ಭಾಗ್ಯಶ್ರೀ ಎನ್ನುವ ಮಗುವಿನ ತೊದಲು ನುಡಿಯಲ್ಲಿ ಭಕ್ತಾಬಂರವನ್ನು ಹೇಳಿತ್ತು).

ಹೀಗೆ ನಿಮ್ಮ ಮಗುವಿನ ಧಾರ್ಮಿಕ ಆಸಕ್ತಿಯನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ ಅಂತ ಹೇಳುತ್ತ ಧರ್ಮದ ಕುಡಿ ಕಾರ್ಯಕ್ರಮ ಪ್ರತಿ ಭಾನುವಾರ 10:30ಕ್ಕೆ ಸರಿಯಾಗಿ ತಪ್ಪದೆ ವೀಕ್ಷಿಸಿ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್