ತೀರ್ಥಂಕರ ಪದವಿಗೆ ಕಾರಣರಾದ ಹದಿನಾರು ಭಾವನೆಗಳು ನಮ್ಮದಾಗಲಿ ನಮಗೂ ಅರ್ಯಂತ ಪದವಿ ಪ್ರಾಪ್ತವಾಗಲಿ ಎಂದು ಶೋಢಷಭಾವನೆ ವ್ರತಾಚರಣೆಯನ್ನು ಆಚರಿಸುತ್ತಿರುವ ಸರ್ವಸ್ವ ಜೈನ ಬಾಂಧವರಿಗೂ ಶುಭವನ್ನು ಕೋರುತ್ತಾ ಒಮ್ಮೆ ಮುಖ್ಯಾಂಶವನ್ನು ನೋಡಿ ಬರೋಣ.
ಅಯೋಧ್ಯ ಶ್ರೀ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದೊಂದಿಗೆ ಜೈನ ಧರ್ಮ ದರ್ಶನ.
ತುಮಕೂರಿನ ಮಂದಾರ ಗಿರಿಗೆ ಮತ್ತೊಂದು ಗರು ಸೇರ್ಪಡೆ
ವೆಬ್ ಮೀಟಿಂಗ್ ಗಳ ಮೂಲಕ ರಾಜ್ಯ ಜೈನ್ ಮಿಲನ್ ನಲ್ಲಿ ನಿರಂತರ ಚಟುವಟಿಕೆ.
ಬೆಳಗಾವಿಯಲ್ಲಿ ಶ್ರೀ 108 ದೇವಪ್ರಭ ಸಾಗರಮುನಿ ಮಹಾರಾಜರಿಗೆ ಸಮಾಧಿ ಮರಣ ಪ್ರಾಪ್ತಿ.
ಕೊಪ್ಪಳದ ಜಿನಮಂದಿರದ ಗೋಡೆ ಕುಸಿತ ಪರಿಣಾಮ ಪುರಾತನ ವಿಗ್ರಹಗಳ ಮತ್ತೆ ಹೊರಗೆ ಈ ಬಗ್ಗೆ ಬಾಲಕನಿಂದ ಜ್ವಾಲಾಮಾಲಾಗೆ
ವರದಿ.
ಸುದ್ದಿಗಳ ವಿವರ:
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜನಸು ನನಸಾಗಿಸುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನಮಂತ್ರಿ ಮೋದಿಯವರ ನುಡಿಗಳಲ್ಲಿ ಜೈನ ಧರ್ಮದ ದರ್ಶನವಾಗಿದ್ದಲ್ಲದೇ ನಮ್ಮ ಜೈನ ಬಾಂಧವರು ಈ ಕಾರ್ಯಕ್ಕೆ ಕೈ ಜೋಡಿಸಿ ಧರ್ಮ ಮೆರೆದರು. ಇದರ ವಿವರ ಸುದ್ದಿ: ಅಯೋಧ್ಯೆ ಶ್ರೀ
ರಾಮ ಮಂದಿರದ ಭೂಮಿಪೂಜೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದಂತಹ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರನ್ನು ಸಹ ಆಹ್ವಾನಿಸಲಾಗಿತ್ತು. ಇದು ಮನಗೆಲ್ಲಾ ಬಹಳ ಹೆಮ್ಮೆ ಪಡುವ ಸಂಗತಿಯಾಗಿದೆ. ಅಲ್ಲದೇ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನನೀಯ ಪ್ರಧಾನಮಂತ್ರಿಯವರು ಅವರ ನುಡಿಗಳಲ್ಲಿ ಬಹಳ ಹಿಂದಿನಿಂದಲೂ ಅಯೋಧ್ಯಾ ನಗರಿ ಜೈನ ಧಾರ್ಮಿಕತೆಯ ಕೇಂದ್ರವಾಗಿದೆ ಅಲ್ಲದೇ ಜೈನ ತೀರ್ಥ ಕ್ಷೇತ್ರಗಳನ್ನು ಹೆಸರಿಸಿದರು. ಜೈನ ಧರ್ಮದ ವ್ಯಾಪಕತೆಯ ಅರಿವಿರುವ ನರೇಂದ್ರ ಮೋದಿಯವರಿಗೆ ಜೈನ ಸಮಾಜ ಅಭಿನಂದನೆಗಳನ್ನು ಸಲ್ಲಿಸುತ್ತದೆ.ಇದಕ್ಕೆ ಪೂರಕವೆಂಬಂತೆ ಘಟನೆಗೆ ಮೊದಲೆ ನಮ್ಮ ಸಮಾಜದಿಂದ ಶ್ರೀ ಕ್ಷೇತ್ರ ಮೂಡುಬಿದಿರೆ ಶ್ರೀಗಳಿಂದ ಕ್ಷೇತ್ರದ ಮಣ್ಣನ್ನು ಹಾಗೂ ಶ್ರೀ ಕ್ಷೇತ್ರ ಸ್ವಾಧ್ಯ ದಿಗಂಬರ ಜೈನ ಮಠದ ಶ್ರೀಗಳಿಂದಲೂ ಕೂಡ ಕ್ಷೇತ್ರದ ಮೃತಿಕಾ ಮಣ್ಣನ್ನು ಭಾರತೀಯ ಹಿಂದು ಪರಿಷತ್ ಸದಸ್ಯರುಗಳಿಗೆ ಹಸ್ತಾಂತರಿಸಿದರು. ಶುಭವಾಗಲಿ ಎಂದು ಆಶೀರ್ವದಿಸಿದರು. ಹೊಂಬುಜ ಶ್ರೀಗಳು ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಹರಸಿದರು. ಜೈನ ಸಮುದಾಯದಿಂದ ಮಂದಿರಕ್ಕೆ 24 ಕೆ. ಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ನೀಡಿದ್ದಾರೆ. ಅಲ್ಲದೇ ಬಿಹಾರದ ಮಹಾವೀರ್ ಜೈನ್ ಬಸದಿ ಟ್ರಸ್ಟ್ ವತಿಯಿಂದ 10ಕೋಟಿ ರೂ.ಗಳನ್ನು ಘೋಷಿಸಲಾಗಿದೆ.
ವಿಶ್ವಕ್ಕೆ ಪ್ರಥಮವಾದ ಬೃಹಾದಾಕಾರದ ಪಿಂಜಿಮಂದಿರದ ಕೊಡುಗೆ ನೀಡಿದ ತುಮಕೂರು ಜೈನ ಸಮಾಜ ಈಗ ಮತ್ತೊಮ್ಮೆ ವಿಶ್ವಕ್ಕೆ ಪ್ರಥಮವಾದ ಬೃಹದಾಕಾರದ ಗಿಲ್ಲೆಯ ಮೇಲಿನ ಆಕಾಶಕ್ಕೆ ಮುಕ್ತವಾಗಿ ನಿರ್ಮಾಣವಾಗುತ್ತಿರುವ ಸಮವಸರಣ ನಿರ್ಮಾಣದ ಗರಿಮೆಯನ್ನು ತನ್ನದಾಗಿಸಿಕೊಂಡಿದೆ. ದಿನಾಂಕ 3/8/2020 ರಂದು ಯುಗಳ ಮುನಿಗಳಾದ ಪರಮಪೂಜ್ಯ 108 ಶ್ರೀ ಅಮೋಘಕೀರ್ತಿ ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿಮಹಾರಾಜರುಗಳ ನೇತೃತ್ವದಲ್ಲಿ ಒಂದು ಅಮೋಘವಾದ ಅಮರವಾದ ಬೃಹತ್ ಕಾರ್ಯಕ್ಕೆ ಶಂಖುಸ್ಥಾಪನೆ ತುಮಕೂರು ಜೈನ ದಿಗಂಬರ ಸಮಾಜದ ವತಿಯಿಂದ ನಡೆಯಿತು. ಅನೇಕ ದಾನಿಗಳ
ಸಹಕಾರದಿಂದ ಹಾಗೂ ಕಳೆದ ಬಾರಿಯ ಚಾತುರ್ಮಾಸದಿಂದ ಉಳಿದ ನಿಧಿಯಿಂದ ತುಮಕೂರಿನ ಮಂದಾರಗಿರಿಯ ಜೀರ್ಣೋದ್ಧಾರ ಹಾಗೂ ಒಂದು ಬೃಹತ್ ಸಮವಸರಣ ಮಂದಾರಗಿರಿಯ ಮೇಲೆ ಮೆಟ್ಟಿಲು ಹತ್ತಿ ಸಾಗಲು ತಕ್ಷಣವೇ ದರ್ಶನವಾಗುವ ಮಾದರಿಯಲ್ಲಿ ಲೈಫ್ ಸೈಜ್ ವೃಕ್ಷಗಳು ಹಾಗೂ ಮೂರ್ತಿಗಳೊಂದಿಗೆ ಸಾಕ್ಷಾತ್ ಸಮವಸರಣ ರಚನೆಯಾದಂತೆ ಮುಕ್ತ ಪರಿಸರದಲ್ಲಿ ನಿರ್ಮಾಣವಾಗಲಿದೆ . ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಎಸ್. ಜೆ ನಾಗರಾಜುರವರು , ಮುನಿಗಳ ಪರಮ ಭಕ್ತರಾದ ಶ್ರೀ ಟಿ.ಎನ್ ಅಜಿತ್ ಕುಮಾರ್ ದಂಪತಿಗಳು ಬೆಂಗಳೂರಿನ ಕೇಂದ್ರ ಸರ್ಕಾರಿ ವಕೀಲರಾದ ನಾಗಶ್ರೀ ರವರು ಹಾಗೂ ಅನೇಕ ದಾನಿಗಳು ತುಮಕೂರು ಜೈನ ಸಮಾಜದ ಮುಖಂಡರುಗಳು , ಸದಸ್ಯರುಗಳು ಉಪಸ್ಥಿತರಿದ್ದರು.
ಕರೋನ ಸಂದರ್ಭದಲ್ಲಿಯೂ ಜೈನ್ ಮಿಲನ್ ಮೀಟಿಂಗ್ ಗಳು ಆನ್ಲೈನ್ ಸಹಾಯದಿಂದ ನಿರಂತರವಾಗಿ ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಿಕೊಂಡು ಧೃಡತೆಯಲ್ಲಿ ಏಕತೆಯನ್ನು ಮೆರೆದಿದೆ. ಬೆಂಗಳೂರು ಜೈನ ಮಿಲನ್ ಆಗಬಹುದು ಮೈಸೂರು ಮಂಗಳೂರು ಜೈನ್ ಮಿಲನ್ ಇರಬಹುದು ರಾಜ್ಯದೆಲ್ಲೆಡೆ ಈ ವಿಷಮ ಪರಿಸ್ಥಿತಿಯಲ್ಲೂ ಧೃತಿಗೆಡದೆ ತಮ್ಮ ಮಿಲನ್ ಮೀಟಿಂಗ‍್ ಗಳನ್ನು ಆನ್ ಲೈನ್ ನಲ್ಲಿ ಏರ್ಪಡಿಸಿಕೊಂಡು ತಮ್ಮ ಸದಸ್ಯರುಗಳಿಗೆಲ್ಲಾ ಧೈರ್ಯ ತುಂಬುತ್ತಾ ಪರಿಸ್ಥತಿಯನ್ನು ಎದುರಿಸುವ ಸಲಹೆಗಳು ಹಾಗೂ ಮಿಲನ್ ನ ಚಟುವಟಿಕೆಗಳ ಚರ್ಚಿಸುತ್ತಾ ನಿರಂತರ ತಮ್ಮ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ. ಮಿಲನ್ ನ ಈ ಕಾರ್ಯಗಳಿಗೆ ಜ್ವಾಲಾಮಾಲಾ ಅಭಿನಂದಿಸುತ್ತದೆ.
ಈಗ ಪ್ರಕಟಣೆಗಳ ವರದಿ:
ರಜತ ಮಹೋತ್ಸವದ ಪ್ರಯುಕ್ತ ರಾಜಾಜಿನಗರ ಜೈನ್ ಮಿಲನ್ ಬೆಂಗಳೂರು ಇವರಿಂದ ಜೈನ ಸಾಹಿತ್ಯ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿವರಗಳಿಗಾಗಿ ಸಂಪರ್ಕಿಸಿ : ಪಂಡಿತ ರತ್ನ ಎ. ಶಾಂತರಾಜ ಶಾಸ್ತ್ರಿ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕಾಗಿ , ಎಸ್. ಎಸ್. ಎಲ್ .ಸಿ ಪರೀಕ್ಷೆ
ಹಾಗೂ ದ್ವಿತೀಯ ಪಿ ಯು ಸಿ ಯಲ್ಲಿ ಕ್ರಮವಾಗಿ 92 ಹಾಗೂ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ .
ವಾತ್ಸಲ್ಯ ಗಾರುಡಿ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರ ಸಂಘಸ್ಥ್ಯ ತ್ಯಾಗಿಗಳಾದ 108 ದೇವಪ್ರಭು ಮಹಾರಾಜರಿಗೆ ಸಮಾಧಿ ಮರಣ ಪ್ರಾಪ್ತಿಯಾಗಿದೆ. ಸಲ್ಲಿಕನ ವ್ರತಧಾರಣೆಯನ್ನು ಮಾಡಿದ ಮುನಿಗಳು 5/8/2020ರಂದು 11-45ಕ್ಕೆ ಸಮಾಧಿ ಮರಣ ಹೊಂದಿದ್ದು ಬೆಳಗಾವಿ ಮಾಣಿಕ್ ಭಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಮುನಿಗಳ ಅಂತ್ಯಕ್ರಿಯೆ ವಿಧಿವಿಧಾನದೊಂದಿಗೆ ನಡೆದಿದೆ.
ಕೊಪ್ಪಳದ 1008 ಪಾರ್ಶ್ವನಾಥ ಸ್ವಾಮಿ ಪಂಚಕೂಟ ಬಸದಿಯಲ್ಲಿ ನಿರಂತರ ಮಳೆಯಿಂದಾಗಿ ಗೋಡೆ ಕುಸಿದು ಹಿರಿಯರು ಅದರ ಹಿಂದೆ ಇಟ್ಟಿದ್ದ ಪುರಾತನ ಮೂರ್ತಿಗಳು ಮತ್ತೆ ಕಾಣಿಸಿಕೊಂಡಿವೆ. ಈ ಬಗ್ಗೆ 13 ವರ್ಷದ ಬಾಲಕ ಜ್ವಾಲಾಮಾಲ ನ್ಯೂಸ್ ಗೆ ವೀಡಿಯೋ ವರದಿ ನೀಡಿದ್ದಾನೆ . ಒಮ್ಮೆ ನೋಡೋಣ ಬನ್ನಿ. ನಗರದ ಕೋಟೆ ಬಡಾವಣೆಯಲ್ಲಿರುವ ಈ ದಿಗಂಬರ ಜೈನ ಬಸದಿ ಬಹಳ ಪುರಾತನವಾಗಿದ್ದು, ಇಲ್ಲಿನ ಧರ್ಮಾತ್ಮ ರಿಂದ ತಾತ್ಕಾಲಿಕ ಜೋರ್ಣೋದ್ಧಾರ ಕಂಡಂತಹ ಜಿನ ಮಂದಿರ ಅಲ್ಲಿ 2 , 3 ದಿನಗಳ ಹಿಂದೆ ಸುರಿದ ಮಳೆಗೆ ಗರ್ಭ ಗುಡಿಯ ಪಕ್ಕದ ಗೋಡೆ ಕುಸಿದು ಗೋಡೆಯ ಹಿಂದೆ ಪುರಾತನ ತೀರ್ಥಂಕರುಗಳ ಕೆತ್ತನೆ ಇರುವ ಶಿಲೆ ಹಾಗೂ ಧರಣೇಂದ್ರ ಸ್ವಾಮಿಯ ಶಿಲೆಗಳು ಮತ್ತೆ ಹೊರಬಂದಿರುವ ಸುದ್ದಿಯನ್ನು ಸುಹಾಸ್ ಜೈನ್ 13 ವರ್ಷದ ಬಾಲಕ ವರದಿ ನೀಡಿ ವೀಡಿಯೋವನ್ನು ಜ್ವಾಲಾಮಾಲಾಗೆ ಕಳುಹಿಸಿದ್ದು ಬನ್ನಿ ಅವನಿಂದಲೇ ಸುದ್ದಿ ತಿಳಿಯೋಣ.
ವಾರದ ಸುದ್ದಿಗಳಿಗಾಗಿ ಪ್ರತಿವಾರವೂ ವೀಕ್ಷಿಸಿ ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ ಪ್ರತಿ ಶನಿವಾರ ಸಂಜೆ 7-00 ಸರಿಯಾಗಿ . ನಿರಂತರ ಸುದ್ದಿಗಾಗಿ ವೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.














