ಹೊಮ್ಚಾ #ಇಂದ್ರದ್ವಾಜ

ಧರ್ಮಯಾತ್ರೆ

ಇಂದಿನ ಮತ್ತೊಂದು ಧಾರ್ಮಿಕ ಕಾರ್ಯಕ್ರಮ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಚಾತುರ್ಮಾಸ ಅಷ್ಠಾನಿಕ ಪರ್ವದ ನಿಮಿತ್ತ ಪ್ರಪ್ರಥಮ ಬಾರಿಗೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ ಮಾತೆ ಪದ್ಮಾವತಿ ಅಮ್ಮನವರ ಮಹಾಸನ್ನಿದಿ ಹಾಗೂ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ  ಇಂದ್ರ ದ್ವಜ ಮಹಾಮಂಡಲ ವಿಧಾನ ಇದೇ ನವೆಂಬರ್ 13 ರಿಂದ 20 ವರೆಗೆ ಅಮೋಘವಾಗಿ ಜರುಗಿತು. ಇನ್ನೂ ಇಲ್ಲಿನ ಇಂದ್ರ ದ್ವಜದ ಮಹಾ ಮಂಡಲದ ಬಗ್ಗೆ ಹೇಳುವುದಾದರೆ, ರಜತ ಮಂಟಪದಲ್ಲಿ ವಿಶೇಷವಾಗಿ 4 ದಿಕ್ಕಿಗೆ ಚತುರ್ಮುಖ ಬಿಂಬಗಳನ್ನು ಸ್ಥಾಪಿಸಿ ಸರ್ವತೊಭದ್ರ ಮಂಗಲ ಮಯವನ್ನಾಗಿಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಭಾರಿಗೆ ಅತಿ ದೊಡ್ಡದಾದ ಬೃಹತ್ ಮಂಡಲ ರಚನೆ ಮಾಡಲಾಗಿ 30 ಅಡಿ ಅಗಲ ಮತ್ತು 30 ಅಡಿ ಉದ್ದದಲ್ಲಿ 48 ಗಂಟೆಗಳ ಕಾಲ ಬಹಳ ನಿಕರವಾಗಿ ರಚಿಸಲಾಗಿದೆ. ತಮಿಳುನಾಡಿನ ಅರಹಂತ ಗಿರಿ ಮಠದ ಸ್ವಸ್ತಿಶ್ರೀ ದವಳ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ಅತಿ ಸುಂದರವಾಗಿ ರಚನೆ ಮಾಡಲಾಗಿದ್ದು ಅವರೊಟ್ಟಿಗೆ ಸೊಂಧಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು ಹಾಗೂ ಹೊಂಬುಜ ಶ್ರೀಗಳವರು ಒಟ್ಟಿಗೆ ಸಾನಿಧ್ಯದಲ್ಲಿ ಪಂಡಿತರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ರಚಿಸಿ ತಮಿಳುನಾಡಿನಿಂದ ತರಿಸಲಾದ ಸುಮಾರು 800 ವರ್ಷಗಳ ಪೂರಾತನ ಪಂಚಮೇರುಗಳನ್ನು ಸ್ಥಾಪಿಸಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ನಂದೀಶ್ವರನನ್ನು ಸ್ಥಾಪಿಸಿ ಹಾಗೂ ವಿಶೇಷವಾಗಿ ಮತ್ತು ಪ್ರಮುಖವಾಗಿ 458 ರತ್ನ ಬಿಂಬಗಳನ್ನು ಜೋಡಿಸಿ ಭಾರತ ದೇಶದಲ್ಲೇ ಮೊದಲ ಬಾರಿಗೆ ಹೊಂಬುಜ ಶ್ರೀಕ್ಷೇತ್ರದಲ್ಲಿ ಇಂತಹ ವೈಭವದ ದರ್ಶನ ಭಾಗ್ಯ ಲಭಿಸಿದೆ. ಕಂಬದ ಹಳ್ಳಿ ಪರಮ ಪೂಜ್ಯ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕರು ಹಾಗೂ ಪೂಜ್ಯಾ ಆರಿಕ ರತ್ನ ಶಿವಮತಿ ಮಾತಾಜೀಯವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್