ಹೊಸ ಕಾರ್ಯಕ್ರಮ ಪ್ರಚಾರವನ್ನು ಸೇರಿಸಿ

ಜೈ ಜಿನೇಂದ್ರ ವೀಕ್ಷಕರೆ, ಇಂದು ಒಂದು ಸಂತಸದ ಸುದ್ದಿಯೊಂದಿಗೆ ನಿಮ್ಮೊಂದಿಗೆ ಲೈವ್ ನಲ್ಲಿ ಇದ್ದೇನೆ, ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಿಮಗಾಗಿ ನವೀನ ಕಾರ್ಯಕ್ರಮಗಳ ಹೊಸ ಗುಚ್ಚವನ್ನು ಇದೆ ಶ್ರಾವಣ ಮಾಸದಿಂದ ತಂದಿದೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ.

ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಕರಾವಳಿ ಮಲನೋತ್ಸವವನ್ನು ಮೊದಲಿಗೆ ಫೇಸ್ಬುಕ್ ಲೈವ್ ಕಾರ್ಯಕ್ರಮವನ್ನು ನೀಡಿದ ಮೊದಲ ಚಾನಲ್ ಎಂಬ ಹೆಗ್ಗಳಿಕೆಯೊಂದಿಗೆ, ಕನಕಗಿರಿ ಮಹಾಮಸ್ತಕಾಭಿಷೇಕದ ಮನೋಗ್ನ ದೃಶ್ಯಾವಳಿಯನ್ನೊಳಗೊಂಡ ಸುದ್ದಿಯೊಂದಿಗಿನಿಂದ ಹಿಡಿದು, ಶ್ರವಣ ಬೆಳಗೊಳ, ಧರ್ಮಸ್ಥಳ ಮಹಾ ಮಸ್ತಕಾಭಿಷೇಕದ ಸುಂದರ ದೃಶ್ಯಕಾವ್ಯಗಳು ಹಾಗೂ ಜೈನ್ ಮಿಲನ್ ನ ಬೃಹತ್ ಕಾರ್ಯಕ್ರಮಗಳು ಜೈನ್ ಅಸೋಸಿಯೇಷನ್ನ ಬೃಹತ್ ಮಹೋತ್ಸವಗಳು ಜಿನ ಭಜನಾ ಸ್ಪರ್ಧೆಯಂತಹ ಯಶಸ್ವಿ ಕಾರ್ಯಕ್ರಮದ ಸಮಗ್ರ ಪ್ರಸ್ತುತಿಯೊಂದಿಗೆ ಇನ್ನೂ ಅನೇಕ ವಿಷಯದಲ್ಲಿನ ಕಲ್ಪನೆಯನ್ನೊಳಗೊಂಡ ಧಾರ್ಮಿಕ ಕ್ಷೇತ್ರದಲ್ಲಿನ ಸುದ್ದಿ ಸಂಕಲನದ ನಾವೀನ್ಯತೆಯೊಂದಿಗೆ ತಲುಪಿಸಿದ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ಲಾಕ್ ಡೌನ್ ಸಂದರ್ಭದಲ್ಲಿ ಚಿಣ್ಣರಿಗಾಗಿ ಧಾರ್ಮಿಕ ವಿಚಾರಧಾರೆ ಸಂಸ್ಕಾರ ನೀಡುವಂತಹ ಆಸಕ್ತಿ ಹುಟ್ಟಿಸಿ ಸ್ಪರ್ಧೆಕೊಡುವುದರ ಮೂಲಕ ತನ್ನ ಅಳಿಲು ಪ್ರಯತ್ನ ನಡೆಸಿದ್ದಲ್ಲದೆ ಈಗ ಅದೆ ಲಾಕ್ ಡೌನ್ ಕಾರ್ಯಕ್ರಮಗಳ ಮುಂದುವರೆದ ಭಾಗವಾಗಿ ವಾರದ ಕಾರ್ಯಕ್ರಮಗಳನ್ನು ಆರಂಭಿಸುತ್ತಿದೆ.

ಮೊದಲಿಗೆ ಜ್ವಾಲಮಾಲ ಧರ್ಮದ ಬೆಳೆ ಬಿತ್ತೋಣ ಕಾರ್ಯಕ್ರಮ.

ಇಂದಿನ ಮಕ್ಕಳೆ ನಾಳಿನ ಸತ್ಪುರುಷರು ನಿಮ್ಮ ಮನೆಯ ಮುದ್ದು ಮಕ್ಕಳ ಧಾರ್ಮಿಕ ಹಿತ್ತಾಸಕ್ತಿ ಬೆಳವಣಿಗೆಗಾಗಿ ತಂದಿದೆ ಪ್ರತಿ ಭಾನುವಾರ 10:30ಕ್ಕೆ ಸರಿಯಾಗಿ ನಿಮ್ಮ ಮಕ್ಕಳಲ್ಲಿ ಧರ್ಮದ ವಿಷಯದಲ್ಲಿನ ಯಾವುದೆ ರೀತಿಯ ಆಸಕ್ತಿ ಇರಬಹುದು ಸ್ತೊತ್ರ ಮಂತ್ರ ಭಜನೆ ಕೀರ್ತನೆ ಹಾಗೂ ಕವನ ಲೇಖನ ಇನ್ನಿತರ ಕಲೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇರುವಂತಹ ಕಾರ್ಯಕ್ರಮ ಈ ಧರ್ಮದ ಬೆಳೆ ಬಿತ್ತೋಣ ಕಾರ್ಯಕ್ರಮ.

ಎರಡನೇಯದಾಗಿ ವಾರದ ಸಮಗ್ರ ಸುದ್ದಿ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಾರದುದ್ದಕ್ಕು ರಾಜ್ಯಾದ್ಯಂತ ನಡೆಯುವ ಧಾರ್ಮಿಕ ವಿಚಾರಗಳ ಕಾರ್ಯಕ್ರಮಗಳ ಸಂಪೂರ್ಣ ಸುದ್ದಿ ವಿವರ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಪ್ರತಿ ಶನಿವಾರ ಸಂಜೆ 7 ರಿಂದ 7:30ಕ್ಕೆ.

ಇಲ್ಲಿ ಮೂಡಿಬರುವ ಮತ್ತೊಂದು ಕಾರ್ಯಕ್ರಮ ಜ್ವಾಲಮಾಲ ಸಾಧಕರ ಹೆಜ್ಜೆ.

ನಮ್ಮಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಹಾದಿ ಕಾರ್ಯವೈಕರಿ ಅವರ ನುಡಿಗಳಲ್ಲಿ ಪ್ರತಿ ಭಾನುವಾರ ಸಂಜೆ 4:30 ರಿಂದ 5 ಘಂಟೆಯವರೆಗೆ ಕಾರ್ಯಕ್ರಮ ಜ್ವಾಲಮಾಲ ಸಾಧಕರ ಹೆಜ್ಜೆ.

ಇವೆಲ್ಲಾ ಕಾರ್ಯಕ್ರಮಗಳು ಜ್ವಾಲಮಾಲ ಡಾಟ್ ನ್ಯೂಸ್ ಫೇಸ್ಬುಕ್ ಪೇಜ್ ನಲ್ಲಿ ಲೈವ್ ಹಾಗೂ ಜ್ವಾಲಮಾಲ ನ್ಯೂಸ್ ಯೂಟ್ಯುಬ್ ಚಾನಲ್ ನಲ್ಲೂ ಕೂಡ ಪ್ರಸಾರವಾಗಲಿದೆ.

ಪ್ರತ್ಯೇಕ ಕಾರ್ಯಕ್ರಮಗಳ ಸಂಪೂರ್ಣ ವಿವರದೊಂದಿಗೆ ಮತ್ತೆ ನಿಮ್ಮ ಮುಂದೆ ಹಾಜರಾಗಲಿದ್ದೇನೆ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್