ಜೈ ಜಿನೇಂದ್ರ ವೀಕ್ಷಕರೆ ಶ್ರೀ ಕ್ಷೇತ್ರ ಅರಅಂತ ಗಿರಿ, ಅರಅಂತ ಗಿರಿಯು ತಮಿಳುನಾಡಿ ತಿರುವಣ್ಣಮಲೈ ಜಿಲ್ಲೆಯ ತಿರುಮಲೈನಲ್ಲಿದೆ, ಇಲ್ಲಿನ ಪ್ರಕೃತಿ ಸೌಂದರ್ಯ ಚಿತ್ತಾಕರ್ಷಕ ಕೆತ್ತನೆಗಳು ಪ್ರವಾಸಿಗರನ್ನು ಮನಸೂರೆ ಗೊಳಿಸುತ್ತವೆ. ಸುಂದರವಾದ ಬೆಟ್ಟದಲ್ಲಿ ಸುಮಾರು 18 ಅಡಿ ಎತ್ತರದ ಭಗವಾನ್ ಶ್ರೀ 1008 ನೇಮಿನಾಥ ತೀರ್ಥಂಕರರ ಬಿಂಬವು ಪ್ರತಿಷ್ಟಾಪಿಸಲ್ಪಟ್ಟಿದೆ. ಹಿಂದೆ ಪಂಚಪಾಂಡವರು ಅಜ್ಞಾನವಾಸದ ಕಾರಣ ತಿರುಮಲೈ ಕ್ಷೇತ್ರಕ್ಕೆ ಬಂದ್ದಿದಾಗ ಜಿನ ದರ್ಶನ ಮಾಡಲೇಂದು ಇಲ್ಲಿ ಜಿನ ಬಿಂಬವ ಕೆತ್ತಿಸಿದರು ಎಂದು ಶಿಲಾ ಲೇಖಗಳು ತಿಳಿಸುತ್ತವೆ. ಆದ ಕಾರಣ ಈ ಮೂರ್ತಿಯು ಚತುರ್ಥ ಕಾಲದಿರಬಹುದು ಎಂದು ಹೇಳಬಹುದು ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ಮಾರನೇಯ ದಿನ ಭಗವಂತ ನೇಮಿನಾಥ ತೀರ್ಥಂಕರರ ಈ ಜಿನ ಬಿಂಬಕ್ಕೆ ಮಹಾಮಸ್ತಕಾಭಿಷೇಕವನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಸಾವಿರಾರು ಜೈನರು ಈ ಕ್ಷೇತ್ರಕ್ಕೆ ಬಂದು ಭಗವಂತನ ಮಹಾಮಸ್ತಕಾಭಿಷೇಕದ ಸುಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದೆ ಬೆಟ್ಟದ ಮೇಲೆ ಸಾವಿರಾರು ವರ್ಷದ ಪ್ರಾಚೀನವಾದ ಭಗವಾನ್ ಶ್ರೀ 1008 ಪಾರ್ಶ್ವನಾಥ ಜಿನ ಮಂದಿರ ಮತ್ತು ವೃಷಭ ಸೇನಾ ಗಣದರರ, ಸಮಂತ ಭದ್ರ ಆಚಾರ್ಯರ ಹಾಗೂ ಆಚಾರ್ಯ ಶ್ರೀ ಭರದತ್ತ ಮಹಾರಾಜರ ಚರಣ ಪಾದುಕ್ಕೆಗಳು ಇವೆ. ಬೆಟ್ಟದ ಮೇಲೆ ಶ್ರೀ ನೇಮಿನಾಥ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಬಸದಿ ಇದೆ, ಇಲ್ಲಿಯೆ ಒಂದು ಚಿಕ್ಕ ಗುಹೆಯು ಕೂಡ ಇದೆ. ಇದರಲ್ಲಿ ಸಾವಿರಾರು ವರ್ಷ ಪ್ರಾಚೀನವಾದ ಬಾಹುಬಲಿ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮತ್ತು ಕುಷ್ಮಾಡಿನಿ ದೇವಿ ತನ್ನ ಗಂಡ ಮಕ್ಕಳ ಜೊತೆಯಲ್ಲಿ ಇರುವ ಮೂರ್ತಿಇದೆ. ಅದರ ಪಕ್ಕದಲ್ಲಿ ಮತ್ತೊಂದು ದೊಡ್ಡ ಗುಹೆ ಇದೆ, ಆ ಗುಹೆಯಲ್ಲಿ ಆಗಿನ ಕಾಲದ ಮರಗಿಡಗಳಿಂದ ಸಿದ್ದಪಡಿಸಲಾದ ಬಣ್ಣಗಳಿಂದ ಸಮ್ವತ್ಸರಣ, ಎರಡುವರೆ ದ್ವೀಪ, ಸರಸ್ವತಿ ಮೂರ್ತಿ, ತ್ರಿಲೋಕ ಸ್ವರೂಪ, ಮುನಿಗಳು ಸ್ವದ್ಯಾಯ ಮಾಡುವ ಚಿತ್ರ, ಮುನಿಗಳು ಆಹಾರ ಚರ್ಯಗೆ ಹೋಗುವ ಚಿತ್ರ ಇತ್ಯಾದಿ ಹಲವಾರು ಚಿತ್ರಗಳಿವೆ.
ಇದನ್ನು ತಿಳಿದ ಶ್ರವಣ ಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1998ರಲ್ಲಿ ಸ್ವಸ್ತಿಶ್ರೀ ಧವಲ ಕೀರ್ತಿ ಸ್ವಾಮೀಜಿಯನ್ನು ಅರಅಂತ ಗಿರಿಗೆ ಮಠಾಧೀಶರನ್ನಾಗಿ ಮಾಡಿದರು. ಭಟ್ಟಾರಕ ಚಿಂತಾಮಣಿ ಸ್ವಸ್ತಿಶ್ರೀ ಧವಲ ಕೀರ್ತಿ ಮಹಾ ಸ್ವಾಮೀಜಿಯವರ ಪೂರ್ವಶ್ರಮದ ಹೆಸರು ಧರಣೇಂದ್ರ ಪಿ ಶಾಸ್ತ್ರಿ. ತಮಿಳುನಾಡಿನ ಉಪ್ಪುವೇಲುರು ಇವರ ಜನ್ಮ ಸ್ಥಳ, ಶ್ರೀ ಪಾರ್ಶ್ವನಾಥ ವಿ.ಎ. ಜೈನ್ ಸುಗುಣಮ್ಮ ದಂಪತಿಗೆ ದಿನಾಂಕ 25-06-1967ರಂದು ಜನಿಸಿದರು. 1979ರಲ್ಲಿ ತಮಿಳುನಾಡಿನ ಆರುಣಿ ನಗರಕ್ಕೆ ಶ್ರವಣ ಬೆಳಗೊಳದ ಸ್ವಾಮೀಜಿಯವರು ಪಂಚಕಲ್ಯಾಣ ಕಾರ್ಯಕ್ರಮದ ನಿಮ್ಮಿತ ಬಂದಾಗ ಸ್ವಸ್ತಿಶ್ರೀ ಧವಲ ಕೀರ್ತಿ ಸ್ವಾಮೀಜಿಯವರನ್ನು ಕಂಡು ತಮ್ಮ ಜೊತೆಯಲ್ಲಿ ಶ್ರವಣ ಬೆಳಗೊಳಕ್ಕೆ ಅವರನ್ನು ಕರೆತಂದರು.
ಶ್ರವಣ ಬೆಳಗೊಳದಲ್ಲಿ ಅಧ್ಯಾಯನ ಮಾಡಿಸಿ ಮುಂದೆ ಮಧ್ಯಪ್ರದೇಶ, ಕಾಶಿ ಮುಂತಾದ ಸ್ಥಳಗಳಿಗೆ ವಿಶೇಷ ಅಧ್ಯಾಯನಕಾಗಿ ಕಳುಹಿಸಿದರು. ಸ್ವಸ್ತಿಶ್ರೀ ಧವಳ ಕೀರ್ತಿ ಸ್ವಾಮೀಜಿಯವರು ಆಚಾರ್ಯ ಶ್ರೀ 108 ವಿಧ್ಯಸಾಗರ ಮಹಾರಾಜರು ಪ್ರಥಮ ಗಣನೆ ಆರಿಕ 105 ಜ್ಞಾನಮತಿ ಮಾತಾಜೀಯವರ ಜೊತೆ ಅಧ್ಯಾಯನ ಮಾಡಿ ನಂತರ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಜೈನ ಸಿದ್ದಾಂತ ಎಂ.ಎ ಶಿಕ್ಷಣವನ್ನು ಪೂರ್ಣಗೊಳಿಸಿ ಅಂದಿನ ರಾಷ್ಟ್ರ ಪತಿ ಕೆ.ಆರ್. ನಾರಾಯಣ ಅವರಿಂದ ಚಿನ್ನದ ಪದಕವನ್ನು ಪ್ರಪ್ತಮಾಡಿಕೊಂಡರು. ನಂತರ ಜ್ಯೋತಿಷ್ಯ ಶಾಸ್ತ್ರದಲ್ಲಿಯು ಎಂ.ಎ ಶಿಕ್ಷಣವನ್ನು ಪೂರ್ಣಗೊಳಿಸಿದರು. 1997ರಲ್ಲಿ ಆಧ್ಯಾಯನ ಮುಗಿಸಿ ಶ್ರವಣ ಬೆಳಗೊಳಕ್ಕೆ ಆಗಮಿಸಿದ ಇವರನ್ನು ದಿನಾಂಕ 08-02-1998ರಂದು ತಿರುಮಲೈ ಪ್ರದೇಶದಲ್ಲಿರುವ ಅರಅಂತ ಗಿರಿಗೆ ಮಠಾಧೀಶರನ್ನಾಗಿ ನೇಮಕ ಮಾಡಲಾಯಿತು.
ಯಾವ ವ್ಯವಸ್ಥೆಯು ಇರದ ಈ ಕ್ಷೇತ್ರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಿಂತಿಸಲಾಯಿತು. ಆ ಚಿಂತನೆಯ ಕಾರಣ ಇಂದು ಸುಮಾರು 80ಎಕ್ಕರೆ ಭೂಮಿಯನ್ನು ಕರಿದಿಸಿ ದಿಗಂಬರ ಜೈನ ಮಠ ಅಕಲಂಕ ವಿದ್ಯಾ ಪೀಠ ಸ್ಥಾಪನೆ ಮಾಡಲಾಯಿತು.
ಸಾವಿರಾರು ಮಕ್ಕಳು ಇಲ್ಲಿ ಜ್ಞಾನಾರ್ಜನೆಯನ್ನು ಪಡೆದರು. ಅವರಲ್ಲಿ ಇಂದು ನಾಲ್ಕು ವಿದ್ಯಾರ್ಥಿಗಳು ನಾಲ್ಕು ಮಠದ ಮಠಾಧೀಶರಾಗಿರುವವರು. ಈ ಸ್ಥಳದಲ್ಲಿ ಇಂದು ವೃಧ್ದಾಶ್ರಮ, ಗೋಶಾಲೆ, ಶಾಲೆ, ಕಾಲೇಜುಗಳನ್ನು ಕಾಣಬಹುದು. ಇಂದಿಗೂ ಸಾವಿರಾರು ಮಕ್ಕಳಿಗೆ ಅನ್ನದಾನ ನಡೆಯುತ್ತಿದೆ. ಪಂಚ ಕುಲದೇವಿಯರ ಮಂದಿರ ನಿರ್ಮಿಸಲ್ಪಟ್ಟಿದೆ. 720 ತೀರ್ಥಂಕರರ ಮಂದಿರವು ನಿರ್ಮಾಣವಾಗುತ್ತಲಿದೆ. ಇವರಿಗೆ ಗೌರವ ಡಾಕ್ಟರೆಟ್, ಸರ್ವದೇಶ ತಮಿಳು ವಿಶ್ವವಿದ್ಯಾನಿಲಯದಿಂದ ಭಟ್ಟಾರಕ ಚಿಂತಾಮಣಿ, ಪ್ರತಿಷ್ಟ ಸಿದ್ದಾಂತ ಚಕ್ರವರ್ತಿ, ವಾತ್ಸಲ್ಯ ಮೂರ್ತಿ, ಜ್ಞಾನ ವಿದ್, ಜ್ಯೋತಿಷ್ಯ ವಿದ್, ಜ್ಞಾನ ಮೂರ್ತಿ, ಸಂಸ್ಕೃತಿ ಸಾಮ್ರಾಟ, ಧರ್ಮ ರತ್ನಾಕರ, ಸಾಧನ ರತ್ನ ಇನ್ನೂ ಅನೇಕ ಉಪಾಧಿಗಳು ಸಂದಿದೇ.
ಮಠದ ವತಿಯಿಂದ ಪ್ರತಿ ತಿಂಗಳು 2000ಕುಟುಂಬಗಳಿಗೆ ರೇಷನ್ ವಿತರಣೆ ಮಾಡಲಾಗುತ್ತದೆ. ತಮಿಳುನಾಡಿನ ಸುಮಾರು 150 ಪುರೋಹಿತರುಗಳಿಗೆ ಪ್ರತಿ ತಿಂಗಳು ಗೌರವ ಧನ ವಿತರಣೆ, ಪ್ರತಿ ದಿನ ಸಾವಿರ ವಿಧ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡಲಾಗುತ್ತದೆ. ಹಾಗೂ ನೂರಕ್ಕಿಂತು ಹೆಚ್ಚಿನ ಬಸದಿಗಳು ಇವರ ನೇತೃತ್ವದಲ್ಲಿ ಜೀರ್ಣೋದ್ದಾರಗೊಂಡಿರುತ್ತದೆ. ಈ ಎಲ್ಲಾ ಕಾರ್ಯಗಳಲ್ಲಿ ಶ್ರವಣ ಬೆಳಗೊಳದ ಶ್ರೀಗಳ ಶ್ರೀ ವೀರೆಂದ್ರ ಹೆಗ್ಗಡೆಯವರ ಸಹಕಾರವಿದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ
ಜ್ವಾಲಮಾಲ ಡಾಟ್ ನ್ಯೂಸ್














