ಆಕაშತ ಪುಂಜ ಪರಿಚಯ / ಜ್ವಾಲಾಮಾಲಾ ನ್ಯೂಸ್ / 2020

ಜೈ ಜಿನೇಂದ್ರ ವೀಕ್ಷಕರೆ ಬಸದಿಯ ದರ್ಶನ ಪಾಠದ ಭಾಗವಾಗಿ ಬಹುಜನರ ಅಪೇಕ್ಷೆಯ ಮೇರೆಗೆ ಅಕ್ಷತ ಪುಂಜದ ಮುಂದಿನ ಭಾಗವನ್ನು ಪ್ರಸ್ತುತ ಪಡಿಸುತ್ತಿದೇವೆ.

ಅಕ್ಷತ ಪುಂಜವನ್ನಿಡುವ ವಿಧಾನವನ್ನು ಮೈಸೂರಿನ ಲತಾ ಸುದರ್ಶನ್ ರವರು ತಿಳಿಸಿಕೊಡಲ್ಲಿದ್ದಾರೆ.

ಲತಾ ಸುದರ್ಶನ್ ರವರು ಮಾತನಾಡಿ (ಜೈ ಜಿನೇಂದ್ರ ಇವತ್ತಿನ ದಿನಾ ಜ್ವಾಲಮಾಲ ಡಾಟ್ ನ್ಯೂಸ್ ವೈಶಾಲಿ ಪ್ರಭುರವರು ಅಕ್ಷತ ಪುಂಜದ ಬಗ್ಗೆ ಹೇಳಿ ಮತ್ತು ಅಕ್ಷತ ಪುಂಜವನ್ನಿಡುವ ವಿಧಾನವನ್ನು ತಿಳಿಸಿಕೊಡ ಬೇಕೆಂದು ಹೇಳಿದರು. ಹಾಗಾಗಿ ಈ ಅಕ್ಷತ ಪುಂಜದ ಬಗ್ಗೆ ತಿಳಿಸಿಕೊಡುತ್ತಿದ್ದೆನೆ.  ಅಕ್ಷತೆಯನ್ನು ಅದನ್ನು ತೆಗೆದುಕೊಂಡು ಶುದ್ದ ನೀರಿನಿಂದ ತೊಳೆದು ಅಕ್ಕಿ ಹೋಳಾಗದ ಹಾಗೆ ಅಕ್ಕಿಯನ್ನು ಜೋಪಾನವಾಗಿ  ತೆಗೆದುಕೊಂಡು  ಮುಷ್ಠಿಯಲ್ಲಿ ಹಿಡಿದುಕೊಂಡು .  ಓಂ ನಮೋ ಹರಿಹಂತಾಳಂ , ನಮೋ ಸಿದ್ದಾಳಂ,  ನಮೋ ಆಯಿರ್ಯಾಳಂ, ನಮೋ  ಕುವಚ್ಛಾಯಾಣಂ, ನಮೋ ಳೋಯಿ ಸರ್ವಾಸ್ಸಾಗುಣಂ,  ಈ ಒಂದು ಪಂಚ ನಮಸ್ಕಾರ ಮಂತ್ರ ನಾವು ಹಾಗೆ ಸರ್ವ ತಿಥಿಗಳಲ್ಲಿ ದೈನಂದಿಕವಾಗಿ ಯಾವ ಯಾವ ಪುಂಜಗಳನ್ನು ಇಡಬೇಕು  ಎಂದರೇ ಪ್ರತಿನಿತ್ಯ ಬಸದಿಗೆ ದರ್ಶನಕ್ಕೆ ಹೋದಾಗ  ದರ್ಶನಂ ದೇವ ದೇವಸ್ಯ , ದರ್ಶನಂ ಪಾಪ ನಾಶಸ್ಯ , ದರ್ಶನಂ ಸ್ವರ್ಗ ಸೋಪಾನಂ ದರ್ಶನಂ ಮೋಕ್ಷ ಸಾಧನಂ ಎಂದು ಹೇಳಿಕೊಂಡು  ಜಿನೇಂದ್ರ ಭಗವಂತನ ದರ್ಶನವನ್ನು ಮಾಡಿ ಮೊದಲು ಪುಂಜವನ್ನು ಇಡಬೇಕು . ನಂತರ ನವ ದೇವತೆಗಳಿಗೆ ಆಮೇಲೆ  ಶೃತದೇವಿಯನ್ನು ನೆನೆಸಿಕೊಂಡು  ಪ್ರಥಮಾನುಯೋಗ , ಕರುಣಾನುಯೋಗ ಚರಣಾನುಯೋಗ  ದ್ರವ್ಯಾನುಯೋಗ  ನಂತರ ರತ್ನ ತ್ರಯವನ್ನು ಪ್ರಾಪ್ತಿ ಮಾಡುವ ಸಲುವಾಗಿ  ಅದರ ಪ್ರತೀಕವಾಗಿ ಸಂಯೇಕ್ ದರ್ಶನ, ಸಂಯೇಕ್ ಜ್ನಾನ  ಸಂಯೇಕ್ ಚಾರಿತ್ರ್ಯ ಎಂದು

ಹೇಳಿ ಚಂದ್ರಾಕಾರದಲ್ಲಿ ಶಿಲೆಯ ಪ್ರತೀಕವಾಗಿ  ಒಂದು ಪುಂಜವನ್ನು ಇಟ್ಟು ಪ್ರತಿನಿತ್ಯ  ದರ್ಶನ ಮಾಡಬೇಕು. ನಂತರ  ಚತುರ್ಗತಿ ನಾವೆಲ್ಲಾ ಸಂಸಾರದಲ್ಲಿ ಜಂಜಾಟದಲ್ಲಿ ತೊಳಾಲಾಡುತ್ತಿದ್ದೇವೆಯೋ ಆ ಚತುರ್ಗತಿಯಿಂದ ಮುಕ್ತಿ ಯಾಗುವುದಕ್ಕೆ  ನಂತರ ಸ್ವಸ್ತಿಕ್ ಆಕಾರದ ರೀತಿಯಾದಂತಹ ಅಕ್ಷತೆಯನ್ನು ಇಟ್ಟು ಅದರಲ್ಲಿ ನಾಲ್ಕು ಗತಿಗಳನ್ನು ಇಟುತ್ತಾ ಹೋಗಬೇಕು . ನಂತರ ಅಷ್ಟಾನಕ ಪರ್ವದಲ್ಲಿ  ನಂದೀಶ್ವರ  ದ್ವೀಪದಲ್ಲಿ ಏನು  ಈ ದ್ವೀಪದಲ್ಲಿ ಮನುಶ್ಯರು ಹೋಗಲು ಸಾಧ್ಯವಿಲ್ಲ  ಅಲ್ಲಿ ದೇವತೆಗಳು ಹಗಲಿರುಳು ಎನ್ನದೇ ಏನು ಪೂಜೆ ಮಾಡುತ್ತಾರೆ ಆ ಒಂದು ಪ್ರತೀಕವಾಗಿ  ಜಿನಾಲಯದಲ್ಲಿ  ಜಿನಬಿಂಬವನ್ನು ಸ್ಥಾಪಿಸಿ ಪೂಜೆ ಮಾಡುತ್ತೇವೆ. ಅದೇ ಪ್ರಕಾರ ನಾವು 52 ಚೈತ್ಯಾಲಯಗಳ ಪ್ರತೀಕವಾಗಿ  52 ಪುಂಜಗಳನ್ನು ಇಟ್ಟು ಒಂದೊಂದು ಪುಂಜದಲ್ಲೂ  ಚೈತ್ಯಾಲಯದಲ್ಲಿ 108  ಶ್ರೀ ಜಿನಬಿಂಬ ವನ್ನು  ನಾವು ಇದೇ ಎಂದು ಭಾವಿಸಿಕೊಂಡು  ಆ ಅಷ್ಟಾನಿಕ  ಅಷ್ಟಾರ್ಚನೆಯನ್ನು ಮಾಡಿಕೊಂಡು  ಅರ್ಘ್ಯ ವನ್ನು ಮಾಡಬೇಕು.

ಇದೇ ಪ್ರಕಾರ ಶೋಡಷಕಾರಣೆ ಭಾವನೆಗಳನ್ನು ಸಹ 16 ದಿನ  16 ಪುಂಜಗಳನ್ನು ಇಟ್ಟುಕೊಂಡು  ಆ ಒಂದು ಶೋಡಷಕಾರದ ಪರ್ವದ ಭಾವನೆಗಳನ್ನು ಮಾಡಿಕೊಂಡು ಅಂತಹ ಒಂದು ಭಾವನೆಗಳು ನಮಗೆ ಲಭಿಸಲಿ ಎಂದು ಜಿನೇಂದ್ರ ಭಗವಂತನ ಜಿನಗಳನ್ನು ಶೋಡಷಕಾರಣ ಭಾವನೆಗಳನ್ನು ಪೂಜಿಸುತ್ತಾ ಅರ್ಘ್ಯ ಗಳನ್ನು ಕೊಡುತ್ತಾ ಹೋಗಬೇಕು. ಇದೇ ಪ್ರಕಾರ ದಶಲಕ್ಷಣ ಪರ್ವ ಅಥವಾ ಪರಿಯೂಜನಾ ಪರ್ವವನ್ನು  10 ಪುಂಜಗಳನ್ನು  ಇಡಬೇಕು. ಏನು ಉತ್ತಮ  ಕ್ಷಮಾದಿ  10 ದಶ ಧರ್ಮಗಳಿವೆ , ಉತ್ತಮ ಕ್ಷಮಾ, ಉತ್ತಮ  ಮಾರ್ಧವ , ಉತ್ತಮ ಶೌಚ, ಉತ್ತಮ  ಸತ್ಯ, ಉತ್ತಮ ಸಂಯಮ , ಉತ್ತಮ ಕಫ, ಉತ್ತಮ  ತ್ಯಾಗ, ಉತ್ತಮ  ಆಶಿಂಚನ್ಯ ,  ಉತ್ತಮ ಬ್ರಹ್ಮಚರ್ಯ  ಈ ಪ್ರಕಾರ ಈ 10 ಧರ್ಮಗಳನ್ನೂ ಸ್ಮರಿಸಿಕೊಳ್ಳುತ್ತಾ 10 ಪುಂಜಗಳನ್ನಿಟ್ಟು ಪ್ರತಿದಿನ  ಒಂದೊಂದು ಪುಂಜಕ್ಕೆ ದ್ವವ್ಯಗಳನ್ನು ಇಡುತ್ತಾ  ಆ ಅಷ್ಟಕಗಳನ್ನು ಮಾಡಿ ನಾವು ಅರ್ಘ್ಯ ಮಾಡಬೇಕು.  ಇದು ನಮ್ಮ ಪರ್ವಗಳಲ್ಲಿ  ಮತ್ತು ದೈನಂದಿಕ  ದಿನಗಳಲ್ಲಿನಮ್ಮ ಬಸದಿಗಳಲ್ಲಿ ಇಡುವಂತಹ  ಪುಂಜ . ಇನ್ನೂ

ಅನೇಕ ರೀತಿಯಾದ ಪುಂಜಗಳಿವೆ ಅವುಗಳನ್ನೆಲ್ಲಾ ಪ್ರತಿನಿತ್ಯ ಇಡುವುದಕ್ಕಾಗುವುದಿಲ್ಲ  ಆದರೆ ಆ ಪುಂಜಗಳನ್ನು ಭಾವಿಸಿಕೊಂಡು ನಾವು ಸಮಯ ಇದ್ದಾಗ ನಾವು ಅದನ್ನು ಕಲಿತುಕೊಳ್ಳಬಹುದು. ಅದೇ ತರಹ ಅಷ್ಟಾನಕ ಪ್ರವದಲ್ಲಿ  ಪಂಚಮೇರು ಎನ್ನುವ  ಪುಂಜಗಳನ್ನು ಸಹ  ತುಂಬಾ ಚೆನ್ನಾಗಿ ಇಡಬಹುದು. ಒಂದು ಸಾಲಿನಲ್ಲಿ 5 ಪುಂಜಗಳನ್ನು ಇಟ್ಟುಕೊಂಡು ಒಟ್ಟು 80  ಪುಂಜಗಳನ್ನು ಇಟ್ಟು  ಅಲ್ಲೂ ಸಹ 80 ಜಿನ  ಚೈತ್ಯಾಲಯಗಳ  ಪ್ರತೀಕವಾಗಿ ಆ ಪುಂಜಗಳನ್ನು ಇಡುತ್ತಾ ಹೋಗಬೇಕು. ಈ ಪ್ರಕಾರ ನಾವು ಭಾವಿಸಿಕೊಂಡು  ಶ್ರದ್ಧೆ ಭಕ್ತಿಗಳಿಂದ  ಎಲ್ಲಾ ಒಂದು ಶುದ್ದ ಭಾವನೆಯಿಂದ ನಾವು ಪೂಜೆ ಮಾಡಿದರೆ  ಅದರ ಪುಣ್ಯದ ಫಲ ಪುಣ್ಯಕರಿಗೆ ಮತ್ತು ಶ್ರಾವಕರಿಗೆ ಸಲ್ಲುತ್ತದೆ ಎಂದು ಹೇಳುತ್ತಾ  ನಾನು ಈ ಒಂದು ಪುಂಜದ ಕಾರ್ಯವನ್ನು ತೋರಿಸಿದ್ದು ಅದು ಎಲ್ಲರಿಗೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳುತ್ತಾ  ನಮಸ್ಕರಿಸುತ್ತೇನೆ. ವೀಕ್ಷಕರೇ ಇನ್ನೂ ಹೆಚ್ಚಿನ ರೀತಿಯ ಅನೇಕ ಬಗೆಯ ಪುಂಜಗಳ ಬಗ್ಗೆ ತಿಳಿಸಲು  ಕೌಸಲ್ಯ ಧರಣೇಂದ್ರರವರ ಜೈನ ಸಂಸ್ಕೃತಿ  ಅಕ್ಷತಾ ಪುಂಜದ ಬಗ್ಗೆ ತಿಳಿಸಲಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ವೀಕ್ಷಿಸುತ್ತಿರಿ ಜ್ವಾಲಾ ಮಾಲಾ ಡಾಟ್ ನ್ಯೂಸ್.