ಜೈನ ಚರಿತ್ರೆ/ ಜ್ವಾಲಾಮಾಲಾ ನ್ಯೂಸ್ / 2020

ಬಂಧುಗಳೆ ಮನುಷ್ಯ ಮೊದಲಿನಿಂದಲು ಸ್ವತಂತ್ರವಾಗಿರಲು ಬಯಸುತ್ತಾನೆ, ಸ್ವತಂತ್ರವನ್ನು ಹುಡುಕುತ್ತಾನೆ. ಚಿಂತೆ, ನೋವು, ಅಸಹಾಯಕತೆ, ದುಖಃ, ಜೀವನ್ಮರಣ ಹೀಗೆ ಇದೆಲ್ಲದರಿಂದ ಮುಕ್ತಿ ಹೊಂದುವ ಬಯಕೆಯೇ ಹಲವಾರು ಧರ್ಮಗಳು ನಂಬಿಕೆಗಳು ಆಚರಣೆಗಳ ಹುಟ್ಟಿಗೆ ಕಾರಣವಾಗಿದೆ. ಉನ್ನತ ಜ್ಞಾನವನ್ನು ಪಡೆಯಲು ಅನೇಕ ಮಾರ್ಗಗಳಿವೆ ಅವುಗಳಲ್ಲಿ ಒಂದು ಅನುಯಾಯಿಗಳಿಗೆ ಸ್ವತಂತ್ರ ಅಥವ ಮುಕ್ತಿ ಮಾರ್ಗದ ಸೂತ್ರಗಳನ್ನು ತಿಳಿಸುವುದು, ಸೂಕ್ತ ಹಾದಿಯನ್ನು ಸೂಚಿಸುವುದು.

ಪ್ರಸ್ತುತ ಸ್ಥಿತಿಗತಿಗಳಲ್ಲಿ ಇದರ ಅವಶ್ಯಕತೆ ಅತ್ಯಂತ ಅನಿವಾರ್ಯವಾಗಿದ್ದು ಇಂತಹ ಉತ್ತಮ ಹಾದಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಂಡಿರುವ ಒಂದು ಉದಾಹರಣೆಯನ್ನು ಅಧ್ಯಯನ ಮಾಡಡುವುದ್ದಾದರೆ, ಜೈನ ಜಾತಿಯಲ್ಲ ಜೀವನ ಶೈಲಿ.

ಖ್ಯಾತ ಚಲನಚಿತ್ರ ನಟರು ಶ್ರೀಧರ್ ರವರು ಮಾತನಾಡಿ (ನಮಸ್ಕಾರ, ನನಗೆ ವೈಯಕ್ತಿಕವಾಗಿ ಜೈನ ಧರ್ಮದ ಬಗ್ಗೆ ಬಹಳ ಗೌರವ ಪ್ರೀತಿ. ಹಲವು ವರ್ಷಗಳ ಹಿಂದೆ ಹಲವು ಕಾರಣಾಂತರಗಳಿಂದ ಜೈನ ಧರ್ಮದ ಬಗ್ಗೆ ವಿಶೇಷವಾದಂತಹ ಅಧ್ಯಾಯನವನ್ನ ಮಾಡುವಂತಹ ಭಾಗ್ಯ ನನಗೆ ಸಿಕ್ಕಿತು. ಆ ಸಮಯದಲ್ಲಿ ಹಗಲು ರಾತ್ರಿ ಎಷ್ಟೊ ತಿಂಗಳು ನಾನು ಜೈನ ಧರ್ಮದ ಬಗ್ಗೆ ಓದುವುದಕ್ಕೆ ಅಧ್ಯಾಯನ ಮಾಡಿದೆ).

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತನಾಡಿ (ಜ್ವಾಲಮಾಲ ನ್ಯೂಸ್ ರವರು ಜೈನ ಸಿದ್ಧಾಂತ ತತ್ವಗಳು, ಆಹಾರ ಪದ್ಧತಿ ಜೀವನ ಶೈಲಿ ಇತ್ಯಾದಿಗಳ ಮೇಲೆ ಒಂದು ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದು ಸ್ಥುತ್ಯಾರವಾಗಿರುವಂತಹದ್ದು).

ಈ ನಿಟ್ಟಿನಲ್ಲಿ ಜೈನ ಧರ್ಮದ ಕರುಣೆ ಸಹನೆ ಅಹಿಂಸೆಯಿಂದ ಕೂಡಿದ ಹಾದಿ ದಿನನಿತ್ಯದ ಜಂಜಾಟದೊಂದಿಗೆ ಸಮಸ್ಯೆಗಳಿಗೆ ಸಮಾದನವನ್ನು ನೀಡುತ್ತದೆ. ಜಿನ ಅಂದರೆ ಜನ್ಮಗಳನ್ನು ಇಂದ್ರಿಯಗಳನ್ನು ಗೆದ್ದವನ್ನಾಗಿಸುವ ಸುವರ್ಣ ಅವಕಾಶವನ್ನು ಕಲ್ಪಿಸುತ್ತದೆ. ಜೈನ ಧರ್ಮದ ತತ್ವಗಳಾದ ಅಹಿಂಸೆ, ಜೀವಿಸು ಜೀವಿಸಲು ಬಿಡು, ಇದಕ್ಕಾಗಿಯೇ ತಾನೆ ಇಡಿ ವಿಶ್ವದ ಯುದ್ದ.ಜೈನ ಧರ್ಮ ಅನ್ನುವುದು ಒಂದು ಧರ್ಮವಾಗಿರದೆ ಒಂದು ತರ್ಕ ಶಾಸ್ತ್ರವಾಗಿದೆ. ಬದುಕಲು ಬೇಕಾದ ದಾರಿಯಾಗಿದೆ, ಒಬ್ಬ ವ್ಯಕ್ತಿ ಇದನ್ನು ಆಳವಾಗಿ ಅಧ್ಯಯನ ನಡೆಸಿದರೆ ಮಂದಿರ ನಿರ್ಮಾಣಕ್ಕಿಂತ ಮುಖ್ಯವಾಗಿ ಒಬ್ಬ ವ್ಯಕ್ತಿ ಹಿಂಸೆ ಮಾರ್ಗವನ್ನು ತೊರೆದು ಅಹಿಂಸಾತ್ಮಕನಾಗಿ ಪರಿವರ್ತನೆಯಾದರೆ ಅದಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಅತಿ ಪುರಾತನವಾದ ಜೈನ ಧರ್ಮದ ಅನುಯಾಯಿಗಳು ಕಾಲಚಕ್ರದ ಸುಳಿಯಲ್ಲಿ ಸಿಕ್ಕಿ ಕಡಿಮೆಯಾದರು ಈ ಹಾದಿಯನ್ನು ಅನುಸರಿಸಿದವರು ವಿಶ್ವದಲ್ಲಿ ಬಹಳ ಜನ ಒಪ್ಪಿದವರು ಅಪ್ಪಿದವರು ಅನೇಕ ಜನ ಈಗಲೂ ಭಾರತದಲ್ಲಿ ಐವತ್ತು ಲಕ್ಷಕ್ಕು ಹೆಚ್ಚು ಜನ ನೀವೇ ನಿಮ್ಮ ಭವಿಷ್ಯದ ಬರಹಗಾರರು ನಿಮ್ಮ ಇತಿಹಾಸದ ರಚನೆಕಾರರು ನೀವು ಮಾಡಿದ ಪಾಪ ಪುಣ್ಯ ಲಾಭ ನಷ್ಟಕ್ಕೆ ನೀವೇ ಜವಬ್ಧಾರರು ಎನ್ನುವ ಕರ್ಮ ಸಿದ್ಧಾಂತವನ್ನು ಶಮಣ ಪರಂಪರೆಯನ್ನು ಅರ್ಥ್ಯಸಿಕೊಂಡಿದ್ದಾರೆ. ಆದ್ದರಿಂದಲ್ಲೆ ಜೈನ ಸಮುದಾಯ

ಸಾಕ್ಷರತೆಯಲ್ಲಿ ಅತ್ಯಂತ ಮುಂದೆ ಇದ್ದು ಶೇಕಡ 94ರಷ್ಟಿದೆ. ಭಾರತದಲ್ಲಿ ಗೃಹ ಉಧ್ಯೊಗದಲ್ಲಿ ಕೂಡ ಇವರ ಸ್ಥಾನ ಉನ್ನತ ಮಟ್ಟದಾಗಿದೆ, ದೇಶದ ಆರ್ಥಿಕ ಪ್ರಗತಿ ವಿಚಾರದಲ್ಲಿ ಅವರು ಬಹಳ  ಮುಂದೆ ಇದ್ದಾರೆ,

ಜೈನ ಜೀವನ ಶೈಲಿ ಜಗತ್ತಿನ ಎಲ್ಲಾ ಜೀವನ ಶೈಲಿಗಿಂತ ಸ್ವಸ್ತ್ಯವಾದುದು ಎಂದು ವಿಶ್ವಮಾನ್ಯ ಪಡೆದಿದೆ. ಜೈನ ತತ್ವವಾದ ಅಹಿಂಸಾ ಮಾರ್ಗ ಗಾಂಧಿ, ಲೂಥರ್ ಕಿಂಗ್ ಹೀಗೆ ಅನೇಕ ನೇತಾರರನ್ನು ಪ್ರೇರೆಪಿಸಿದೆ.

ನಾಡೋಜ ಡಾ|| ಮನು ಬಳಿಗಾರ್ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ರವರು ಮಾತು ಮುಂದುವರಿಸಿ (ತನ್ನ ಮೂಲ ಉದ್ದೇಶವನ್ನಾಗಿ ಅಹಿಂಸೆಯನ್ನು ಇಟ್ಟು ಕೊಂಡು ಜೈನ ಧರ್ಮ ಜಾರಿಗೆ ಬಂತು. ಇವತ್ತು ವಿಶ್ವಾದ್ಯಂತ ಈ ತತ್ವವನ್ನು ಪಾಲಿಸ ಬೇಕಾಗಿದೆ, ಅಹಿಂಸಾ ತತ್ವ ಅನುವುದ್ದನ್ನ ನಾವು ತಿಳಿದುಕೂಳ್ಳ ಬೇಕು ಜಗತ್ತಿನ ಅನೇಕ ಮಹಾನ್ ನಾಯಕರಿಗೆ ಸ್ಪೂರ್ತಿ ಮಹಾತ್ಮಗಾಂಧಿಜೀಯವರು, ಮಹಾತ್ಮಗಾಂಧಿಜೀಯವರಿಗೆ ಜೈನ ತತ್ವ ಸಿದ್ಧಾಂತ ಈ ಆಹಾರ ಪದ್ದತಿ, ವಿಚಾರ ಪದ್ಧತಿ ಇವೆಲ್ಲ ಬಹಳಷ್ಟು ಮಾಡಿದವು ಎಂದು ಮಹಾತ್ಮಗಾಂಧಿಜೀಯವರು ಹೇಳಿದರು. ಅವರಿಗೆ ಇದಕ್ಕೆ ಕಾರಣವಾದವರು ರಾಯಚಂದ್ ಎನ್ನುವವರು, ಅವರ ಮೂಲಕ ಗಾಂಧಿಜೀಯವರಿಗೆ ಈ ಜೈನ ತತ್ವ ಸಿದ್ಧಾಂತದ ಒಂದು ಪ್ರಭಾವವಾಯಿತು. ಅಂದರೆ ಸತ್ವಿಕಾ ಆಹಾರವಿರ ಬೇಕು, ಸಸ್ಯಾಆಹಾರ, ಹಿಂಸೆ

ಸಲ್ಲದು ಕೇವಲ ಪ್ರಾಣಿಗಳಿಗೆ ಅಲ್ಲ ಮನುಷ್ಯರ ಮನಸ್ಸನ್ನು ನೋಯಿಸಯವುದು ಕೂಡ ಹಿಂಸೆ ಅನ್ನುವುದು ಇದರ ಹಿಂದೆ ಇರುವಂತಹ ಒಂದು  ಒಳ ಅರ್ಥ).

ಇವರಲ್ಲಿ ತುಂಬ ಸ್ವರಸ್ಯಕರವದ ಮತ್ತೊಂದು ಸಂಗತಿ ಎಂದರೆ ಅವರ ಪರ್ವಗಳಲೊಂದ್ದಾದ ದಶಲಕ್ಷಣ ಪರ್ವ ಎನ್ನುವ ಹತ್ತು ದಿನದ ಪರ್ವದಲ್ಲಿ ಆಚರಿಸುವ ಕ್ಷಮದಿನ ಎನ್ನುವ ವಿಶೇಷ ಆಚರಣೆ. ಅಂದು ತಮ್ಮ ಶತ್ರುಗಳನ್ನಾದಿಯಾಗಿ ಪ್ರತಿಯೊಬ್ಬರೊಂದಿಗೆ ತಿಳಿದೋ ತಿಳಿಯದೋ ತಮ್ಮಿಂದಾದ ತಪ್ಪುಗಳಿಗೆ ಕ್ಷಮೇಯಾಚಿಸುತ್ತಾರೆ. ಇದರಿಂದ ಮಾನವೀಯ ಮೌಲ್ಯಗಳಿಗೆ ಸಂಬಂಧಗಳಿಗೆ  ಅವರುಗಳಲ್ಲಿನ ಪ್ರಾಮುಖ್ಯತೆಯ ಅರಿವಾಗುತ್ತದೆ.

ಕ್ಷಮಾಯಾಚನೆಯಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲಾ ದ್ವೆಷವನ್ನು ಬಳಸುವುದರಿಂದ ಅಂತಿಮವಾಗಿ ಸಿಗುವುದು ಶೂನ್ಯ ಕ್ಷಮೆ ಎನ್ನುವುದು ಮನುಷ್ಯ ನನ್ನು ದೇವತಾ ಮನುಷ್ಯನನ್ನಾಗಿಸುತದ್ದೆ. ನೀವು ಮಂದಿರ ಹಾಗೂ ದೇವಸ್ಥಾನಕ್ಕೆ ತಮ್ಮ ಬಯಕೆಗಳನ್ನು ಅವಶ್ಯಕತೆಗಳಿಗೋಸ್ಕರ ದೇವರಲ್ಲಿ ಪ್ರಾರ್ಥಿಸಲು ದಾವಿಸುತ್ತಿರಾದರೆ, ಜೈನರು ದೈವಿ ಗುಣಗಳನ್ನು ತಮ್ಮದಾಗಿಸಿಕೊಳ್ಳಲು ದೈವತ್ವದ ಅಧ್ಯಾತ್ಮದ ಅನುಕರಣೆಗಾಗಿ ಶಾಶ್ವತ ಮುಕ್ತಿಗಾಗಿ ಬಸದಿಗಳಿಗೆ ತೆರಳುತ್ತಾರೆ.  ಯಾವುದೆ ಆರ್ಥಿಕ ಲಾಭಕ್ಕಾಗಿ ಅಲ್ಲ ಅಧ್ಯಾತ್ಮಿಕ ಲಾಭಕ್ಕಾಗಿ ಅಲ್ಲಿನ ಧನಾತ್ಮಕ ಶಕ್ತಿಯನ್ನು ತಮ್ಮಲ್ಲಿ ತುಂಬಿಕೊಳ್ಳುತ್ತಾರೆ. ವಿಶ್ವದೆಲ್ಲೆಡೆ ಜೈನ ಸಂಸ್ಕೃತಿಯ ಇತಿಹಾಸ  ಅಧ್ಯಾಯನ ನಡೆಯುತ್ತಿದ್ದು, ವಿಶ್ವದ ಬೃಹತ್ ವಿಶ್ವವಿಧ್ಯಾಲಯಗಳಲ್ಲಿ ಈ ಸಿದ್ದಾಂತದ ಬಗ್ಗೆ ಉತ್ಸುಕರಾಗಿದ್ದಾರೆ. ಸಂಶೋಧನೆ ಅಧ್ಯಾಯನ ನಡೆಸುತ್ತಾರೆ. ಹೀಗಿರುವಾಗ ಈ ಸಮಯದಲ್ಲಿ ಇದು ಉಪಯುಕ್ತ ಮಾಹಿತಿ ಎಂದುಕೊಂಡಿದ್ದೇನೆ. ಮನುಷ್ಯತ್ವದ ನೇಲೆಗಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ದೇಹದ ಸ್ವಾಸ್ಯವನ್ನು  ಈ ಪರಿಶುದ್ಧ ವಾತಾವರಣದಲ್ಲಿ ಕಾಪಡಿಕೊಳ್ಳಲು ಸಹಾಯಕಾರಿ ಎಂದು ಭಾವಿಸುತ್ತ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ನಿಮ್ಮನ್ನು ಭೇಟಿಯಾಗಲ್ಲಿದ್ದೇನೆ ನೋಡುತ್ತೀರಿ ಜ್ವಾಲಮಾಲ ಡಾಟ್ ನ್ಯೂಸ್.