ಶ್ರೀ ಕ್ಷೇತ್ರ ಶ್ರೀರಾವಣಬೆಳಗೂಳ ಸ್ವಾಮೀಜಿಯ ಹುಟ್ಟುಹ 날ದ ಶುಭಾಶಯಗಳು ಹೋಂಭುಜ ಶ್ರೇ / ಜ್ವಲಾಮಲೆ ನ್ಯೂಸ್ / 2024

ಪರಮ ಪೂಜ್ಯ ಸ್ವಸ್ತಿಶ್ರೀ ಕರ್ಮಯೋಗಿ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾಸ್ವಾಮೀಜಿಯವರ ಜನ್ಮದಿನದ ಈ ಶುಭದಿನದಂದು ಅವರಿಗಾಗಿ ಶುಭ ಕಾಮನ ನುಡಿಗಳನ್ನು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳವರು ಸಮಸ್ತ ಭಟ್ಟಾರಕರ ಪರವಾಗಿ ಜ್ವಾಲಮಾಲ ಡಾಟ್ ನ್ಯೂಸ್ ಮೂಲಕ ಶುಭ ಸಂದೇಶವನ್ನು ತಿಳಿಸಿದ್ದಾರೆ. ಬನ್ನಿ ಅವರ ನುಡಿಗಳಲ್ಲಿ ಕೇಳೊಣ್ಣ.

ಈ ದಿವಸ ಪರಮ ಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಅವರ 71ನೇ ವರ್ಷದ ಜನ್ಮ ದಿವಸ  ಪರಮ ಪೂಜ್ಯ ಸ್ವಾಮೀಜಿಯವರ ಒಂದು ವ್ಯಕ್ತಿತ್ವ ಮೇರು ಪರ್ವತದ ಸಮಾನವಾಗಿರುವಂತ ವ್ಯಕ್ತಿತ್ವ ಅವರ ಜೀವನದಲ್ಲಿ ಮಾಡಿರುವಂತ ಸಾಧನೆಗಳು ಸಾಹಸಗಳು ಅವರ ಒಂದು ತಪಸ್ಸಿನ ಅಂತಕ್ಕೆ ತಲುಪಲು ಅಷ್ಟು ಸುಲಭವಾಗಿ ಸಮಾನ್ಯ ಜನರಿಗೆ ಸಾಧ್ಯವಿಲ್ಲ ಅವರ ಒಂದು ಐವತ್ತು ವರ್ಷದ ಪಟ್ಟಾಭಿಷೇಕದ ಸಂದರ್ಭದಲ್ಲಿ ಹಾಗೂ 71 ವರ್ಷದ ಜೀವಿತದ ಸಂದರ್ಭದಲ್ಲಿ ಧಾರ್ಮಿಕವಾಗಿ ಸಮಾಜಿಕವಾಗಿ ಶೈಕ್ಷಣಿಕವಾಗಿ ಔಷದಿ ಹಾಗೆ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ಸಹ ತಮ್ಮನ್ನು ತಾವು ತೊಡಗಿಸಿ ಕೊಂಡು ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಮೂಲ ನಾಯಕ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಯಾವ ಉದಾತ್ತವಾದ ತ್ಯಾಗ ಸಂದೇಶವಿತ್ತು ಹಾಗೆ ಸಮಾಜದ ಮೇಲೆ ದಯಾ ಕರುಣೆ ಅನ್ನುವಂತಹ ಅಹಿಂಸಾ ಭಾವನೆ ಇತ್ತು ಅವುಗಳನ್ನ ಸಮರ್ಪಣೆ ಪೂರಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಇಡೀ ವಿಶ್ವದಲ್ಲೇ ಜೈನ ಧರ್ಮವನ್ನು ಪ್ರಚಾರ ಮಾಡುವುದಕ್ಕೆ ಹಾಗೆ  ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಒಂದು ಸರ್ವತೋಮುಖದ ಪ್ರಗತಿಗೆ  ಅವರು ತಮ್ಮನ್ನು ತಾವು ಸಮರ್ಪಣಾ ಭಾವನೆಯಿಂದ ತೊಡಗಿಸಿಕೊಂಡು ಮಾಡಿದ್ದಾರೆ. ಅವರ ಒಂದು ಇವತ್ತಿನ ದಿವಸದಲ್ಲಿ ಕರ್ನಾಟಕ ವಿಶ್ವದ ಎಲ್ಲ ಕಡೆಯೂ ಸಹ ಅನಿವಾರ್ಯ ಕಾರಣವಾಗಿ ಈ ಒಂದು ಸಂದರ್ಭದಲ್ಲಿ ಇರುವುದರಿಂದ ಯಾವುದೇ ಒಂದು ಕಾರ್ಯ ಕ್ರಮಗಳನ್ನು ಮಾಡದೇ ಇದ್ದರು ಸಹ ಅವರು ಇರುವಂತಹ ಒಂದು ಸ್ಥಾನಕ್ಕೆ ಗೌರವಕ್ಕೆ ಇಡೀ ಸಮಾಜ ನಾವೆಲ್ಲರೂ ಅವರನ್ನು ನೆನೆಸಿಕೊಳ್ಳುವಂತಹ ಶುಭ ದಿವಸ ಆದ್ದರಿಂದ ಅವರ ಒಂದು ಜನ್ಮ ದಿವಸದ ಸಂದರ್ಭದಲ್ಲಿ ಪರಮ ಪೂಜ್ಯ ಸ್ವಾಮೀಜಿಯವರಿಗೆ ಭಕ್ತಿ ಪೂರ್ವಕ ನಮೋಸ್ತುಗಳನ್ನು ಸಲ್ಲಿಸಿ ಅವರ ಈ ಒಂದು ಜೀವನ ಇನ್ನಷ್ಟು ಸಾಧನಾ ಪೂರ್ವಕವಾಗಿ ನಡೆಯಲ್ಲಿ ಅವರಿಂದ ಇನ್ನಷ್ಟು ಧರ್ಮ ಕಾರ್ಯಗಳು ನಡೆಯಲ್ಲಿ,

ಅವರಿಂದ ವಿಶ್ವದ ಜೈನ ಧರ್ಮದ ಒಂದು ಕೀರ್ತಿ ಇದೆ ಇನ್ನಷ್ಟು ಪ್ರಚಾರವಾಗುವಂತ್ತಾಗಲ್ಲಿ ನಮ್ಮ ಕರ್ನಾಟಕದ ಜೈನ ಸಮಾಜವಾಗಲ್ಲಿ ಹಾಗೂ ಭಾರತದ ಜೈನ ಸಮಾಜವಾಗಲ್ಲಿ ಆ ಜೈನ ಸಮಾಜಕ್ಕೆ ಸದ ಮಾರ್ಗ ದರ್ಶನ  ಪ್ರೇರಣೆ ಆಶೀರ್ವಾದ  ಸದ ಇರುವಂತ್ತಾಗಲ್ಲಿ ಅವರಿಗೆ ಇನ್ನಷ್ಟು ಭಗವಂತ ಶ್ರೀ ಪಾರ್ಶ್ವನಾಥ ಸ್ವಾಮಿ ಜಗನ್ಮಾತೆ ಪದ್ಮಾವತಿ ಅಮ್ಮನವರ ಅನುಗ್ರಹ ಪೂರ್ವಕವಾಗಿ ಇನ್ನಷ್ಟು ಧರ್ಮ ಕಾರ್ಯಗಳನ್ನು ಮಾಡಿಸುವಷ್ಟು ಶಕ್ತಿ ಆಯುರ್ ಆರೋಗ್ಯ ಎಲ್ಲವೂ ಸಹ ದಯಪಾಲಿಸಲಿ ಎಂದು ಹೇಳಿ ಭಕ್ತಿ ಪೂರ್ವಕವಾಗಿ ನಮೋಸ್ತುಗಳನ್ನು ಸಲ್ಲಿಸುತ್ತೆನೆ.

ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ

ಜ್ವಾಲಮಾಲ ಡಾಟ್ ನ್ಯೂಸ್