ನಮ್ಮ ಜೈನ ಧರ್ಮದ ಆಚರಣೆಯ ಬಗ್ಗೆ ಶ್ರೀ ಧೀರಜ್ ಜೈನ್ ಹೊಳೆನರಸೀಪುರ ಇವರು ತಿಳಿಸಿದರು. ಅತಿ ಅವಶ್ಯಕವಾದಂತಹ ಶಕ್ರ್ಯಗಳಲ್ಲಿ ಒಂದು ಆಗಿರುವಂತಹ ದೇವರ ದರ್ಶನ ಅಂದರೆ ಭಗವಂತನ ದರ್ಶನವನ್ನು ಹೇಗೆ ಮಾಡುವುದು , ಜಿನೇಂದ್ರ ದೇವರ ದರ್ಶನವನ್ನು ಮಾಡಬೇಕೆಂದರೆ ಯಾವ ರೀತಿ ಮಾಡುವುದು , ಯಾವ ಆಚರಣೆಯನ್ನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇನೆ. ಈ ಒಂದು ಪರಿಸ್ಥಿತಿಯಲ್ಲಿ ಎಲ್ಲರಿಗೂ ತಿಳಿದಿರುವ ಹಾಗೇ ಇಡೀ ಪ್ರಪಂಚದಾದ್ಯಂತ ಮಹಾಮಾರಿ ಕೊರೋನಾ ಈ ಒಂದು ರೋಗ ಇಡೀ ಪ್ರಪಂಚದಾದ್ಯಂತ ಹರಡಿದೆ. ಈ ಒಂದು ದುಸ್ಥಿತಿಯನ್ನು ನಾವು ಈ ಒಂದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಪೇಕ್ಷಿಸಿದಾಗ ನಾವು ಯಾಕೆ ಈ ಜೈನ ಧರ್ಮದ ಆಚರಣೆ ಜೈನ ಧರ್ಮದ ಶಾಸ್ತ್ರದಲ್ಲಿ ಉಲ್ಲೇಖವಾಗಿರುವಂತಹ ಧರ್ಮದ ಬಗ್ಗೆ ಇರುವಂತಹ ಮಾತುಗಳನ್ನು ಹಾಗೂ ವಿಚಾರಗಳನ್ನು ನಾಲ್ಕು ಜನರಿಗೆ ತಿಳಿಸಿವಂತಹ ಕೆಲಸವನ್ನು ಮಾಡಬಹುದು ಎಂಬ ಕಾರ್ಯವನ್ನು ಯೋಚಿಸಿದ್ದೇವೆ. ಅದೇ ರೀತಿಯಾಗಿ ಮಕ್ಕಳಿಗೆ ಈ ಜಿನೇಂದ್ರ ದೇವಾಲಯದ ದರ್ಶನವನ್ನು ಹೇಗೆ ಮಾಡಬೇಕು ದೇವರ ದರ್ಶನವನ್ನು ಮಾಡುತ್ತಿರುವ ಸಂದರ್ಭದಲ್ಲಿ ಯಾವ ರೀತಿಯಾದಂತಹ ಕ್ರಮಗಳನ್ನು ಅನುಸರಿಸಬೇಕು ಇದರ ಬಗ್ಗೆ ನೀವು ವಿಚಾರಗಳನ್ನು ತಿಳಿಸಿಕೊಡಬೇಕೆಂದು ವಾಹಿನಿಯವರು ಕೇಳಿದಾಗ ಬಹಳ ಖುಷಿಯಿಂದ ಒಪ್ಪಿಕೊಂಡು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ.
ನಮ್ಮ ಆಗಮದಲ್ಲಿ ಅಂದರೆ ಶಾಸ್ತ್ರದಲ್ಲಿ ಏನು ಹೇಳಿವೆಯೆಂದರೆ ಆರು ಕ್ರಿಯೆಗಳು ಶ್ರಾವಕರಿಗೆ ಬಹಳ ಮುಖ್ಯವಾಗಿರುವಂತಹುದು. ಅದರಲ್ಲೂ ಕೂಡ ದೇವರ ದರ್ಶನ ಪ್ರತಿನಿತ್ಯ ಜೈನ ಧರ್ಮದಲ್ಲಿ ಹುಟ್ಟಿರುವಂತಹ ಜೀವಿ ಪ್ರತಿನಿತ್ಯ ಭಗವಂತನ ದರ್ಶನ ಮಾಡಬೇಕು . ಆರು ಕ್ರಿಯೆಗಳಲ್ಲಿ ಮೊಟ್ಟಮೊದಲ ಕ್ರಿಯೆ ದೇವರ ದರ್ಶನ. ಹಾಗಾದರೇ ದೇವರ ದರ್ಶನ ಮಾಡುವುದು ಹೇಗೆ ಮಾಡಬೇಕು ಯಾವ ರೀತಿ ಹೋಗಬೇಕು ಯಾವ್ಯಾವ ರೀತಿ ನಾವು ಮಂತ್ರವನ್ನು ಉಚ್ಚಾರಣೆ ಮಾಡಬೇಕು ಅವರಲ್ಲಿ ಏನು ಕೇಳಿಕೊಳ್ಳಬೇಕು ಅಂತ ಈ ವಿಚಾರಗಳನ್ನು ಮುಂದೆ ತಿಳಿದುಕೊಳ್ಳೋಣ. ಮೊಟ್ಟ ಮೊದಲ ಬಾರಿಗೆ ಪ್ರತಿಯೊಬ್ಬ ಜೀವಿಯೂ ಸಹ ಜೈನ ಧರ್ಮದಲ್ಲಿ ಪ್ರತಿಯೊಬ್ಬ ಜೀವಿಯೂ ಸಹ ಪ್ರತಿನಿತ್ಯ ಭಗವಂತನ ಸ್ಮರಣೆಯನ್ನು ಮಾಡಬೇಕು ಮತ್ತು ಪ್ರತಿನಿತ್ಯ ಜಿನೇಂದ್ರ ದೇವರ ದರ್ಶನವನ್ನು ಮಾಡಬೇಕು. ಅದಕ್ಕಾಗಿ ನಾವು ಮನೆಗಳಲ್ಲಿ ದೇವರ ಗುಡಿ ಹಾಗೂ ಊರುಗಳಲ್ಲಿ ದೇವಾಲಯ ,ಬಸದಿಗಳನ್ನು ನಿರ್ಮಾಣ ಮಾಡುತ್ತೇವೆ. ಆ ಬಸದಿಗೆ ಆದಷ್ಟು ಮಕ್ಕಳನ್ನು ಪ್ರತಿನಿತ್ಯ ಕರೆದುಕೊಂಡು ಹೋಗುವ ಅಭ್ಯಾಸವನ್ನು ಪೋಷಕರು ಮಾಡಬೇಕು . ಯಾಕೆ ನಾವು ಬಸದಿಗೆ ಹೋಗಬೇಕು ಎಂದರೆ ತುಂಬಾ ಜನ ಕೇಳುತ್ತದ್ದರು ದೇವರು ಎಲ್ಲಾ ಕಡೆ ಇದ್ದಾನೆ ಮತ್ತೆ ನಾವು ಯಾಕೆ ಬಸದಿಗೆ ಹೋಗಬೇಕು ಎಂದು ಎಲ್ಲಾ ಕಡೆ ದೇವರು ಇದ್ದರೂ ಕೂಡ ಬಸದಿಗೆ ಏತಕ್ಕೆ ಬರುತ್ತೇವೆಂದರೆ ಆ ಒಂದು ಮೂರ್ತಿ ಸ್ವರೂಪವನ್ನು ನಾವು ಒಂದು ಕೇಂದ್ರ ಸ್ಥಾನದಲ್ಲಿಟ್ಟುಕೊಂಡು ಆತನಿಂದ ಒಂದು ಯಾವುದೇ ರೀತಿಯಾದಂತಹ ಕೆಟ್ಟ ಭಾವನೆಗಳಿಲ್ಲದೇ ನಮ್ಮ ಮನಸ್ಸನ್ನು ಏಕಾಂತ ಸ್ಥಾನದಲ್ಲಿಟ್ಟುಕೊಂಡು ಭಜಿಸುವುದಕ್ಕೆ ನಮಸ್ಕರಿಸುವುದಕ್ಕೆ ನಾವುಗಳು ಬಸದಿಗೆ ಬರುತ್ತೇವೆ. ಅದಕ್ಕೆ ಈ ಬಸದಿಗೆ ಬರುವಾಗ ನಾವು ಏನು ಮಾಡಬೇಕು ಎಂದರೆ ನಾವು ಮೊಟ್ಟ ಮೊದಲನೆಯ ಬಾರಿಗೆ ಬಸದಿಯ ಮುಂದೆ ಪ್ರತಿ ಬಸದಿಯ ಮುಂದೆ ಒಂದು ಮಾನಸ್ಥಂಭ ಇದ್ದೇ ಇರುತ್ತದೆ. ತುಂಬಾ ಎತ್ತರವಾದ ಶಿಲೆಯಲ್ಲಿ ಕೆತ್ತನೆ ಮಾಡಿ ಮೇಲೆ ನಾಲ್ಕು ಮೂರ್ತಿಗಳನ್ನು ಇಟ್ಟಿರುತ್ತಾರೆ. ಪ್ರತಿಯೊಬ್ಬ ಜೀವಿಯೂ ಕೂಡ ಭಗವಂತನ ದರ್ಶನ ಮಾಡಲು ಬಸದಿಗೆ ಬರುವ ಮುನ್ನ ಆ ಮಾನಸ್ಥಂಭ ವನ್ನು ದರ್ಶನ ಮಾಡುತ್ತೇವೆ. ಮಾರ್ಗಸ್ಥಂಭ ದರ್ಶನವನ್ನು ಏಕೆ ಮಾಡುತ್ತೇವೆ ಎಂದರೆ ನಮ್ಮಲ್ಲಿ ಇರುವಂತಹ ಅಹಃ ಭಾವನೆ , ನಾನೆ ದೊಡ್ಡವನು , ನನ್ನಿಂದಲೇ ಎಲ್ಲಾ , ನಾನು ನನ್ನದು ಎಂಬ ಭಾವನೆ ಆ ಮಾನಸ್ಥಂಭ ವನ್ನು ನೋಡಿದ ತಕ್ಷಣ ಕಳಚಿಬೀಳುತ್ತವೆ. ಹಾಗಾಗಿ ನಾವು ಏನು ಮಾಡುತ್ತೇವೆ ಎಂದರೆ ಮಾನಕಷಾಯವನ್ನು ಅಂದರೆ ಅಹಃ , ಅಹಂಕಾರ, ಜಂಭ ಎಲ್ಲಾ ಕೂಡ ನಿವಾರಣೆಯಾಗಲಿ ಎಂದು ಮಾನಸ್ಥಂಭ ದರ್ಶನವನ್ನು ಮಾಡುತ್ತೇವೆ. ನಾವು ಬಸದಿಯ ಒಳಗಡೆ ಬರುವಾಗ ಮುಖ್ಯ ಧ್ವಾರ ಸಿಗುತ್ತದೆ ಆ ಧ್ವಾರಕ್ಕೆ ನಾವು ಏನು ಮಾಡಬೇಕೆಂದರೆ ನಿಸ್ಸಹೀ, ನಿಸ್ಸಹೀ, ನಿಸ್ಸಹೀ ಎಂದು ಮೂರು ಬಾರಿ ಹೇಳಬೇಕು ಅಂದರೆ ನಾವು ಬಸದಿಗೆ ಬರಬೇಕಾದರೆ ಅನೇಕ ರೀತಿಯಾದ ಕಣ್ಣಿಗೆ ಕಾಣದೇ ಇರುವಂತಹ ಜೀವಿಗಳು, ಕ್ರಿಮಿಕೀಟಗಳು ಗಾಳಿಯಲ್ಲಿ ಓಡಾಡುತ್ತಿರುತ್ತವೆ. ಆಗ ನಾವು ಈ ಮಂತ್ರದ ಉಚ್ಛಾರಣೆಯನ್ನು ಮಾಡುತ್ತಾ ಆ ಜೀವಿಗಳಿಗೆ ಬರುವಂತಹ ದಾರಿಯಲ್ಲಿ ಯಾವ ಜೀವಿಗಳಿರುತ್ತವೆ ಅವುಗಳು ನಾವು ಬರುತ್ತಿದ್ದೇವೆಂದು ಗೊತ್ತಾದಾಗ ಯಾವುದೇ ರೀತಿಯಾದಂತಹ ಜೀವಕ್ಕೆ ಹಾನಿಯಾಗಬಾರದೆಂದು ನಾವು ನಿಸ್ಸಹೀ, ನಿಸ್ಸಹೀ, ನಿಸ್ಸಹೀ ಎಂದು ಹೇಳುತ್ತಾ ಬಸದಿಯನ್ನು ಪ್ರವೇಶ ಮಾಡುತ್ತೇವೆ. ಧ್ವಾರವನ್ನು ಪ್ರವೇಶ ಮಾಡಿದ ನಂತರ ಭಗವಂತನ ಸನ್ನಿಧಾನದಲ್ಲಿ ಬಂದು ನಿಂತು ಭಗವಂತನಿಗೆ ಭಕ್ತಿ ಪೂರ್ವಕವಾಗಿ ನಮಸ್ಕಾರವನ್ನು ಮಾಡಬೇಕು. ನಮಸ್ಕಾರ ಮಾಡುತ್ತಾ ನಾವುಗಳು ಜಯಪ್ರಭು, ಜಯಪ್ರಭು ಜಯಪ್ರಭು ನಮೋಸ್ತು ಭಗವಾನ್ ನಮೋಸ್ತು ಭಗವಾನ್ ಎಂದು ಮೂರು ಬಾರಿ ಹೇಳಿ ತದನಂತರ ಭಗವಂತನಿಗೆ ನಮಸ್ಕಾರವನ್ನು ಮಾಡಬೇಕು. ನಮಸ್ಕರಿಸಿದ ನಂತರ ಪ್ರತಿಯೊಬ್ಬರೂ ಕುಡ ಬಹಳ ಶ್ರದ್ದೆಯಿಂದ ಪಂಚನಮಸ್ಕಾರ ಮಂತ್ರದ ಪಠಣವನ್ನು ಮಾಡಬೇಕು. ಓಂ ನಮೋ ಹರಿಹಂತಾಳಂ , ನಮೋ ಸಿದ್ದಾಳಂ, ನಮೋ ಆಯಿರ್ಯಾಳಂ, ನಮೋ ಕುವಚ್ಛಾಯಾಣಂ, ನಮೋ ಳೋಯಿ ಸರ್ವಾಸ್ಸಾಗುಣಂ, ಈ ಒಂದು ಪಂಚ ನಮಸ್ಕಾರ ಮಂತ್ರ ನಮ್ಮ ಧರ್ಮದಲ್ಲಿ ಅತ್ಯಂತ ಮಹತ್ವವಾಗಿರುವಂತಹ ಹಾಗೂ ಮಹಾನ್ ಪುಣ್ಯವನ್ನು ಗಳಿಸುವ ಮಂತ್ರವಾಗಿದೆ. ಹಾಗೂ ಮನಃಶಾಂತಿಗೋಸ್ಕರ ಏನು ಮಾಡಬೇಕೆಂದರೆ ಪಂಚನಮಸ್ಕಾರ ಜಪವನ್ನು ಮಾಡಬೇಕು. ಮನಸ್ಸಿನಲ್ಲೇ 9 ಬಾರಿ ಪ್ರತಿನಿತ್ಯ 27 ಬಾರಿ, 108 ಬಾರಿ ಮಾಡಿದರೆ ನಮ್ಮ ಮನಸ್ಸಿಗೂ ಕೂಡ ಅಷ್ಟೇ ನೆಮ್ಮದಿ ಸಿಗುತ್ತದೆ. ಅದಾದ ಮೇಲೆ ಭಗವಂತನ ದರ್ಶನ ಮಾಡಬೇಕಾದರೆ ಅವರ ಸ್ತುತಿಯನ್ನುಮಾಡಬೇಕು ದರ್ಶನಂ ದೇವ ದೇವಸ್ಯ , ದರ್ಶನಂ ಪಾಪ ನಾಶಸ್ಯ ಅಂದರೆ ದೇವರೇ ನಿನ್ನ ದರ್ಶನದಿಂದ ಮಾಡಿರುವ ಪಾಪಗಳಲ್ಲೆವೂ ನಾಶವಾಗಲಿ ಈ ಒಂದು ದರ್ಶನ ಸ್ತುತಿ ಜೊತೆಗೆ 14 ಶ್ಲೋಕ ಇದೆ. ಈ 14 ಶ್ಲೋಕದ ಜೊತೆಗೆ ಪಠಣೆಯನ್ನು ಮಾಡುತ್ತಾ ಪ್ರದಕ್ಷಿಣೆ ಮಾಡಬೇಕು. ದೇವರ ದರ್ಶನ ಆದ ಮೇಲೆ ನಾವು ಏನು ಮಾಡಬೇಕೆಂದರೆ ಪ್ರತಿಯೊಬ್ಬರಕೂಡ ಬಸದಿಗೆ ಬರಿಗೈಯಲ್ಲಿ ಬರಬಾರದು. ಬರಬೇಕಾದರೆ ಯಾವಾಗಲೂ ಕೈಯಲ್ಲಿ ಏನಾದರೂ ಫಲ , ಪುಷ್ಪ ಅಥವಾ ಅಕ್ಕಿ ಈ ಮೂರು ದ್ರವ್ಯಗಳನ್ನುಇಟ್ಟುಕೊಂಡು ಬರಬೇಕು. ಅಕ್ಕಿಯನ್ನು ಇಟ್ಟು ಏಕೆ ಪೂಜೆ ಮಾಡಬೇಕೆಂದರೆ ನಮ್ಮ ಧರ್ಮದ ಪ್ರಕಾರ ಪುಂಜವನ್ನು ಇಡುತ್ತೇವೆ. ಪುಂಜ ಅಂದರೆ ಏನೆಂದರೆ ಅರಹಂತ ಸಿದ್ಧರು ಆಚಾರ್ಯರು ಉಪಾಧ್ಯಾಯರು ಪೂಜ್ಯರು, ಸಾಧುಗಳನ್ನು ನಾವು ಆ ಅಕ್ಷತೆಯ ಮೂಲಕ ಸ್ಥಾಪನೆಯನ್ನು ಮಾಡಿ ಆ ಒಂದು ನಮ್ಮ ಮನಸ್ಸನ್ನು ಪೂಜೆ ಮಾಡುವುದಕ್ಕೆ ಸಿದ್ದ ಮಾಡಿಕೊಳ್ಳುತ್ತದ್ದೇವೆ. ಅದಕ್ಕಾಗಿ ನಾವು ಅಕ್ಷತೆಯನ್ನು ಪುಂಜ ವನ್ನು ಇಡುತ್ತೇವೆ. ಪುಂಜವನ್ನು ಇಡಬೇಕಾದರೂ ಒಂದು ಕ್ರಮವಿದೆ ಯಾವಾಗಲೂ ಅಷ್ಟೇ ಅಕ್ಕಿ ಒಡೆದಿರಬಾರದು ತುದಿ ಮುರಿದಿರಬಾರದು ಪೂರ್ಣ ಪ್ರಮಾಣದಲ್ಲಿರುವ ಅಕ್ಕಿಯನ್ನು ನಾವು ಬಳಸಬೇಕು. ಆ ಒಂದು ಅಕ್ಕಿಯನ್ನು ನಾವು ಒಂದು ಒಳ್ಳೆಯ ಜಲದಿಂದ ತೊಳೆದು ಪೂಜೆಗೆ ಆ ಅಕ್ಕಿಯನ್ನು ಬಳಸಬೇಕು. ಆ ಅಕ್ಕಿಯನ್ನು ನಾವು ಏನು ಮಾಡಬೇಕೆಂದರೆ ನಾವು ಆ ಅಕ್ಕಿಯನ್ನು ಮುಷ್ಠಿಯಲ್ಲಿ ಹಿಡಿದು ಪುಂಜವನ್ನು ಇಡಬೇಕು. ಪುಂಜವನ್ನು ಇಡಲು ಬಳಸುವ ಮಣೆಯನ್ನು ನೀರಿನಿಂದ ಶುದ್ದೀ ಮಾಡಿ , ಅದಾದ ನಂತರ ಗಂಧವನ್ನು ತೆಗೆದುಕೊಂಡು ನಿಮ್ಮ ಬಲಗೈನ ಉಂಗುರದ ಬೆರಳನಿಂದ ಸ್ವಸ್ತಿಕವನ್ನು ಬರೆಯಬೇಕು. ಸ್ವಸ್ತಿಕವನ್ನು ಬಿಟ್ಟ ನಂತರ ಅಕ್ಕಿಯನ್ನು ಮುಷ್ಠಿ ಹಿಡಿದು ಒಂದು ಮುಷ್ಠಿಯನ್ನು ಓಂ ಓಂ ಹರಿಹಂತಾಳಂ ಎಂದು ಇಡಬೇಕು ಅದಾದ ನಂತರ ಅದರ ಮೇಲ್ಭಾಗಕ್ಕೆ ಇನ್ನೊಂದು ಪುಂಜವನ್ನು ಓಂ ನಮೋ ಸಿದ್ದಾಣಂ, ಅದರ ಬಲಭಾಗದಲ್ಲಿ ಓಂ ನಮೋ ಆಯಿರ್ಯಾಣಂ, ಅದರ ಕೆಳ ಭಾಗದಲ್ಲಿ ಓಂ ನಮೋ ವಜ್ಯಾಯಾಣಂ, ಮತ್ತೆ ಎಡಭಾಗಕ್ಕೆ ಬಂದು ಓಂ ನಮೋ ಳುನಿಸರ್ವಸ್ಸಾಗುಣಂ ಈ ರೀತಿಯಾದಂತಹ ಪುಂಜವನ್ನು ಪ್ರತಿನಿತ್ಯ
ಮನೆಯಲ್ಲಾದರೂ ಆಯಿತು ಅಥವಾ ಬಸದಿಯಲ್ಲಾದರೂ ಆಯಿತು ಮಕ್ಕಳಿಗೆ ಈ ರೀತಿ ಪುಂಜವನ್ನು ಇಡುವುದನ್ನು ನಾವು ಹೇಳಿಹೊಡಬೇಕು. ಎಲ್ಲಾ ತೀರ್ಥಂಕರರಿಗೂ ಒಬ್ಬ ಯಕ್ಷ ಮತ್ತು ಯಕ್ಷಿಣಿ ಇದ್ದೇ ಇರುತ್ತಾರೆ. ಅವರನ್ನು ನಾವು ಪೂಜೆ ಮಾಡಬೇಕಾದರೆ ಅವರಿಗೂ ಕೂಡ ಅಕ್ಷತೆಯನ್ನು ಸಮರ್ಪಣೆಯನ್ನು ಮಾಡಬೇಕಾದರೆ ಪುಂಜದ ಮೂಲಕ ಇಡಬೇಕಾದರೆ ಅವರಿಗೆ ಮೂರು ಪುಂಜವನ್ನು ಈ ರೀತಿಯಾಗಿ ಇಡಬೇಕು. ಅದಾದ ನಂತರ ಮತ್ತು ಈ ಮೂರು ಪುಂಜವನ್ನು ಮತ್ತೆ ಯಾರಿಗೆ ಇಡುತ್ತೇವೆಂದರೆ ನಿರ್ಗಂಥ ಗುಣಿ ಮಹಾರಾಜರು ಅಂದರೆ ದಿಗಂಬರ ಮುನಿಮಹಾರಾಜರು ಗುರುಗಳು ನಮ್ಮ ಮನೆಗೆ ಅಥವಾ ಬಸದಿಗೆ ಬಂದಾಗ ನಾವು ಅವರ ದರ್ಶನಕ್ಕೆ ಹೋಗಿ ನಾವು ಈ ರೀತಿಯಾದಂತಹ ಅಕ್ಷತೆಯನ್ನು ಇಟ್ಟು ಅವರ ದರ್ಶನವನ್ನು ಮಾಡಬೇಕು. ಶಾಸ್ತ್ರಕ್ಕೆ ಕೂರುವಾಗ ಮಾತ್ರ ನಾಲ್ಕು ಅಕ್ಷತೆಯ ಪುಂಜವನ್ನು ಇಡಬೇಕು. ಪ್ರಥಮಾನುಯೋಗ, ಕರುಣಾನುಯೋಗ, ಚರಣಾನುಯೋಗ ಹಾಗೂ ದ್ರವ್ಯಾನುಯೋಗ ನಾಲ್ಕು ಅನಿಯೋಗಗಳ ಪ್ರತೀಕವಾಗಿ ಈ ಪುಂಜವನ್ನು ಇಡಬೇಕು. ನಮಸ್ಕಾರವನ್ನು ಮಾಡಿ ನಿಸ್ಸಹೀ ನಿಸ್ಸಹೀ ನಿಸ್ಸಹೀ ಎಂದು ಮತ್ತೇ ದರ್ಶನವನ್ನು ಮಾಡಿ ಹೋಗಬೇಕಾದರೂ ಕೂಡ ಈ ಮಂತ್ರ ಜಪವನ್ನು ಹೇಳುತ್ತಾ ಹೋಗಬೇಕು. ಹೀಗೆ ಮಂತ್ರ ಜಪವನ್ನುಮಾಡುತ್ತಾ ಆಚೆ ಹೋಗುವಾಗ ನಮ್ಮ ಅಕ್ಕಪಕ್ಕದಲ್ಲಿರುವ ಜೀವಿಗಳಿಗೆ ಮನುಷ್ಯರು ಇಲ್ಲಿ ಬರುತ್ತದ್ದಾರೆಂದು ಅವುಗಳಿಗೆ ಗೊತ್ತಾಗುತ್ತದೆ. ಹಾಗಾಗಿ ಆ ಜೀವಿಯ ಹಾನಿ ಆಗುವುದಿಲ್ಲ. ಈ ರೀತಿಯಾದಂತಹ ಕ್ರಮಗಳನ್ನು ಪ್ರತಿನಿತ್ಯ ಮಾಡುವುದರಿಂದ ಹಾಗೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ಹಾಗೂ ನಮ್ಮ ಧರ್ಮದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹಾಗಾಗಿ ನಾವೆಲ್ಲರೂ ಕೂಡ ಪೋಷಕರಾಗಲೀ ಮಕ್ಕಳಾಗಲೀ ಬಸದಿಗೆ ಬಂದು ಭಗವಂತನ ದರ್ಶನ ಕಾಣಬೇಕು. ಅಕಸ್ಮಾತ್ ನಿಮ್ಮ ಹತ್ತಿರ ಬಸದಿ ಇಲ್ಲಾ ಎಂದಾಗ ಮನೆಯಲ್ಲಿಯೇ ಇದೇ ರೀತಿಯ ಕ್ರಮಗಳನ್ನು ಪರಿಪಾಲನೆಯನ್ನು ಮಾಡಬೇಕು. ಇವಗಳನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆದರೆ ನಿಮ್ಮ ಪ್ರತಿನಿತ್ಯದ ಕೆಲಸ ತುಂಬಾ ಸುಗಮವಾಗಿ ಸಾಗುತ್ತದೆ. ದಿನಪೂರ್ತಿ ಲವಲವಿಕೆಯಿಂದ ಕೂಡಿರುತ್ತದೆ, ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದಯಮಾಡಿ ಎಲ್ಲರೂ ಇವುಗಳನ್ನು ಪರಿಪಾಲನೆಯನ್ನು ಮಾಡಬೇಕು ಎಂದು ತಿಳಿಸಿಕೊಟ್ಟರು.














