ಮೋಟಿವೇಶನ್ വീഡിയോ ಎಚ್‌ಡಿ ಹೊಸದು / ಜ್ವಾಲಾಮಲಾನ್ಯೂಸ್ / 2020

ಬಂಧುಗಳೆ ವಿಶ್ವ ವಿಶ್ವವೆ ನಲುಗುತ್ತಿರುವ ಆಗಾಧ ಭೀತಿಯನ್ನು ತಂದೊಡ್ಡಿರುವ ಕರೋನ ಮಾರಕಾಸ್ತ್ರ ಎಲ್ಲರನ್ನು  ಎದೆಗುಂದಿಸಿರುವುದು ಸಂಕಷ್ಟಕೆ ಸಿಲುಕಿಸಿರುವುದು ನಿಜ ಆದರೆ ಸಹಿಷ್ಣುತೆ ಮನೋಧರ್ಮ ಹೊಂದಿದ ರಾಷ್ಟ್ರದಲ್ಲಿ ಹುಟ್ಟಿದ ನಾವು ಈ ಸನ್ನಿವೇಶವನ್ನು ಸಂಕಲ್ಪಮಾಡಿ ಹೆದುರಿಸಿ ಗೆಲ್ಲಬೆಕ್ಕಿದೆ. ದೃತಿಗೆಡದೆ ಒಗ್ಗೂಡಿ ವಿಶ್ವಕ್ಕೆ ಮಾದರಿಯಾದ ನಮ್ಮ ರಾಷ್ಟ್ರವನ್ನು ಹೆಮ್ಮೆಯಿಂದ ಪ್ರತಿಯೊಬ್ಬರು ಪ್ರತಿನಿಧಿಸಬೇಕಿದೆ. ಅದಕ್ಕಾಗಿ ದುಡಿಯುತ್ತಿರುವವರನ್ನು ಒಮ್ಮೆ ಸ್ಮರಿಸಿ ಅಂತವರಿಗಾಗಿ ಒಂದು ಹೃದಯ ಪೂರ್ವಕ ನಮನ.

ಭಾರತೀಯ ಪುರಾತನ ಸಂಸ್ಕೃತಿಯಾದ ಜೈನ ಸಂಸ್ಕೃತಿ ತನ್ನ ಆಚರಣೆ ಪದ್ದತಿಯಂತೆ ಬದುಕು ಬದುಕಲು ಬಿಡು ಜೀವ ದಯಾ ಧರ್ಮ ಪರೋಪಕಾರಮಿದಂ ಶರೀರಂ ಸತ್ವೇಷು ಮೈತ್ರಿ ಹೀಗೆ ತನ್ನ ಘೋಷ ವಾಕ್ಯಗಳನ್ನು ಹೇಳುವಂತೆ ಪ್ರತಿ ಬಾರಿಯ ಪ್ರತಿಕೂಲ ಪರಿಸ್ಥಿತಿಗೆ ವಿಶ್ವದೆಲ್ಲೆಡೆ ಮೊದಲ ಸ್ಪಂದನೆ ಜೈನರದ್ದಾಗಿದು ಈ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಜನರೊಂದಿಗೆ ನಾವಿದ್ದೆವೆಂದು ನಿಂತಿರುವುದು ಶ್ಲಾಘನೀಯ, ಇದು ನಮ್ಮೆಲ್ಲರ ಕರ್ತವ್ಯವು ಹೌದು ಎನ್ನುವುದು ಅವರ ಭಾವನೆ. ಹೀಗೆ  ನಮ್ಮಲ್ಲಿ ಹಂಚಿಕೊಂಡ ಮಾಹಿತಿಗಳ ಪ್ರಕಾರ ಕೆಲವರನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಶ್ರೀ ಬಿ. ಪ್ರಸನ್ನಯ್ಯನವರ ನೇತೃತ್ವದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ಪ್ರತಿದಿನ ಸಾವಿರಾರು ಮಂದಿಗೆ ಆಹಾರ ವಿತರಿಸಲಾಗುತ್ತಿದೆ. ದಾವಣಗೆರೆ ಜೈನ್ ಸಮಾಜದ ವತಿಯಿಂದ ನಡೆಯುತ್ತಿರುವ ಆಹಾರ ವಿತರಣೆ. ಮೂಡುಬಿದಿರೆ ಅಭಯ್ ಚಂದ್ರ ಜೈನ್ ಹಾಗೂ ಮಿಲನ್ ವತಿಯಿಂದ ತಮ್ಮ ಊರಿಗೆ ತೆರಳಲಾರದ ನಿರಾಶ್ರಿತರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಬಿ.ಎಸ್.ಎಮ್. ಜೈನ್ ಅಸೋಸಿಯೇಷನ್ ವತಿಯಿಂದ ದಿನಸಿ ಪದಾರ್ಥ ಹಾಗೂ ಆಹಾರ ವಿತರಣೆ ಮಾಡಲಾಗುತ್ತಿದೆ. ಜಿತೋ ದವರಿಂದ ಲಕ್ಷ ಜನರಿಗೆ  ಪ್ರತಿದಿನ ಆಹಾರ ವಿತರಣೆ. ಈ ಸಂದರ್ಭದಲ್ಲಿ ಜೈನ ಭಟ್ಟಾರಕರುಗಳು ಪೂಜ್ಯ ಕಾವಂದರು ಜನರಿಗೆ ಧೈರ್ಯ ಸ್ಪೂರ್ತಿ ತುಂಬಿದ  ಉಪದೇಶದ ಜೊತೆಗೆ ಶ್ರೀ ಡಿ. ಸುರೇಂದ್ರ ಕುಮಾರ್ ಹಾಗೂ ಪುಷ್ಪರಾಜ್ ಜೈನ್ ರವರ ನೇತೃತ್ವದಲ್ಲಿ ಭಾರತೀಯ ಜೈನ್ ಮಿಲನ್ ವಲಯ ಎಂಟರ ವತಿಯಿಂದ ರಾಜ್ಯದ ಹಲವೆಡೆ ಸಂಕಷ್ಟಕ್ಕೊಳಗಾದವರಿಗೆ ದಿನಸಿ ಆಹಾರ ಪದಾರ್ಥ ವಿತರಿಸಲಾಗುತ್ತಿದೆ. ಹಾಸನ ಸಮಾಜದ ಡೆಸ್ಟಿನಿ ರೈಡರ್ಸ್ ರವರಿಂದ ಪ್ರಾಣಿಗಳಿಗೆ ಜೀವ ದಯಾಧರ್ಮಾಚರಣೆ.

ದೇಶದ ಹಲವೆಡೆ ಹಲವಾರು ಸಂಘಸಂಸ್ಥೆಗಳಿಂದ ಸಂಕಷ್ಟಕ್ಕೆ ಸ್ಪಂದನೆದೊರೆಯುತ್ತಿದೆ.