नामोಕರ ಸ್ಪರ್ಧೆ ಫೈನಲ್ / ಜ್ವಲಮಾಲಾ ನ್ಯೂಸ್ / 2020

ಜೈ ಜಿನೇಂದ್ರ ವೀಕ್ಷಕರೆ, ಮೊದಲಿಗೆ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. ಸರ್ವ ಭಟ್ಟಾರಕರಿಗು ಪೂಜ್ಯ ಕಾವಂದರಿಗು ವಂದಿಸುತ್ತ ಸ್ಪೂರ್ತಿ ನೀಡಿದ ಹೊಂಬುಜ ಶ್ರೀಗಳಿಗೂ ಅಭಿನಂದಿಸುತ್ತ, ಹೀಗಾಗಲೆ ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಹೊಸ ಕಾರ್ಯಕ್ರಮ ಪುಟಾಣಿಗಳಿಗಾಗಿ ಮಾಡುತ್ತಿರುವ ಧಾರ್ಮಿಕ ಚಟುವಟಿಕೆಗಳ ಮೊದಲನೆಯ ಕಂತು ಭಾನುವಾರ ಬೆಳಗ್ಗೆ ನಡೆದಿದ್ದು ತಮ್ಮ ಪ್ರತಿಕ್ರಿಯೆ ದೊರೆತ್ತಿದೆ. ನಿಮ್ಮೆಲ್ಲರ ಪ್ರೀತಿ ಪೂರ್ವಕ ಸ್ಪಂದನೆಗೆ ಅನಂತ ಅನಂತ ವಂದನೆಗಳು.

ಭಾಗವಹಿಸಿದ ಪ್ರತಿ ಮಕ್ಕಳು ಉತ್ತಮ ಪ್ರಯತ್ನ ಮಾಡಿದ್ದು ವಿಜೇತರನ್ನು ಗುರುತಿಸುವುದು ಸ್ವಲ್ಪ ಕಷ್ಟಸಾದ್ಯವಾಗಿದ್ದು ಪುಟ್ಟ ಮಕ್ಕಳ ಆಸಕ್ತಿಗೆ ಹೆಮ್ಮೆ ಪಡುವಂತ್ತಾಗಿದೆ.

ಇದರಲ್ಲಿ ಹಲವು ಮಕ್ಕಳು ಭಾವ ಭಂಗಿ ಅಸಕ್ತಿ ಹಾಗೂ ಸ್ಪಷ್ಟತೆ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಕೂದಲೆಳೆ ಅಂತರದಲ್ಲಿ ಆಯ್ಕೆ ಮಾಡಬೇಕಾಗಿರುವುದರಿಂದ ಸಮಿತಿವತಿಯಿಂದ ಹಾರಿಸಿದ್ದೇವೆ ಹೊರತು ಇದರಲ್ಲಿ ಸ್ಪರ್ಧೆಯ ವಿಷಯವಿಲ್ಲಾ. ಪ್ರಯತ್ನಿಸಿದ ಪ್ರತಿ ಮಕ್ಕಳು ಗೆದ್ದಂತೆಯೆ, ಇನ್ನೂ ಹೆಚ್ಚು ಭಾಗವಹಿಸಿ ಧರ್ಮದ ಬಗ್ಗೆ ತಿಳಿಯಲ್ಲಿ ಎಂದು ನಮ್ಮದೊಂದು ಆಶಯ.

(ಇಲ್ಲಿ ನೋಡಿ ಈ ಮಗುವು ಕಣ್ಣು ಮುಚ್ಚಿ ಪಠಿಸಿದ ಮುಗ್ಧ ಭಕ್ತಿ ನೋಡಿ).

ಮತ್ತೆ ಮುಂದಿನ ಚಟುವಟಿಕೆಯೊಂದಿಗೆ ಮತ್ತೆ ಬೇಟಿಯಾಗಲ್ಲಿದೇವೆ ಅಲ್ಲಿಯವರೆಗೆ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.