ಜೈ ಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ:
ಧರ್ಮಕ್ಕೆ ಸಮುದಾಯದ ಒಗ್ಗಟ್ಟಿಗೆ ಹೆಸರಾದ ಪುಣ್ಯ ನಗರಿ ಚಳ್ಳಕೆರೆಯಲ್ಲಿ ಎಲ್ಲೂ ಕಾಣದ ಧಾರ್ಮಿಕ ಸೌಹಾರ್ಧತೆಯನ್ನು ಕಾಣಬಹುದು. ಅಲ್ಲಿ ಶ್ವೇತಾಂಬರರು ಹಾಗೂ ದಿಗಂಬರರು ಎನ್ನುವ ಭೇದವಿಲ್ಲ ಅಲ್ಲಿ ಬಸದಿ ಕಾರ್ಯಗಳಲ್ಲಿ ಅಷ್ಟೇ ಅಲ್ಲದೇ ನೊಂದವರ ಸಹಾಯಕ್ಕಾಗಿ ಒಟ್ಟಾಗಿ ನಿಲ್ಲುತ್ತೇವೆ ಎಂದು ಇಲ್ಲಿನ ಶ್ರಾವಕರು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಾರೆ ಅಂತಹ ಒಂದು ನಗರಿಯಲ್ಲಿ ಎಷ್ಟು ಸುಂದರವಾಗಿದೆಯೋ ಅಷ್ಟೇ ಭವ್ಯವಾಗಿ ನೂತನ ಜಿನಮಂದಿರ ಸ್ವಾಧ್ಯಾಯ ಮಂದಿರ ಹಾಗೂ ನೂತನ ಶ್ರೀ ಬಾಹುಬಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಪಂಚಕಲ್ಯಾಣ ಸಮಾವಕರ್ಣ ಶ್ರೀ ಬಾಹುಬಲಿ ಮಸ್ತಕಾಭಿಷೇಕ ಎಲ್ಲವೂ ಕೂಡ ವಿಜೃಂಭಣೆಯಿಂದ ನಡೆಯಿತು. ದಿನಾಂಕ 27/01/2020 ರಿಂದ 30/01/2020 ರವರೆಗೆ ಇಲ್ಲಿ ನಡೆದಿದ್ದು ಇಲ್ಲಿ ಆಯ್ದ ದೃಶ್ಯಾವಳಿಗಳು ನಿಮ್ಮ ಮುಂದೆ.
ಶ್ರೀ ಭಗವಾನ್ 1008 ಸ್ವಸ್ಥಿ ಶ್ರೀ ಪಾರ್ಶನಾಥ ಜಿನಮಂದಿರದ ಸುವರ್ಣ ಮಹೋತ್ಸವದ ನಿಮಿತ್ತಾರ್ಥ ಪರಮಪೂಜ್ಯ ಶ್ರೀ 108 ಪುಣ್ಯಸಾಗರ ಮಹಾರಾಜರ ಯುಗಳ ಮುನಿಗಳ ಪಾವನ ಸಾನಿಧ್ಯದಲ್ಲಿ ಸರ್ವ ಭಟ್ಟಾರಕರುಗಳ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು ಹಲವಾರು ದಾನಿಗಳ ಪುಣ್ಯದ ಫಲವಾಗಿ ಭಗವಾನ್ ಶ್ರೀ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ಶ್ರೀ 1008 ಪಾರ್ಶ್ವನಾಥ ಜಿನಮಂದಿರ ಟ್ರಸ್ಟ್ ವತಿಯಿಂದ ಅತ್ಯಂತ ವೈಭವವಾಗಿ ಸುಂದರವಾಗಿ ಯಶಸ್ವಿಗೊಂಡಿತು.
2019ರಲ್ಲಿ ನಿರ್ಮಾಣವಾದ ಶ್ರೀ ಅನಂತನಾಥ ಸ್ವಾಮಿ ಜಿನಮಂದಿರದ ಜಿನಬಿಂಬ ಅತಿ ಮುದ್ದಾಗಿದ್ದು ಸ್ವತಃ ಶ್ರವಣಬೆಳಗೊಳದ ಶ್ರೀಗಳು ಸಂತಸ ವ್ಯಕ್ತಪಡಿಸುತ್ತಾ ಉತ್ತರ ಭಾರತದ ಶ್ಯೆಲಿಯಲ್ಲಿ ನಿರ್ಮಾಣವಾಗಿದೆಯೆಂದು ಪ್ರಶಂಸಿಸಿದರು. ಅತ್ಯಂತ ವಿಶಾಲವಾದ ಸ್ವಾಧ್ಯಾಯ ಮಂದಿರದಲ್ಲಿ ಪ್ರಶಾಂತತೆ ಶಾಸ್ತ್ರಧ್ಯಯನಕ್ಕೆ ಪ್ರಶಸ್ತತೆಯನ್ನು ಒಳಗೊಂಡಿದೆ ಹಾಗೂ ಬಹಳ ಸುಂದರವಾಗಿ ಕಾಣುತ್ತಿದೆ ಎಂದು ಸಂತೋಷದಿಂದ ಮಾತನಾಡಿ ಶ್ರವಣಬೆಳಗೊಳದಿಂದ ಬಾಹುಬಲಿ ಚಳ್ಳಕೆರೆಗೆ ಬಂದಿದ್ದು, ಹೊಸದಾಗಿ ಬಾಹುಬಲಿ ಮೂರ್ತಿಯನ್ನು ನಿರ್ಮಾಣಮಾಡಿ ಚಳ್ಳಕೆರೆ ಇವತ್ತು ಚಳ್ಳಕೆರೆ ತೀರ್ಥಕ್ಷೇತ್ರವಾಗಿ ಆಗಿದೆ. ಇಲ್ಲಿ ಸುಂದರವಾದಂತಹ ಸ್ವಾಧ್ಯಾಯ ಭವನ ಅನಂತನಾಥ ತೀರ್ಥಂಕರರ ನೂತನ ಮೂರ್ತಿ ಸ್ಥಾಪನೆ ಮಾಡಿ ಇಡೀ ಭಾರತದಲ್ಲೆಲ್ಲಾ ನಾವೆಲ್ಲಾ ತಿರುಗಾಡಿದ್ದೇವೆ. ಕರ್ನಾಟಕದಲ್ಲೂ ತಿರುಗಾಡಿದ್ದೇವೆ ಆದರೆ ಚಳ್ಳಕೆರೆ ಯವರು ಮಾಡಿರುವಂತಹ ಅನಂತನಾಥ ತೀರ್ಥಂಕರರ ಸ್ವಾಧ್ಯಾಯ ಭವನವಂತೂ ನಮಗೆ ವರ್ಣನೆ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಸ್ವಚ್ಛ , ಸುಂದರ ಮತ್ತು ಅಷ್ಟೇ ಪವಿತ್ರತೆಯನ್ನು ಕಾಪಾಡಿಕೊಂಡು ಆ ದೇವಸ್ಥಾನ ನಿಜಕ್ಕೂ ಕೂಡ ನಮಗೆ ಚಳ್ಳಕೆರೆಗೆ ಬಂದಿದ್ದು ಸಾರ್ಥಕವಾಯಿತು ಎಂದು ತಿಳಿಸಿದರು. ಇದು ಭಗವಾನ್ ಬಾಹಿಬಲಿಗೆ ನಡೆದ ಮಸ್ತಕಾಭಿಷೇಕದ ಒಂದು ನೋಟ.
ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಸ್ವಸ್ಥಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳು ಹಾಗೂ ಸ್ವಸ್ಥಿಶ್ರೀ ಲಕ್ಷ್ಮಿಸೇನಾ ಮಹಾ ಸ್ವಾಮೀಜಿಗಳ ಪಾವನ ಸಾನಿಧ್ಯ ಶ್ರೀ ಡಿ. ಭರತ್ ರಾಜ್ ರವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ. ಪ್ರಸನ್ನಯ್ಯ ಹಾಗೂ ಪದಾದಿಕಾರಿಗಳು , ಶ್ರೀಮತಿ ಪದ್ಮಿನಿ , ಶ್ರೀ ಪದ್ಮರಾಜು , ಶ್ರೀ ಏ. ಸಿ ವಿಧ್ಯಾಧರ್ ಇವರುಗಳು ಭಾಗವಹಿಸಿದ್ದರು. ನೆರೆದಿದ್ದ ಅತಿಥಿ ಗಣ್ಯರು ಮಾತನಾಡಿ ಧಾರ್ಮಿಕವಾದಂತಹ ಮಂಗಳವಾದಂತಹ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆದಿದ್ದು ಇನ್ನೇನು ನಾಳೆ ದಿವಸ ಅನ್ನುವಷ್ಟರಲ್ಲಿ ಕೊನೆಯ ಹಂತ ಭಗವಂತನ ಮೋಕ್ಷ ಕಲ್ಯಾಣ ಆಗಿ ಪ್ರತಿಷ್ಠಾಪನಾ ಆಗುವುದರ ಜೊತೆಗೆ ಕಾರ್ಯಕ್ರಮ ಸಮಾಪನೆಯಾಗುತ್ತದೆ. ಅನೇಕ ಜನರಿಗೆ ಈ ಪಂಚಕಲ್ಯಾಣ ಬಹಳಷ್ಟು ಒಳ್ಳೆಯ ರೀತಿಯಾದಂತಹ ದಾನ ಇತ್ಯಾದಿಗಳನ್ನು ಮಾಡಲಿಕ್ಕೆ ಪ್ರೇರಣೆ ಕೊಟ್ಟಂತಹ ಈ ಕಾರ್ಯಕ್ರಮವಾಗಿದೆ. ಹಾಗೂ ಇಲ್ಲಿ ಬಂದಿರುವಂತಹ ನಿಮ್ಮೆಲ್ಲರಿಗೂ ಸಾತಿಶೇಯ ಪುಣ್ಯ , ಅತಿಶಯ ಇವೆಲ್ಲವೂ ಕ್ಷೇತ್ರಜನಿತ ಪುಣ್ಯವಾಗಿ ಚಳ್ಳಕೆರೆ ನಗರದಲ್ಲಿ ತಂದು ನಿಲ್ಲಿಸಿರುವ ಅತ್ಯಮೂಲ್ಯ ಕಾಣಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂತಹ ಅದ್ಭುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.














