ಶ್ರೀಗಳವರು ಮಾತನಾಡಿ ಹಾಸನ ಜಿಲ್ಲೆಯಿಂದ 7 ಕಿ.ಮೀ ದೂರದಲ್ಲಿರುವ ಪ್ರಶಾಂತ ಮತ್ತು ಸುಂದರ ಸ್ಥಳವಾದ ಅಗಿಲೆ ಪೋಸ್ಟ್ ನಲ್ಲಿ ಆಚಾರ್ಯ ಶ್ರೀ 108 ನಿಜಾನಂದಸಾಗರ ಮಹಾರಾಜರ ಚರಣ ಪ್ರತಿಷ್ಠಾಪನಾ ಮಹೋತ್ಸವ ನೆರವೇರುತ್ತಿದೆ. ದಿನಾಂಕ 04/09/1953ರಂದು ಹುಬ್ಬಳ‍್ಳಿಯಲ್ಲಿ ಜನ್ಮ ಪಡೆದ ಆಚಾರ್ಯ ಶ್ರೀಗಳವರು 1980ರಲ್ಲಿ ಗೃಹ ತ್ಯಾಗಮಾಡಿದರು ನಂತರ 1981ರಲ್ಲಿ ಮುನಿದೀಕ್ಷೆಯನ್ನು ತೆಗೆದುಕೊಂಡು ನಂತರ 1999ರಲ್ಲಿ ಉಪಾಧ್ಯಾಯ ಪದವಿಯನ್ನು ತೆಗೆದುಕೊಂಡು ಹಾಗೇ 28-10-2017ರಂದು ಇಂದೋರಿನಲ್ಲಿ ಆಚಾರ್ಯ ಪದ ಗ್ರಹಣವಾಯಿತ್ತು ಅದಾದನಂತರ ಆಚಾರ್ಯ ಶ್ರೀಗಳವರು ಕರ್ನಾಟಕದಲ್ಲಿ ಸಂಚರಿಸುತ್ತ ಧರ್ಮಪ್ರಚಾರ ಮಾಡುತ್ತ2018ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳಕ್ಕೆ ಬಂದು ಶ್ರವಣ ಬೆಳಗೊಳದಲ್ಲಿ ಚಾರುತುರ್ಮಾಸವನ್ನು ಆಚರಿಸಿ ಅನಂತರ ಹಾಸನಕ್ಕೆ ಬಂದು ಸಮಾದಿಯನ್ನು ಪ್ರಾಪ್ತಿಮಾಡಿಕೊಂಡರು. ಆಚಾರ್ಯ ಶ್ರೀಗಳ ಕೈಯಿಂದ ಇಲ್ಲಿಯ ವರೆಗೂ ಎರಡು ಜನ ಮುನಿಗಳು ಒಂದು ಆರಿಕಾದೀಕ್ಷೆ ಒಂದು ಶ್ಕುಲಕಾದೀಕ್ಷೆಯಾಗಿದೆ. ಸುಮಾರು 30 ಪಂಚ-ಕಲ್ಯಾಣವನ್ನು ಅಚರಿಸಿದ್ದಾರೆ ಹಾಗೂ ಸುಮಾರು 32 ವೇದಿ ಪ್ರತಿಷ್ಟೆಯನ್ನು ಮಾಡಿದ್ದಾರೆ. ಶ್ರೀಕ್ಷೇತ್ರ ಸ್ವಾದಿಯಲ್ಲೂ ಕೂಡ ಬಂದು ಒಂದು ವಾರ ತಂಗಿ ನಮಗೆಲ್ಲರಿಗೂ ಆಶೀರ್ವಾದವನ್ನು ಮಾಡಿದರು. ಅಂತಹ ಆಚಾರ್ಯಶ್ರೀಗಳವರ ಸ್ಮರಣ ದಿನ ಅವರ ಪಾದುಕೇಗಳನ್ನು ಹಾಸನ ನಗರದಲ್ಲಿ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ಹಾಸನ ದಿಗಂಬರ ಜೈನ ಸಮಾಜ ಮತ್ತು ಹರ್ಷ ಜೈನ್ ಪರಿವರದವರಿಗೆ ಅಭಿನಂದನೆ ಸಲ್ಲಿಸಿದರು. 108 ಪುಣ್ಯ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಕಂಬದಹಳ್ಳಿಯ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿಯ ಪಾವನ ಸಾನಿಧ್ಯದಲ್ಲಿ ಮತ್ತು ಆರತಿಪುರದ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿಯ ಸಾನಿಧ್ಯದಲ್ಲಿ ಚರಣ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿದೆ ಎಂದರು ಚರಣ ಪ್ರತಿಷ್ಠಾಪನಾ ಮಹೋತ್ಸವವು ಶಾಸ್ತ್ರೊಕ್ತವಾಗಿ ಎಲ್ಲ ವಿಧಿಗಳೊಂದಿಗೆ 12 ನೇ ತಾರೀಖಿನಂದು ವಾಸ್ತುವಿಧಾನ ಪ್ರತಿಷ್ಠಾ ಕಾರ್ಯಕ್ರಮವನ್ನು ಹಾಸನದ ಪವನ ಪಂಡಿತರು, ಚಂದನ ರವರು ಬಂದು ನೆರವೇರಿಸಿಕೊಟ್ಟರು ಎಂದರು. ಇನ್ನೂ ಮುಂದೆ ಯಾರು ಇಲ್ಲಿ ಬಂದು ಚರಣ ಪಾದುಕ್ಕೆಯನ್ನು ದರ್ಶನಮಾಡುತ್ತಾರೆ ಅವರಿಗೆ ಎಲ್ಲಾ ಕರ್ಮಗಳು ನಾ಼ಶವಾಗಿ ಅವರಿಗೆಲ್ಲರಿಗೂ ಸುಜ್ಞಾನ ಪ್ರಾಪ್ತಿಯಾಗಿ ಮಂಗಳವಾಗಲ್ಲಿ ಎಂದು ಪ್ರಾರ್ಥಿಸಿದರು).
ಪರಮ ಪೂಜ್ಯ ಆಚಾರ್ಯ ಶ್ರೀ 108 ನಿಜಾನಂದಸಾಗರ ಮಹಾರಾಜರು ದಿನಾಂಕ 14-06-2018ರಲ್ಲಿ ಹಾಸನದಲ್ಲಿ ಸಮಾಧಿ ಮರಣ ಹೊಂದಿದ್ದರು. ಈ ಶುಭ ಶುಕ್ರವಾರ ಏಕೆಂದರೆ ಈ ಅಚಾರ್ಯ ಶ್ರೀಗಳ ಚರಣ ಪ್ರತಿಷ್ಟಾಪನೆ ಪರಮ ಪೂಜ್ಯ ಶ್ರೀ 108 ಪುಣ್ಯ ಸಾಗರ ಮಹಾರಾಜರ ಮಾರ್ಗ ದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿದೆ. ಸ್ವಸ್ತಿಶ್ರೀ ಭಾನು ಕೀರ್ತಿ ಸ್ವಾಮಿಗಳಿಗೆ ನಮೋಸ್ತುಗಳನ್ನು ಹೇಳುತ್ತ ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿಗಳಿಗೆ ನಮೋಸ್ತುಗಳನ್ನು ಹೇಳುತ್ತ, ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಸ್ವಾಮೀಜಿಗಳಿಗೆ ನಮಸ್ಕರಿಸಿ ಈ ಶುಭ ಸಮಾರಂಭದಲ್ಲಿ ಹರ್ಷ ಸ್ವಿಟ್ಸ್ ನ ಮಾಲೀಕರಾದ ದಿ|| ಬ್ರಹ್ಮದೇವಯ್ಯನವರು, ಹಾಗೂ ಶ್ರೀಮತಿ ದಿ|| ಕನ್ಯಾ ಕುಮಾರಿ ಬ್ರಹ್ಮದೇವಯ್ಯನವರನ್ನು ಸ್ಮರಿಸುತ್ತಾ ಪ್ರಸ್ತುತ ಹರ್ಷ ಸ್ವಿಟ್ಸ್ ನ ಮಾಲೀಕರಾದ ಪ್ರೇಮ ಬ್ರಹ್ಮದೇವಯ್ಯ ಹಾಗೂ ಶ್ರೀಮತಿ ಸುಜಾತ ಹರ್ಷರವರನ್ನು ಹಾಗೂ ಶ್ರೀಮತಿ ಸುಷ್ಮಾ ಅರುಣ್ ಕುಮಾರ್ ರವರು ವೇದಿಕೆಗೆ ಅಹ್ವಾನಿಸುತ್ತಿದ್ದೇವೆ.
ಶ್ರೀಗಳವರು ಮಾತನಾಡಿ. ಮುನಿಗಳು ಇದ್ದಾಗ ಅವರ ಸೇವೆ ಮಾಡುವುದು ಮತ್ತು ಸಮಾದಿಯಾದ ನಂತರವು ಕೂಡ ಯಾವ ರೀತಿ ಸೇವೆ ಮಾಡಬೇಕು ಎಂದು ಹಾಸನ ದಿಗಂಬರ ಜೈನ ಸಮಾಜ ಮತ್ತು ಹರ್ಷ ಸ್ವಿಟ್ಸ್ ನವರು ತೊರಿಸಿಕೊಟ್ಟಿದ್ದಾರೆ ಎಂದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ
ಜ್ವಾಲಮಾಲ ಡಾಟ್ ನ್ಯೂಸ್














