ಶಿವಮೊಗ್ಗ ಜಿಲ್ಲೆಯಲ್ಲಿ ಕುಂದಾದ್ರಿ ಹಿಲ್ಲ್ / ಜ್ವಲಮಲಾ ನ್ಯೂಸ್ / 2020

ಜೈ ಜಿನೇಂದ್ರ ವೀಕ್ಷಕರೆ. ದಟ್ಟ ಕಾನನದ ನಡುವೆ ಒತ್ತಾಗಿ ಬೆಳೆದ ಗಿಡ ಮರಗಳ ಸಮೂಹದಿಂದಲು ಪೊದೆಗಳಿಂದಲು ಅವೃತವಾದ ಪುರವನ್ನು ಸಾಂತರ ರಾಜ ಜಿನ ದತ್ತನು ರಾಜಧಾನಿಯನ್ನಾಗಿಸಿಕೊಳ್ಳುತ್ತಾನೆ. ಹೀಗೆ ಒಮ್ಮೆ ರಾಜಧಾನಿಯಾಗಿ ಮೆರೆದ ಪದ್ಮಾವತಿ ದೇವಿಯ ಆವಾಸ ಸ್ಥಾನವಾಗಿರುವ ನಾಡೆ ಹೊಂಬುಜ.

ಹೊಂಬುಜ ಮಠ ಕುಂದ ಕುಂದ ಅನ್ವಯದ ನಂದಿ ಸಂಘಕ್ಕೆ ಸೇರಿದ್ದು. ಸುಧೀರ್ಘ ಪರಂಪರೆ ಹೊಂದಿರುವ ಈ ಮಠಕ್ಕೆ ಮಹಾನ್ ಅಚಾರ್ಯರುಗಳು ಘನತೆಯನ್ನು ತಂದು ಕೊಟ್ಟಿದ್ದಾರೆ, ಅವರಲ್ಲಿ  ಕುಂದ ಕುಂದ ಅಚಾರ್ಯರು ಕೂಡ ಒಬ್ಬರು. ಮೊದಲಿನಿಂದಲೂ ಈ ಮಠದ ಭಾಗವೆ ಹಾಗಿರುವ ಕುಂದದ ಗುಡ್ಡ ಕುಂದಾದ್ರಿ ಎನ್ನುವ ಹೆಸರನ್ನು ಕುಂದ ಕುಂದರು ಅಲ್ಲಿಗೆ ಭೇಟಿ ನೀಡಿ ತಪಸ್ಸನ್ನ ಆಚರಿಸಿದ ಕಾರಣದಿಂದ ಬಂದಿದ್ದು ಎಂದು ಕೂಡ  ಪ್ರತೀತಿ ಇದೆ. ಅಂತಹ ಒಂದು ಭವ್ಯ ಪರಂಪರೆಯ ಕಥೆ ಇರುವ, ಒಂದು ಕಣ್ಮನ ಸೆಳೆಯುವ ರಮಣೀಯ ಪ್ರಕೃತಿ ತಾಣಕ್ಕೆ ನಮ್ಮ ತಂಡ ಭೇಟಿ ನೀಡಲು ಅಚ್ಚನೆಯ ಹಾದಿಯಲ್ಲಿ ಸಾಗಿ ಬಂದು ನಿಂತಿದ್ದು. ನಿಸರ್ಗದ ಮಡಿಲಿನಲ್ಲಿರುವ ಬೆಟ್ಟದ ದ್ವಾರದ ಮುಂದೆ ಮೆಟ್ಟಿಲುಗಳನ್ನು ಹತ್ತಿ ಸಾಗಿ ಅಪ್ಪ ಎಂದು ಸೋತ ಮುಖಗಳನ್ನು ಅಬ್ಬಾ ಎಂದು ಒಮ್ಮೆಲೆ ಹರಳುವಂತೆ ಮಾಡಿದ್ದು ನಮ್ಮೆದುರು ಕಂಡ ಅ ಅದ್ಬುತವಾದ ನಾವು ಇಂದೆಂದು ಕಂಡ್ಡರಿಯದ ರುದ್ರ ರಮಣೀಯ ಸುಂದರ ನೋಟ.

ಸ್ವರ್ಗ ಎಲ್ಲಿದೆಯೊ ಹೇಗಿದೆಯೋ ಕಂಡವರಿಲ್ಲಾ ಹೋಗಿ ಬಂದವರಿಲ್ಲಾ ಅದರೆ ಆಸ್ವಾದಿಸುವ ಮನಸ್ಸಿದ್ದರೆ ಪ್ರಕೃತಿ ಮುಖೇನ ನೊಂಡಬವುದು. ಸ್ವರ್ಗವೇ ಧರೆಗಿಳಿದಂತ್ತಿರುವ ಈ ತಾಣವನ್ನು ಪ್ರವಾಸಿ ಯಾತ್ರ ಸ್ಥಳವನ್ನಾಗಿಸಿ ಅಭಿವೃದ್ದಿಗೊಳಿಸಬಹುದು ಎಂಬುದೊಂದು ಅಭಿಪ್ರಾಯ. ಉತ್ತಮ ನಿಸರ್ಗ ಧಾಮವು ಹಾಗಿರುವ ಕುಂದಾದ್ರಿ ಬೆಟ್ಟದ ಮೇಲೆ ಒಂದು ಉನ್ನತವಾದ ಮನ ಸ್ಥಂಭದ ಮುಂದೆ ಸುಂದರ ಬಸದಿ ಇದ್ದು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿ ಇದೆ. ಇಲ್ಲಿ ಹಲವಾರು ಋಷಿ ಮುನಿಗಳು ತಪಸ್ಸು ಮಾಡಿದ್ದಾರೆ.

 ಪ್ರತಿ ವರ್ಷವು ಮಕರಸಂಕ್ರಾತಿಯಂದು ವಾರ್ಷಿಕ ಜಾತ್ರ ಮಹೋತ್ಸವ ಇಲ್ಲಿ ನಡೆಯುತ್ತದೆ. ಸಮುದ್ರ ಮಟ್ಟದಿಂದ 3,500 ಅಡಿ ಎತ್ತರವಿದ್ದು ಇಲ್ಲಿಯ ಸೂರ್ಯೋದಯ ಹಾಗೂ ಸೂರ್ಯಾಸ್ತ ದೃಶ್ಯಾವಳಿಗಳು ಪ್ರಖ್ಯಾತಿಯನ್ನು ಪಡೆದಿದೆ. ಸೂರ್ಯನ ಕಿರಣ ಪ್ರಾಥಕಾಲ ಸ್ವಾಮಿಯ ಪಾದವನ್ನು ಸ್ಪರ್ಶಿಸುತ್ತದೆ. ಬಸದಿ ಹಿಂಭಾಗದಲ್ಲಿ ಆಚಾರ್ಯರ ಕುಂದ ಕುಂದರ ಪಾದವಿದೆ.

(ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾತನಾಡಿ ಶಿವಮೊಗ್ಗಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಕ್ಷೇತ್ರದಲ್ಲಿ  ಅಚಾರ್ಯ ಕುಂದ ಕುಂದ ಮುನಿಗಳ ತಪೋ ಭುಮಿ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಕಠಿಣ ತಪಸ್ಸನ್ನು ಮಾಡಿ ಸಿದ್ದಿಯನ್ನು ಗಳಿಸಿದರು ಮತ್ತು ಆ ಜಾಗದಲ್ಲಿ ಅನೇಕ ಮುನಿಗಳು ತಪಸ್ಸನ್ನು ಮಾಡಿದ್ದಾರೆ ಸಮಾಧಿಯನ್ನು ಹೊಂದಿದ್ದಾರೆ. ಸುಂದರವಾದಂತಹ ರಮಣೀಯವಾದಂತಹ ಅರಣ್ಯ ಪ್ರದೇಶದಲ್ಲಿ ಚರಣ ಪಾದುಕ್ಕೆಗಳ ಗುಹೆ ಜೊತೆಗೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯಲ್ಲಿ ಸುಂದರವಾದಂತಹ ಮನೋಜ್ಞವಾದಂತಹ ಮೂರ್ತಿ ಇದೆ. ಆ ದೇವಸ್ತಾನವನ್ನು ಸುಮಾರು ಸಾವಿರಾರು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ).

ವೀಕ್ಷಕರೆ ನೀವು ಒಮ್ಮೆ ವೀಕ್ಷಿಸಲೆ ಬೇಕಾದ ಈ ಸ್ಥಳದ ಹಾದಿ ಹೀಗಿದೆ.

ಬೆಂಗಳೂರಿನಿಂದ ಕುಂದಾದ್ರಿ 380 ಕಿ.ಮೀ.

ತೀರ್ಥಹಳ್ಳಿ ಇಂದ ಕುಂದಾದ್ರಿ 32 ಕಿ.ಮೀ.