ಜೈ ಜಿನೇಂದ್ರ ವೀಕ್ಷಕರೆ. ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಕನಸನ್ನು ಸಕಾರಗೊಳಿಸಲು ಕನಸಿನ ಲೋಕವೆ ಸಜ್ಜಾಗಿದೆ. ಅ ಲೋಕದಲ್ಲೊಂದು ನಮ್ಮ ವಿಹಾರ.
ಹೌದು ವೀಕ್ಷಕರೆ ಅಕ್ಷರಶಃ ದಾರವಾಡದ ಶ್ರೀ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಸ್ವರ್ಗವೇ ಧರೆಗಿಳಿದಂತೆ ಭಾಸವಾಗಿತ್ತು. ಹೆತ್ತನೋಡಿದರು ಸಂಭ್ರಮದ ವಾತವಾರಣ ಸಡಗರದ ಓಡಾಟ, ಅಂದು ಅಲ್ಲಿ ಜಿನ ಭಜನಾ ಸ್ಪರ್ಧೆ ಸೆಮಿಪೈನಲ್ ಹಾಗೂ ಪೈನಲ್ ಸ್ಪರ್ಧೆ ಅಯೋಜನೆ ಗೊಂಡಿತ್ತು. ಪ್ರತಿಯೊಂದು ಕ್ಷಣವು ಅವಿಸ್ಮರಣಿಯವಾಗಿತ್ತು, ರಮಣೀಯವಾಗಿತು, ರೋಮಾಂಚನವಾಗಿತು. ಮೆಡಿಕಲ್ ಕಾಲೇಜಿನ ಅವರಣದಿಂದ ಹೊರಟ ಮೆರವಣಿಗೆ ಸಭಾಂಗದೆಡೆಗೆ ಸಾಗಿತ್ತು.
(ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಜಿನ ಭಜನಾ ಸ್ಪರ್ಧೆ ಬೃಹತ್ ಆಕಾರದಿಂದ ಬೆಳೆದು ನಿಂತ್ತಿದೆ. ಸಿಜ಼ನ್ 1 ಬೆಂಗಳೂರಿನಿದ ಪ್ರಾರಂಬಿಸಿ ಈಗಾ ಸಿಜ಼ನ್ 4 ದಾರವಾಡಕ್ಕೆ ಬಂದು ನಿಂತ್ತಿದ್ದಿವಿ).
ಒಂದು ಭಜನಾ ಕಾರ್ಯಕ್ರಮವನ್ನು ಇಷ್ಟೊಂದು ಕಲಾತ್ಮಕವಾಗಿ ವೈಭವಯುತ್ತವಾಗಿ ಪರಿಕಲ್ಪಿಸಲು ಹೆಗ್ಗಡೆ ಪರಿವಾರದವರಿಂದ ಮಾತ್ರ ಸಾಧ್ಯ, ಅಂತೆಹೆ ಕಾರ್ಯಕ್ರಮದ ಉದ್ಘಾಟನೆಯುಕೂಡ ಅದ್ಬುತ ಪರಿಕಲ್ಪನೆಯಿಂದ ಸಾಕ್ಷಗೊಂಡು ನೆರೆದಿದ್ದವರೆಲ್ಲರನ್ನು ಮಂತ್ರ ಮುಗ್ದಗೊಳಿಸಿತ್ತು. ನೀವು ಒಮ್ಮೆ ಕಣ್ತುಂಬಿಕೊಳ್ಳಿ, ಉದಯ ಜಿನ ನಮನ ಎಸ್.ಕೆ. ಜೋಶಿಯವರಿಂದ.
ವಿಧ್ಯಾಕಾಶಿ ಪೇಡನಗರಿ ದಾರವಾಡದ ಶ್ರೀ ವೀರೇಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 04-01-2020ರಂದು ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆ ಸಿಜ಼ನ್ ಫೋರ್ ನ ಸೆಮಿಪೈನಲ್ ಉದ್ಘಾಟನ ಸಮಾರಂಭದಲ್ಲಿ ಶ್ರೀಕ್ಷೇತ್ರ ಸ್ವಾದಿ ಜೈನ್ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು, ಶ್ರೀಕ್ಷೇತ್ರ ವರೂರಿನ ಸ್ವಸ್ತಿಶ್ರೀ ಧರ್ಮಸೇನಾ ಭಟ್ಟಾರಕರು ಹಾಗೂ ಶ್ರೀ ಜಿನ ಕೀರ್ತಿ ಮಹಾರಾಜರು ಪಾವನ ಸಾನಿಧ್ಯವಹಿಸಿದರು.
ಸುಂದರ ವೇದಿಕೆಯಲ್ಲಿ ಮಾತ್ರುಶ್ರೀ ಹೇಮಾವತಿ ಹೆಗ್ಗಡೆಯವರು, ಡಿ ಸುರೇಂದ್ರ ಕುಮಾರ್ ರವರ, ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀ ನರೇಂದ್ರ ಜೈನ್ ರಾಜ್ ಕಮಲ್, ಡಾ|| ನಿರಂಜನ್ ಕುಮಾರ್, ಶ್ರೀಮತಿ ಪದ್ಮಲತಾ ನಿರಂಜನ್
ಕುಮಾರ್, ಡಾ|| ಬಿ. ಯಶೋವರ್ಮ, ಶ್ರೀ ಪುಷ್ಪರಾಜ್ ಜೈನ್, ಶ್ರೀ ಪ್ರಸನ್ನ ಕುಮಾರ್, ಶ್ರೀ ರಾಜೇಶ್ ಎಂ ಇವರುಗಳ ಗೌರವ ಉಪಸ್ಥಿತಿಯಲ್ಲಿ ನಡೆಯಿತು.
ಗಣ್ಯರುಗಳಿಂದ ಮಣ್ಣಿನ ಕಳಸದಲ್ಲಿ ಹೊಮ್ಮಿದ ದೀಪಗಳನ್ನು ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು. ಪ್ರಸ್ತಾವಿಕ ನುಡಿಗಳನ್ನು ಡಾ|| ನಿರಂಜನ್ ಕುಮಾರ್ ರವರಿಂದ ಕೇಳುವಾಗ ಸರ್ವರನ್ನು ಮನದಾಳದಿಂದ ಸ್ವಾಗತಿಸುವಾಗ ಮನಸ್ಸು ಬಾಗಿ ನಮಸ್ಕರಿಸುವಂತೆ ಮಾಡಿತ್ತು.
ನಂತರ ನರೇಂದ್ರ ಜೈನ್ ಜೈನ್ ಮಿಲನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ನವದೆಹಲಿ ಇವರು ಕನ್ನಡದಲ್ಲಿ ಮಾತನ್ನು ಆರಂಭಿಸಿ ಕನ್ನಡಿಗರ ಚಪ್ಪಾಳೆಯನ್ನು ಪಡೆದರು.
ಶ್ರೀಗಳವರು ತಮ್ಮ ಆಶಿರ್ವಚನದಲ್ಲಿ ಭಜನಾ ಸಂಸ್ಕೃತಿಗೆ ಇಷ್ಟು ಮೇರುಗನ್ನು ಕೊಟ್ಟ ಸಮಸ್ತರನ್ನು ಶ್ಲಾಘಿಸಿದರು.
ಭಗವಂತನ್ನು ಹೊಲಿಸಿ ಕೊಳ್ಳಲು ಇರುವ ಭಕ್ತಿ ಮಾರ್ಗ ಮನಸ್ಸಿನಿಂದ ಅವನನ್ನು ನೆನೆದು ತಮ್ಮ ಪ್ರೀತಿ ಆದರಗಳನ್ನು ರಾಗ ತಾಳ ಭಕ್ತಿಯೊಂದಿಗೆ ಅವನ ಪಾದರವಂದಗಳಿಗೆ ಸಮರ್ಪಿಸಲು ಇರುವ ಏಕೈಕ ಮಾರ್ಗ ಭಜನೆ, ಇಂತಹ ಭಜನೆಯ ಸಂಸ್ಕೃತಿಯನ್ನು ಮತ್ತೆ ತಮ್ಮ ಮುಂದಿನ ಪೀಳಿಗೆ ಅಪ್ಪಿ ಒಪ್ಪಿ ನಾವು ಅದನ್ನು ಮುಂದುವರೆಸಿಕೊಂಡು ಹೊಗುತ್ತೇವೆ ಎನ್ನುವ ಭರವಸೆಯನ್ನು ಈ ಭಜನಾ ಸ್ಪರ್ಧೆಯಲ್ಲಿ ಕೊಟ್ಟಿದ್ದಾರೆ.
ಕಿರಿಯರ ವಿಭಾಗದ ಭಜನಾ ಸ್ಪರ್ಧೆ ಆರಂಭಗೊಂಡಿತು.
ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಅವರದೆ ದಾಟಿಯಲ್ಲಿ ಪಣತೊಟ್ಟು ಕೊಂಡೊಯ್ಯುತ್ತಿರುವ ಹಿರಿಯರ ವಿಭಾಗದ ಸ್ಪರ್ಧೆಯ ಆರಂಭ.
ಸಂಜೆಯ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸಿಬಂದ್ದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಇಂತಹ ಅದ್ಬುತ ಕಾರ್ಯಕ್ರಮಗಳ ಸೃಜನಾತ್ಮಕ ಸೃಷ್ಟಿ ಶಿಲಾ ಸಂಕಲನದೊಂದಿಗೆ ವೀಕ್ಷಿಸುತ್ತಿರಿ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














