ಜೈ ಜಿನೇಂದ್ರ ವೀಕ್ಷಕರೆ. ಪರಮ ಪೂಜ್ಯ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಪರಮ ಸಂರಕ್ಷಕರಾಗಿರುವ ಅನುಜ ಶ್ರೀ ಡಿ ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿರುವ ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಮಹಿಳಾ ಅಧ್ಯಕ್ಷರಾಗಿರುವ ಭಾರತೀಯ ಜೈನ್ ಮಿಲನ್ ತನ್ನ ಧಾರ್ಮಿಕ ಸಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಆರೋಗ್ಯ ಸೇವಾ ಕ್ಷೇತ್ರಗಳಲ್ಲಿನ ಅನುಪಮ ಸೇವೆಗಾಗಿ ದೇಶ ವಿದೇಶಗಳಲ್ಲಿ ಖ್ಯಾತಿಗಳಿಸಿದೆ. ಈ ಭಾರತೀಯ ಜೈನ್ ಮಿಲನ್ ವ್ಯಾಪ್ತಿಯಲ್ಲಿ ಅನೇಕ ಯುವ ಮಿಲನ್ ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ.
ಇದರ ಮುಖ್ಯ ಉದ್ದೇಶ ಜೈನ ಯುವ ಸಮುದಾಯವನ್ನು ಮುಖ್ಯ ವಾಹಿನಿಗೆ ತಂದು ಅವರ ಮೂಲಕ ಮಿಲನ್ ನ ಧ್ಯೇಯೋದ್ದೇಶಗಳ ಸಮರ್ಪಕ ಅನುಷ್ಠಾನಕ್ಕೆ ತೊಡಗಿಸಿಕೊಳ್ಳುವಂತೆ ಮಾಡುವುದು. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಸ್ಥಾಪನೆಗೊಂಡ ಐದನೇ ವರ್ಷಗಳಲ್ಲಿ ತನ್ನ ಅನೇಕ ವಿಶಿಷ್ಟ ಅಪೂರ್ವ ಸಾಧನೆಗಳ ಹಾಗೂ ನಿಸ್ವಾರ್ಥ ಸೇವೆಗಳ ಮೂಲಕ ಜನಮನ್ನಣೆಗೆ ಪಾತ್ರವಾಗಿರುವ ಒಂದು ಅತ್ಯುತ್ತಮ ಸದಭಿರುಚಿವುಳ್ಳ ದುರದೃಷ್ಟಿಯುಳ್ಳ ಸಮಾಜಮುಖಿ ಚಿಂತನೆಗಳನ್ನು ಹೊಂದಿರುವ ಸಧೃಡ ಯುವ ಸಂಘಟನೆ ಈ ಸುಹಾಸ್ತಿ ಯುವ ಜೈನ್ ಮಿಲನ್ ಕೇವಲ ಐದು ವರ್ಷಗಳಲ್ಲಿ ಇವರು ಕ್ರಮಿಸಿದ ದಾರಿ ಅಚ್ಚರಿ ಮೂಡಿಸುವಂತದು.
ಹಲವಾರು ಅಯಾಮಗಳನ್ನು ಒಳಗೊಂಡ ಇವರ ಸೇವಾ ಕ್ಷೇತ್ರದ ಪರಿದಿತಲ್ಲಿ ಪರಿಸರ ಸಂರಕ್ಷಣೆಗಾಗಿ ಆನಂದ ಶಿಶು ಮಾರ್ಗ ಜ್ಞಾನ ಭಾರತಿ ಹಾಗೂ ತುಮಕೂರಿನ ಮಂದಾರ ಗಿರಿಯಲ್ಲಿ ನೂರಾರು ಗಿಡಗಳನ್ನು ನೆಟ್ಟು ಅದರ ಸಂರಕ್ಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನೆರೆ ಹಾವಳಿಯಿಂದ ಸಂಕಟ ಕೀಡಾದವರ ನೆರವಿಗೆ ಧಾವಿಸಿ ಮಾನವೀಯತೆ ಮೇರೆದಿದ್ದಾರೆ. ಎಸ್,ಎಸ್,ಎಂ,ಆರ್,ವಿ ಡಿಗ್ರಿ ಕಾಲೇಜಿನ ಸಹಯೋಗದಲ್ಲಿ ನಾಡಿನಾಧ್ಯಂತ ಜೈನ ಯುವಕರನ್ನು ಸಂಘಟಿಸಿ ಜಿನ ಸಮ್ಮಿಲನಾ ಕಾರ್ಯಕ್ರಮ ಅಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಡಿಸೆಂಬರ್ 29 ಎಲ್ಲರ ನಡಿಗೆ ಜಿನ ಸಮ್ಮಿಲನದ ಕಡೆಗೆ ಎನ್ನುವ ಗೋಶವಾಕ್ಯದಲ್ಲಿ ಈ ಯುವ ಮಿಲನ್ ಡಿಸೆಂಬರ್ 29ರಂದು ಜಿನ ಸಮ್ಮಿಲನ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರ ಅಂಗವಾಗಿ ಕಬ್ಬಡಿ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ತ್ರೋಬಾಲ್ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ
ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನು ನೀಡಿ ಅವರಲ್ಲಿ ಅಂತಸ್ತವಾಗಿರುವ ಪ್ರತಿಭೆಯನ್ನು ಹೊರ ಹೊಮ್ಮಿಸುವಲ್ಲಿ ಸಹಾಕಾರಿಯಾಗಿದ್ದಾರೆ. ಹಾಗೂ ವಿಶೇಷವಾಗಿ ಕಬ್ಬಡಿ ಪಂದ್ಯಗಳಲ್ಲಿ ವಿಜೇತರಾದವರಿಗೆ ಕಳೆದ ವರ್ಷದಿಂದ ರಾಜಶ್ರೀ ಚಿನ್ನದ ಹೆಜ್ಜೆ ಎಂಬ ಪರಿಯಾಯ ಪಾರಿತೋಶಕವನ್ನು ಪರಮಪೂಜ್ಯ ರಾಜಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ನೀಡುತ್ತಾಬಂದಿದ್ದಾರೆ. ಇವರ ಕಾರ್ಯವೈಕರಿಗೆ ಹಲವಾರು ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ ನಾವು ಸಹ ಇವರನ್ನು ಪ್ರೋತ್ಸಾಹಿಸುವಲ್ಲಿ ಒಬ್ಬರಾಗೊಣಾ. ಬನ್ನಿ ಈ ಯುವಕರ ಸಾಧನೆಯ ಪರಿ ಬೇರೆಲ್ಲಾ ಯುವಕರಿಗೆ ಮಾಧರಿಯಾದ ರೀತಿಯನ್ನೊಮ್ಮೆ ನೋಡಿ ಬರೋಣಾ.
ಇಂತಹ ಒಂದು ಆರ್ಥಪೂರ್ಣ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಬಿ. ಪ್ರಸನ್ನಯ್ಯ ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಶ್ರೀ ಮೃತ್ಯುಂಜಯ ಜೈನ್, ಶ್ರೀ ಸುರೇಂದ್ರನಾಥ್, ಶ್ರೀ ಮಾಳ ಹರ್ಷೇಂದ್ರ ಜೈನ್, ಶ್ರೀ ಭರತೇಶ್ ಜಗ ಶೆಟ್ಟಿ ರವರು, ಶ್ರೀ ಪಿ.ವೈ ರಾಜೇಂದ್ರ ಕುಮಾರ್ ರವರು ಭಾಗವಹಿಸಿದ್ದರು. ಶ್ರೀ ಸಂತೋಷ್ ಡಿ ಜೈನ್ ರವರ ಅಧ್ಯಕ್ಷತೆಯಲ್ಲಿ ಆರ್. ಅಶೋಕ್ ರವರಿಂದ ಕ್ರೀಡಾ ಜ್ಯೋತಿ ಚಾಲನೆಗೊಳಿಸಲಾಯಿತು.
ಗಣ್ಯರುಗಳಿಂದ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಸಿಜ಼ನ್ ಫೋರ್ ನ ಉದ್ಘಾಟನೆ ಮಾಡಲಾಯಿತು.
ಶ್ವೇತ ನಿಹಾಲ್ ರವರು ನೇತೃತ್ವ ವಹಿಸಿದ ಆಶುಭಾಷಣ ಸ್ಪರ್ಧೆ ಅದ್ಭುತ ಪ್ರತಿಕ್ರಿಯೆದೊರೆತು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸೂಕ್ತ ತಯಾರಿಯೊಂದಿಗೆ ಪಾಲ್ಗೊಂಡರು. ಶ್ರೀ ವಿಲಾಸ್ ಪಾಸಣ್ಣನವರು ಇದರ ಉದ್ಘಾಟನೆ ಮಾಡಿದರು.
ಶ್ರೀ ಸಂತೋಷ್ ಡಿ ಜೈನ್ ರವರ ಕವನ ಸಂಕಲನ ಕಲ್ಪನೆಯ ಬಿಡುಗಡೆ ಕೂಡ ಈ ಸಂದರ್ಭದಲ್ಲಿ ನಡೆಯಿತು.
ಚಿತ್ರಕಲಾ ಸ್ಪರ್ಧೆಯ ಉದ್ಘಾಟನೆಯನ್ನು ಪ್ರೊಫೆಸರ್ ಉಷಾರಾಣಿಯವರಿಂದ ನಡೆಸಲಾಯಿತು.
ರಂಗೋಲಿ ಸ್ಪರ್ಧೆ ಉದ್ಘಾಟನೆ ಶ್ರೀ ಪದ್ಮಾಬಸದಿಯವರಿಂದ ನಡೆಯಿತು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಶ್ರೀ ಡಿ. ಸುರೇಂದ್ರ ಕುಮಾರ್ ರವರು ವಹಿಸಿದ್ದರು ಹಾಗೂ ವೇದಿಕೆಯಲ್ಲಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀ ಮೃತ್ಯುಂಜಯ ಜೈನ್, ಶ್ರೀಮತಿ ಡಾ|| ನಿರಜಾ ನಾಗೇಂದ್ರ ಕುಮಾರ್, ಶ್ರೀ ಎ. ಆರ್. ನಿರ್ಮಲ್ ಕುಮಾರ್, ಆರ್ ಅಶೋಕ್ ಹಾಗೂ ಶ್ರೀ ಸಂತೋಷ್ ಡಿ
ಜೈನ್ ರವರು ಉಪಸ್ಥಿತರಿದ್ದರು. ವೇದಿಕೆ ಗಣ್ಯರುಗಳು ಕ್ರೀಡಾ ಉತ್ಸಹವನ್ನು ಪ್ರೋತ್ಸಾಹಿಸಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.














