ಜಿನಭಜನಾ ಸ್ಪರ್ಧೆ ಸೀಸನ್ 4 ಫಿನಾಲೆ ಕಾರ್ಯಕ್ರಮದ ಆತ್ಮೀಯ ಆಹ್ವಾನ . ಶ್ರೀಮತಿ ಹೇಮಾವತಿ ಹೆಗ್ಗಡೆ ಮತ್ತು ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾರ್ಷೀವಾದದೊಂದಿಗೆ ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ 2019 – 20ನೇ ಸಾಲಿನ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ ಸೀಸನ್ 4 . ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕಾರ್ಯಕ್ರಮ ವರ್ಷ ವರ್ಷವೂ ಒಂದೊಂದು ಹಂತದಲ್ಲೂ ಬೆಳೆಯುತ್ತಾ ಹೋಗುತ್ತಿದೆ ಹೀಗೆಯೇ ಎಲ್ಲಾ ರೀತಿಯಲ್ಲಿ ಬೇಳೆಯಲಿ ಎಂದು ನಾವು ಹಾರೈಸುತ್ತೇನೆ ಎಂದು ಶುಭಕೋರಿದರು.
ಶರೀ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಧಾರವಾಡದ ಡಾ|| ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ದಿನಾಂಕ 04/01/2020 ರಂದು ಸೆಮಿಫೈನಲ್ ಹಾಗೂ ದಿನಾಂಕ: 05/01/2020 ರಂದು ಫೈನಲ್ ಸ್ಪರ್ಧೆ ನಡೆಯಲಿದೆ. ಶ್ರೀ ನಿರಂಜನ್ ಕುಮಾರ್ ಹಾಗೂ ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರ ನೇತೃತ್ವದಲ್ಲಿ , ಶ್ರೀ ಪುಷ್ಪರಾಜ್ ಜೈನ್ ರವರ ಅಧ್ಯಕ್ಷತೆಯಲ್ಲಿ
ಆಯೋಜಿತಗೊಂಡಿರುವ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟರಾದ ಶ್ರೀ ರಮೇಶ್ ಭಟ್ , ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಅರ್ಚನಾ ಉಡುಪ ರವರು ಭಾಗವಹಿಸಲಿದ್ದಾರೆ. ಸೆಮಿ ಫೈನಲ್ ಗಾಗಿ ಕೆ. ಕಲ್ಯಾಣ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ತುಂಬು ಹೃದಯದ ಸ್ವಾಗತವನ್ನು ಬಯಸುತ್ತಿರುವವರು ಎಲ್ಲಾ ವಿಭಾಗೆ ನಿರ್ದೇಶಕರುಗಳು, ಮಿಲನ‍್ ಪದಾದಿಕಾರಿಗಳು, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಧಾರವಾಡ ಜೈನ್ ಮಿಲನ್ ಮತ್ತು ಧಾರವಾಡ ದಕ್ಷಿಣ ಜೈನ್ ಮಿಲನ್














