ದಾವಣಗೆರೆ ವಿಭಾಗ ಜಿನಾಭಜನಾ 2019/ ಜ್ವಾಲಾಮಲೆನ್ಯೂಸ್ / 2019

ಜೈ ಜಿನೇಂದ್ರ ಜ್ವಾಲಾಮಾಲಾ  ಡಾಟ್ ನ್ಯೂಸ್ ಗೆ ಸ್ವಾಗತ

ಒಂದೇ ತೆರನಾದ ಉಡುಗೆಗಳಲ್ಲಿ ಮಿನುಗುತ್ತಿರುವ ಹೆಂಗಳೆಯರು , ಪೇಠ ಧರಿಸಿ ಗಂಡಸರು , ಮಧುವಣಗಿತ್ತಿಯಂತೆ ಅಲಂಕರಿಸಿಕೊಂಡು ನಾಚುತ್ತಾ ತಯಾರಾದ ಮುದ್ದು ಮುದ್ದಾದ ಮಕ್ಕಳು  ನೀವು ನೋಡುತ್ತಿರುವ ಸಡಗರ ಸಂತಸ ಯಾವ ಜಾತ್ರೆಯದ್ದೂ ಅಲ್ಲ , ಯಾವ ದಿಬ್ಬಣದ್ದೂ ಅಲ್ಲ. ಹಬ್ಬದಂತೆ ಇವರೆಲ್ಲಾ ಸಂಭ್ರಮಿಸುತ್ತಿರುವುದು ಜಿನ ಭಜನಾ ಸ್ಪರ್ಧೆಗೆ .

 

ದಾವಣಗೆರೆ ವಿಭಾಗ ಮಟ್ಟದ ಜಿನಭಜನಾ ಸೀಸನ್ 4 ಸ್ಪರ್ಧೆ ವೀಕ್ಷಣೆಗಾಗಿ ನಾವು ಇಂದು ಹಾವೇರಿಯಲ್ಲಿ ಇದ್ದೇವೆ. ಭಾರತೀಯ ಜೈನ್ ಮಿಲನ್, ವಲಯ -8 ವತಿಯಿಂದ ಅನಿತಾ ಸುರೇಂದ್ರ ಕುವಾರ್ ರವರ ಪರಿಕಲ್ಪನೆಯಲ್ಲಿ ಸುಂದರ ಜಿನಭಜನಾ ಸ್ಪರ್ಧೆ ರಾಜ್ಯದೆಲ್ಲೆಡೆ ನಡೆಯುತ್ತಿರುವ  ಬೃಹತ್ ಸಮಾರಂಭವಾಗಿ ಮಾರ್ಪಟ್ಟಿದೆ. ಈ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಹಾವೇರಿಯ ಶ್ರೀ ಕಲ್ಯಾಣ ಮಂಟಪದಲ್ಲಿ ದಿನಾಂಕ : 24/11/2019ರಂದು ವರೂರಿನ ಪರಮಪೂಜ್ಯ ಸ್ವಸ್ಥಿಶ್ರೀ ಧರ್ಮಸೇನಾ ಭಟ್ಟಾರಕಭಟ್ಟಾಚಾರ್ಯವರ್ಯ  ಮಹಾಸ್ವಾಮಿಯವರ  ಪಾವನಸಾನಿಧ್ಯದಲ್ಲಿ ಉದ್ಘಾಟಕರಾಗಿ ಅಜಿತ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಉಷಾ ಜೈನ್ ಪ್ರಕಾಶ್ , ವಿಜಯ್ ಕುಮಾರ್  ಬಿ. ಸಾತನಗೊಂಡ , ಮಹಾವೀರ ಲಕ್ಷ್ಮಾಪುರ ,ಭವಿತ , ಮಹಾವೀರ ದೊಡ್ಮನಿ , ಪಿ. ಸುಮತಿಕುಮಾರ್ , ಯಶೋಧರ ಹೆಗ್ಗಡೆ  ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಇ.ವಿ ಅಜ್ಜಪ್ಪನವರು ವಹಿಸಿದ್ದು ಇವರುಗಳ  ಉಪಸ್ಥಿತಿಯಲ್ಲಿ ಭರತ್ ರಾಜ್ ಹಜಾರಿ  ಇವರ ಸ್ವಾಗತದೊಂದಿಗೆ ಆರಂಭವಾದ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡಿ , ದಾವಣಗೆ ಡಿವಿಝನ್ ನಲ್ಲಿ ಮೊಟ್ಟಮೊದಲ ಬಾರಿಗೆ ಹಾವೇರಿಯಲ್ಲಿ ನಡೆಯುತ್ತಿದ್ದು  ಮೊದಲನೇ ಸೀಸನ್ ನಲ್ಲಿ ಸುಮಾರು 900 ಸ್ಪರ್ಧಿಗಳು ಭಾಗವಹಿಸಿದ್ದರು. ಈಗ ನಾಲ್ಕನೇ ಸೀಸನ್ ನಲ್ಲಿ  1800 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಇದು ಸಂಖ್ಯೆಯಲ್ಲಿ ಹೆಚ್ಚಾಗಿದಲ್ಲದೇ  ಅವರು ತಯಾರಾಗುವ ರೀತಿ ಕೂಡ ಬದಲಾಗಿದೆ. ಸ್ಪರ್ಧಿಗಳಲ್ಲಿ ಮೂಡುತ್ತಿರುವ  ಆಸಕ್ತಿ , ಶ್ರದ್ಧೆ, ಮತ್ತು ಅವರುಗಳು ತಯಾರಾಗುತ್ತಿರುವ ರೀತಿಯನ್ನು ನೋಡಿದರೆ ತುಂಬಾ ಸಂತೋಷವಾಗುತ್ತಿದೆ ಎಂದು ತಿಳಿಸಿದರು. ಇದರೊಂದಿಗೆ ಹೊಸ ಹೊಸ ರೀತಿಯ ಸಾಹಿತ್ಯ ಸ್ವರಚಿತ ಗೀತೆಗಳನ್ನು ತಯಾರು ಮಾಡಿಕೊಂಡು ಬರುತ್ತಿದ್ದಾರೆ.

ಉತ್ತಮ ದಾಟಿ ಲಯ ರಾಗ ತಾಳದೊಂದಿಗೆ  ಸ್ಪರ್ಧಿಗಳು ತಮ್ಮ ಭಜನೆಯನ್ನು ಪ್ರಸ್ತುತಪಡಿಸಿದರು.  ನಂತರ  ಶ್ರೀಗಳವರು ಆಶೀರ್ವಚನದಲ್ಲಿ  ಮಾತನಾಡಿ  ಈಗಿನ ಕಾಲದಲ್ಲಿ ಜನರು ಭಜನೆಯನ್ನು ಮರೆತುಹೋಗುವ ಕಾಲ ಬಂದಿದ್ದು ನಮ್ಮ ಈಗಿನ ಮಕ್ಕಳಿಗೆ ಭಜನೆಯ ಗಂಧವೇ ಗೊತ್ತಿಲ್ಲ ಎನ್ನುವ ಸಂದರ್ಭದಲ್ಲಿ ಈ ಜಿನಭಜನಾ ಕಾರ್ಯಕ್ರಮವು ಒಂದು ಒಳ್ಳೆಯ ವೇದಿಕೆಯಾಗಿದ್ದು ಈಗಿನ ಮಕ್ಕಳಿಂದ ಹಿಡಿದು ದೊಡ್ಡವರೆಲ್ಲ ಕೂಡಿ ಎಲ್ಲರೂ ಅತಿ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ ಆದ್ದರಿಂದ  ಈ ಕಾರ್ಯಕ್ರಮವನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು ಮತ್ತು  ಈಗಿನ ಮಕ್ಕಳಿಗೆ ನಮ್ಮ ಸಂಪ್ರದಾಯಗಳು , ಆಚಾರ ವಿಚಾರಗಳು ಹಿರಿಯರಿಗೆ ಕೊಡುವ ಗೌರವವನ್ನು ತಿಳಿಸಿಕೊಡಬೇದು ನಮ್ಮ ಧರ್ಮವನ್ನು ಕಾಪಾಡಿಕೊಂಡು ಹೋಗಬೇಕು. ಹಾಗೂ ನಮ್ಮ ಮಕ್ಕಳಿಗೆ ಅಂಟಿರುವ ಮೊಬೈಲ್ ಗಳ ಹುಚ್ಚುಗಳನ್ನು ಬಿಡಿಸುವಲ್ಲ ನಾವು ಈ ಮೂಲಕ ಯಶಸ್ವಿಯಾಗಬಹುದೆಂದು ನನ್ನ ಅನಿಸಿಕೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ  ವಿಶೇಷ ಅತಿಥಿಗಳಾಗಿ  ಶ್ರೀಮತಿ ಪದ್ಮಲತಾ ನಿರಂಜನ್  ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಜೀವನ್ ಧರ್ ಕುಮಾರ್ ವಿ.  ಹೆಚ್ .ಪಿ ಸುಮತಿಕುಮಾರ್ , ಇ.ವಿ ಅಜ್ಜಪ್ಪನವರು , ಕೆ. ಯಶೋಧರ್ ಹೆಗ್ಗಡೆ  ಅಧ್ಯಕ್ಷರಾಗಿ ಶ್ರೀಧರ್ ಎ ವರೂರ್ ರವರು ಪಾಲ್ಗೊಂಡಿದ್ದರು. ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು ಮಾತನಾಡಿ ಸಂಗೀತಕ್ಕಿರುವ ವೈಶಿಷ್ಟ್ಯತೆಯನ್ನು  ತಿಳಿಸಿದರು. ವಿ. ಜೀವನ್ ಧರ್ ರವರು ಮಾತನಾಡಿ  ಈ ಜಿನಭಜನಾ ಕಾರ್ಯಕ್ರಮ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ.  ತೀರ್ಪುಗಾರರಾಗಿ, ತನುಜ‍್ ಜೈನ್ , ಪ್ರತಿಭಾ ಪಾರ್ಶ್ವನಾಥ್, ಸುರೇಶ್ ಕಣಕಲ್ ಭಾಗವಹಿಸಿದ್ದರು. ಬಹುಮಾನ  ವಿತರಣೆಯನ್ನು ಕಿರಿಯರ ವಿಭಾಗದಲ್ಲಿ  ಪ್ರಥಮ ಬಹುಮಾನ ಯಕ್ಷಿಣಿ ತಂಡ ಬಾಳಂಬೀಡ, ದ್ವಿತೀಯ ಬಹುಮಾನ ಜಿನವಾಣಿ  ತಂಡ  ಅಕ್ಕಿ ಆಲೂರು,  ತೃತೀಯ ತಂಡ  ಮುತ್ತು ಮಾಣಿಕ್ಯ ತಂಡ ಹಾವೇರಿ, ಸಮಾಧಾನಕರ ಬಹುಮಾನ  ಜೈ ಜಿನೇಂದ್ರ ತಂಡ ಬಾಳಂಬೀಡ. ಹಿರಿಯರ ವಿಭಾಗದಲ್ಲಿ  ಪ್ರಥಮ ಬಹುಮಾನ ಜಿನವಾಣಿ ತಂಡ 

ಹಾವೇರಿ, ದ್ವಿತೀಯ ಬಹುಮಾನ  ಶ್ರೀ ಶಾಂತಿನಾಥ ಭಜನಾ ತಂಡ ಚಬ್ಬಿ, ತೃತೀಯ ಬಹುಮಾನ ಪದ್ಮಿನಿ ಮಹಿಳಾ ತಂಡ ಬಾಳಂಬೀಡ. ಸಮಾಧಾನಕರ ಬಹುಮಾನ  ಸನ್ಮತಿ ಭಜನಾ ತಂಡ  ಕಂಚಿಕೊಪ್ಪ.