ಜೈ ಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ
ನಮಗೆ ಅತ್ಯಂತ ಸಡಗರ ಉತ್ಸಾಹ ತಂದು ಕೊಟ್ಟ ಜಿನಭಜನಾ ಸ್ಪರ್ಧೆ ಸೀಸನ್ 4 ಹಂತಕ್ಕೆ ಬಂದು 4 ವರ್ಷಗಳಿಂದ ಮನೆ ಮನೆ ಮಾತಾಗಿರುವ ಕಾರ್ಯಕ್ರಮವಾಗಿದ್ದು ಮೂಲೆ ಸೇರಿದ್ದ ಭಜನೆಗಳು , ಜಾನಪದ ಗೀತೆಗಳು ಸಂಗೀತಗಳು ಇವುಗಳ ಪ್ರತಿಭೆಗಳು ಹೊರಹೊಮ್ಮುತ್ತಿವೆ. ಇಂದು ಮೈಸೂರಿನಲ್ಲಿ ನಡೆಯುತ್ತಿರುವ ವಿಭಾಗೀಯ ಮಟ್ಟದ ಜಿನಭಜನಾ ಸ್ಪರ್ಧೆ ಸೀಸನ್ 4. ಎಲ್ಲೆಲ್ಲೂ ಸ್ಪರ್ಧಾಳುಗಳು ಅಲಂಕರಿಸಿಕೊಂಡು ನೋಂದಣಿಗಾಗಿ ತಮ್ಮ ನೋಂದಣಿ ಸಂಖ್ಯೆ ಪಡೆಯಲು ತಮ್ಮ ಗುಂಪಿನವರನ್ನು ಹುಡುಕುತ್ತಾ ತಯಾರಿಯಲ್ಲಿ ಇರುವಂತಹ ದೃಶ್ಯಾವಳಿಗಳು ನಮಗೆ ಕಂಡು ಬರುತ್ತಿದ್ದುದು ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ . ಸ್ಪರ್ಧಿಗಳನ್ನು ಗಮನಿಸಿದಾಗ ಅವರಲ್ಲಿ ಕಂಡ ಹುರುಪು ಸ್ಪರ್ಧೆಯ ಯಶಸ್ಸನ್ನು ಬಿಂಬಿಸುತ್ತದೆ.
ದಿನಾಂಕ 17/11/2019ರಂದು ಪರಮಪೂಜ್ಯ ಸ್ವಸ್ಥಿ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳ ಶುಭಾಶೀರ್ವಾದದೊಂದಿಗೆ ಭಾರತೀಯ ಜೈನ್ ಮಿಲನ್ ವಲಯ 8 ರ ಅಧ್ಯಕ್ಷರಾದ ಮಂಗಳೂರಿನ ಶ್ರೀ ಪುಷ್ಪರಾಜ್ ಜೈನ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ವಲಯ ಕಾರ್ಯಾಧ್ಯಕ್ಷರಾದ ಏ. ಪ್ರಸನ್ನ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರು ವಲಯ ಕಾರ್ಯದರ್ಶಿಗಳಾಗಿ ಶ್ರೀ ವಿ.ಕೆ. ಯುವರಾಜ್ ಭಂಡಾರಿ, ಮೈಸೂರು ವಿಭಾಗದ ವಲಯ ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಅನಂತ್ ರಾಜ್ ರವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶ್ರೀಮತಿ ಚಂದನ ಮಂಗಳೂರು, ಶ್ರೀಮತಿ ಮಮತಾ ರವೀಂದ್ರ ಮೈಸೂರು, ಶ್ರೀಮತಿ ಸುಶ್ಮಾ ಬೆಂಗಳೂರು ಇವರುಗಳು ಪಾಲ್ಗೊಂಡಿದ್ದರು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಪ್ರಾಸ್ತಾವಿಕ ನುಡಿ ಶ್ರೀ ಕೆ. ಯುವರಾಜ್ ಭಂಡಾರಿಯವರಿಂದ ನಡೆಯಿತು. ಅಲ್ಲಿ ಉಪಸ್ಥಿತರಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಅಲ್ಲಿ ನೆರೆದಿದ್ದ ಜನರಿಗೆ ಜಿನಭಜನಾ ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ನಡೆಯುತ್ತಿದ್ದು ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹ , ಉತ್ಸಾಹ ತುಂಬಾ ಅತಿ ಅವಶ್ಯಕವೆಂದು ತಿಳಿಸಿದರು.
ಮೈಸೂರು ವಿಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ದೂರದೂರಿನಿಂದೆಲ್ಲಾ ಆಗಮಿಸಿ ಪಾಲ್ಗೊಂಡಿದ್ದು ಸ್ಪರ್ಧೆಯ ಆಯೋಜಕರಲ್ಲಿ ಕಾರ್ಯ ತತ್ಪರತೆಯನ್ನು ಪ್ರತಿಬಿಂಬಿಸಿದೆ. ಅಲ್ಲದೇ ಇಲ್ಲಿನ ಸಮೂಹ ಗಾಯನ ರಾಜ್ಯದೆಲ್ಲೆಡೆಗಿಂತ ಅತ್ಯಂತ ಯಶಸ್ವಿಯಾಗಿ ಈ ಬಾರಿ ಮೂಡಿ ಬಂದಿದ್ದು ಸಂಗೀತ ನಿರ್ದೇಶಕರಾದ ಸೌಮ್ಯ ಶ್ರೀಧರ್ ರವರಿಗೆ ವಂದನೆ ಸಲ್ಲುತ್ತದೆ. ಸಮಾರೋಪ ಸಮಾರಂಭದಲ್ಲಿ ವಿನೋದ ಪ್ರಸನ್ನ ಕುಮಾರ್ ರವರು ಮಾಡನಾಡಿ ಭಜನೆಯಿಂದ ನಮ್ಮ ಶರೀರದಲ್ಲಾಗುವ ಬದಲಾವಣೆಗಳನ್ನು ತಿಳಿಸಿಕೊಟ್ಟರು. ಹಾಗೂ ಕಾರ್ಯಕ್ರಮದ ಪ್ರಮುಖ ಘಟ್ಟ ಫಲಿತಾಂಶದಲ್ಲಿ ವಿಜೇತರಾದಂತಹ ತಂಡಗಳಿಗೆ ಬಹುಮಾನಗಳನ್ನು ನೀಡಲಾಯಿತು. ಮೈಸೂರಿನ ಜಿನಭಜನಾ ಸಮೂಹ ಗೀತೆಗೆ ಎಲ್ಲಾ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.
.














