ಇಂದ್ರ ಧ್ವಜ ಆರಾಧನೆ ಬೆಲ್ಲೂರು-2019

ಜೈ ಜಿನೇಂದ್ರ ವೀಕ್ಷಕರೆ, ಇತ್ತೀಚೆಗಷ್ಟೇ ಅನಂತನೊಂಪಿ ಉಧ್ಯಾಪನ ಕಾರ್ಯಕ್ರಮ ಬಹಳ ವಿಜೃಂಭಣೆಯಾಗಿ ನಡೆದ ಈ ಬೆಳ್ಳೂರಿನಲ್ಲಿ ಬೃಹತ್ ಇಂದ್ರ ಧ್ವಜ ಮಹಾಮಂಡಲ ವಿಧಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇದರ ದೃಶ್ಯಾವಳಿಗಳು ನಿಮಗಾಗಿ.

ದಿನಾಂಕ : 09-11-2019ರಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಶ್ರೀ ವಿಮಲನಾಥ ಜಿನ ಚೈತ್ಯಾಲಯದಲ್ಲಿ ಬೃಹತ್ ಇಂದ್ರ ಧ್ವಜ ಮಹಾಮಂಡಲ ವಿಧಾನವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಮುನಿಶ್ರೀ 108 ಪುಣ್ಯ ಸಾಗರ ಮುನಿ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಪೂಜ್ಯ ಅರಿಕಾ ಶ್ರೀ 105 ಸಂಮಿಶ್ರೀ ಮಾತಾಜಿ, ಪೂಜ್ಯ ಕ್ಷುಲಕ ಶ್ರೀ 105 ವಿನಶ್ರೀ ಮಾತಾಜಿ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗ ದರ್ಶನದಲ್ಲಿ, ಪರಮ ಪೂಜ್ಯ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಟ್ಟಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ಕ್ಷೇತ್ರ ಶ್ರವಣ ಬೆಳಗೊಳ, ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಸ್ವಾಮೀಜಿ ಎನ್. ಆರ್. ಪುರ, ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಕಂಬದ ಹಳ್ಳಿ, ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಂಲ ಭಟ್ಟಾರಕ ಮಹಾ ಸ್ವಾಮೀಜಿ ಸೋಂಧ, ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಅರತಿಪುರ, ಇವರುಗಳ ಸಾನಿಧ್ಯ ಹಾಗೂ ಉಪಸ್ಥಿತಿಯಲ್ಲಿ ಅತ್ಯಂತ ವಿಧಿವತ್ತಾಗಿ ವಿಧಾನವನ್ನುಅಚರಿಸಲಾಯಿತ್ತು.

ಇಂದ್ರ ದ್ವಜ ಅರಾಧನೆಯಲ್ಲಿ ಪಂಚಮೇರು ಬಿಂಬವನ್ನು ಸ್ಥಾಪನೆಮಾಡಿ, ಸುಮೇರು, ವಿಜಯ ಮೇರು, ಅಚಲ ಮೇರು, ಮಂಧಾರ ಮೇರು, ವಿದ್ಯುನ್ಮಾಲಿ ಮೇರು, ಹೀಗೆ ಪಂಚ ಮೇರು ಪರ್ವತಗಳ ವರ್ಣನೆ ನದಿಗಳ ವರ್ಣನೆ ಮಾಡುತ್ತ ಸೌಂದರ್ಮೆರು ಸ್ವತಃ ವಿಧಾನವನ್ನು ಮಾಡುವುದಕ್ಕೆ ಇಂದ್ರ ದ್ವಜ ಆರಾಧನೆ ಎಂದು ಪ್ರತೀತಿಯಲ್ಲಿದೆ. ಈ ವಿಧಾನದಲ್ಲಿ ಪ್ರಮುಖವಾಗಿ ದ್ವಜಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೆ ಹತ್ತು ಬಗೆಯ ದ್ವಜದ ವಿವರಣೆಗಳ ಮೂಲಕ ದ್ವಜಗಳನ್ನು ಅರ್ಪಿಸಲಾಗುತ್ತದೆ.

ಇಲ್ಲಿ 458ಮಂದಿರಗಳಿಗೆ 458 ದ್ವಜಗಳನ್ನು ಸ್ಥಾಪಿಸುವುದರೊಂದಿಗೆ ಜಗತ್ತಿಗೆ ಸರ್ವದೋಷ ನಿವಾರಣೆ ಯಾಗುವ ದೃಷ್ಟಿಯನ್ನು ಈ ಆರಾಧನೆ ನೀಡಿದೆ. ಈ ವಿಧವನ್ನು ಅಚರಿಸುವುದರ ಮೂಲಕ ಶ್ರಾವಕ ಶ್ರಾವಕಿಯರು ಕಾರ್ಯ ಸಿದ್ಧಿ ಹಾಗೂ ಮನೋಕಾಮನೆ  ಪೂರ್ತಿಯಾಗುವ ಉದ್ದೇಶದಿಂದ ಕೈಗೊಳ್ಳುತ್ತಾರೆ. ಹಾಗೂ ಮೋಕ್ಷ ಪಥದ ಹಾದಿಗಾಗಿ ಈ ವ್ರತ ಕೈಗೊಳುತ್ತಾರೆ.

ಶ್ರವಣ ಬೆಳಗೊಳದ ಶ್ರೀಗಳು ಆಗಮಿಸಿ ಪೂಜೆಯಲ್ಲಿ ಸಾನಿಧ್ಯ ವಹಿಸಿದರಲ್ಲದೆ ಬಸದಿ ನಿರ್ಮಾಣ ಹಂತದ ಕಾರ್ಯಗಳನ್ನು ವೀಕ್ಷಿಸಿದರು.

ಸ್ವಾಮಿಯ ಉತ್ಸವ ಸುಂದರವಾದ ರಥದಲ್ಲಿ ಬಸದಿಯಿಂದ ಹೊರಟು ಮಹಾವೀರ ವೃತ ಮಾರ್ಗವಾಗಿ ಮೆರವಣಿಗೆಯಲ್ಲಿ ಶ್ರಾವಕ ಶ್ರಾವಕಿಯರು ಸಡಗರದಿಂದ ಪಾಲ್ಗೊಂಡಿದ್ದರು. ಬೆಳ್ಳೂರಿನ ಭಗವಾನ್ ಶ್ರೀ 108 ವಿಮಲನಾಥ ಜೈನ ಸಮಾಜದ ಅಧ್ಯಕ್ಷರು ಸದಸ್ಯರುಗಳು ಸೇರಿ ಈ ವಿಧಾನವನ್ನು ಅಚ್ಚುಕಟ್ಟಾಗಿ ನೇರೆವೇರಿಸಿದಲ್ಲದೆ, ವಿವಿಧೆಡೆಗಳಿಂದಲ್ಲೂ ಕೂಡ  ಶ್ರಾವಕ ಶ್ರಾವಕಿಯರು  ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.