ಜೈ ಜಿನೇಂದ್ರ ವೀಕ್ಷಕರೆ, ಇದೆ ಪ್ರಥಮ ಬಾರಿಗೆ ಮೈಸೂರಿನಲ್ಲಿ ಲಕ್ಷದೀಪೋತ್ಸವ ಎಲ್ಲೆಲ್ಲೂ ಹೊಸ ಬೆಳಕು ಹೊಮ್ಮೂತ್ತಿದೆ. ಪರಮ ಪರಂಜೋತಿ ಕೋಟಿ ಚಂದ್ರಾದಿತ್ಯ ಕಿರಣ ಸುಜ್ಞಾನ ಪ್ರಕಾಶ.
ವೀಕ್ಷಕರೆ ನೀವು ಇಲ್ಲಿ ನೋಡುತ್ತಿರುವುದು ಮೈಸೂರಿನ ಕೋಟೆ ಶಾಂತಿನಾಥ ಸ್ವಾಮಿ ಬಸದಿ. ಬಸದಿಯ ಎಲ್ಲೆಡೆ ದೀಪಾಲಂಕಾರದಿಂದ ಹಣತೆ ಬೆಳಕಿನಿಂದ ಹೂವಿನ ರಂಗೋಲಿಗಳಿಂದ ಕಂಗೋಳಿಸುತ ಸ್ವರ್ಗವೇ ನಾಚುವಂತೆ ಕಾಣುತ್ತಿತ್ತು ಬಸದಿ. ಸುತ್ತಲು ಹೊಸಬೆಳಕು ಮೂಡಿತ್ತು. ದಿನಾಂಕ 26-11-2019ರಂದು ಪದ್ಮಶ್ರೀ ಜೈನ ಮಹಿಳಾ ಸಮಾಜದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲಕ್ಷದೀಪೋತ್ಸವ ವರ್ಣನೆ ಇದು.
ಹೊಂಬುಜ ಧರ್ಮಸ್ಥಳ ನರಸಿಂಹ ರಾಜಪುರ ಇನ್ನೂ ಹಲವಾರು ಕಡೆ ಈ ಸಮಯದಲ್ಲಿ ಲಕ್ಷದೀಪೋತ್ಸವವನ್ನು ಅಯೋಜಿಸಲಾಗುತ್ತಿದ್ದು. ಇದೆ ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಈ ರೀತಿಯಾದ ಹೊಸ ಅಲೋಚನೆಯೊಂದಿಗೆ ಶ್ರೀಮತಿ ಲತಾ ಸುದರ್ಶನ್ ರವರ ನೇತೃತ್ವದಲ್ಲಿ ಜೈನ ಮಹಿಳಾ ಸಮಾಜ ಮೈಸೂರಿಗರಿಗೂ ಅಂತಹ ಒಂದು ಅವಕಾಶವನ್ನು ಕಲ್ಪಿಸಿತ್ತು. ನಗರದ ಶ್ರಾವಕ ಶ್ರಾವಕಿಯರೆಲ್ಲರಿಂದ ಒಂದು ಹೊಸ ಕಾರ್ಯಕ್ಕೆ ಮನ್ನಣೆಸಿಕ್ಕಿತು. ತ್ರಿಲೋಕ ನಂದಿಶ್ವರ ಇನ್ನೂ ಹಲವಾರು ರೀತಿಯ ಅಲಂಕಾರದಲ್ಲಿ ಹಣತೆಗಳು ಬೆಳಗುತ್ತಿದವು. ಮಹಾವೀರ ಸ್ವಾಮಿಯ ಉತ್ಸವವನ್ನು ಕೊಡ ಹಮ್ಮಿಕೊಳ್ಳಲಾಗಿತ್ತು, ನೋಡಿ ಕಣ್ತುಂಬಿಕೊಳ್ಳಿ.














