ಸೆಂಟ್ರಲ್ ಜೈನ್ ಮಿಲನ್ 400 ಮೀಟಿಂಗ್/ ಜ್ವಾಲಾಮಲಾ ನ್ಯೂಸ್ / 2019

ಜೈ ಜಿನೇಂದ್ರ ವೀಕ್ಷಕರೆ, ಜೈನ್ ಮಿಲನ್ ದೇಶದಲ್ಲಿ ಅತೀ ಬೃಹದಾಕರದಲ್ಲಿ ಬೆಳೆದಿರುವ ಜೈನ ಸಂಘಟನೆ. ಜೈನರನ್ನು ಒಂದೆಡೆ ಒಗ್ಗೂಡಿಸುವ ಏಕೈಕ ಶಕ್ತಿ ಇತ್ತೀಚಿನ ದಿನಗಳಲ್ಲಿ ಹೊರ ದೇಶಗಳಲ್ಲೂ ಸಂಘಟಿತಗೊಳ್ಳುತಿರುವ ಈ ಒಂದು ಹೆಮ್ಮೆಯ ವೇದಿಕೆ ನಮ್ಮ ರಾಜ್ಯಕ್ಕೆ ಪ್ರಥಮವಾಗಿ ಪರಿಚಯಗೊಂಡಿದ್ದು ಅ.ನಾ. ಚಂದ್ರಕೀರ್ತಿಯವರಿಂದ ವೃತ್ತಿಯಲ್ಲಿ ಇಂಜಿನಿಯರ್ ಆದ ಇವರು ಪ್ರವೃತಿಯಲ್ಲಿ ಜೈನ ಗ್ರಂಥಗಳ ಪರಿಚಯಿಸಿದ ಗ್ರಂಥಗಳನ್ನು ಪುಸ್ತಕಗಳನ್ನು ಓದುವ ಗೀಳನ್ನು ತಂದು ಕೊಟ ಮಹಾನ್ ವ್ಯಕ್ತಿ. ಇಂತವರ ಮಾರ್ಗದರ್ಶನದಲ್ಲಿ ಆರಂಭವಾಯಿತು ಮಿಲನ್ ನ ಯಾತ್ರೆ. ಹಾಗಾ ನೋಡಿ ಪ್ರಪ್ರಥಮವಾಗಿ ಶುರುವಾಗಿದ್ದು ಬೆಂಗಳೂರಿನಲ್ಲಿ ಸೆಂಟ್ರಲ್ ಜೈನ್ ಮಿಲನ್ ಮೊಟ್ಟಮೊದಲ ಮಿಲನ್. 1983ರಲ್ಲಿ ಆರಂಭವಾದ ಈ ಮಿಲನ್ ಸಂಸ್ಥಾಪಕ ಸದಸ್ಯರುಗಳಾದ ಎ.ಕೆ.ಎ ರಾಜಪ್ಪ, ಕೆ.ಪಿ ಸುರೇಂದ್ರನಾಥ್, ಎಂ.ಸಿ ಅನಂತ ರಾಜಯ್ಯ, ಎ.ಆರ್. ನಿರ್ಮಲ್ ಕುಮಾರ್, ಎ.ಆರ್. ನಾಗರಾಜ್, ಬಿ.ಜೆ. ಜೀವೇಂದ್ರಯ್ಯ, ಎ.ಎನ್. ವಜ್ರನಾಭಯ್ಯ ಹೀಗೆ.

ಇಗಲ್ಲೂ ಸಂಸ್ಥಾಪಕ ಸದಸ್ಯರಾಗಿ ಗೌರವಿಸಲ್ಪಡುತ್ತಿರುವವರು ಎ.ಆರ್. ನಿರ್ಮಲ್ ಕುಮಾರ್ ರವರು. ಅವರ ಮಾರ್ಗ ದರ್ಶನದಲ್ಲಿ ಅನೇಕ ಸಮಾಜಿಕ ಕಾರ್ಯಕ್ರಮಗಳು ನಡೆದುಕೊಡು ಬಂದವು. ತದನಂತರ ಶ್ರೀ ಡಿ ಸುರೇಂದ್ರ ಕುಮಾರ್ ರವರ ಪ್ರವೇಶ ಯಾವಾಗ ಮಿಲನ್ ಗೆ ಹಾಯಿತೋ ಹಾಗಿನಿಂದಲು ಕೊಡ ಮಿಲನ್ ಬಹು ಎತ್ತರದ ಕೀರ್ತಿ ಶೀಖರಕ್ಕೆ ಏರಿರುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ವಿಷಯ. ಅನೇಕ ಧಾರ್ಮಿಕ ಸಮಾಜಿಕ ಕಾರ್ಯವನ್ನು ಮಾಡುತ್ತ ಸಧೃಡವಾಗಿ ಬೇಳೆದು ನಿಂತಿದೆ ಜೈನ್ ಮಿಲನ್.

ಜಿನ ಭಜಲಾ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಶಿಬಿರ ಇಂತಹ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದೆ. ಜೊತೆಗೆ ಆರೋಗ್ಯ ತಪಾಸನೆ ಶಿಬಿರಗಳು, ವಿಧ್ಯಾರ್ಥಿ ವೇತನ, ಬಸದಿಗಳ ಅಭಿವೃದ್ಧಿ, ಸಂಸ್ರಸ್ತರಿಗೆ ದೇಣಿಗೆ, ಅನಾಥಶ್ರಮ ಮತ್ತು ವೃಧ್ದಾಶ್ರಮಗಳಿಗೆ ಕೊಡುಗೆಗಳು, ಪರಿಸರ ಪ್ರೇಮಿ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಬಹಳಷ್ಟು ಧರ್ಮ ಪರ ಯೋಜನೆಗಳ ಮೂಲಕ ಸಾಗಿದೆ. ಕರ್ನಾಟಕದಲ್ಲಿ 200ಕ್ಕು ಹೆಚ್ಚು ಮಿಲನ್ ಗಳಿದ್ದು ಪ್ರಪ್ರಥಮವಾಗಿ ಪ್ರಾರಂಭವಾದ ಸೆಂಟ್ರಲ್ ಜೈನ್ ಮಿಲನ್ ಈ ಎಲ್ಲಾ ಯೋಜನೆಗಳನ್ನು ಹೊಂದಿದ್ದು ನಾನೂರರ ಸಂಭ್ರಮವನ್ನು ಆಚರಿಸುತ್ತಿದೆ. ಅಂದರೆ ಆರಂಭವಾದ್ದುದರಿಂದ ಇಲ್ಲಿಯವರೆಗೆ ನಾನೂರನೇ ಮಾಸಿಕದ ಸಭೆಯ ಸಂಭ್ರಮಾಚರಣೆ. ಇದರ ಉದ್ದೇಶಗಳು ಚಟುವಟಿಕೆಗಳ ಬಗ್ಗೆ

ಸದಸ್ಯರುಗಳ ನುಡಿಯಲಿ. ಮಿಲನ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಖುಷಿಯನ್ನು ವ್ಯಕ್ತಪಡಿಸಿದರು.

ಸದ್ಯದ ಸದಸ್ಯರುಗಳೆಲ್ಲರು ಒಡಗೊಡಿ ನಡೆಸಿಕೊಟ್ಟ ಈ ಸುಂದರ ಕಾರ್ಯ ಕ್ರಮ ನಮೋಕಾರ ಮಂತ್ರ, ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡಿತು.

ಶ್ರೀ ಡಿ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷರಾಗಿ, ನಿರ್ಮಲ್ ಕುಮಾರ್ ಮುಖ್ಯ ಆತಿಥಿಗಳಾಗಿ, ಚಂಪಾಲಾಲ್ ಭಂಡಾರಿ ಮತ್ತು ಸೆಂಟ್ರಲ್ ಜೈನ್ ಮಿಲನ್ ನ ಸರ್ವಸದಸ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲಲ್ಲಿ ಧರ್ಮಾಧಿಕಾರಿಗಳಿಂದ ಶುಭಾಷಯಗಳನ್ನು ಓದಲಾಯಿತ್ತು.

(I was informed by my brother Sri.D.Surendra Kumar, National Working President, Bharatiya Jain Milan informing that Central Jain Milan, Bangalore is celebrating its 400th monthly meeting on 20th October, 2019 in Bangalore.

I understand continuous monthly meeting was held for the last 33 years and it is a record for itself.

I am very happy with the good work done by Central Jain Milan in providing scholarships for those students who were in need of financial help, help to Spastic Society, financial help to Sevashrams Trust (Old age home) and financial help for mentally retarded children under the able guidance and leadership of Sri.A.R.Nirmal Kumar.

I pray to Lord Manjunatha Swamy to bless the Central Jain Milan members and continue to serve the Society).

ಪ್ರಸ್ತುತ ಸೆಂಟ್ರಲ್ ಮಿಲನ್ ನ ಅಧ್ಯಕ್ಷರಾದ ಅಜಿತ್ ಕುಮಾರ್ ರವರು ಗಣ್ಯರನ್ನು ಸ್ವಾಗತಿಸಿದರು. ಸಂಸ್ಥಾಪಕರನ್ನು ಅವರ ಯುವ ಪೀಳಿಗೆಯ ಮೊಮ್ಮಕ್ಕಳು ಪರಿಚಯಿಸಿ ಅವರ ಪರವಾಗಿ ಸನ್ಮಾನ ಸ್ವೀಕರಿಸಿದ ಕಾರ್ಯ ಅನುಕರ್ಣಿಯ ಹಾಗೂ ಮೆಚ್ಚುಗೆ ಗಳಿಸಿದ ಕಾರ್ಯ ಕ್ರಮ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎ.ಆರ್. ನಿರ್ಮಲ್ ಕುಮಾರ್ ರವರು ಮಾತನಾಡಿದರು.

ಕಿರಿಯ ಸಧಾಕರನ್ನು ಗುರುತಿಸಿ ಸಮಾಜಕ್ಕೆ ಪರಿಚಹಿಸಿ ಗೌರವಿಸುವ ಒಂದು ಉತ್ತಮ ಕಾರ್ಯ ಅಂದು ನಡೆಸಿದರು. ಅವರುಗಳಲ್ಲಿ ಶಾಶ್ವತ್ ಜೈನ್, ಅಭಿಜಿತ್

ಜೈನ್, ನಿಕಿಲ್, ಶ್ರೀಮತಿ ಶಾಂತಲಾ ಧರ್ಮರಾಜ್ ಇವರುಗಳನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದ ಮೇರಗನ್ನು ಇನ್ನೂ ಹೆಚ್ಚಿಸಿದು ಗಾಯಕರಾದ ಶೃತಿ, ಪ್ರಿಯಾ ವಾಸುದೇವ್, ಹಾಗೂ ಜಿತೇಂದ್ರ ಕುಮಾರ್ ರವರ ಗಾಯನ.

ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರು ತಮ್ಮ ನುಡಿಗಳಲ್ಲಿ. ತಾವು ಮಾಡಿಕೊಂಡು ಹೋಗುತ್ತಿರುವ ಕಾರ್ಯಗಳಿಗೆ ತೃಪ್ತಿ ಪಟ್ಟಿರುವುದಾಗಿ ಹೇಳಿದರು.

ಪದ್ಮಿನಿ ನಾಗರಾಜ್ ರವರ ಅದ್ಬುತ ನಿರೂಪಣೆ ಕಾರ್ಯಕ್ರಮಕ್ಕೆ ಕಳೆತಂದಿತ್ತು. ಬೆಂಗಳೂರಿನ ಸಕಲ ಮಿಲನ್ ರವರು, ಕರ್ನಾಟಕ ಜೈನ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ಇನ್ನೂ ಅನೇಕ ಗಣ್ಯರುಗಳು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.