ಜೈ ಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ
ಅನೇಕ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಂತಹ ವಿದ್ಯಾರ್ಥಿ ನಿಲಯ ಈ ಬಾಹುಬಲಿ ಶ್ರಾವಿಕಾಶ್ರಮ . ನಾನೂ ಕೂಡ ಇಲ್ಲಿನ ಹಳೇ ವಿದ್ಯಾರ್ಥಿನಿಯಾಗಿದ್ದು ಇಲ್ಲಿನ ರೀತಿ ನೀತಿಯ ಅರಿವು ನನಗಿದೆ. ಇಲ್ಲಿ ಶ್ಯಕ್ಷಣಿಕ ಅವಕಾಶದ ಜೊತೆ ಧಾರ್ಮಿಕ ಹಾಗೂ ನೀತಿಪಾಠ ಕಲಿಸಿಕೊಟ್ಟಂತಹ ಸ್ಥಳ. ಅಂದು ಕಾರ್ಕಳದ ದಾನ ಶಾಲೆಯ ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಅಮೃತ ಮಹೋತ್ಸವ . ಆಶ್ರಮದ ಬಾಗಿಲಿಗೆ ಬಂದು ನಿಂತ ನನಗೆ ನಾನಲ್ಲಿ ಬಂದು ನಿಂತ ಮೊದಲನೆ ದಿನದ ನೆನಪಿಗೆ ಬಂದಿತ್ತು. ಹಲವಾರು ಸವಿ ನೆನಪುಗಳು ಆಶ್ರಮದ ಒಳಗಡೆ ಇಟ್ಟಾಗ ಕಣ್ಣ ಮುಂದೆ ಹಾಗೇ ಸಾಗಿತ್ತು. ಅಪ್ಪ ಆಶ್ರಮಕ್ಕೆ ಬಿಟ್ಟು ಹೋಗುವಾಗ ನಿನ್ನನ್ನಗಲಿರಲಾರೆ ಎಂದು ಅತ್ತವಳು ನಾನು. ಹಾಗೇ ಆಶ್ರಮವನ್ನು ಬಿಟ್ಟು ಹೋಗುವಾಗ ಆಶ್ರಮದ ಸ್ನೇಹಿತರನ್ನು ಹಿಡಿದು ಕಣ್ಣೀರಿಟ್ಟವಳು ನಾನು. ಆದರೆ ನನ್ನ ಅದೃಷ್ಟ ನೋಡಿ ಇಂದು ಸ್ವತಃ ಆಶ್ರಮದ ಅಮೃತ ಮಹೋತ್ಸವದ ಸುದ್ದಿ ಆದರೆ ನನ್ನ ಅದೃಷ್ಟ ನೋಡಿ ಇಂದು ಸ್ವತಃ ಈ ಆಶ್ರಮದ ಅಮೃತ ಮಹೋತ್ಸವದ ಅವಕಾಶ ದೊರೆತಾಗ ಆನಂದ ಬಾಷ್ಪ ಸುರಿಸಿದವಳು ನಾನೇ. ಸಮಯ ನಮಗೆಷ್ಟೆಲ್ಲಾ ನೀಡುತ್ತದೆ. ಆಶ್ರಮದ ಹೂದೋಟದಲ್ಲಿ ಪ್ರತಿ ವರ್ಷವೂ ಹಲವಾರು ಕುಸುಮಗಳು ಅರಳುತ್ತವೆ. ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ಇಲ್ಲಿನ ಸುಮಗಳು ಸಾಮಾಜಿಕ, ನೈತಿಕ ಮತ್ತು ಧಾರ್ಮಿಕ ಶಿಕ್ಷಣದೊಂದಿಗೆ ಬದುಕಿನ ಪಾಠಗಳನ್ನು ಕಲಿಯುತ್ತ ಅರಳುತ್ತವೆ ಆದ್ದರಿಂದ ಜೀವನ ಎಂತಹುದೇ ಹಾದಿಯಲ್ಲಿಯೂ ಸಹ ಸುಗಮವಾಗಿ ಸಾಗುವ ಧೃಡತೆ ಚಾಕಚಕ್ಯತೆ ಹೊಂದಿ ಸದಾ ನಗುವ ಸುಂದರ ಸುಮಗಳಾಗಿ ಹೊಮ್ಮುತ್ತವೆ. ವಿದ್ಯಾರ್ಥಿನಿಯರು ಕಳೆದ ಇಲ್ಲಿನ ಪ್ರತಿ ಘಳಿಗೆಯು ಪರಿಪಕ್ವತೆಯಿಂದ ಕೂಡಿರುತ್ತದೆ. ಇಲ್ಲಿ ಬಡಿಸಲಾದ ಪ್ರತಿ ಅಗುಳಿನಲ್ಲಿ ಸಹ ಶುಭ ಹಾರೈಕೆ ಮತ್ತು ಪ್ರೀತಿ ತುಂಬುತ್ತದೆ. ಈ ಆಶ್ರಮದಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳೆಲ್ಲರೂ ಸಹ ಒಂದೆಡೆ ಸೇರಿದ್ದರು ಅಂದಿನ ದಿನ. ಪ್ರತಿಯೊಬ್ಬರು ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಾತೃಶ್ರೀ ರತ್ನಮ್ಮ ನವರ ಸ್ಮರಣಾರ್ಥ ರತ್ನಪ್ರಭ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ನೂತನ ಕಟ್ಟಡ ನಿರ್ಮಾಣಗೊಂಡಿದೆ.
ದಿನಾಂಕ 28/08/2019 ರಂದು ಅಮೃತ ಮಹೋತ್ಸವ ಸಮಾರಂಭದ ಬೆಳಗ್ಗಿನ ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು ಗೋಷ್ಠಿ ಉದ್ಘಾಟನೆಯನ್ನು ಶ್ರೀ ಜೈನ ಧರ್ಮದ ಜೀರ್ಣೋದ್ಧಾರ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಮ್ .ಕೆ ವಿಜಯ್ ಕುಮಾರ್ ರವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮ ಜಯಲಕ್ಷ್ಮೀ ಹೊರನಾಡು ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿನವಾಣಿ ಪುತ್ರ ಜೈನಶೃತ ಜ್ನಾನಕೋಶ ಪರಮಪೂಜ್ಯ ಕ್ಷುಲ್ಲಕ ಶ್ರೀ 105 ಧ್ಯಾನಸಾಗರ ಮಹಾರಾಜರು ರಾಜಗುರು ಧ್ಯಾನಯೋಗಿ ಸ್ವಸ್ಥಿ ಶ್ರೀ ಲಲಿತಾಕೀರ್ತಿಭಟ್ಟಾರಕಭಟ್ಟಾಚಾರ್ಯ ಸ್ವಾಮೀಜಿ ಗಳವರ ಪಾವನ ಸಾನಿಧ್ಯ ವಹಿಸಿದ್ದ ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದಮತಹ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು , ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ವಿ , ಹೆಗ್ಗಡೆಯವರು , ಶ್ರೀ ಸುರೇಂದ್ರ ಕುಮಾರ್ ರವರು , ಮಾನ್ಯ ಶಾಸಕರಾದ ಶ್ರೀ ಸುನೀಲ್ ಕುಮಾರ್ , ಶ್ರೀ ಎಮ್ ಎನ್ ರಾಜೇಂದ್ರ ಕುಮಾರ್, ಶ್ರೀ ಎಂ. ಕೆ. ವಿಜಯ್ ಕುಮಾರ್ ಉಪಸ್ಥಿತರಿದ್ದರು. ಅಮೃತ ಮಹೋತ್ಸವದ ಸಂದೇಶವನ್ನು ಮಾತೃಶ್ರೀ ಹೇಮಾವತಿ ಅಮ್ಮನವರು ನೀಡಿದರು. ಶ್ರೀ ಶಿಶುಪಾಲ ಪೂವಣಿಯವರ ವರದಿ ವಾಚನದಲ್ಲಿ ಆಶ್ರಮದ ಆಗುಹೋಗುಗಳನ್ನು, ಹಾಗೆಯೇ ಮಕ್ಕಳ ಬೆಳವಣಿಗೆಗಳು, ಆಶ್ರಮದ ಸ್ಥಿತಿಗತಿಗಳನ್ನು ತಿಳಿಸಿದರು. ಹಾಗೆಯೇ ಶ್ರೀ ವೀರೇಂದ್ರ ಹೆಗ್ಗಡೆಯವರು ಬಂದಿದ್ದ ಎಲ್ಲಾ ಸಭಿಕರುಗಳನ್ನು ಉದ್ದೇಶಿಸಿ ಮಾತನಾಡಿದರು ಹಾಗು ಆಶ್ರಮದಲ್ಲಿ ಕೊಡುವಂತಹ ಜೀವನಪಾಠವನ್ನು , ಹಾಗು ಶಿಕ್ಷಣವನ್ನು ನೀವುಗಳು ಅವಗಳನ್ನು ರೂಡಿಸಿಕೊಳ್ಳಬೇಕು ಹಾಗು ಆಶ್ರಮದ ಹೆಸರನ್ನು ಉಳಿಸಿಕೊಂಡು ಹೋಗುವಂತಹ ಕಾರ್ಯಗಳನ್ನು ಮಾಡಬೇಕು ಇನ್ನುವ ಸಂದೇಶವನ್ನು ನೀಡಿದರು. ನಂತರ ಗಣ್ಯರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು. ಪೂಜ್ಯ ಕ್ಷುಲ್ಲಕರು ಆಶೀರ್ವಚನದಲ್ಲಿ ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ ಹಾಗೂ ಆಹಾರ, ವಿಹಾರ, ಆಚಾರ, ವಿಚಾರ ಪ್ರತಿಯೊಂದು ಹಂತದಲ್ಲೂ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಪೂಜ್ಯ ಶ್ರೀ ಹಳವರು ತಮ್ಮ ಆಶೀರ್ವಚನದಲ್ಲಿ ಒಬ್ಬ ಮನುಷ್ಯ 25ದ ವಯಸ್ಸಿನವರಾಗಿದ್ದರೆ, ಆ ಮನೆತನಕ್ಕೆ ಬಹಳ ದೊಡ್ಡ ಗೌರವ ಏಕೆಂದರೆ ವಯಸ್ಸು ಹೆಚ್ಚಿದ ಹಾಗೇ ಹಿಂದೆ ಹಳೆಯವರಲ್ಲಿ ಅನುಭವ ಹೆಚ್ಚು ಇರುತ್ತಿತ್ತು. ತಾಳ್ಮೆ, ಸಹನೆ ಸಮಾನತೆ ಬಹಳ ಮೃದುವಾಗಿದ್ದರು. ಹಾಗೆಯೇ ವಯಸ್ಸು ಹೆಚ್ಚಿದ ಹಾಗೇ ಅನುಭವಗಳು ತುಂಬಾ ನಮಗೆ ಪಾಠಗಳನ್ನು ಕಲಿಸುತ್ತದೆ ಎಂದು ತಿಳಿಸಿದರು. ಅದ್ಭುತವಾಗಿ , ಸುವ್ಯವಸ್ಥಿತವಾಗಿ ಮೂಡಿಬಂದ ಕಾರ್ಯಕ್ರಮವನ್ನು ಆಶ್ರಮದ ಸಿಬ್ಬಂದಿ ವರ್ಗ , ಆಡಳಿತ ವರ್ಗ ದವರು, ವಿದ್ಯಾರ್ಥನಿಯರು ಸೇರಿ ಸಂಭ್ರಮದಿಂದ ಆಚರಿಸಿದರು.














