ಜೈ ಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ
ಇತ್ತೀಚೆಗಷ್ಟೇ ಭಾರತೀಯ ಜೈನ್ ಮಿಲನ್ ವಲಯ 108 ರ ವತಿಯಿಂದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಜೈನ್ ನ ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ ನಡೆಯಿತು. ಭವ್ಯರಮಣೀಯ ಗಿರಿನಾಡಿನ ನಡುವೆ ಸಂಪಾದ ಸಸ್ಯ ವರ್ಗದ ಪರಿಸರ ಅಲಂಕಾರಿಕ ಅಡಿಕೆ ತೋಟ ಇವುಗಳಲ್ಲೆದರ ನಡುವೆ ಪ್ರಶಾಂತ ವಾತಾವರಣ ಸೃಷ್ಠಿಸಿರುವ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಈ ಕಾರ್ಯಾಗಾರ ನಡೆದಿದ್ದು ವಿದ್ಯಾರ್ಥಗಳಿಗೆ ತಿಳಿದುಕೊಳ್ಳುವ ಉತ್ಸಾಹಕ್ಕೆ ಹುರುಪುಕೊಟ್ಟಿತು.
ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ದಂಡು ದಂಡಾಗಿ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿದ್ದು ಎಲ್ಲೆಲ್ಲೂ ಕಂಡು ಬಂಡಿತು. ಈ ಮೂಲಕ 350ಕ್ಕೂ ಹೆಚ್ದಿನ ವಿದ್ಯಾರ್ಥಗಳು ರಾಜ್ಯದ ಹಲವೆಡೆಗಳಿಂದ ದೂರದ ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಿಂದ ಕೂಡ ಪಾಲ್ಗೊಂಡಿದ್ದು ಮಿಲನ್ ವತಿಯಿಂದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರ ಯುವಜನತೆಗೆ ಉತ್ತಮ ಸಂಸ್ಕಾರ ಜೀವನಕ್ಕಾಗಿ ಕೌಶಲ್ಯ ನೀಡುವ ಕನಸಿನಂತೆ ನಡೆದ ಈ ಒಂದು ಉತ್ತಮ ಕಾರ್ಯಾಗಾರ ಆರಂಭದಲ್ಲೇ ಯಶಸ್ಸಿನ ಹಾದಿಯಲ್ಲಿ ಸಾಗಿತು.
ನಂತರ ಮೂಡುಬಿದ್ರೆ ಜೈನ ಮಠದ ಪರಮ ಪೂಜ್ಯ ಸ್ವಸ್ಥಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಕರಾವಳಿ ಮಿಲನ್ ಸಮನ್ವಯ ಚತುರ ವಲಯಾಧ್ಯಕ್ಷರಾದ ಶ್ರೀ ಪುಷ್ಪರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ಉದ್ಘಾಟನೆ ಗೊಂಡಿತು. ಮುಖ್ಯ ಅತಿಥಿಯಾಗಿ ಶ್ರೀ ಕೆ. ಅಬಯ್ ಚಂದ್ರ ಜೈನ್ ರವರು ಗುಣ ಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಯಶೋವರ್ಮ ರವರು , ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಶಿಕ್ಷಣ ನೀಡುತ್ತಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ರವರು , ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಮೂಡುಬಿದ್ರೆ ಪ್ರಧಾನ ಕಾರ್ಯಕರ್ಶಿಗಳಾದ ರಾಜೇಶ್ ಜೈನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೋಷಕರು ಈ ಕಾರ್ಯಾಗಾರದ ಬಗ್ಗೆ ತುಂಬಾ ಹರ್ಷ ವ್ಯಕ್ತ ಪಡಿಸಿದರು. ಹಾಗೂ ವಿದ್ಯಾರ್ಥಿಗಳು ಪ್ರತಿಯೊಬ್ಬರು ಸಹ ತುಂಬಾ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ತುಂಬಾ ಆನಂದಿಸಿದರು. ಮಾನವೀಯ ಸಂಬಂಧಗಳು ಹ್ಯೂಮನ್ ರಿಲೇಶನ್ ಶಿಪ್ ವಿಷಯಕ್ಕಾಗಿ ರಾಷ್ಟ್ರೀಯ ತರಬೇತುದಾರರಾದ ಪುತ್ತೂರಿನ ಕೃಷ್ಣಮೋಹನ್ ರವರು , ಶಕ್ತಿಶಾಲಿ ಮನಸ್ಸು ತಂತ್ರಗಳು ವಿಷಯದಲ್ಲಿ ಡಾ|| ಸ್ವಸ್ವರಾಜ್ ರವರು ಅಸೀಂ ರವರು ಹೀಗೆ ವಿಷಯಗಳನ್ನು ಮಕ್ಕಳಿಗೆ ಮನ ಮುಟ್ಟುವಲ್ಲಿ ತರಬೇತುದಾರರು ಯಶಸ್ವಿಯಾದರು.
ಪೋಷಕರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ ಇಂತಹ ಆಧುನಿಕ ಯುಗದಲ್ಲಿ ನಮ್ಮ ಧರ್ಮದ ಬಗ್ಗೆಎಲ್ಲರೂ ಜಾಗೃತಿ ಮೂಡಿಸಬೇಕಾಗಿದೆ ಮತ್ತು ಸಾಕಷ್ಟು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯನ್ನುಸಹ ಪಡೆದ ಟ್ರೈನರ್ ಗಳಿಂದ ಎಲ್ಲಾ ಮಕ್ಕಳಲ್ಲೂ ಉತ್ಸಾಹವನ್ನು ತುಂಬಿದ್ದಾರೆ ಹಾಗೂ ವಿಶೇಷ ಕಾಳಜಿಯನ್ನು ಗಮನಕೊಟ್ಟು ವ್ಯಕ್ತಿತ್ವ ವಿಕಸನ ಮತ್ತು ಜೀವನಕೌಶಲ್ಯ ತರಬೇತಿಯನ್ನು ಇಲ್ಲಿಯವರೆಗೂ ಯಾರೂ ಈ ರೀತಿ ಕಾರ್ಯಕ್ರಮವನ್ನು ಆಯೋಜಿಸಿರಿಲಿಲ್ಲಾ ಹಾಗಾಗಿ ಇಂದು ನಡೆದ ಈ ಕಾರ್ಯಕ್ರಮದಲಲ್ಲಿ ನಮ್ಮ ಮಕ್ಕಳಿಗೆ ಇದರ ಸದುಪಯೋಗವಾಯಿತೆಂದು ನಮ್ಮ ಅನಿಸಿಕೆ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರಿಗೂ ತಮ್ಮ ಧನ್ಯವಾದಗಳನ್ನು ತಿಳಿಸಿದರು. ಹಾಗೆಯೇ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮಗಳು ಅತಿ ಹೆಚ್ಚಿನ ರೀತಿಯಲ್ಲಿ ಮುಂದುವರೆಯಬೇಕೆಂದು ಆಶಿಸುತ್ತೇವೆ ಎಂದು ತಿಳಿಸಿದರು. ಮರುದಿನ ಮಕ್ಕಳಿಗೆ ಪ್ರಾತಃಕಾಲದಲ್ಲಿ ಸಾವಿರ ಕಂಬದ ಬಸದಿಯ ದರ್ಶನ ಮಾಡಿಸಿ ಮಠದಲ್ಲಿ ಶ್ರೀಗಳವರ ಧರ್ಮೋಪದೇಶ ಮತ್ತು ಪ್ರಾಚೀನ ದವಳ ಗ್ರಂಥದ ಮೂಲಕೃತಿ ಓಲೆಗರಿಯಲ್ಲಿ ಇರುವುದನ್ನು ಪ್ರದರ್ಶಸಿ ಗ್ರಂಥದ ಮಹತ್ವವನ್ನು ತಿಳಿಸಿದರು. ಕಲಿಕೆಯ ತಂತ್ರಗಳು Study Techniques ಬಗ್ಗೆ ಡಾ|| ಪುಷ್ಪರಾಜ್ ರವರು ಮಾತನಾಡಿ ಕಲಿಯುವಾಗ ಮಕ್ಕಳು ಅನುಸರಿಸಬೇಕಾದ ಸುಲಭ ವಿಧಾನದ ಬಗ್ಗೆ ತಿಳಿಸಿದರು. ಈ ಮೂಲಕ ವಿಷಯಗಳನ್ನು ಅರ್ಥೈಸಿಕೊಳ್ಳುವ ತಂತ್ರಗಳನ್ನು ತಿಳಿಸಿದರು. ಇದೆಲ್ಲೆದರ ಜೊತೆಗೆ ಸಾಧನೆಗೈದ ವ್ಯಕ್ತಿಗಳೊಡನೆ ಸಂವಾದ ನಡೆಸುವುದರ ಮೂಲಕ ಯುವಜನಾಂಗಕ್ಕೆ ಸಾಧನೆಯ ಹಾದಿಯನ್ನು ವಾಸ್ತವಿಕ ಅರಿವನ್ನು ಮೂಡಿಸಲಾಯಿತು. ಸಾಧಕರಾಗಿ ವೇದಿಕೆಯಲ್ಲಿ ಡಾ|| ಬಿ. ಯಶೋವರ್ಮರವರು , ಸರ್ವೋಚ್ಛ ನ್ಯಾಯಾಲಯದ ನ್ಯಾಯಾದೀಶರಾದ ಶ್ರೀ ಪಿ. ಪಿ ಹಗ್ಗಡೆ , ಪೋಲೀಸ್ ತರಭೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಜಿನೇಂದ್ರ ಕಣಗಾಲ್ ಐ ಪಿ ಎಸ್ ರವರು, ದಕ್ಷಿಣ ಕನ್ನಡ ಜಿಲ್ಲೆ ಪೋಲೀಸ್ ಅಧೀಕ್ಷಕರಾದ ಕೆ. ಲಕ್ಷ್ಮೀಪ್ರಸಾದ್ ಐ. ಪಿ .ಎಸ್ ಇವರುಗಳು ಉಪಸ್ಥಿತರಾಗಿದ್ದರು. ಇವರೆಲ್ಲರೂ ಸಹ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಮುಕ್ತಾಯದ ಹಂತವಾದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಸ್ವಾದಿಮಠದ ಪರಮಪೂಜ್ಯ ಸ್ವಸ್ಥಿಶ್ರೀ ಬಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿಗಳ ಪಾವನ ಉಪಸ್ಥಿತಿಯಲ್ಲಿ ಶ್ರೀ ಅಭಯ್ ಚಂದ್ರ ಜೈನ್, ಶ್ರೀ ಪುಷ್ಪರಾಜ್ ಜೈನ್, ಸುದರ್ಶನ್ ಜೈನ್,ರಾಜೇಶ್ ಜೈನ್, ಶ್ವೇತಾ ಜೈನ್ ರವರುಗಳು , ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಯುವರಾಜ್ ರವರ ಸ್ವಾಗತದೊಂದಿಗೆ ಪ್ರಾರಂಭಗೊಂಡು ಶ್ವೇತಾ ಜೈನ್ ರವರು ವಿದ್ಯಾರ್ಥಿಗಳೊಂದಿಗೆ ಅವರ ಅನಿಸಿಕೆಗಳನ್ನು ಪಡೆದರಲ್ಲದೇ ಯುವ ಮಿಲನ್ ಗಳಲ್ಲಿ ಭಾಗವಹಿಸಲು ಕರೆ ನೀಡಿದರು.














