ಜೈ ಜಿನೇಂದ್ರ ವೀಕ್ಷಕರೆ ಭಾದ್ರಪದ ಮಾಸದ ಶುದ್ದ ಪಂಚಮಿಯಿಂದ ಪೌರ್ಣಮಿಯವರೆಗೆ ಅಚರಿಸಲ್ಪಡುವ ಈ ದಶ ಲಕ್ಷಣ ಮಹಾ ಪರ್ವಕ್ಕೆ ಜೈನ ಪರಂಪರೆಯಲ್ಲಿ ಬಹಳ ಮಹತ್ವದ ಸ್ಥಾನವಿದೆ. ಪವಿತ್ರತೆಯ ದೃಷ್ಟಿಯಿಂದ ಪ್ರಾಮುಖ್ಯತೆಯ ದೃಷ್ಠಿಯಿಂದ ಅಲ್ಲದೆ ಆತ್ಮನನ್ನು ಪಾಪದಿಂದ ಪುಣ್ಯದ ಕಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಎಲ್ಲಕಿಂತಲು ಮುಖ್ಯವಾಗಿ ಮಿತ್ಯತ್ವದಿಂದ ಸಂಯುತ್ವದ ಕಡೆಗೆ ನಡೆಸುವ ಈ ದಶಲಕ್ಷಣ ಪರ್ವವು ಶ್ರೇಷ್ಠವಾದದ್ದಾಗಿದೆ.
ದಶಲಕ್ಷಣ ಪರ್ವವನ್ನು ಪರಿಯುಷಣ ಪರ್ವ ಎಂಬುದಾಗಿಯು ಶಾಸ್ತ್ರದಲ್ಲಿ ಕರೆದಿದೆ, ಎಂದರೆ ದೋಷಗಳನ್ನು ನಿರ್ಜರೆ ಮಾಡುವುದು ಎಂದರ್ಥ. ಈ ದಶಲಕ್ಷಣ ಪರ್ವವು ಭೋಗದ ದೇಷ್ಠಿಯಿಂದ ಅಚರಿಸುವುದಲ್ಲಾ, ಈ ದಿನಗಳಲ್ಲಿ ಕಂದ ಮೂಲಾದಿಗಳನ್ನು ತ್ಯಾಗಮಾಡಿ ಶಕ್ತಿಗೆ ತಕ್ಕಷ್ಟು ವ್ರತ ಉಪವಾಸ ನಿಯಮಗಳನ್ನು ಕೈಗೊಳಬೇಕು. ಧಾರ್ಮಿಕ ಚರ್ಚೆ ಪ್ರವಚನ ಉಪದೇಸಗಳನ್ನ ಕೇಳಬೇಕು. ಆತ್ಮನ ಸ್ವರೂಪವನ್ನು ತಿಳಿದು ಚಾರಿತ್ರ ಅಥವ ಧರ್ಮವನ್ನು ಹತ್ತು ರೀತಿಯಾಗಿ ಆರಾಧಿಸುವುದೆ ಈ ಪರ್ವದ ಸ್ವರೂಪವಾಗಿದೆ.
ಉತ್ತಮ ಕ್ಷಮ, ಮಾರ್ಧವ, ಅರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ ಮತ್ತು ಬ್ರಹ್ಮಚರ್ಯ ಇವು ಹತ್ತು ಪ್ರಕಾರಗಳಾಗಿವೆ. ಈ ಹತ್ತು ವಿಧದ ಧರ್ಮಗಳಿಗೆ ಮೊದಲು ಉತ್ತಮ ಶಬ್ಧವನ್ನು ಸೇರಿಸಲಾಗಿದೆ. ಏಕೆಂದರೆ ಈ ದಶ ಧರ್ಮಗಳ ಆಚರಣೆ ಆರಾಧನೆಯು ಸಮ್ಯ ದರ್ಶನ, ಸಮ್ಯ ಜ್ಞಾನ, ಸಮ್ಯ ಚಾರಿತ್ರಗಳೆಂಬ ರತ್ನತ್ರೇಯ ಪೂರ್ವಕವಾಗಿ ಇರಬೇಕು ಮತ್ತು ಯಾವುದೇ ರೀತಿಯ ಖ್ಯಾತಿ, ಲಾಭ, ಕೀರ್ತಿಗಾಗಿ ಪರ್ವವನ್ನು ಅಚರಿಸಬಾರದು.
ಮೊದಲಿಗೆ ಉತ್ತಮ ಕ್ಷಮ, ಕ್ಷಮೇಯು ಆತ್ಮನ ಸಹಜ ಸ್ವಭಾವವಾಗಿದೆ ಆತ್ಮನಲ್ಲಿ ಕ್ರೋಧಕಶಾಯದ ಅಬಾವದಿಂದ ಉಂಟಾಗುವ ಶಾಂತ ಸ್ವರೂಪದ ಫಲವಾಗಿ ಪ್ರಕಟವಾಗುವ ಪರಿಯಾಯವೆ ಕ್ಷಮ ಧರ್ಮವಾಗಿದೆ. ಉತ್ತಮ ಕ್ಷಮೇಯು ಜೀವಿಗಳನ್ನ ಸಂಸಾರ ಸಮುದ್ರದಿಂದ ದಾಟಿಸಿ ಆಚೆ ದಡಕ್ಕೆ ಒಯ್ಯಲು ಸಮರ್ಥವಾಗಿದೆ. ಅಷ್ಟಮಧಗಳನ್ನು ತೊರೆದು ಮಮಕಾರವನ್ನು ಬಿಟ್ಟು ಸರಳ ಸಜ್ಜನನಾಗಿ ಮೃದು ಸ್ವಭಾವವನ್ನು ಹೊಂದುವುದು. ಮಾರ್ಧವ ಗುಣವಾಗಿದೆ.
ಇದು ಉತ್ತಮ ಮಾರ್ಧವ. ಉತ್ತಮ ಅರ್ಜವ ಮನ ವಚನ ಕಾಯಗಳಲ್ಲಿ ಏಕರೂಪವಾದ ಸರಳ ತನವನ್ನು ಕಾಪಾಡಿಕೊಳ್ಳುವುದು ಕಪಟತನವನ್ನು ಬಿಡುವುದು ಉತ್ತಮ ಅರ್ಜವವಾಗಿದೆ.
ಉತ್ತಮ ಶೌಚ, ಶೌಚ ಧರ್ಮವೆಂದರೆ ಆತ್ಮ ಮತ್ತು ಶರೀರಗಳನ್ನು ಪವಿತ್ರವಾಗಿಡುವುದು, ಸದಾಕಾಲವು ನಮ್ಮ ಮನಸ್ಸಿನಲ್ಲಿ ಅಶುಭ ವಿಚಾರಗಳು ವಿಕಾರಗಳು ಉತ್ಪನವಾದಗ ಹಾಗೇ ಆತ್ಮನನ್ನು ಶುದ್ದವಾಗಿಡಲು ಪ್ರಯತ್ನಿಸುವುದೆ ನಿಜವಾದ ಶೌಚ ಧರ್ಮವೆನಿಸುತ್ತದೆ.
ಉತ್ತಮ ಸತ್ಯ, ಅಸತ್ಯ ವಚನವನ್ನು ಹಾಡುವುದನ್ನು ಬಿಟ್ಟು ಯತಾರ್ಥವಾದ ಹಿತ ಮಿತ ಮಧುರ ವಚನವನ್ನಾಡುವುದು ಸತ್ಯ ಧರ್ಮವಾಗಿದೆ. ನಡೆ ನುಡಿ ಆಚಾರ ವಿಚಾರಗಳನ್ನು ಶುಧ್ದವಾಗಿ ಹಿಟ್ಟುಕೊಳ್ಳುವುದು ಸಂಸಾರ ಸಾಗರವನ್ನು ದಾಟಲು ಉತ್ತಮ ಸತ್ಯ ಧರ್ಮವು ಒಂದು ನಾವೆಯಂತಿದೆ.
ಉತ್ತಮ ಸಂಯಮ ಮನಸ್ಸು ಮತ್ತು ಇಂಧ್ರಿಯಗಳನ್ನು ಅಂಕೆಯಲ್ಲಿ ಹಿಟ್ಟುಕೊಂಡು ವಿಷಯ ಭೋಗೊಪ ಬೋಗಗಳಿಂದ ದೂರವಿರುವುದು ಸಂಯಮವಾಗಿದೆ. ಪಂಚೆಂದ್ರೀಯಗಳ ಅದಿನತೆಯು ಇಂಧ್ರಿಯ ಸಂಯಮವಾದರೆ ಷಟ್ಕಾಯ ಜೀವಗಳ ಹಿಂಸೆ ಮಾಡದಿರುವುದು ಪ್ರಾಣಿ ಸಂಯಮವಾಗಿದೆ.
ಉತ್ತಮ ತಪ, ಇಚೇಗಳನ್ನು ಆಸೆ ಆಕಾಂಕ್ಷೇಗಳನ್ನು ನಿರೋಧಿಸುವುದು ತಪವಾಗಿದೆ. ತನ್ನ ಶರೀರ ಮನಸ್ಸುಗಳನ್ನು ನಿಯಂತ್ರಿಸಲು ಮಾಡುವ ಉಪವಾಸದಿ ನಿಯಮಗಳು ತಪವೇನಿಸುತ್ತದೆ. ತಪ್ಪಸಿನಿಂದ ಕೇವಲ ಜ್ಞಾನದ ಪ್ರಪ್ತಿಯಾಗುತ್ತದೆ
ಉತ್ತಮ ತ್ಯಾಗ ಕ್ರೋದ ಮಾನ ಮಾಯ ಲೋಭಾದಿ ಕಷಾಯಗಳನ್ನು ಅಹಂಕಾರ ಮಮಕಾರಗಳನ್ನು ದೂರ ಮಾಡುವುದರ ಜೊತೆಗೆ ದಾನ ಧರ್ಮ ಪರೋಪಕಾರ ಮಾಡುವುದು ಆತ್ಮ ಧರ್ಮವನ್ನು ತಿಳಿದು ಪಾಲಿಸುವುದು ಉತ್ತಮ ತ್ಯಾಗವಾಗಿದೆ.
ಉತ್ತಮ ಆಕಿಂಚನ, ಆತ್ಮ ಬೇರೆ ಜಡ ಶರೀರ ಬೇರೆ ಎಂಬ ಬೇದ ಜ್ಞಾನವನ್ನು ತಿಳಿದು ತನ್ನ ಸ್ವಯಂ ಶುದ್ದಾತ್ಮವನ್ನುಬಿಟ್ಟು ಉಳಿದ ಯಾವುದು ತನ್ನದಲ್ಲಾವೆಂದು ನಂಬಿ ಆತ್ಮನ ಆರಾಧನೆಯನ್ನು ಮಾಡುವುದು ಉತ್ತಮ ಆಕಿಂಚನ ಧರ್ಮವೆನಿಸುತ್ತದೆ.
ಉತ್ತಮ ಬ್ರಹ್ಮಚರ್ಯ, ಎಲ್ಲ ಪ್ರಕಾರದ ವಿಷಯ ವಸ್ತುಗಳ ಮೇಲಿನ ಅನುರಾಗ ಪ್ರೀತಿ ಮೋಹವನ್ನು ದೂರಮಾಡಿ ಬ್ರಹ್ಮ ಎಂದರೆ ಆತ್ಮನಲ್ಲಿ ಚರಿಯ ಎಂದರೆ ಪ್ರವರ್ತನಾಗುವುದು ಆತ್ಮನಲ್ಲಿ ಲೀನವಾಗುವುದು ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.
ಇಂತಹ ಸರ್ವ ಶ್ರೇಷ್ಠವಾದ ದಶಲಕ್ಷಣ ಮಹಾಪರ್ವವನ್ನು ಮುನಿಮಹಾರಾಜರುಗಳು ಕಿಂಚಿತ್ತು ಲೋಪವಿಲ್ಲದೆ ಪೂರ್ಣ ರೀತಿಯಿಂದ ಅಚರಿಸಿದರೆ ನಮ್ಮಂತಹ ಶ್ರಾವಕರು ನಮ್ಮ ನಮ್ಮ ಶಕ್ತಿಯಾನುಸಾರ ಆಚರಣೆ ಮಾಡಲು ಪ್ರಯತ್ನ ಮಾಡೋಣ ಬನ್ನಿ.
ನಿಮ್ಮಗೆಲ್ಲರಿಗೂ ದಶಲಕ್ಷಣ ಪರ್ವದ ಶುಭಾಷಯಗಳು
ಇಂತಹ ಭಕ್ತಿಪ್ರಧಾನ ಕಾರ್ಯಕ್ರಮಗಳಿಗಾಗಿ ವೀಕ್ಷಿಸಿಸುತ್ತೀರಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














