ಹೊಂಚ ಜಾತ್ರೆ 2019/ ಜ್ವಾಲಾಮಲನ್ಯೂಸ್ / 2019

ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ನಿಮಗೆ ಈ ಮಾಸದ ಸಂಚಿಕೆಗಳಲ್ಲಿ ಪ್ರಕೃತಿಯ ಸೊಬಗಿನೊಂದಿಗೆ ಧಾರ್ಮಿಕ ಕ್ಷೇತ್ರಗಳ ದರ್ಶನದ ಹಬ್ಬ, ಹೀಗೆ ಹಸಿರು ಕಾನನದ ನಡುವೆ ನಮ್ಮ ತಂಡ ಭವ್ಯ ಇತಿಹಾಸವನ್ನು ಒಳಗೊಂಡ ಕ್ಷೇತ್ರಗಳ ಬಸದಿಗಳ ಹಾದಿಯಲ್ಲಿ ಸಾಗಿತ್ತು. ಎಲ್ಲೆಡೆ ಮನಸ್ಸಿಗೆ ಮುದನೀಡುವ ಸೊಬಗಿನ ನಡುವೆ ನಾವು ಬಂದು ಸೇರಿದ್ದು, ಮನಸ್ಸಿಗೆ ಇನ್ನು ಪ್ರಶಾಂತತೆಯನ್ನು ಧನ್ಯತೆಯ ಭಾವವನ್ನು ಕೊಡುವಂತಹ ಬಸದಿಗಳ ಪ್ರಾಂಗಣಕ್ಕೆ.

ಹೌದು, ಶ್ರೀ ಕ್ಷೇತ್ರ ಹೊಂಬುಜ ಚಾರಿತ್ರಿಕವಾಗಿ ಮಹತ್ವವನ್ನು ಅತೀಶಯವನ್ನು ಹೊಂದಿದ ಕ್ಷೇತ್ರ, ಈ ಕ್ಷೇತ್ರವನ್ನೊಮ್ಮೆ ನೋಡಿಬರೋಣ.

(ಜೈ ಜಿನೇಂದ್ರ ವೀಕ್ಷಕರೆ, ಇಂದು ನಮ್ಮ ತಂಡ ಶ್ರೀ ಕ್ಷೇತ್ರ ಹೊಂಬುಜದಲ್ಲಿದ್ದು, ಕ್ಷೇತ್ರ ಪರಿಚಯ, ಅಭಿವೃಧ್ದಿ ಕಾರ್ಯ ಹಾಗೂ ವಿವಿಧ ಪ್ರಕಾರ ಸಂಪ್ರದಾಯಕ ರಥೋತ್ಸವವನ್ನು ನೋಡಿ ಅನಂದಿಸಲಿದ್ದೀರಿ).

ಹೊಂಬುಜದಲ್ಲಿ ಒಂದು ಕಡೆ ಭಟ್ಟಾರಕ ಪಟ್ಟಚಾರ್ಯರು ಇರುವ ಶ್ರೀ ಮಠ, ಇನ್ನೊಂದು ಕಡೆ ಪದ್ಮಾವತಿ ಅಮ್ಮನವರಿರುವ ಮಂದಿರದ ನಡುವೆ ಇರುವುದೆ ಪ್ರಮುಖವಾದ ಕಮಟೋಪ ಸ್ವರ್ಗ ಶ್ರೀ ಪಾರ್ಶ್ವನಾಥ ಬಸದಿ ವೀರಾಜಮಾನವಾಗಿದೆ. ಗರ್ಭ ಗೃಹ, ನವರಂಗ, ಮುಂಭಾಗದಲ್ಲಿ ವಿಶಾಲವಾದ ವಿಜಯನಗರ ಕಾಲಕ್ಕೆ ಸೇರ್ಪಡೆಯಾದ ಸಭಾಮಂಟಪ ಗರ್ಭ ಗೃಹದಲ್ಲಿ ನಡುವೆ ಮೂಲನಾಯಕ ಕಮಟೋಪ ಸ್ವರ್ಗ ಪಾರ್ಶ್ವನಾಥರ ವಿಗ್ರಹ ಇದು ಬೃಹತ್ ಆಕಾರವಾದ ಮುದ್ದಾದ ಕಲಾತ್ಮಕ ಪ್ರತಿಮೆ. ಎಡ ಬಲಗಳಲ್ಲಿ ಧರಣೇಂದ್ರ ಪದ್ಮಾವತಿ ವಿಗ್ರಹಗಳಿದ್ದು ಸುಮಾರು 10ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ರಚನೆ. ನವರಂಗದಲ್ಲಿ ಎಡಗಡೆ ಬಾಗಿಲ ಹತ್ತಿರ ಮತ್ತೊಂದು ಪ್ರಾಚೀನ ಕಮಟೋಪ ಸ್ವರ್ಗ ಪಾರ್ಶ್ವನಾಥರ ವಿಗ್ರಹ ಇದೆ, ಅದರ ಕೆತ್ತನೆ ಬಹಳ ಕಲಾತ್ಮಕವಾಗಿಯು ಕಣ್ಮನ ಸೇಳೆಯುವಂತಿದೆ.

ಇತ್ತೀಚೆಗೆ ಬಸದಿಯು ಜೀರ್ಣೋದ್ದಾರ ಪ್ರಕ್ರಿಯೆ ಇಂದ ನವೀಕರಣಗೊಂಡಿದ್ದರು ಬಹುಮಟ್ಟಿಗೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ. ಇನ್ನೂ ಅಮ್ಮನವರ ಬಸದಿ ಹೊಂಬುಜದ ಶಾಸನದ ಪ್ರಕಾರ ಕ್ರಿ.ಶ. 1268ರಲ್ಲಿ ಅಮ್ಮನವರ ಮಂಟಪ ನಿರ್ಮಾಣಗೊಂಡಿದ್ದು ಅ ನಂತರ ಅದೆ ಜಾಗದಲ್ಲಿ ಹೊಸ ಬಸದಿಯನ್ನು ಅಧುನಿಕ ಶೈಲಿಯಲ್ಲಿ ಕಟ್ಟಲಾಗಿದೆ.

ಗರ್ಭ ಗುಡಿಯಲ್ಲಿ ಅಮೃತ ಶಿಲೆಯ ಶ್ರೀ ಪಾರ್ಶ್ವನಾಥ ಸ್ವಾಮಿಯ ವಿಗ್ರಹ, ಅ ವಿಗ್ರಹದ ಮುಂಭಾಗದಲ್ಲಿ ಕಪ್ಪು ಕಲ್ಲಿನಲ್ಲಿ ಸುಮಾರು ಎರಡುವರೆ ಅಡಿಯ ಅಮ್ಮನವರ ಮೂರ್ತಿ ಕುಳಿತಿರುವ ಭಂಗಿಯಲ್ಲಿದೆ. ಮೂರ್ತಿಯ ಕೆಳಗೆ ರಸಬಾವಿ ಇದು ಎಲ್ಲಿಯವರೆಗೆ ದೇವಸ್ಥಾನ ಹಿಂದಿರುವ ಎಲಕ್ಕಿ ಮರ ಹಸಿರಾಗಿರುವುದೊ, ಬಸದಿಯ ತುಸು ದೂರದಲ್ಲಿರುವ ಜಿನ ದತ್ತ ರಾಜನಿಗೆ ಮುತ್ತುಗಳು ದೊರೆತ ಪ್ರತೀತಿ ಇರುವ ಸ್ಥಳ ಮುತ್ತಿನ ಕೆರೆ, ಈ ಕೆರೆ ಬತ್ತುವುದಿಲ್ಲಾವೊ ಅಲ್ಲಿಯವರೆಗೆ ನಾನು ಇಲ್ಲಿ ನೆಲೆಸಿರುತ್ತೇನೆ. ಹಾಗೂ ಬಲಪ್ರಸಾದ ತಪ್ಪುವುದಿಲ್ಲವೆಂದು ದೇವಿಯ ಮಾತಿನಂತೆ ಈ ರಸಬಾವಿಯಲ್ಲಿ ದೇವಿ ನೆಲೆಸಿದ್ದಾಳೆಂಬ ನಂಬಿಕೆ ಈಗಲೂ ಇದೆ.

ಇಲ್ಲಿ ನೋಡಲೆ ಬೇಕಾದ ಸ್ಥಳ ಗುಡ್ಡದ ಬಸದಿ ಎಂದು ಕರೆಯಲ್ಪಡುವ ಪ್ರದೇಶ. ಅಲ್ಲಿ ಪ್ರಾಚೀನವಾದ ಬಾಹುಬಲಿ ಮೂರ್ತಿ ಇದ್ದು ಇತ್ತೀಚೆಗೆ ಪಾರ್ಶ್ವನಾಥರ ವಿಗ್ರಹವನ್ನು ಪ್ರತಿಷ್ಟಾಪಿಸಿ ಈ ವಿಗ್ರಹಕ್ಕೆ ಪ್ರತಿವರ್ಷ ಅಭಿಷೇಕ ನಡೆಯುತ್ತದೆ.

ತುಸು ದೂರದಲ್ಲಿನ ಪ್ರಕೃತಿಯ ಮಡಿಲಲ್ಲಿ ಕುಮುದ್ವದಿ ತೀರ್ಥ ಉಗಮ ಸ್ಥಾನವಿದ್ದು ಬಹಳ ಹಿಂದೆ ಅಲ್ಲಿ ಉದ್ಭವವಾದ ಜಲದಿಂದಲೆ ಪ್ರತಿದಿವಸ ಪೂಜೆಗಾಗಿ ಗಜರಾಜನ ಸಹಾಯದಿಂದ ತೀರ್ಥ ಜಲತಂದು ಅಭಿಷೇಕಗೈಯಲಾಗುತ್ತಿತು.

ಸಾಂತರ ಕಾಲದಲ್ಲಿ ನಿರ್ಮಿತವಾದ ಪಂಚಕೂಟ್ಟ ಬಸದಿ ಎಂಬ ಮತ್ತೊಂದು ಪ್ರಾಚೀನ ಬಸದಿ ಈ ಕ್ಷೇತ್ರದಲ್ಲಿದೆ. ಇಲ್ಲಿನ ಚರಿತ್ರೆಯಷ್ಟೆ ಮಹತ್ವ ಇಲ್ಲಿನ ಅತೀಶಯ ಯುಕ್ತ ಮೂರ್ತಿಗಳ ಪೂಜೆ.

ಇನ್ನು ಇಲ್ಲಿನ ಶ್ರೀ ಮಠದ ಪಟ್ಟಾಧಿಶರು ಪರಮ ಪೂಜ್ಯ ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳು. 2011ರಲ್ಲಿ ಕ್ಷೇತ್ರಕ್ಕೆ ಪಟ್ಟಾಭಿಷೀಕ್ತರಾಗಿದರಿಂದ ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕ್ಷೇತ್ರದ ಬಸದಿಗಳ ಜೀರ್ಣೋದ್ದಾರ, ಗುಡ್ಡದ ಬಸದಿಯಲ್ಲಿ ಅಭಿವೃದಿಕಾರ್ಯ, ಪಾರ್ಶ್ವನಾಥ ಮೂರ್ತಿಯ ಪ್ರತಿಷ್ಟಾಪಿಸಿ ಪ್ರತಿವರ್ಷವು ಪೂಜೆ ಮಹೋತ್ಸವ ಹಾಗೂ ನಿರಂತರ ನಡೆಯುವ ಪೂಜೆ ಆರಾಧನೆಗಳನ್ನು ಅಸಕ್ತಿಯಿಂದ ನೇತೃತ್ವವಹಿಸುತ್ತಾ ಬಂದಿದ್ದಾರೆ. ಅತಿಥಿಗಳಿಗಾಗಿ ಉತ್ತಮ ಅತಿಥಿ ಗೃಹ ಯಾತ್ರರ್ತಿಗಳಿಗಾಗಿ ಯಾತ್ರಿ ನಿವಾಸವನ್ನು ಹೊಸದಾಗಿ ನಿರ್ಮಿಸಿದ್ದಾರೆ. ಹಾಗೂ ಹಳೆಯ ಯಾತ್ರಿನಿವಾಸಗಳ ನವಿಕರ್ಣಿಸಲಾಗಿದೆ. ಯಾತ್ರರ್ತಿಗಳಿ ಊಟದ ವ್ಯವಸ್ಥೆಗಾಗಿ ನೂತನ ಕಟ್ಟಡದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದಾರೆ. ಧಾರ್ಮಿಕ ಜ್ಞಾನ ಸಂಪತ್ತನ್ನು ತಮ್ಮದಾಗಿಸಿಕೊಂಡಿದ್ದ ಶ್ರೀಗಳವರು ಧಾರ್ಮಿಕ ಪ್ರವಚನಗಳ ಮೂಲಕ ಧರ್ಮ ಪ್ರಾಭವಣೆ ಮಾಡುತ್ತಿದ್ದಾರೆ.

ಕ್ಷೇತ್ರ ದೇವತೆ ಪದ್ಮಾವತಿ ಅಮ್ಮನವರ ಮಹಿಮೆ ಸುಮಾರು 1200ವರ್ಷಗಳಿಂದ ಆಕರ್ಷಿಸಿದೆ. ಭಾರತದ ನಾನಾ ಭಾಗಗಳಿಂದ ವರ್ಷದ ಉದ್ದಕು ಜಿನ ಶಾಸನ ದೇವಿಯ ವರ ಪ್ರಸಾದ ಬಯಸಿ ಭಕ್ತ ವೃಂದ ಬರುತ್ತಿದಾರೆ. ಪ್ರತಿವರ್ಷ ಈ ದೇವಿಯ ಉತ್ಸವ ಪೂಜೆ ವೈಭವದಿಂದ ನಡೆಯುತ್ತ ಬಂದಿದ್ದು ಸಹಸ್ರಾರು ಜನ ಸೇರಿ ಸಂಭ್ರಮಿಸುತ್ತಾರೆ. ಈ ಬಾರಿಯ ಶ್ರೀಗಳವರ ನೇತೃತ್ವದಲ್ಲಿ ನಡೆದ ಜಾತ್ರ ಮಹೋತ್ಸವದ ದೃಶ್ಯಾವಳಿಗಳು ನಿಮಗಾಗಿ ಪ್ರಸ್ತುತ ಪಡಿಸುತ್ತದ್ದೆವೆ.

(ಇಲ್ಲಿ ರಥವು ಮಹಾ ರಥೋತ್ಸವಕ್ಕಾಗಿ ಸಜ್ಜಾಗಿ ನಿಂತಿದೆ. ಇಲ್ಲಿ ಅಪಾರ ಜನತ್ಸೋಮ ಸಾಗರೊಪಾದಿಯಲ್ಲಿ ಬಂದು ನಿಂತಿದೆ ಬನ್ನಿ ಭಕ್ತಾಧಿಗಳನ್ನು ಮಾತನಾಡಿಸೋಣ).

(ಭಕ್ತಾದಿಗಳು ಮಾತನಾಡಿ ರಥೋತ್ಸವದ ವೈಭವವನ್ನು ನೋಡಿ ಸಂತಸ ವ್ಯಕ್ತಪಡಿಸಿದರು).

ಶ್ರೀಗಳು ಮಾತನಾಡಿ: ಶ್ರೀ ಕ್ಷೇತ್ರ ಹೊಂಬುಜದಲ್ಲಿ ಪ್ರಾಚೀನ ಕಾಲದಿಂದಲು ನಡೆದು ಕೊಂಡು ಬಂದಿರುವ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ವರ್ಷಪೂರ್ತಿ ಅನೇಕ ಪೂಜಾಕಾರ್ಯಕ್ರಮಗಳು, ರಥೋತ್ಸವಗಳು ಹಾಗೂ ಮಹೋತ್ಸವಗಳು ನಡೆಯುತ್ತವೆ. ಶಾಂತರ ರಾಜರಿಂದ ಸ್ಥಾಪಿಸಿರುವ ಈ ಕ್ಷೇತ್ರದಲ್ಲಿ ಜಗನ್ಮಾತೇ ಪದ್ಮಾವತಿ ಅಮ್ಮನವರ ವಿಶೇಷ ಆರಾಧನೆ ಮತ್ತು ಉತ್ಸವವನ್ನು ಮಾಡುವಂತಹ ಪರಂಪರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪದ್ಮಾವತಿ ಅಮ್ಮನವರ ಪ್ರತಿಷ್ಟಾಪನ ದಿವಸದ ನಿಮ್ಮಿತವಾಗಿ ಮೂಲ ನಕ್ಷತ್ರದಲ್ಲಿ

ಮಹಾ ರಥ ಯಾತ್ರ ನಡೆಸುವುದು ಸಂಪ್ರದಾಯವಾಗಿದೆ. ಸಂಜೆಯ ವೇಳೆ ಊರಿನಲ್ಲಿ ವಾಹನ ಉತ್ಸವ ನಡೆಯುತ್ತದೆ. ಹಿಂದೆ ಸಂಪ್ರದಾಯದಂತೆ 15ದಿನಗಳ ಕಾಲ ಈ ರಥ ಯಾತ್ರೆ ನಡೆಯುತ್ತಿತ್ತು.

ಇಂತಹ ಭಕ್ತಿಪ್ರಧಾನ ಕಾರ್ಯಕ್ರಮಗಳಿಗಾಗಿ ವೀಕ್ಷಿಸಿಸುತ್ತೀರಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್