: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ ಶ್ರೀಕ್ಷೇತ್ರ ಧರ್ಮಸ್ಥಳದ 39 ಅಡಿ ಎತ್ತರದ ಶ್ರೀ ಬಾಹುಬಲಿ ಮೂರ್ತಿಗೆ ನಡೆದ ಈ ಬಾರಿಯ ಮಹಾಸ್ತಕಾಭಿಷೇಕದ ಕೊನೆಯ ದಿನವಾಗಿ ಮಾರ್ಚ್ 24, 2019ರಂದು ಮೂಡುಬಿದ್ರೆಯ ಜೈನ ಮಠದ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಪರಿವಾರದವರು ಅಭಿಷೇಕದಲ್ಲಿ ಪಾಲ್ಗೋಂಡಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ, ರಾಜಸ್ಥಾನ, ಬಿಹಾರ, ಕೇರಳ, ತಮಿಳುನಾಡು ಇನ್ನು ದೇಶದ ಹಲವು ಭಾಗಗಳಿಂದ ಬಂದು ಭಾಗವಹಿಸಿದ್ದರು.
ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಭಕ್ತಿ ಪೂರ್ವಕವಾಗಿ ರಜದಕಳಸ ನೀಡಿ ಸ್ವಸ್ತಿಶ್ರೀ ಮೂಡುಬಿದ್ರೆ ಭಟ್ಟಾರಕ ಶ್ರೀಗಳವರಿಗೆ ಗೌರವಿಸಿದರು. ಹಾಗೂ ಶ್ರೀಗಳವರು ಸಹ ಹೆಗ್ಗಡೆ ಪರಿವಾರದವರೆಲ್ಲರಿಗೂ ಗೌರವಿಸಿ ಸನ್ಮಾನಿಸಿದರು.
ಇಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ವೀಕ್ಷಿಸಿಸುತ್ತೀರಿ ಜ್ವಾಲಮಾಲ ಡಾಟ್ ನ್ಯೂಸ್














