ಧರ್ಮಸ್ಥಳ ಮಸ್ತಕಾಭಿಷೇಕ – ಪಿ. ಪಿ. ವರ್ಧಮಾನ ಸಾಗರ್ಜಿ ಪುರಪ್ರವೇಶ / ಜ್ವಾಲಾಮಲೆ ನ್ಯೂಸ್ / 2024

ಜೈ ಜಿನೇಂದ್ರ ಜ್ವಾಲಾಮಾಲಾ ನ್ಯೂಸ್ ಗೆ ಸ್ವಾಗತ

ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್  ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ  2019 ರ ಪಾವನ ಸಾನಿಧ್ಯ ವಹಿಸಲು ಪರಮ ಪೂಜ್ಯ  ಶ್ರೀ 108  ಆಚಾರ್ಯ  ಶ್ರೀ  ವರ್ಧಮಾನ ಮುನಿ ಮಹಾರಾಜರ ಮಂಗಳ ಪ್ರವೇಶ  ಕ್ಷೇತ್ರಕ್ಕೆ ಈಗಾಗಲೇ  ದಿನಾಂಕ 31/1/2019 ರಂದು  23 ಮುನಿಗಳ , 23 ಮಾತಾಜಿಯವರ  ಹಾಗೂ ಕ್ಷುಲ್ಲಕರೊಬ್ಬರ  ಸಂತಸ್ಥ ತ್ಯಾಗಿಗಳು  ಪುರಪ್ರವೇಶ ಮಾಡಿದ್ದಾರೆ. ಇನ್ನು ಮಹೋನ್ನತ ಕ್ಷಣಗಳಿಗೆ  ದಿನಗಣನೆ ಮಾತ್ರ. ಪರಮಪೂಜ್ಯ ಆಚಾರ್ಯ ಶ್ರೀಗಳನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ತಯಾರಿಯಲ್ಲಿ ಪಂಚ ಮಹಾ ವೈಭವಕ್ಕಾಗಿ  ಮುಖ್ಯ ವೇದಿಕೆ ಕಾರ್ಯ ಹಾಗೂ ಸಮವಸರಣದ ನಿರ್ಮಾಣ ಕಾರ್ಯ  ಪ್ರಗತಿಯಲ್ಲಿದೆ.  ರತ್ನಗಿರಿಯ ಅಟ್ಟಣಿಗೆ  ಕಾರ್ಯ ಭರದಿಂದ ಸಾಗಿದೆ.  ತ್ಯಾಗಿಗಳಿಗೋಸ್ಕರ  ಅವರ ವಾತ್ಸವ್ಯದ  ವ್ಯವಸ್ಥೆ ಹಾಗೂ ಆಹಾರ ದಾನಕ್ಕಾಗಿ ಚೌಕಗಳ ವ್ಯವಸ್ಥೆ ಕೂಡ ಅಚ್ಚುಕಟ್ಟಾಗಿ  ಮಾಡಲಾಗುತ್ತಿದೆ.  ಊಟದ ವ್ಯವಸ್ಥೆ ಗಾಗಿ  ವಿಶಾಲವಾದ ಹಾಲ್ ಗಳ  ವ್ಯವಸ್ಥೆ ಕೂಡ  ಆಗುತ್ತಿದೆ. ಮಹಾಮಸ್ತಕಾಭಿಷೇಕದ  ಇನ್ನೂ ಹೆಚ್ಚಿನ ಮಾಗಿತಿಗಾಗಿ  ವೀಕ್ಷಿಸುತ್ತಿರಿ ಜ್ವಾಲಾಮಾಲಾ ಡಾಟ್ ನ್ಯೂಸ್.