ದಾವಣಗೆರೆ ಜೈನ ಮಾಲಿನ ಮೆಟ್ಟಿಲು ಕಾನ್ಫರೆನ್ಸ್ ಭಾಗ-1 / ಜ್ವಾಲಮಾಲಾ ನ್ಯೂಸ್ / 2019

ಜೈ ಜಿನೇಂದ್ರ ಜ್ವಾಲಾಮಾಲಾ ನ್ಯೂಸ್ ಗೆ ಸ್ವಾಗತ

ವಾಣಿಜ್ಯ ನಗರಿ  ಶೈಕ್ಷಣಿಕ ನಗರಿ ಎಲ್ಲದ್ದಕ್ಕಿಂತ ಹೆಚ್ಚಾಗಿ  ಜೈನ ಧಾರ್ಮಿಕ ನಗರಿ  ದಾವಣಗೆರೆಯಲ್ಲಿ ಈ ಬಾರಿಯ  ಭಾರತೀಯ ಜೈನ್ ಮಿಲನ್ ನ  ವಲಯ 8 ರ ವತಿಯಿಂದ  ಹಾಗು ಭಾರತೀಯ ಜೈನ್ ಮಿಲನ್ ದಾವಣಗೆರೆ  ವಿಭಾಗದ ಸಹ ಸಂಯೋಜಕತ್ವದಲ್ಲಿ  18 ನೇ ವಲಯ ಸಮ್ಮೇಳನ  ಶ್ರೀ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನ ದಲ್ಲಿ ಹಲವು ಪ್ರಥಮ ಗಳ ಸಮ್ಮಿಲನದಲ್ಲಿ ವೈಭಮಯುತವಾಗಿ ನಡೆಯಿತು.

 

ದಿನಾಂಕ 21/12/2018 ರಂದು  ಅಖಿಲ ಕರ್ನಾಟಕ ಜೈನ  ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ನಾಗರಾಜ್ ರವರ ಅಧ್ಯಕ್ಷತೆಯಲ್ಲಿ  ಪದ್ಮಾ ಸುರೇಶ್ , ಉಷಾ ಜೈ ಪ್ರಕಾಶ್, ಪುಷ್ಪಾ  ಸುಭಾಶ್ ಹಾಗೂ ಸುನೀಲ‍್ ಭರತ್ ಹಜಾರೆ ಇವರ ಉಪಸ್ಥಿತಿಯಲ್ಲಿ ನಡೆದ  ಮಹಿಳಾ ಗೋಷ್ಠಿಯನ್ನು ಶ್ರೀ ಡಿ. ಸುರೇಂದ್ರಕುಮಾರ್ ರವರು ಅತಿಥಿಗಳಾಗಿ ಆಗಮಿಸಿ ವೀಕ್ಷಿಸಿ ಸಂಭ್ರಮಿಸಿದರು.  ನಂತರ ನಡೆದ ಯುವಗೋಷ್ಠಿ ಯುವಜೈನ್ ಮಿಲನ್ ನ ಅಧ್ಯಕ್ಷರಾದ ಜಿತೇಶ್ ಜೈನ್ ರವರ ಅಧ್ಯಕ್ಷತೆಯಲ್ಲಿ ನವೀನ್ ಕುಮಾರ್ , ಹೆಚ್. ಪಿ. ಸುಮತಿ ಕುಮಾರ್ , ವಿಲಾಸ್ ಪಾಸಣ್ಣನವರ್ , ಕೆ. ಯುವರಾಜ್ ಭಂಡಾರಿ, ಎಂ. ಸುಭಾಷ್ ಚಂದ್ರ ಜೈನ್ , ಸಚಿನ್ ಜೈನ್ ಇವರುಗಳ ಉಪಸ್ಥಿತಿಯಲ್ಲಿ ನಡೆಯಿತು.  ಅಲ್ಲಿ ನೆರೆದಿದ್ದ ಅತಿಥಿಗಳು ಮಾತನಾಡಿ ಯುವ ಜೈನ್ ಮಿಲನ್ ನ ಬಗ್ಗೆ ಹಾಗೂ ಕಾರ್ಯಕ್ರಮದ ಆಗುಹೋಗುಗಳನ್ನು ಮಾತನಾಡಿದರು.

 

ನಂತರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯರ ಹಾಗೂ ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಕಲಾ ವೈಭವ ಎಂಬ ನೃತ್ಯ ಪ್ರಸ್ತುತಿ ಆಗಮಿಸಿದ್ದ ಸಭಿಕರ ಮನಸ್ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ದಿನಾಂಕ 27/12/2018 ರಂದು ಶ್ರೀ ಧರ್ಮಸ್ಥಳದ  ಸುರೇಂದ್ರ ಕುಮಾರ್ ರವರ ಸ್ವಾಗತದೊಂದಿಗೆ  ಅವರ ಅಮೃತ ಹಸ್ತದಿಂದ ಗಣ್ಯರೊಡಗೂಡಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

 

ಪರಮ ಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಯವರ ಪಾವನ ಸಾನಿಧ್ಯದಲ್ಲಿ ವೇದಿಕೆಯ  ಕಾರ್ಯಕ್ರಮದ ಉದ್ಘಾಡನೆ  ದೀಪ ಬೆಳಗಿಸುವುದರ ಮೂಲಕ  ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಹಾಗೂ ಜೈನ್ ಮಿಲನ್

ಕಾರ್ಯಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರನ್ನು ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು. ಮತ್ತೋರ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶ್ರೀ ಮುದಿಗೆರೆ ಬ್ರಹ್ಮಯ್ಯ ನವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜೈನ್ ನಿಲನ್ ವಲಯ  8 ರ ನೂತನ ಪದಾದಿಕಾರಿಗಳ  ಪದಗ್ರಹಣವು ನಡೆಯಿತು. ಶ್ರೀ ಡಿ. ಸುರೇಂದ್ರ ಕುಮಾರ್ ರವರು ಪ್ರತಿಙ್ನಾ ವಿಧಿಯನ್ನು ಭೋದಿಸಿದರು.  ವಿಶ್ಭ‍ಭ್ರಾತೃತ್ವ ನ್ಯಾಯ, ಶಾಂತಿ ಮತ್ತು ಸಂಹಿಷ್ಣುತೆ  ಈ ತತ್ವಗಳನ್ನು ಪಾಲಿಸಿ ಸಮಾಜದಲ್ಲಿ ಅನುಷ್ಠಾನಕ್ಕೆ ತರುತ್ತೇನೆಂದು  ಭಗವಾನ್ ಶ್ರೀ  ಮಹಾವೀರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಭೋದಿಸಿದರು. ಪ್ರಥಮ ಬಾರಿಗೆ ವಲಯ ಸಮಾವೇಷವು ಎಲ್. ಇ.ಡಿ ಪರದೆಯ ಅಳವಡಿಕೆಯೊಂದಿಗೆ  ಸುಂದರ ಪ್ರಸ್ತುತಿಯಲ್ಲಿ ಜರುಗಿದ ಅಪರೂಪದ ಸಮಾವೇಷದಲ್ಲಿ ಈ ಬಾರಿಯ ಮಿಲನ  ಶ್ರೀ ಪ್ರಶಸ್ತಿಯನ್ನು  ವನ್ಯ ಜೀವಿ ಸಂರಕ್ಷಣಾ  ತಙ್ನ ಶ್ರೀ  ಸಂಜಯ್ ಗುಬ್ಬಿ ಇವರಿಗೆ ನೀಡಿ ಅಭಿನಂದಿಸಲಾಯಿತು.

 

ನಂತರ  ಪೂಜ್ಯ ಹೆಗ್ಗಡೆಯವರು  ತೀರ್ಥಂಕರರು ಆಧ್ಯಾತ್ಮದ  ಮೂಲಕ ಧರ್ಮದ  ಸಂರಕ್ಷಣೆ ಮಾಡಿದಂತೆ ನಾವು  ಸಂಘಟನೆಯಿಂದ  ವ್ಯಕ್ತಿಗತ ಹಾಗೂ  ಸಮಾಜದ ಉನ್ನತಿಗೆ  ಜಾಗೃತರಾಗಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜೈನ್ ಮಿಲನ್ ನ ಪರಮ ಸಂರಕ್ಷಕರಾದಂತಹ  ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು  ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.