ಮಂಗಳೂರು ಜಿನಭಜನಾ/ ಜ್ವಲಾಮಾಲನೆವ್ಯೂಸ್ / 2018

ಜೈ ಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ

ಕರಾವಳಿ ನಗರಿ  ಕಡಲೂರು ಮಂಗಳೂರಿನಲ್ಲಿ ಭೋರ್ಗರೆದ ಕಲಾಸಕ್ತಿ.  ಜಿನಗಾಥೆ ಸುರಿಸಿ  ವಿಜೃಂಭಿ ಸಿದ ಜಿನಭಜನಾ ವೈಭವ . ಸ್ಪರ್ಧಾ ಆಯೋಜಕರಿಗೆ  ತುಳುನಾಡಿನ ಅದ್ಭುತ ಸ್ಪಂದನೆ. ರಾಜ್ಯದೆಲ್ಲೆಡೆ  ನಡೆಯುತ್ತಿರುವ ಜಿನಭಜನಾ ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ  ದಿನಾಂಕ 18/11/2018ರಂದು ಮಂಗಳೂರಿನ ವಿಭಾಗ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.  ಅಂದು  ಎಸ್. ಡಿ. ಎಂ. ಕಾಲೇಜಿನ ಸಭಾಂಗಣ  ಮುದ್ದಾಗಿ ಸಿಂಗರಿಸಿಕೊಂಡು   ಅತ್ತಿಂದಿತ್ತ ಓಡಾಡುತ್ತಿದ್ದ ಚಿಣ್ಣರ ಚಿಲಿಪಿಲಿ ಸದ್ದು , ಅಂದವಾಗಿ ಸಿಂಗರಿಸಿಕೊಂಡು ಸಂಭ್ರಮಿಸುತ್ತಿದ್ದ ಮಾನಿನಿಯರು , ಅಲ್ಲಲ್ಲಿ ಗುಂಪುಗಟ್ಟಿ ನಿಂತ  ಯುವಕರ ತಂಡಗಳಿಂದ  ತುಂಬಿ ತುಳುಕುತ್ತಿತ್ತು.  ಕಾರ್ಯಕ್ರಮ ಗಣ್ಯರಿಂದ ದೀಪ ಬೆಳಗಿಸುವುದರಿಂದ ಶುಭಾರಂಭಗೊಂಡಿತು.

 

ಕನ್ನಡ ಸಂಸ್ಕೃತಿಗೆ ತವರೂರಾದ  ನಾಡಿನಲ್ಲಿ ಸಂಸ್ಕಾರ ಕ್ಕೂ ಏನು ಕಡಿಮೆ ಇಲ್ಲ ಎನ್ನುವಂತೆ ಅಲ್ಲಿನ ಪುಟಾಣಿಗಳು  ತಮ್ಮ ಮುಗ್ಧತೆಯನ್ನು ಬೆರೆಸಿ ಭಕ್ತಿಯನ್ನು ಹರಿಸಿ ಹಾಡಿದರು.

ನಂತರ ಸಂಗೀತಾ ವಿಶಾರದೆ  ಜಯಶ್ರೀ ಹೊರನಾಡು ರವರ ಭಜನೆ ಹಾಡಿಗೆ ನೆರೆದಿದ್ದವರು  ನರ್ತಿಸುವಂತಾಗಿದ್ದು ನಿಜ. ಸಮಾರೋಪ ಸಮಾರಂಭದಲ್ಲಿ  ಸನ್ಮಾನ್ಯ ಡಿ. ಸುರೇಂದ್ರ ಕುಮಾರ್ , ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ , ಯಶೋವರ್ಮ , ಕೆ. ಪ್ರಸನ್ನಕುಮಾರ್ , ಇ ರಾಜೇಂದ್ರ ಶೆಟ್ಟಿ , ಪುಷ್ಪರಾಜ್ ಜೈನ್, ಯುವ ಜೈನ್ ಮಿಲನ್ ನ ಪವನ್ ಮಂಜೇಶ್ ಇವರುಗಳು  ಭಾಗವಹಿಸಿದ್ದರು.  ಶ್ರೀ ಡಿ. ಸುರೇಂದ್ರ ಕುಮಾರ್ ರವರು ಮಾತನಾಡಿ ಧರ್ಮಸ್ಥಳ ಶ್ರೀ ಕ್ಷೇತ್ರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಆಹ್ವಾನಿಸಿದರು.  ಗೆದ್ದಂತಹ ತಂಡಗಳಿಗೆ ಪ್ರಮಾಣಪತ್ರವನ್ನು ಕೊಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಇಂತಹ ವಿಶೇಷ ಕಾರ್ಯಕ್ರಮಗಳೊಂದಿಗೆ  ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾ ಮಾಲಾ ಡಾಟ್ ನ್ಯೂಸ್.

 

.